For Quick Alerts
ALLOW NOTIFICATIONS  
For Daily Alerts

ಹದಿನಾರು ಸೋಮವಾರ ಉಪವಾಸ ಮಾಡಿ ಶಿವನ ಅನುಗ್ರಹ ಪಡೆದುಕೊಳ್ಳಿ

|
Shravana Month 2018 : 16 ಸೋಮವಾರ ಉಪವಾಸ ವ್ರತಾಚರಣೆ ಮಾಡಿ ನೋಡಿ | Oneindia Kannada

ಸೋಮವಾರವೆಂದರೆ ಶಿವನಿಗೆ ಅತಿ ವಿಶೇಷದ್ದಾಗಿದೆ. ಸರಳ ಪೂಜೆಗೆ ಒಲಿಯುವ ಭಕ್ತ ವತ್ಸಲ ಶಿವನಾಗಿರುವುದರಿಂದ ಪ್ರತಿಯೊಬ್ಬರೂ ಶಿವ ಶಿವ ಎಂದೇ ಉಚ್ಛರಿಸುತ್ತಾರೆ. ಶಿವನೂ ಕೂಡ ತನ್ನ ಭಕ್ತರಿಗೆ ಬೇಡಿದ್ದನ್ನು ಪ್ರಸಾದಿಸುವ ವರದಾತ ಆಗಿದ್ದಾರೆ. ಶಂಭೋ ಎಂದು ನಂಬಿ ಬಂದ ಭಕ್ತರ ಕೈಬಿಡದ ಕರುಣಾ ಸಿಂಧು ದಯಾಳು ಮೂರ್ತಿ ಶಿವ ಭಗವಂತರಾಗಿದ್ದಾರೆ. ವಿಶೇಷವಾಗಿ ಸೋಮವಾರದ ದಿನಗಳಂದು ಭಕ್ತರು ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರನ್ನು ಪೂಜಿಸುತ್ತಾರೆ.

ಹಿಂದೂ ಧರ್ಮದಲ್ಲಿ 16 ಸೋಮವಾರಗಳ ಉಪವಾಸ ವ್ರತಾಚರಣೆ ಹೆಚ್ಚು ಪ್ರಸಿದ್ಧವಾಗಿದ್ದು ಆದಿ ಕಾಲದಿಂದಲೂ ನಡೆದುಕೊಂಡು ಬಂದಿರುವಂತಹದ್ದಾಗಿದೆ. ಇದನ್ನು ಸೋಲಾರ್ ಸೋಮವಾರ ವೃತ ಎಂದೂ ಕರೆಯಲಾಗುತ್ತದೆ. 16 ದಿನ ನಿರಂತರವಾಗಿ ಸೋಮವಾರಗಳಂದು ಉಪವಾಸ ಮಾಡಿ ಶಿವನ ಮನಸ್ಸನ್ನು ಗೆಲ್ಲಬಹುದಾಗಿದೆ ಅವರ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ.

ವಿವಾಹ ಜೀವನದಲ್ಲಿ ಕಷ್ಟವನ್ನು ಎದುರಿಸುತ್ತಿರುವವರು ಮತ್ತು ತಮ್ಮ ಮೆಚ್ಚಿನ ಹುಡುಗನನ್ನು ಪತಿಯನ್ನಾಗಿ ಪಡೆಯಲು ಈ ವೃತವನ್ನು ಕೈಗೊಳ್ಳಲಾಗುತ್ತದೆ. ಶ್ರಾವಣ ಮಾಸದ ಮೊದಲ 16 ಸೋಮಾವರಗಳಂದು ಈ ವೃತವನ್ನು ಕೈಗೊಳ್ಳಲಾಗುತ್ತದೆ. (ಜುಲೈ-ಆಗಸ್ಟ್). ವೃತದಲ್ಲಿ ಉಪವಾಸ, ಶಿವನ ಪೂಜೆ ಮತ್ತು 16 ಸೋಮಾವರದ ಕಥೆಯನ್ನು ಒಳಗೊಂಡಿದೆ. (ಸೋಲಹ್ ಸೋಮವಾರ ವ್ರತದ ಕಥೆ)

