For Quick Alerts
ALLOW NOTIFICATIONS  
For Daily Alerts

ವೈಕುಂಠ ಏಕಾದಶಿ ಆಚರಣೆ, ಉಪವಾಸದ ಮಹತ್ವ...

By Jaya Subramanya
|

ನಮ್ಮ ಹಿಂದೂ ಧರ್ಮದಲ್ಲಿ ಆಚರಣೆ ಮತ್ತು ಸಂಪ್ರದಾಯಗಳು ಅತಿ ಮಹತ್ವದ್ದು ಎಂದೆನಿಸಿದ್ದು, ಅದು ವೇಷಭೂಷಣಗಳು, ಅನುಸರಿಸುವ ರೀತಿ ರಿವಾಜುಗಳು ಸಂಪ್ರದಾಯಗಳು ತಮ್ಮದೇ ಆದ ವಿಶೇಷತೆ ಮತ್ತು ಮಹತ್ವಗಳನ್ನು ಪಡೆದುಕೊಂಡಿದೆ. ಇನ್ನು ಹಬ್ಬಗಳ ವಿಷಯಕ್ಕೆ ಬಂದಾಗ ಅವುಗಳನ್ನು ಆಚರಿಸುವ ಪದ್ಧತಿ ಕೂಡ ಪ್ರತ್ಯೇಕವಾಗಿರುತ್ತದೆ ಮತ್ತು ಒಂದೊಂದು ಐತಿಹಾಸಿಕ ರಹಸ್ಯಗಳನ್ನು ಇವುಗಳು ಒಳಗೊಂಡಿರುತ್ತವೆ.

ವೈಷ್ಣವರಲ್ಲಿ ಹೆಚ್ಚು ಪ್ರಖ್ಯಾತವಾಗಿರುವ ವೈಕುಂಠ ಏಕಾದಶಿಯನ್ನು ಇವರುಗಳು ವಿಜೃಂಭಣೆಯಿಂದ ಆಚರಿಸುತ್ತಾರೆ. ವಿಷ್ಣು ಭಕ್ತರು ಎಂದೆನಿಸಿರುವ ವೈಷ್ಣವರು ಏಕಾದಶಿಯನ್ನು ಶುಕ್ಲ ಪಕ್ಷದ ಧನುರ್ ಮಾಸದಂದು ಆಚರಿಸುತ್ತಾರೆ ಎಂಬುದು ಹಿಂದೂ ಕ್ಯಾಲೆಂಡರ್‌ನಿಂದ ತಿಳಿದು ಬಂದಿದೆ.

ಸಾಮಾನ್ಯವಾಗಿ ಈ ಹಬ್ಬವು ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಬರುತ್ತದೆ. ಈ ದಿನದಂದು ಹಿಂದೂಗಳು ಉಪವಾಸವನ್ನು ಕೈಗೊಳ್ಳುತ್ತಾರೆ ಮತ್ತು ವಿಷ್ಣುವನ್ನು ಆರಾಧಿಸುತ್ತಾರೆ. ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ ಈ ದಿನದಂದು ಉಪವಾಸವನ್ನು ಕೈಗೊಳ್ಳುವವರು ತಿಂಗಳಿನಲ್ಲಿ ಬರುವ 23 ಏಕಾದಶಿ ಉಪವಾಸವನ್ನು ಕೈಗೊಂಡಂತೆ ಎಂದಾಗಿದೆ. ಇಂದಿಲ್ಲಿ ಈ ದಿನದ ಮಹತ್ವವನ್ನು ನಾವು ತಿಳಿದುಕೊಳ್ಳಲಿದ್ದು ಏಕಾದಶಿ ಉಪವಾಸದ ವಿಶೇಷತೆಯನ್ನು ಅರಿತುಕೊಳ್ಳೋಣ.....

ಮಹತ್ವ

ಮಹತ್ವ

ಪದ್ಮ ಪುರಾಣದಲ್ಲಿ ಏಕಾದಶಿಯ ಮಹತ್ವವನ್ನು ತಿಳಿಸಲಾಗಿದೆ. ಭಗವಾನ್ ವಿಷ್ಣುವು ಸ್ತ್ರೀ ಶಕ್ತಿ ಏಕಾದಶಿಯ ರೂಪವನ್ನು ಹೊಂದಿ ಈ ದಿನ ಮುರಾನ್ ಎಂಬ ಅಸುರನನ್ನು ವಧಿಸಿದ್ದರು ಎಂದು ಹೇಳಲಾಗಿದೆ. ಏಕಾದಶಿಯಿಂದ ಸಂಪ್ರೀತಗೊಂಡ ದೇವರು ಈ ದಿನ ಉಪವಾಸವನ್ನು ಕೈಗೊಳ್ಳುವವರು ಮರಣದ ನಂತರ ವೈಕುಂಠವನ್ನು ತಲುಪುತ್ತಾರೆ ಎಂದು ವರವನ್ನು ನೀಡುತ್ತಾರೆ. ಎಲ್ಲಾ ಏಕಾದಶಿಯಂತೆ ಈ ದಿನ ಹಿಂದೂಗಳು ಉಪವಾಸವನ್ನು ಮಾಡುತ್ತಾರೆ ಅಂತೆಯೇ ಜಪತಪಗಳನ್ನು ಕೈಗೊಳ್ಳುತ್ತಾರೆ. ಮುರ ಅಸುರನು ಅಕ್ಕಿಯಲ್ಲಿ ಅಡಗಿ ಕುಳಿತಿದ್ದ ಎಂಬ ಕಾರಣಕ್ಕೆ ಈ ದಿನ ಅಕ್ಕಿಯಿಂದ ಮಾಡಿದ ಆಹಾರವನ್ನು ಸೇವಿಸಬಾರದು.

