For Quick Alerts
ALLOW NOTIFICATIONS  
For Daily Alerts

ಕ್ರಿಸ್‌ಮಸ್‌ ವಿಶೇಷ: ನಂಬಿಕೆ ಭರವಸೆಯ ಪ್ರತೀಕ 'ಮೇಣದ ಬತ್ತಿ'

By Jaya Subramanya
|

ಕ್ರಿಸ್‌ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಕ್ರಿಸ್‌ಮಸ್ ಹಬ್ಬಕ್ಕಾಗಿ ಕ್ರೈಸ್ತ ಬಾಂಧವರು ಡಿಸೆಂಬರ್ ತಿಂಗಳ ಆರಂಭದಲ್ಲೇ ಗೋಧುಲಿಗಳನ್ನು ನಿರ್ಮಿಸಿ ಅದನ್ನು ಅಲಂಕರಿಸಿ, ಪ್ರಾರ್ಥನೆಗಳನ್ನು ಮಾಡಿ ಕ್ರಿಸ್ತುವಿನ ಜನ್ಮ ದಿನಕ್ಕೆ ಶುಭ ಚಾಲನೆಯನ್ನು ನೀಡುತ್ತಾರೆ. ದೇವ ಪುತ್ರ ಏಸು ಕ್ರಿಸ್ತುವಿನ ಹುಟ್ಟು ಹಬ್ಬವನ್ನು ಎಷ್ಟು ವಿಜೃಂಭಣೆಯಿಂದ ಆಚರಿಸಿದರೂ ಸಾಲದು, ಅಷ್ಟೊಂದು ಮಹತ್ವದ ಹಬ್ಬ ಕ್ರಿಸ್‌ಮಸ್ ಎಂಬುದು ಅವರ ಮಾತಾಗಿದೆ.

ಕ್ರಿಸ್‌ಮಸ್ ಆಚರಣೆಯಲ್ಲಿ ಕೇಕ್‌ನಿಂದ ಹಿಡಿದು ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಮಹತ್ವವಿದೆ. ಈ ದಿನದಂದು ಮಾಡಲಾಗುವ ಪ್ರತಿಯೊಂದು ಕಾರ್ಯವೂ ದೇವರಿಗೆ ಮೆಚ್ಚುಗೆಯಾಗಬೇಕು ಎಂದಾಗಿದೆ. ಕ್ರಿಸ್‌ಮಸ್ ಹಬ್ಬದಲ್ಲಿ ಮೇಣದ ಬತ್ತಿಗೂ ತನ್ನದೇ ಆದ ವಿಶೇಷತೆ ಇದ್ದು ಜೆವಿಶ್‌ನ 'ಫೀಸ್ಟ್ ಆಫ್ ಲೈಟ್' ಎಂಬ ಆಚರಣೆಯಿಂದ ಬಂದಿದೆ.

 

ಮೇಣದ ಬತ್ತಿಯು ಏಸುವನ್ನು ಪ್ರತಿನಿಧಿಸುತ್ತದೆ. ವಿಶ್ವದ ಬೆಳಕು ಎಂಬುದಾಗಿಯೇ ಜನರು ಏಸುವನ್ನು ಕರೆದಿದ್ದು, ಇದಕ್ಕಾಗಿ ಮೇಣದ ಬತ್ತಿಯನ್ನು ಹಚ್ಚಿಡುವುದು ಸಂಪ್ರದಾಯವಾಗಿದೆ. ಅಂತೆಯೇ ನಂಬಿಕೆ ಮತ್ತು ಭರವಸೆಯ ಪ್ರತೀಕವಾಗಿ ಕೂಡ ಮೇಣದ ಬತ್ತಿಯನ್ನು ಹಚ್ಚಿಡುತ್ತಾರೆ.

ಪ್ರತಿಯೊಂದು ದೇಶದಲ್ಲೂ ಮೇಣದ ಬತ್ತಿ ಹಚ್ಚಿಡುವುದಕ್ಕೆ ಅದರದ್ದೇ ಆದ ಕಾರಣಗಳಿದ್ದು ಅದೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.....

ಐರ್ಲ್ಯಾಂಡ್

ಐರ್ಲ್ಯಾಂಡ್

ಮನೆಯಲ್ಲಿರುವ ತಂದೆ ಅಥವಾ ತಾಯಿ ಪವಿತ್ರವಾಗಿ ಅಲಂಕರಿಸಿದ ದೊಡ್ಡ ಮೇಣದ ಬತ್ತಿಯನ್ನು ಹಚ್ಚಿಡುತ್ತಾರೆ. ನಂತರ ಕುಟುಂಬ ಸದಸ್ಯರು ಒಟ್ಟಾಗಿ ಕುಳಿತು ಬದುಕಿರುವ ಮತ್ತು ಮೃತರಾಗಿರುವ ತಮ್ಮ ಪ್ರೀತಿ ಪಾತ್ರರಿಗಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.

