For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಹಬ್ಬದಂದು ನಡೆಸುವ 'ಯಮುನಾ ಪೂಜೆಯ' ಮಹತ್ವ

By jaya subramanya
|

ಆಗಸ್ಟ್ ಬಂದಿತೆಂದರೆ ಸಾಕು! ಹಬ್ಬಗಳ ಸಾಲೇ ಆರಂಭವಾಗಿಬಿಡುತ್ತದೆ. ಗಣೇಶ್ ಚತುರ್ಥಿ, ದೀಪಾವಳಿ, ವರಮಹಾಲಕ್ಷ್ಮಿ ಹೀಗೆ ಮುಂಬರುವ ಹಬ್ಬಗಳ ಸಾಲು ಮತ್ತು ಅದಕ್ಕೆ ಬೇಕಾಗುವ ಸಿದ್ಧತೆಯನ್ನು ಮನೆಯಲ್ಲಿ ಭರ್ಜರಿಯಾಗಿಯೇ ಮಾಡುತ್ತಾರೆ, ಮನೆಯೊಡತಿಗೆ ಕೈತುಂಬಾ ಕೆಲಸಗಳು ಅಂತೆಯೇ ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ಮಾಡುವ ಗಡಿಬಿಡಿ, ಮನೆಗೆ ಬರುವ ಅತಿಥಿಗಳನ್ನು ಉಪಚರಿಸುವ ಕೆಲಸ ಹೀಗೆ ಒಂದಿಲ್ಲೊಂದು ಕೆಲಸಗಳಲ್ಲಿ ಅವರು ಕಾರ್ಯನಿರತರಾಗಿರುತ್ತಾರೆ. ಇಂದಿನ ಲೇಖನದಲ್ಲಿ ವರಮಹಾಲಕ್ಷ್ಮಿ ಹಬ್ಬ ಮತ್ತು ಅದರ ಪ್ರಾಮುಖ್ಯತೆ ಅಂತೆಯೇ ತಯಾರಿಯ ಕುರಿತಾದ ಮಾಹಿತಿಗಳನ್ನು ಇಲ್ಲಿ ತಿಳಿದುಕೊಳ್ಳೋಣ....

Yamuna Pooja In Varamahalakshmi Festival

ವರಮಹಾಲಕ್ಷ್ಮಿ ಹಬ್ಬವನ್ನು ಮನೆಯ ಸುಖ ಸಮೃದ್ಧಿ ಆರೋಗ್ಯಕ್ಕಾಗಿ ಆಚರಿಸಲಾಗುತ್ತದೆ. ಬೇಡಿದ್ದನ್ನು ನೀಡುವ ದೇವಿಯಾಗಿ ವರಮಹಾಲಕ್ಷ್ಮಿ ದೇವಿಯು ಭಕ್ತ ಮನದಲ್ಲಿ ನೆಲೆಗೊಂಡಿದ್ದು ಹೆಂಗಳೆಯರು ಹೆಚ್ಚಿನ ಆಸಕ್ತಿ ಮತ್ತು ನಿಷ್ಟೆಯಿಂದ ಹಬ್ಬವನ್ನು ಆಚರಿಸುತ್ತಾರೆ. ಶ್ರಾವಣ ಮಾಸದ ಆರಂಭ ಶುಕ್ರವಾರ ಈ ಹಬ್ಬ ಬರುತ್ತಿದ್ದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಇದನ್ನು ಭಕ್ತಿಯಿಂದ ಶ್ರದ್ಧೆಯಿಂದ ಆಚರಿಸುತ್ತಾರೆ. ಇನ್ನು ಆಂಧ್ರದ ಕೆಲವೆಡೆಗಳಲ್ಲಿ ಕೂಡ ಈ ಹಬ್ಬಕ್ಕೆ ಪ್ರಾಧಾನ್ಯತೆಯನ್ನು ನೀಡುತ್ತಿದ್ದಾರೆ.