ವಿಷ್ಣು ಸಂಕಷ್ಟಹರ ಮಂತ್ರ ಪಠಿಸಿ-ಸುಖ ಸಂಪತ್ತನ್ನು ಪಡೆದುಕೊಳ್ಳಿ

ಏಕಾದಶಿಯಂದು ಏನು ಮಾಡಬಾರದು ಏನು ಮಾಡಬೇಕು

ಏಕಾದಶಿಯಂದು ಏನು ಮಾಡಬಾರದು ಏನು ಮಾಡಬೇಕು

ಏಕಾದಶಿಯಂದು ಉಪವಾಸವನ್ನು ಕೈಗೊಳ್ಳಬೇಕು ಮತ್ತು ಮರುದಿನ ದ್ವಾದಶಿಯಂದು ತುಳಸಿ ನೀರು ಸೇವಿಸಿ ಇತರ ಆಹಾರವನ್ನು ತೆಗೆದುಕೊಳ್ಳಬೇಕು.

ಉದ್ದಿನ ಬೇಳೆ, ವಿಶೇಷ ಹಸಿರು ಸಸ್ಯಗಳು ಮತ್ತು ನೆಲ್ಲಿಕಾಯಿಯನ್ನು ಮೊಸರಿನಲ್ಲಿ ಬೆರೆಸಿ ಮಾಡಿದ ರಾಯಿತವನ್ನು ಈ ದಿನ ಸೇವಿಸಲಾಗುತ್ತದೆ.

ದಿನದಲ್ಲಿ ಒಂದು ಬಾರಿ ಆಹಾರವನ್ನು ಸೇವಿಸಬೇಕು

ರಾತ್ರಿಯ ವೇಳೆ ಲಘು ಉಪಹಾರವನ್ನು ಸೇವಿಸಬೇಕು

ದ್ವಾದಶಿಯಂದು ತುಳಸಿ ನೀರನ್ನು ಸೇವಿಸುವುದನ್ನು ದ್ವಾದಶಿ ಭರಣಿ ಎಂದು ಕರೆಯಲಾಗುತ್ತದೆ

ಏಕಾದಶಿಯಂದು ಜನರು ಲಘುವಾದ ಉಪಹಾರವನ್ನು ಸೇವಿಸುತ್ತಾರೆ ಇದು ಸರಿಯಲ್ಲ

ಏಕಾದಶಿಯಂದು ವಿಷ್ಣು ಮಂತ್ರವನ್ನು ಪಠಿಸಬೇಕು ಮತ್ತು ವಿಷ್ಣು ದೇವಾಲಯಗಳಿಗೆ ಭೇಟಿ ನೀಡಬೇಕು

ಈ ದಿನ ಹೆಚ್ಚಿನ ಎಲ್ಲಾ ವಿಷ್ಣು ದೇವಾಲಯಗಳು ತೆರೆದಿರುತ್ತವೆ.

