For Quick Alerts
ALLOW NOTIFICATIONS  
For Daily Alerts

2019 ರಾಮ ನವಮಿಯ ಮುಹೂರ್ತ ಹಾಗೂ ಆಚರಣೆಯ ಮಹತ್ವ

|

ಹಿಂದೂಗಳಿಗೆ ಪ್ರಮುಖ ಹಬ್ಬವಾಗಿರುವಂತಹ ರಾಮ ನವಮಿಯು ಶುಕ್ಲ ಪಕ್ಷದಲ್ಲಿ ಬರುವಂತಹ ಚೈತ್ರಾ ಮಾಸದ 9ನೇ ದಿನದಂದು ಬರುವುದು. ಜಾರ್ಜಿಯನ್ ಕ್ಯಾಲೆಂಡರ್ ಪ್ರಕಾರ ಇದು ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ಬರುವುದು. ವಸಂತ ನವರಾತ್ರಿಯ ಅಂತಿಮ ದಿನದಂದು ರಾಮ ನವಮಿ ಆಚರಿಸಲ್ಪಡುವುದು. ವಿಷ್ಣುವಿನ ಏಳನೇ ಅವತಾರವಾಗಿರುವಂತಹ ರಾಮನ ಜನ್ಮ ದಿನದ ಆಚರಣೆಯಾಗಿದೆ. ರಾಜ ದಶರಥ ಮತ್ತು ರಾಣಿ ಕೌಶಲ್ಯ ಪುತ್ರನಾಗಿ ಹುಟ್ಟಿನ ರಾಮನ ಜನಿಸುವನು. ಉತ್ತರ ಭಾರತೀಯರು ಹೆಚ್ಚಾಗಿ ನವರಾತ್ರಿ ಆಚರಣೆ ಮಾಡಿದರೆ, ದಕ್ಷಿಣ ಭಾರತೀಯರು ತುಂಬಾ ಶ್ರದ್ಧಾಭಕ್ತಿಯಿಂದ ರಾಮನವಮಿ ಆಚರಿಸುವರು.

ಅಯೋಧ್ಯೆಯ ರಾಜನಾಗಿದ್ದ ದಶರಥನ ಮಗನಾಗಿ ವಿಷ್ಣುವು ಭೂಮಿ ಮೇಲೆ ಜನ್ಮ ಪಡೆಯುತ್ತಾನೆ ಎಂದು ಪುರಾಣಗಳು ಹೇಳಿವೆ. ಭೂಮಿ ಮೇಲೆ ನಡೆಯುತ್ತಿರುವಂತಹ ಅನಾಚಾರ, ಅದರಲ್ಲೂ ದುಷ್ಟ ರಾವಣ ಮಾಡುತ್ತಿದ್ದ ಅನಾಚಾರವನ್ನು ಕೊನೆಗೊಳಿಸಲು ವಿಷ್ಣುವು ಜನ್ಮ ತಾಳುವನು. ರಾವನ ತನಗೆ ದೇವತೆಗಳಿಂದ ಸಾವು ಬರಬಾರದು ಎಂದು ವರವನ್ನು ಪಡೆದಿರುತ್ತಾನೆ. ಇದರಿಂದಾಗಿ ವಿಷ್ಣು ದೇವರು ರಾಮನ ಅವತಾರ ಪಡೆದು ಭೂಮಿ ಮೇಲೆ ಸಾಮಾನ್ಯ ಮನುಷ್ಯನಾಗಿ ಜನಿಸುವರು. ಭೂಮಿ ಮೇಲೆ ಧರ್ಮದ ರಕ್ಷಣೆ ಮಾಡಲು ಶ್ರೀರಾಮನು ರಾವಣನನ್ನು ವಧಿಸುವನು. ಅವನು ಪರಿಪೂರ್ಣತೆಗೆ ಉದಾಹರಣೆ ಮತ್ತು ಭೂಮಿ ಮೇಲೆ ಧರ್ಮದಿಂದ ಹೇಗೆ ಬದುಕುಬೇಕು ಎನ್ನುವುದಕ್ಕೆ ಇದು ಒಳ್ಳೆಯ ಉದಾಹರಣೆ ಆಗಿದೆ.