ರಮಹಾಲಕ್ಷ್ಮಿ ಪೂಜೆಯ ಹಿನ್ನೆಲೆ, ಪೂಜಾ ವಿಧಿ ವಿಧಾನ

ವರಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವುದಕ್ಕಾಗಿ ಶ್ಲೋಕಗಳನ್ನು ಹೇಳುತ್ತಾರೆ ಹೆಚ್ಚಿನ ಶ್ಲೋಕಗಳನ್ನು ಈ ಶುಭಸಮಾರಂಭದಲ್ಲಿ ಪಠಿಸಿ ದೇವರನ್ನು ಸಂಪ್ರೀತಿಗೊಳಿಸುತ್ತಾರೆ. ಈ ಸಂದರ್ಭದಲ್ಲಿ ಅದೃಷ್ಟವನ್ನು ತರುವ ಶ್ಲೋಕವೆಂದು ನಂಬಿರುವಂತಹದ್ದು ಲಕ್ಷ್ಮೀ ಅಷ್ಟೋತ್ತರ ಸ್ತೋತ್ರಂ ಮತ್ತು ಲಕ್ಷ್ಮೀ ಸಹಸ್ರನಾಮವಾಗಿದೆ.

Yamuna Pooja In Varamahalakshmi Festival

ಇಷ್ಟಲ್ಲದೆ ಇನ್ನಷ್ಟು ವ್ರತ ಮತ್ತು ಪೂಜೆಗಳನ್ನು ನೆರವೇರಿಸಿ ದೇವಿಯನ್ನು ಒಲಿಸಿಕೊಳ್ಳಲಾಗುತ್ತದೆ. ಈ ಹಬ್ಬಕ್ಕಾಗಿ ಯಾವುದೇ ಕಟ್ಟುನಿಟ್ಟಿನ ಆಚರಣೆಗಳಿಲ್ಲ. ನೀವು ಅನಾರೋಗ್ಯವಾಗಿದ್ದಲ್ಲಿ ಅಥವಾ ವ್ರತವನ್ನು ನಡೆಸಲು ಶಕ್ತಿಯನ್ನು ಹೊಂದಿಲ್ಲ ಎಂದಾದಲ್ಲಿ ಪೂಜೆಯನ್ನು ಮಾಡಬಹುದಾಗಿದೆ. ಆದರೆ ವ್ರತವನ್ನು ಮಾಡುವುದರಿಂದ ದೇವಿಯ ಕೃಪಾಕಟಾಕ್ಷಕ್ಕೆ ಭಾಜನರಾಗಬಹುದಾಗಿದೆ.

ಯಮುನಾ ಪೂಜೆಯ ಮಹತ್ವ

ವರಮಹಾಲಕ್ಷ್ಮಿ ಪೂಜೆಯ ಸಂಕಲ್ಪವನ್ನು ಮಾಡಿದ ನಂತರ ಯಮುನಾ ಪೂಜೆಯನ್ನು ಮಾಡಲಾಗುತ್ತದೆ. ಸಣ್ಣ ನೀರಿನಿಂದ ತುಂಬಿದ ಕಲಶವನ್ನು ಹಳದಿ ಮತ್ತು ಕುಂಕುಮವನ್ನು ಈ ನೀರಿನಲ್ಲಿ ಬೆರೆಸಲಾಗುತ್ತದೆ. ಇನ್ನು ಕೆಲವರು ತುಳಸಿ ಗಿಡದ ಬಳಿ ಇದನ್ನು ಮಾಡುತ್ತಾರೆ. ಅಂತೆಯೇ ಇನ್ನು ಕೆಲವರು ಯಮುನಾ ನದಿಯ ದಂಡೆಯಲ್ಲಿ ಈ ಪೂಜೆಯನ್ನು ನೆರವೇರಿಸುತ್ತಾರೆ. ಯಮುನಾ ದೇವಿಯನ್ನು ಪೂಜಿಸುವುದು ಕೂಡ ವ್ರತದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ವರಮಹಾಲಕ್ಷ್ಮಿ ಹಬ್ಬದ ವಿಶೇಷ- ಭಕ್ತೆ ಚಾರುಮತಿಯ ಕಥೆ

