For Quick Alerts
ALLOW NOTIFICATIONS  
For Daily Alerts

ಸೋಮವಾರ ಉಪವಾಸ ಆಚರಿಸುವ ಮಹತ್ವ

|

ವಾರದ ಮೊದಲ ದಿನವಾದ ಸೋಮವಾರ ಶಿವನಿಗೆ ಮೀಸಲಾಗಿರಿಸಲಾಗಿದೆ. ಶಿವ ಜಗತ್ತಿನ ಪರಮೇಶ್ವರನಾಗಿದ್ದು ತನ್ನ ಜಡೆಯಲ್ಲಿ ಪವಿತ್ರ ಗಂಗಾನದಿಯನ್ನು ಬಂಧಿಸಿಟ್ಟು ಹಿಮಾಲಯದ ಮೂಲಕ ಹರಿಸುತ್ತಾನೆ ಎಂದು ಹೇಳಲಾಗುತ್ತದೆ. ಹುಲಿಯ ಚರ್ಮದ ಮೇಲೆ ಆಸೀನನಾಗಿರುವ ಶಿವ ಕೊರಳಲ್ಲಿ ಸರ್ಪವನ್ನು ಧರಿಸಿ ತ್ರಿಶೂಲವೆಂಬ ಮೂರು ಅಲಗುಗಳ ಆಯುಧದ ಜೊತೆಗೆ ಪುಟ್ಟ ಡಮರುಗವೊಂದನ್ನು ಇರಿಸಿಕೊಂಡಿರುತ್ತಾನೆ.

ಶಿವನನ್ನು ಓಲೈಸಿಕೊಳ್ಳುವುದು ಉಳಿದೆಲ್ಲಾ ದೇವರಿಗಿಂತ ಅತ್ಯಂತ ಸುಲಭ ಎಂದು ಹೇಳಲಾಗುತ್ತದೆ. ಇದರಲ್ಲಿ ಸುಲಭವಾದ ಮಾರ್ಗವೆಂದರೆ ಸೋಮವಾರ ಉಪವಾಸವಿದ್ದು ತನ್ನ ಇಚ್ಛೆಯನ್ನು ಪೂರೈಸುವಂತೆ ಶಿವನಲ್ಲಿ ಪ್ರಾರ್ಥಿಸುವುದಾಗಿದೆ. ಈ ಉಪವಾಸದಿಂದ ಕೋರಿಕೊಳ್ಳಬೇಕಾದ ಕೋರಿಕೆಗಳಲ್ಲಿ ಪ್ರಮುಖವಾದವು ಎಂದರೆ ಕಂಕಣಭಾಗ್ಯ, ಗೃಹಶಾಂತಿ, ಕೆಲವಾರು ಕಾಯಿಲೆಗಳಿಂದ ಉಪಶಮನ, ಧನಾಭಿವೃದ್ದಿ, ಏಳ್ಗೆ ಹಾಗೂ ಒಟ್ಟಾರೆ ಸಂತೋಷ.

Significance of Fasting on Monday

ಹದಿನಾರನೇ ಸೋಮವಾರದ ಕುರಿತಾದ ಮಾಹಿತಿಗಳು

ಶುಕ್ಲಪಕ್ಷವನ್ನು ಹೆಚ್ಚಾಗಿ ಪರಿಗಣಿಸಿ ಆಗಮಿಸುವ ಸೋಮವಾರದಿಂದ (ಪ್ರಖರ ಹುಣ್ಣಿಮೆಯ ದಿನ) ಪ್ರಾರಂಭಿಸುವ ಸೋಮವಾರದ ಉಪವಾಸಗಳು ಒಟ್ಟು ಹದಿನಾರು ವಾರಗಳ ಕಾಲ ಆಚರಿಸಬೇಕು. ಅದರಲ್ಲೂ ಶ್ರಾವಣ ಮಾಸದ (ಜುಲೈ - ಆಗಸ್ಟ್) ಸೋಮವಾರದಂದು ಪ್ರಾರಂಭಿಸಿದ ಸೋಮವಾರದ ಉಪವಾಸಗಳು ಹೆಚ್ಚು ಪ್ರತಿಫಲವನ್ನು ನೀಡುತ್ತವೆ. ಏಕೆಂದರೆ ಈ ಅವಧಿಯಲ್ಲಿಯೇ ಸಮುದ್ರಮಥನದ ಸಮಯದಲಿ ಉದ್ಭವವಾಗಿದ್ದ ಕಟುವಿಷವನ್ನು ಕುಡಿದು ಶಿವ ವಿಷಕಂಠನಾಗಿದ್ದ.