Most Read: ರಾಮ ನವಮಿಯ ಮಹತ್ವವನ್ನು ತಿಳಿಯೋಣ ಬನ್ನಿ

Ram Navami

ಈ ಹಬ್ಬವನ್ನು ಅಧರ್ಮದ ಮೇಲೆ ಧರ್ಮದ ಗೆಲುವು ಆಗಿ ಆಚರಿಸಲಾಗುತ್ತದೆ. ಈ ದಿನ ಉಪವಾಸ ಮಾಡಿದರೆ ಅದರಿಂದ ದೇಹ ಹಾಗೂ ಮನಸ್ಸು ಎರಡೂ ಶುದ್ಧಿ ಆಗುವುದು ಎಂದು ಹೇಳಲಾಗುತ್ತದೆ. ಇದರಿಂದ ಮನುಷ್ಯನ ಜೀವನದಲ್ಲಿ ಪರಿಪೂರ್ಣನಾಗುವನು.

ರಾಮನವಮಿಯಂದು ಭಕ್ತರು ಬೇಗನೆ ಎದ್ದ ಬಳಿಕ ಸ್ನಾನ ಮಾಡಿಕೊಂಡು ಸೂರ್ಯ ದೇವರಿಗೆ ಜಲ ಅರ್ಪಣೆ ಮಾಡುವರು. ಸೂರ್ಯ ದೇವರು ರಾಮ ದೇವರ ಪೂರ್ವಿಜರು ಎಂದು ಹೇಳಲಾಗುತ್ತದೆ. ಈ ದಿನ ರಾಮನ ದೇವಾಲಯಗಳನ್ನು ತುಂಬಾ ಸುಂದರವಾಗಿ ಅಲಂಕರಿಸಲಾಗುತ್ತದೆ ಮತ್ತು ರಾಮನ ಸಣ್ಣ ಮೂರ್ತಿಗಳನ್ನು ಉಯ್ಯಾಲೆಯಲ್ಲಿ ಇಡಲಾಗುತ್ತದೆ. ಈ ದಿನ ಬೇಗನೆ ಎದ್ದು ಸ್ನಾನ ಹಾಗೂ ನಿತ್ಯಕರ್ಮಗಳನ್ನು ಪೂರೈಸಿದ ಬಳಿಕ ಹಿಂದೂಗಳಿಗೆ ತುಂಬಾ ಪವಿತ್ರ ಎಂದು ಪರಿಗಣಿಸಲಾಗಿರುವಂತಹ ರಾಮಚರಿತ ಮಾನಸವನ್ನು ಪಠಿಸಲಾಗುತ್ತದೆ ಮತ್ತು ಇದು ಮಧ್ಯಾಹ್ನ ವೇಳೆ ಪೂರ್ಣಗೊಳ್ಳುವುದು. ಮಧ್ಯಾಹ್ನ ವೇಳೆ ರಾಮನು ಜನಿಸಿದ ಸಮಯ ಎಂದು ಹೇಳಲಾಗುತ್ತದೆ. ಈ ವೇಳೆ ರಾಮನ ಜನ್ಮದ ಆಚರಣೆ ಮಾಡಲಾಗುತ್ತದೆ. ರಾಮನ ಮೂರ್ತಿಗೆ ಅಭಿಷೇಕ ಮಾಡಿಸಿದ ಬಳಿಕ ಹೊಸ ಬಟ್ಟೆ ಹಾಕಲಾಗುತ್ತದೆ. ರಾಮ ದೇವ ಕಾಲಿಗೆ ಭಕ್ತರು ಹೂಗಳನ್ನು ಹಾಕುವರು ಮತ್ತು ದೀಪಗಳನ್ನು ಹಚ್ಚಿಟ್ಟುಕೊಂಡು ಪೂಜೆ ಮಾಡುವರು.

ಉತ್ತರ ಪ್ರದೇಶದಲ್ಲಿ ಇರುವಂತಹ ಅಯೋಧ್ಯೆಯು ಶ್ರೀರಾಮನ ಜನ್ಮಸ್ಥಳ ಎಂದು ಪರಿಗಣಿಸಲಾಗಿದೆ. ಇಲ್ಲಿರುವಂತಹ ಸರಾಯು ನದಿಯಲ್ಲಿ ಭಕ್ತರು ಸ್ನಾನ ಮಾಡುವರು. ಇದರಿಂದ ಭಕ್ತರ ದೇಹ ಹಾಗೂ ಆತ್ಮವು ಶುದ್ಧವಾಗುವುದು ಎಂದು ನಂಬಲಾಗಿದೆ. ಈ ದಿನದಂದು ಕೆಲವು ಭಕ್ತರು ಉಪವಾಸ ವ್ರತ ಮಾಡುವರು.