ವೈಕುಂಠ ಏಕಾದಶಿಯ ಧಾರ್ಮಿಕ ಮಹತ್ವ

ವೈಕುಂಠ ಏಕಾದಶಿಯ ಧಾರ್ಮಿಕ ಮಹತ್ವ

ವೈಕುಂಠ ಏಕಾದಶಿಯನ್ನು ಈ ಹೆಸರಿನಲ್ಲಿ ಕೂಡ ಕರೆಯುತ್ತಾರೆ. ಈ ದಿನದಂದು ವಿಷ್ಣುವಿನ ಆರಾಧನೆಯನ್ನು ಮಾಡುವುದು ಜನನ ಮತ್ತು ಮರಣದ ನೋವಿನಿಂದ ಮುಕ್ತಿಯನ್ನು ನೀಡುತ್ತದೆ ಎಂದಾಗಿದೆ. ಈ ಚಕ್ರದಿಂದ ಆತ್ಮವು ಬಿಡುಗಡೆ ಹೊಂದಿ, ವಿಷ್ಣುವಿನ ಪಾದದಲ್ಲಿ ಸಮಾಧಾನವನ್ನು ಹೊಂದುತ್ತದೆ ಎಂದಾಗಿದೆ. ಆದ್ದರಿಂದ ಈ ಪವಿತ್ರ ದಿನದಂದು ವಿಷ್ಣು ಭಕ್ತರು ಉಪವಾಸವನ್ನು ಕೈಗೊಳ್ಳುತ್ತಾರೆ. ಒಮ್ಮೆ ವಿಷ್ಣುವು ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದಾಗ ರಾಕ್ಷಸ ಮೂರನು ಅವರನ್ನು ವಧಿಸಲು ಪ್ರಯತ್ನಿಸುತ್ತಾನೆ. ವಿಷ್ಣುವಿನ ದೇಹದಿಂದ ಸ್ತ್ರೀ ಶಕ್ತಿಯು ಉದ್ಭವಗೊಂಡು ಮೂರನನ್ನು ವಧಿಸುತ್ತದೆ. ವಿಷ್ಣುವು ಆಕೆಗೆ ಏಕಾದಶಿ ಎಂಬ ಹೆಸರನ್ನು ನೀಡುತ್ತಾರೆ ಮತ್ತು ವರವನ್ನು ನೀಡಿ ಆಕೆಯನ್ನು ಅನುಗ್ರಹಿಸುತ್ತಾರೆ. ಯಾರೆಲ್ಲಾ ಈ ದಿನದಂದು ಉಪವಾಸ ಕೈಗೊಳ್ಳುತ್ತಾರೋ ಅವರಿಗೆ ವೈಕುಂಠಕ್ಕೆ ಹೋಗುವ ಸಿದ್ಧಿಯನ್ನು ಸ್ವಯಂ ವಿಷ್ಣುವೇ ಘೋಷಿಸುತ್ತಾರೆ.

ಧಾರ್ಮಿಕ ನಂಬಿಕೆಗಳ ಪ್ರಕಾರ

ಧಾರ್ಮಿಕ ನಂಬಿಕೆಗಳ ಪ್ರಕಾರ

ಧಾರ್ಮಿಕ ನಂಬಿಕೆಗಳ ಪ್ರಕಾರ, ವೈಕುಂಠವು ವಿಷ್ಣು ಮತ್ತು ಲಕ್ಷ್ಮೀ ದೇವಿಯ ವಾಸಸ್ಥಾನವಾಗಿದೆ. ಈ ಪದಕ್ಕೆ ಯಾವುದೇ ಯಥಾವತ್ತಾದ ಅರ್ಥವಿಲ್ಲ. ನಿಮ್ಮಲ್ಲಿರುವ ಎಲ್ಲಾ ಅಹಂಕಾರ ಮತ್ತು ಮದವನ್ನು ನೀವು ತೊರೆದು ವಿಷ್ಣುವನ್ನೇ ನಿಮ್ಮ ಮನದಲ್ಲಿ ನೀವು ಸ್ಥಾಪಿಸಿದಾಗ ಮರಣದ ನಂತರ ವೈಕುಂಠಕ್ಕೆ ನೀವು ಹೋಗುತ್ತೀರಿ ಎಂದಾಗಿದೆ. ವೈಕುಂಠ ಏಕಾದಶಿಯಂದು ವ್ರತವನ್ನು ಕೈಗೊಂಡಾಗ ವಿಷ್ಣುವಿನ ಪಾದತಳದಲ್ಲಿ ಮುಕ್ತಿಯನ್ನು ಹೊಂದಲು ಭಕ್ತರು ಕಾಯುತ್ತಾರೆ.

ವೈಕುಂಠದ ದ್ವಾರ ತೆರೆಯುವುದು

ವೈಕುಂಠದ ದ್ವಾರ ತೆರೆಯುವುದು

ನಂಬಿಕೆಗಳ ಪ್ರಕಾರ, ಭಗವದ್ಗೀತೆಯನ್ನು ಓದುವವರು ಮತ್ತು ಅದನ್ನು ಪಾಲಿಸುವವರಿಗೆ ವೈಕುಂಠದ ದ್ವಾರ ತೆರೆಯುತ್ತದೆ. ಧ್ಯಾನ, ಭಕ್ತಿ ಮತ್ತು ಕರ್ಮದಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ ವೈಕುಂಠದ ಬಾಗಿಲನ್ನು ತೆರೆಯುವುದು ಸುಲಭವಾಗಿದೆ. ವೈಕುಂಠ ಏಕಾದಶಿಯನ್ನು ನೀವು ಪೂರ್ಣ ನಿಷ್ಟೆಯಿಂದ ಪಾಲಿಸಿದಲ್ಲಿ, ವೈಕುಂಠದ ಬಾಗಿಲು ನಿಮಗೆ ತೆರೆಯುತ್ತದೆ ಎಂಬುದಾಗಿ ಹಿಂದೂ ನಂಬಿಕೆಗಳಲ್ಲಿದೆ.

English summary

significance-vaikunta-ekadasi

India is a country of unity with diversity. Whether it is the dressing style of each state or the spiritual beliefs, they have their unique features and style.And when you think of religious occasions and festivals, there are so many of them that you can't imagine. "Vaikunta Ekadasi" is famous in the Vishnavites, and they are the followers of Lord Vishnu.
X
Desktop Bottom Promotion