ಉಪವಾಸ ಸೂರ್ಯೋದಯದ ಅವಧಿಯಲ್ಲಿ ಪ್ರಾರಂಭಗೊಂಡು ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಸಂಪನ್ನಗೊಳ್ಳುತ್ತದೆ. ಬೆಳಿಗ್ಗೆ ಶಿವಲಿಂಗವನ್ನು ಗಂಗಾಜಲ, ಹಾಲು ಅಥವಾ ಮೊಸರಿನಿಂದ ಸ್ನಾನ ಮಾಡಿಸಿ ಹೂವು ಮತ್ತು ಆ ಸಮಯದಲ್ಲಿ ಲಭ್ಯವಿರುವ ಹಣ್ಣುಗಳನ್ನು ಅರ್ಪಿಸಲಾಗುತ್ತದೆ. ಉಪವಾಸ ಆಚರಿಸುವವರು ಬಿಳಿ ಬಟ್ಟೆಗಳನ್ನು ತೊಡಬೇಕು. ದಿನವಿಡೀ ನೀರನ್ನು ಕುಡಿಯಬಹುದಾಗಿದ್ದು, ಜೊತೆಗೆ ಹಣ್ಣಿನ ರಸ ಅಥವಾ ಹಣ್ಣುಗಳನ್ನು ಸೇವಿಸಬಹುದು. ಆರೋಗ್ಯದ ತೊಂದರೆ ಇರುವ ವ್ಯಕ್ತಿಗಳಿಗೆ ಕಠಿಣವೆನಿಸಿದರೆ ಕೊಂಚ ಹೆಚ್ಚು ಹಣ್ಣುಗಳನ್ನು ಸೇವಿಸಬಹುದು. ಸೂರ್ಯಾಸ್ತದ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿದ ಬಳಿಕ ಊಟ ಮಾಡಬಹುದು.

Most Read: ಹದಿನಾರು ಸೋಮವಾರ ಉಪವಾಸ ಮಾಡಿ ಶಿವನ ಅನುಗ್ರಹ ಪಡೆದುಕೊಳ್ಳಿ

Significance of Fasting on Monday

ಉಪವಾಸದ ಅವಧಿಯಲ್ಲಿ "ಓಂ ನಮಃ ಶಿವಾಯಃ" ಅಂದರೆ "ನಾನು ಶಿವನಿಗೆ ಸಾಷ್ಟಾಂಗವೆರಗುತ್ತೇನೆ" ಎಂಬ ಮಂತ್ರವನ್ನು ಉಚ್ಛರಿಸುತ್ತಿರುವುದು ಹೆಚ್ಚು ಪ್ರಯೋಜನಕಾರಿಯಾಗಿದೆ ಹಾಗೂ ಇದು ಧನಾತ್ಮಕ ಶಕ್ತಿಯನ್ನು ದೇಹದಲ್ಲಿ ಸ್ಥಾಪಿಸುತ್ತದೆ. ಅಲ್ಲದೇ ಈ ಮಂತ್ರವನ್ನು ಪಂಚೋಚ್ಛಾರದ ಮಂತ್ರವೆಂದೂ ಕರೆಯುತ್ತಾರೆ.

ಕೆಲವು ಕಥೆಗಳ ಪ್ರಕಾರ, ಶಿವನ ಪತ್ನಿಯಾದ ಪಾರ್ವತಿಯು ಶಿವನನ್ನು ತನ್ನ ಪತಿಯನ್ನಾಗಿ ಪಡೆಯಲು ಈ ಉಪವಾಸವನ್ನು ಮೊದಲಾಗಿ ಆಚರಿಸಿದಳು ಎಂದು ಭಾವಿಸಲಾಗಿದ್ದು ಅಂದಿನಿಂದಲೂ ಅವಿವಾಹಿತ ಯುವತಿಯರು ಶಿವನಂತಹ ಉತ್ತಮ ಪತಿ ತಮಗೂ ದೊರಕುವಂತಾಗಲಿ ಎಂದು ಸೋಮವಾರ ಉಪವಾಸ ಆಚರಿಸುತ್ತಾರೆ.

ಸೋಮವಾರದ ಉಪವಾಸ ಆಚರಿಸಲು ಇನ್ನೊಂದು ಕಾರಣವೆಂದರೆ ಆರೋಗ್ಯದ ತೊಂದರೆ ಅಥವಾ ಕಾಡುವ ಕಾಯಿಲೆಯಿಂದ ಮುಕ್ತಿ ಪಡೆಯುವುದಾಗಿದೆ. ಈ ಕಾರಣವಿದ್ದರೆ ಉಪವಾಸದ ಅವಧಿಯಲ್ಲಿ "ಮಹಾಮೃತ್ಯುಂಜಯ ಮಂತ್ರ"ವನ್ನು ಸುಮಾರು ನೂರಾ ಎಂಟು ಬಾರಿ ಪಠಿಸಬೇಕಾಗುತ್ತದೆ. ಈ ಮಂತ್ರಕ್ಕೆ ತ್ರಯಂಬಾಕಂ ಮಂತ್ರ ಅಥವಾ ರುದ್ರ ಮಂತ್ರವೆಂದೂ ಕರೆಯಲಾಗುತ್ತದೆ. ಇದು ಋಗ್ವೇದದಲ್ಲಿ ವಿವರಿಸಲಾಗಿರುವ ಮಂತ್ರವಾಗಿದ್ದು ಇದರ ಉಕ್ತಿ ಹೀಗಿದೆ:

Significance of Fasting on Monday

ಓಂ ತ್ರಯಂಬಕಂ ಯಜಾಮಹೇ

ಸುಗಂಧಿಂ ಪುಷ್ಟಿವರ್ಧನಂ

ಉರ್ವಾರುಕಮಿವ ಬಂಧನಾತ್

ಮೃತ್ಯೋರ್ಮುಕ್ಷೀಯಮಾಮೃತಾತ್

ಈ ಮಂತ್ರವನ್ನು ಪಠಿಸುವ ಮೂಲಕ ದೇಹದಲ್ಲಿ ಧನಾತ್ಮಕ ಶಕ್ತಿ ಅವಗಾಹನೆಯಾಗಿ ಸುತ್ತಮುತ್ತಲಿರುವ ಎಲ್ಲಾ ಋಣಾತ್ಮಕ ಶಕ್ತಿಗಳು ದೂರವಾಗುತ್ತವೆ. ಈ ಮಂತ್ರವನ್ನು ಮನದಲ್ಲಿಯೇ ಪಠಿಸಬಹುದು ಅಥವಾ ದೊಡ್ದದನಿಯಲ್ಲಿಯೂ ಪಠಿಸಬಹುದು. ಆದರೆ ಇದನ್ನು ಪಠಿಸುವಾಗ ಪರಿಪೂರ್ಣ ಶ್ರದ್ದೆ ಮತ್ತು ಭಕ್ತಿಯಿಂದ ಹಾಗೂ ಏಕಾಗ್ರತೆಯಿಂದ ಪಠಿಸಬೇಕು. ಇದರ ಪರಿಣಾಮವನ್ನು ನೀವೇ ಮನಗಾಣಬಹುದು.

ಉಪವಾಸದ ಅವಧಿ ಪೂರ್ಣಗೊಂಡ ಬಳಿಕ ಉಧ್ಯಾಪಂ ನಿರ್ವಹಿಸಬೇಕು ಹಾಗೂ ಶಿವನ ಪೂಜೆಯನ್ನು ತಪ್ಪದೇ ನಿರ್ವಹಿಸಬೇಕು.

ಇದೇ ರೀತಿ ಇತರ ತೊಂದರೆಗಳ ನಿವಾರಣೆಗೆ ನೆರವಾಗುವ ಮಂತ್ರಗಳು ಇಂತಿವೆ

ಶುಕ್ರ ಯಂತ್ರ (ಶೀಘ್ರ ಕಂಕಣಬಂಧನ ಹಾಗೂ ವೈವಾಹಿಕ ಜೀವನದಲ್ಲಿ ಶಾಂತಿಗಾಗಿ)

ಗೌರಿ ಶಂಕರ ಪೂಜೆ (ವಿವಾಹಕ್ಕೆ ಅಡ್ಡಿಯಾಗಿರುವ ಕಂಟಕಗಳನ್ನು ತೊಡೆಯಲು)

ಉಮಾ ಮಹೇಶ್ವರಿ ಪೂಜೆ (ಸುಖಕರ ವೈವಾಹಿಕ ಜೀವನಕ್ಕಾಗಿ)

ಮಾ ಕಾತ್ಯಾಯನಿ ಮಹಾ ಅನುಷ್ಠಾನ (ಶೀಘ್ರ ವಿವಾಹ ಬಂಧನಕ್ಕಾಗಿ)

ಮಾ ಉಮಾ ಮಹಾ ಅನುಷ್ಠಾನ (ಸುಖಕರ ವೈವಾಹಿಕ ಜೀವನಕ್ಕಾಗಿ)

English summary

Significance of Fasting on Monday

The first day of the week Monday is dedicated Lord Shiva. Shiva is regarded as the Supreme Being with matted hair through which flows the holy river, Ganga. He is always depicted sitting on or wearing tiger skin, a snake around his neck, a three branched trident considered as his weapon and a damru. It is said that he is the easiest to be pleased. People fast on Mondays to please Lord Shiva to get their wishes fulfilled. The various purposes for which people fast are marriage, domestic happiness, relief from various diseases and other health issues, gain of wealth, prosperity and overall happiness.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more