ದಕ್ಷಿಣ ಭಾರತದಲ್ಲಿ ಭಕ್ತರು ರಾಮ ನವಮಿಯನ್ನು ರಾಮ ಮತ್ತು ಸೀತೆಯ ಮದುವೆಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಇದು ಪತಿ ಹಾಗೂ ಪತ್ನಿ ನಡುವಿನ ಪ್ರೀತಿಯ ದ್ಯೋತಕವಾಗಿದೆ. ರಾಮೇಶ್ವರಂನಲ್ಲಿ ಸಮುದ್ರದಲ್ಲಿ ಸ್ನಾನ ಮಾಡಿಕೊಂಡ ಬಳಿಕ ರಾಮನಾಥೇಶ್ವರಂ ಮಂದಿರಲ್ಲಿ ಪ್ರಾರ್ಥನೆ ಸಲ್ಲಿಸುವರು.

Most Read: ಶ್ರದ್ಧಾಭಕ್ತಿಯ ರಾಮ ನವಮಿ ಆಚರಣೆಯ ವಿಧಿವಿಧಾನ...

ಉತ್ತರ ಭಾರತದಲ್ಲಿ ಉಪವಾಸ ವ್ರತ ಮಾಡುವಂತಹ ಭಕ್ತರು ಕೇವಲ ಹಣ್ಣುಗಳನ್ನು ಮತ್ತು ಧಾನ್ಯಗಳಿಂದ ಮಾಡಿರುವಂತಹ ಸಿಹಿ ಮಾತ್ರ ಸೇವನೆ ಮಾಡುವರು. ಶ್ರೀರಾಮ ದೇವರ ಜನನದ ಬಳಿಕ ಭಕ್ತರು ಕುತ್ತು ಅಥವಾ ಸಿಂಗಾರ ಹಿಟ್ಟಿನಿಂದ ಮಾಡಿರುವಂತಹ ರೋಟಿ ತಿನ್ನುವರು. ದಕ್ಷಿಣ ಭಾರತದಲ್ಲಿ ಈ ದಿನದಂದು ವಿಶೇಷವಾಗಿ ಅಡುಗೆ ಮಾಡುವರು. ಇದನ್ನು ನೈವೇದ್ಯವಾಗಿ ದೇವರಿಗೆ ಅರ್ಪಣೆ ಮಾಡುವರು. ಇದರ ಬಳಿ ಪ್ರಸಾದ ರೂಪದಲ್ಲಿ ಇದನ್ನು ಭಕ್ತರು ಸೇವಿಸುವರು. ಬೆಲ್ಲದಿಂದ ಮಾಡಿರುವಂತಹ ಸಿಹಿ ಪಾನೀಯವನ್ನು ಪಾನಕ(ಪಾನಕಂ) ಎಂದು ಕರೆಯಲಾಗುತ್ತದೆ. ನೀರ್ ಮೂರ್(ಮಜ್ಜಿಗೆ), ಡೈ ಪರುಪು(ಹೆಸರುಬೇಳೆಯ ಸಲಾಡ್) ಇತ್ಯಾದಿ ಮಾಡಲಾಗುತ್ತದೆ.

ರಾಮನವಮಿಯ ಮುಹೂರ್ತಗಳು

ಈ ವರ್ಷ ರಾಮನವಮಿಯು ಎಪ್ರಿಲ್ 14ರಂದು ಬಂದಿದೆ.
ರಾಮ ನವಮಿ ಪೂಜೆಯ ಮುಹೂರ್ತ: 11.05-13.37
ರಾಮ ನವಮಿ ಮಧ್ಯಾಹ್ನದ ಪೂಜೆ12.21

English summary

Significance of Ram Navami 2019

Ram Navami is one of the most important Hindu festivals of India which falls in the ‘ Shukla Paksha’ on the ninth day of the month of Chaitra corresponding to the March/April of the Gregorian calendar. It is also the last day of the Vasanta Navratri. The festival celebrates the birth of the seventh incarnation of Lord Vishnu, Rama, to King Dasharatha and Queen Kaushalaya. While Navratri is celebrated with much fanfare in the North, devotees in the South celebrate Ram Navami with greater fervour.
X
Desktop Bottom Promotion