ಈ ಪೂಜೆಯನ್ನು ಹಿಂದೂಗಳು ಪವಿತ್ರ ಎಂದು ಪರಿಗಣಿಸಿದ್ದು ಈ ಪೂಜೆಗೆ ಅದರದ್ದೇ ಆದ ಮಹತ್ವವಿದೆ. ಯಮುನಾ ನದಿಗೆ ಪೂಜೆಯನ್ನು ಮಾಡುವುದು ಅಥವಾ ಈ ನೀರಿನಲ್ಲಿ ಸ್ನಾನ ಮಾಡುವುದು ರೋಗಗಳನ್ನು ಪರಿಹರಿಸುತ್ತದೆ ಎಂಬುದಾಗಿ ನಂಬಲಾಗಿದೆ. ಮಾರಣಾಂತಿಕ ರೋಗಗಳಿಂದ ಬಳಲುತ್ತಿರುವವರು ಈ ನದಿಯಲ್ಲಿ ಸ್ನಾನ ಮಾಡಿ ಪೂಜೆಯನ್ನು ಮಾಡಿದಲ್ಲಿ ದೇವರು ಅವರುಗಳ ಬೇನೆಯನ್ನು ಉಪಚರಿಸುತ್ತಾರೆ ಎಂಬುದಾಗಿ ನಂಬಲಾಗಿದೆ.

Yamuna Pooja In Varamahalakshmi Festival

ಯಮುನಾ ಪೂಜೆಯಿಂದ ಭಕ್ತರು ಮಾನಸಿಕ ಮತ್ತು ಧಾರ್ಮಿಕ ಶಾಂತಿಯನ್ನು ಕಂಡುಕೊಳ್ಳುತ್ತಾರೆ. ಅವರ ಜೀವನದಲ್ಲಿ ಈ ಪೂಜೆಯಿಂದ ಸುಖ, ನೆಮ್ಮದಿ ಕಂಡುಬರುತ್ತದೆ. ಅಂತೆಯೇ ಹಲವಾರು ಕಷ್ಟಗಳಿಂದ ಪರಿಹಾರ ಕೂಡ ದೊರೆಯುತ್ತದೆ ಎಂಬುದಾಗಿ ನಂಬಲಾಗಿದೆ. ವರಮಹಾಲಕ್ಷ್ಮಿ ಪೂಜೆಯನ್ನು ನಡೆಸುವುದರಿಂದ ಲಕ್ಷ್ಮೀ ಕಟಾಕ್ಷ ಹೇಗೆ ದೊರೆಯುತ್ತದೆಯೋ ಅಂತೆಯೇ ಈ ವ್ರತದಿಂದ ಕೃಷ್ಣನ ಕೃಪಾಕಟಾಕ್ಷ ನಮ್ಮ ಮೇಲಿರುತ್ತದೆ ಎಂದಾಗಿದೆ.

ಯಮುನಾ ಪೂಜೆಯನ್ನು ಮಾಡುವುದರಿಂದ ಪಾಪಗಳಿಗೆ ಪ್ರಾಯಶ್ಚಿತ್ತವನ್ನು ಮಾಡಬಹುದಾಗಿದೆ ಎಂಬುದಾಗಿ ಕೂಡ ನಂಬಲಾಗಿದೆ. ಹಿಂದೂಗಳಿಗೆ ಜುಲೈ ಮತ್ತು ಆಗಸ್ಟ್ ತಿಂಗಳು ಹೆಚ್ಚು ಪವಿತ್ರ ಮಾಸವಾಗಿದ್ದು, ದೇವರನ್ನು ಇನ್ನಷ್ಟು ಭಕ್ತಿಯಿಂದ ಒಲಿಸಿಕೊಂಡು ಪೂಜೆಗಳನ್ನು ನೆರವೇರಿಸಲು ಈ ಮಾಸವು ಉತ್ತಮ ಎಂದೆನಿಸಿದೆ. ವರಮಹಾಲಕ್ಷ್ಮಿ ಪೂಜೆಯಂದೇ ಯಮುನಾ ಪೂಜೆಯನ್ನು ನಡೆಸುತ್ತಿದ್ದು ಇದರಿಂದ ಭಕ್ತರು ಹೆಚ್ಚಿನ ಅನುಗ್ರಹವನ್ನು ದೇವರಿಂದ ಪಡೆದುಕೊಳ್ಳಬಹುದಾಗಿದೆ.

English summary

Significance Of Yamuna Pooja In Varamahalakshmi Festival

Varamahalakshmi is considered to be the Goddess of wealth and prosperity. The Pooja or Vrat is done in order to receive the blessings of Maa Lakshmi. It is said that if the Goddess is pleased with her devotees and their dedication, she showers them with everything they have asked for. It can be wealth or anything apart from that too. After the completion of the Sankalpa ritual in the Varamahalakshmi Pooja, the Yamuna Pooja is performed. Worshipping the Goddess fills your life with happiness and success in every field.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more