ವ್ರತದ ನಿಯಮವೇನು

ವ್ರತದ ನಿಯಮವೇನು

ಇದೊಂದು ಸರಳವಾಗಿರುವ ವ್ರತವಾಗಿದೆ

ವ್ರತವನ್ನು ಹಿಡಯುವವರು ಪ್ರಾತಃ ಕಾಲದಲ್ಲಿ ಎದ್ದು ಸ್ನಾನ ಮಾಡಿ ಪೂಜಾ ಕೊಠಡಿಗೆ ತರಳಿ ಶಿವನ ಪೂಜೆಯನ್ನು ಮಾಡಲು ತೊಡಗಬೇಕು. ಶಿವ ಲಿಂಗ ಇಲ್ಲವೇ ಶಿವನ ಫೋಟೋವನ್ನು ಪೂಜೆಗೆ ನೀವು ಅಯ್ಕೆಮಾಡಿಕೊಳ್ಳಬಹುದು.

ಅಲ್ತರ್ ಅನ್ನು ಸ್ವಚ್ಛ ಮಾಡಿ ಮತ್ತು ದೀಪವನ್ನು ಉರಿಸಿ ದೀಪಕ್ಕೆ ಎಳ್ಳೆಣ್ಣೆಯನ್ನು ಬಳಸಿ. ಶಿವನ ಫೋಟೋಗೆ ಚಂದನ ಮತ್ತು ಹೂವಿನಿಂದ ಅಲಂಕಾರ ಮಾಡಿ. ಶಿವ ನಾಮವನ್ನು ಪಠಿಸುತ್ತಾ ಹೂವನ್ನು ದೇವರಿಗೆ ಅರ್ಪಿಸಿ. ಪೂಜೆಯ ಕೊನೆಯಲ್ಲಿ ದೇವರಿಗೆ ವೀಳ್ಯದೆಲೆ, ನಟ್ಸ್, ತೆಂಗಿನ ಕಾಯಿ ಮತ್ತು ಹಣ್ಣುಗಳನ್ನು ಅರ್ಪಿಸಿ ಮತ್ತು ಮನೆಯಲ್ಲಿ ಮಾಡಿದ ಸಿಹಿಯನ್ನು ದೇವರಿಗೆ ನೀಡಿ.

16 ಸೋಮಾವರ ವ್ರತದ ಕಥೆಯನ್ನು ಓದಿ ಮತ್ತು ಕರ್ಪೂರವನ್ನು ದೇವಿಗೆ ಬೆಳಗಿಸಿ

ಪೂಜೆಯ ನಂತರ ಇಡೀ ದಿನ ನೀವು ಉಪವಾಸವನ್ನು ಮಾಡಬೇಕು. ಈ ಸಮಯದಲ್ಲಿ ನಿಮ್ಮ ಮನೆಗೆಲಸ ಇಲ್ಲವೇ ಕಚೇರಿ ಕೆಲಸಗಳನ್ನು ನೀವು ಮಾಡಬಹುದು.

ಸಂಜೆ ವೇಳೆ ದೇವರ ಮುಂದೆ ದೀಪವನ್ನು ಹಚ್ಚಿ ಮತ್ತು ಪ್ರಸಾದವನ್ನು ದೇವರಿಗೆ ನೀಡಿ. ಪೂಜೆಯ ನಂತರ ನೀವು ಪ್ರಸಾದ ಇಲ್ಲವೇ ಹಣ್ಣುಗಳನ್ನು ಸ್ವೀಕರಿಸಬಹುದು.

ಈ ರೀತಿಯಾಗಿ 16 ಸೋಮವಾರ ವ್ರತವನ್ನು ಆಚರಿಸಿ.

16 ಸೋಮವಾರದ ವ್ರತದ ಕಥೆ

16 ಸೋಮವಾರದ ವ್ರತದ ಕಥೆ

ಒಂದೂರಿನಲ್ಲಿ ಒಬ್ಬ ಭೂಮಾಲಿಕ ಮತ್ತು ಆತನ ಪತ್ನಿ ಶಾಂತಿಯುತವಾದ ಮತ್ತು ದೈವಿಕ ಜೀವನವನ್ನು ನಡೆಸುತ್ತಿದ್ದರು ಅವರಿಗೆ ಸಂತಾನವಿರಲಿಲ್ಲ ಮತ್ತು ಈ ಭಾಗ್ಯಕ್ಕಾಗಿ ಅವರು ದೇವರನ್ನು ಪ್ರಾರ್ಥಿಸುತ್ತಾರೆ. ಶಿವನು ಈ ದಂಪತಿಗಳಿಗೆ ಪುತ್ರ ಸಂತಾನವನ್ನು ಕರುಣಿಸುತ್ತಾರೆ. ಅದರೆ ದುರಾದೃಷ್ಟವಶಾತ್ ಹುಡುಗನ 12 ವರ್ಷಗಳ ಜೀವನವನ್ನು ಹೊಂದಿದ್ದನು ಮತ್ತು ತಂದೆಗೆ ಈ ವಿಷಯ ತಿಳಿದಿತ್ತು.