ಸ್ಲಾವಿಕ್ ದೇಶಗಳು

ಸ್ಲಾವಿಕ್ ದೇಶಗಳು

ಚರ್ಚ್‌ನಲ್ಲಿರುವ ಗುರುಗಳು ಆಶೀರ್ವದಿಸಿದ ದೊಡ್ಡ ಮೇಣದ ಬತ್ತಿಯನ್ನು ಮೇಜಿನ ಮೇಲೆ ಇರಿಸಲಾಗುತ್ತದೆ. ಉಕ್ರೇನಿಯನ್ನುರು ಕ್ಯಾಂಡಲ್ ಸ್ಟ್ಯಾಂಡ್‌ಗಳನ್ನು ಬಳಸುವುದಿಲ್ಲ. ಬದಲಿಗೆ ಬ್ರೆಡ್ ಮೇಲೆ ಅದನ್ನಿರಿಸುತ್ತಾರೆ.

ದಕ್ಷಿಣ ಅಮೇರಿಕಾ

ದಕ್ಷಿಣ ಅಮೇರಿಕಾ

ದಕ್ಷಿಣ ಅಮೇರಿಕಾದ ಹೆಚ್ಚಿನ ಭಾಗಗಳಲ್ಲಿ ಮೇಣದ ಬತ್ತಿಯನ್ನು ಕ್ರಿಸ್‌ಮಸ್ ಗುರುತುಗಳೊಂದಿಗೆ ಪೇಪರ್ ಲ್ಯಾಟೀನ್‌ನಲ್ಲಿ ಇರಿಸಲಾಗುತ್ತದೆ ಇದರೊಂದಿಗೆ ಅಲಂಕಾರದ ಸ್ಥಳೀಯ ಸಂಸ್ಕೃತಿಯ ಚಿತ್ರಗಳನ್ನು ಇರಿಸಲಾಗುತ್ತದೆ.

ಇಂಗ್ಲೇಂಡ್ ಮತ್ತು ಫ್ರಾನ್ಸ್
 

ಇಂಗ್ಲೇಂಡ್ ಮತ್ತು ಫ್ರಾನ್ಸ್

ಪವಿತ್ರತೆಯ ಸಂಕೇತವಾಗಿರುವ ತಳದಲ್ಲಿ ಜೊತೆಯಾಗಿ ಬಿಂಬಿಸುವ ಮೂರು ಮೇಣದ ಬತ್ತಿಗಳನ್ನು ಹಚ್ಚಲಾಗುತ್ತದೆ.

ಜರ್ಮನಿ

ಜರ್ಮನಿ

ಹದಿನೇಳು ಮತ್ತು ಹದಿನೆಂಟನೇ ಶತಮಾನದಲ್ಲಿ ಎವರ್‌ಗ್ರೀನ್‌ಗಳಿಂದ ಅಲಂಕೃತಗೊಂಡ ಮರದ ಅಂಚಿನ ಮೇಲ್ಭಾಗದಲ್ಲಿ ಕ್ರಿಸ್‌ಮಸ್ ಮೇಣದ ಬತ್ತಿಗಳನ್ನು ಇರಿಸಲಾಗುತ್ತಿತ್ತು.

ವ್ಯಕ್ತಿ ದೇವರಲ್ಲಿ ಇಟ್ಟ ನಂಬಿಕೆಯನ್ನು ಇದು ಪ್ರತಿಪಾದಿಸುತ್ತದೆ

ವ್ಯಕ್ತಿ ದೇವರಲ್ಲಿ ಇಟ್ಟ ನಂಬಿಕೆಯನ್ನು ಇದು ಪ್ರತಿಪಾದಿಸುತ್ತದೆ

ಕ್ರಿಸ್‌ಮಸ್‌ನಂದು ಮೇಣದ ಬತ್ತಿಗಳನ್ನು ಹಚ್ಚುವುದು ಒಂದು ನೈಜ ಅರ್ಥವನ್ನು ಪಡೆದುಕೊಂಡಿದೆ. ಇದು ಹೇಗೆ ಉರಿಯುತ್ತದೆ ಎಂಬುದು ಮಹತ್ವವಲ್ಲ, ಬದಲಿಗೆ ವ್ಯಕ್ತಿ ದೇವರಲ್ಲಿ ಇಟ್ಟ ನಂಬಿಕೆಯನ್ನು ಇದು ಪ್ರತಿಪಾದಿಸುತ್ತದೆ ಮಾನವ ಜೀವನ ಸ್ಥಿರವಲ್ಲ ಎಂಬುದನ್ನು ತಿಳಿಸುತ್ತದೆ. ಮೇಣದ ಬತ್ತಿಯಂತೆ ಸಮಯ ಬಂದಾಗ ಅದೂ ಕೂಡ ಕರಗಿ ಇಲ್ಲವಾಗುತ್ತದೆ ಎಂದಾಗಿದೆ.

English summary

Significance Of The Christmas Candles

When it comes to Christmas, the candle light represents Jesus Christ. Jesus Christ is also known as the Light of the World who takes us from the path of darkness and leads us to true light. The light of the candle signifies the path of illumination and realising the true meaning of human life. It represents spirituality, devotion and faith.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more