ವಿದ್ಯಾಭ್ಯಾಸಕ್ಕಾಗಿ ಕಾಶಿಗೆ ಹೋದ ಹುಡುಗ

ವಿದ್ಯಾಭ್ಯಾಸಕ್ಕಾಗಿ ಕಾಶಿಗೆ ಹೋದ ಹುಡುಗ

ಹುಡುಗನ ತಂದೆಯು ಪುತ್ರನಿಗೆ ಯಾವುದಕ್ಕೂ ಕಡಿಮೆ ಇಲ್ಲದೆ ಅವನನ್ನು ಬೆಳೆಸುತ್ತಾನೆ. ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಹುಡುಗನು ತನ್ನ ಮಾವನೊಂದಿಗೆ ಕಾಶಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸಲು ಹೋಗುತ್ತಾನೆ. ದಾರಿಯಲ್ಲಿ ಬರುತ್ತಿದ್ದಾಗ ಒಬ್ಬ ವ್ಯಾಪಾರಿಯ ಮಗಳ ಮದುವೆಯನ್ನು ನೋಡುತ್ತಾರೆ. ವರನು ಒಂದು ಕಣ್ಣನ್ನು ಮಾತ್ರ ಹೊಂದಿರುತ್ತಾನೆ. ಹುಡುಗನ ಈ ಅಂಗವಿಕಲ ಎಂಬುದನ್ನು ಹುಡುಗಿಯ ಮನೆಯವರು ಅರಿತುಕೊಳ್ಳುತ್ತಾರೆ.

ಶಿವ ಆ ಹುಡುಗನಿಗೆ ಮರಳಿ ಜೀವದಾನ ಮಾಡುತ್ತಾರೆ

ಶಿವ ಆ ಹುಡುಗನಿಗೆ ಮರಳಿ ಜೀವದಾನ ಮಾಡುತ್ತಾರೆ

ಈ ಹುಡುಗನನ್ನು ಹುಡುಗಿಯ ಮನೆಯವರು ಮದುವೆಯಾಗಲು ವಿನಂತಿಸುತ್ತಾರೆ. ಹಾಗೆ ವಿವಾಹವಾದ ಹುಡುಗನು ವಿದ್ಯಾಭ್ಯಾಸಕ್ಕಾಗಿ ಕಾಶಿಗೆ ಹೋಗುತ್ತಾನೆ. ಆತನ ಹಣೆಯ ಬರಹದಲ್ಲಿ ಬರೆದಂತೆ ಹುಡುಗ ಮೃತನಾಗುತ್ತಾನೆ. ವ್ಯಾಪಾರಿಯ ಮನೆಯಲ್ಲಿರುವ ಶಿವನ ಮೇಲಿನ ಭಕ್ತಿ ಮತ್ತು ಆ ಮನೆಯವರ ನಿಷ್ಠೆಯನ್ನು ನೋಡಿ ಶಿವ ಆ ಹುಡುಗನಿಗೆ ಮರಳಿ ಜೀವದಾನ ಮಾಡುತ್ತಾರೆ. ತಾನು ವಿವಾಹವಾದ ಹುಡುಗಿಯೊಂದಿಗೆ ಹುಡುಗ ಮನೆಗೆ ಬರುತ್ತಾನೆ ಮತ್ತು ಅವರೆಲ್ಲರೂ ಸುಖವಾಗಿ ಜೀವನ ನಡೆಸುತ್ತಾರೆ.

English summary

Sixteen Monday Vrat Rules

Monday is considered very auspicious for the worship of Lord Shiva. Devotees throng at Shiva temples on Mondays specially to get the blessings of the merciful Lord who can remove the difficulties of devotees and give all the desired boons. 16 Monday fast is one of the most popular vrat or fasting observances in Hinduism dedicated to Lord Shiva. Hindus believe that Lord Shiva is the supreme Lord and since observing fasting over 16 consecutive Mondays also known as solah somvar vrat is known to bestow several benefits to devotees.
X
Desktop Bottom Promotion