For Quick Alerts
ALLOW NOTIFICATIONS  
For Daily Alerts

ಯುಗಾದಿ ಹಬ್ಬದಂದು ಬೇವು ಬೆಲ್ಲದ ಮಹತ್ವ-ನೀವು ತಿಳಿಯಲೇಬೇಕಾದ ಸಂಗತಿಗಳು

|

ಯುಗಾದಿ ಎಂದರೆ ಹೊಸ ವರ್ಷದ ಆರಂಭ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ವಿಶೇಷ ಆಚರಣೆಯ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನ ಯುಗದ ಆರಂಭವಾಗುವುದು.

ಹಾಗಾಗಿಯೇ ಯುಗಾದಿ ಎನ್ನುವ ಹೆಸರಿನಲ್ಲಿ ಹೊಸ ವರ್ಷದ ಆರಂಭವಾಗುವುದು. ಈ ವರ್ಷ ಮಾರ್ಚ್ 22ರಂದು ಆಚರಿಸಲಾಗುವುದು. ಈ ಶೋಭಕೃತ ಸಂವತ್ಸರ ನಿಮ್ಮ ಬಾಳಿನಲ್ಲಿ ಸಮೃದ್ಧಿಯನ್ನು ತರಲಿ.

ugadi 2023

ಈ ಶುಭ ದಿನದಂದೇ ಬ್ರಹ್ಮ ದೇವನು ಸೃಷ್ಟಿಯನ್ನು ಆರಂಭಿಸಿದನು. ಈ ನೆನಪಿಗಾಗಿಯೇ ಯುಗಾದಿ ಹಬ್ಬದ ಆಚರಣೆಯನ್ನು ಆಚರಿಸಲಾಗುವುದು ಎಂದು ಸಹ ಹೇಳಲಾಗುವುದು. ಪ್ರಕೃತಿಯಲ್ಲಿಯೂ ವಿಭಿನ್ನ ಬದಲಾವಣೆಯ ಮೂಲಕ ಹೊಸ ವರ್ಷದ ಆರಂಭವಾಗುವುದು. ಇದು ವ್ಯಕ್ತಿಯ ಜೀವನದ ಮೇಲೂ ಸಾಕಷ್ಟು ಪ್ರಭಾವ ಬೀರುತ್ತದೆ.

ಹಿಂದೂ ಹಬ್ಬಗಳಲ್ಲಿ ಒಂದಾದ ಯುಗಾದಿಯನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಹೆಸರು ಹಾಗೂ ಸಂಪ್ರದಾಯಗಳ ಅಡಿಯಲ್ಲಿ ಆಚರಿಸಲಾಗುವುದು. ಕರ್ನಾಟಕದಲ್ಲಿ ಯುಗಾದಿಯ ಆಚರಣೆಯನ್ನು ವಿಶೇಷವಾದ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ಈ ಸಂಭ್ರಮದ ಒಳಗೆ ವಿವಿಧ ಸಾಂಪ್ರದಾಯಿಕ ಆಚರಣೆಯನ್ನು ಆಚರಿಸಲಾಗುವುದು. ಬೇವು ಬೆಲ್ಲವನ್ನು ನೀಡುವುದು ಹಾಗೂ ಸವಿಯುವುದು ಈ ಹಬ್ಬದ ವಿಶೇಷ ಸಂಗತಿ.

ಪ್ರತಿಯೊಬ್ಬರ ಜೀವನವು ನೋವು-ನಲಿವಿನಿಂದ ಕೂಡಿರುತ್ತದೆ. ಅವುಗಳನ್ನು ಸಮಾನ ದೃಷ್ಟಿಯಲ್ಲಿ ಸ್ವೀಕರಿಸಬೇಕು. ನೋವು ಎದುರಾದಾಗ ದೃತಿಗೆಡದೆ, ನಲಿವಿನಿಂದಾಗಿ ಅಹಂಕಾರಕ್ಕೆ ಒಳಗಾಗದೆ, ಎರಡು ಸಂದರ್ಭದಲ್ಲೂ ಸಮತೋಲನವನ್ನು ಕಾಯ್ದುಕೊಂಡು ಜೀವನವನ್ನು ನಡೆಸಬೇಕು. ಅಂತೆಯೇ ಒಂದು ವರ್ಷ ಎಂದರೆ 365 ದಿನಗಳು ಈ ದಿನಗಳಲ್ಲಿ ಸಂಪೂರ್ಣವಾಗಿ ಸಂತೋಷದಿಂದ ಹಾಗೂ ಕೇವಲ ದುಃಖದಿಂದಲೇ ಕೂಡಿರುವುದಿಲ್ಲ. ಸುಖ-ದುಃಖ ಎರದು ಚಕ್ರದ ರೀತಿಯಲ್ಲಿ ತಿರುಗುತ್ತಿರುತ್ತದೆ. ಆಗ ಎಲ್ಲವನ್ನೂ ಸಮನಾಗಿ ಸ್ವೀಕರಿಸುತ್ತಾ ಸಾಗಬೇಕು ಎನ್ನುವುದೇ ಯುಗಾದಿ ಹಬ್ಬದ ಒಳಾರ್ಥ.

ಬೇವು-ಬೆಲ್ಲದ ಹಂಚಿಕೆ

ಬೇವು-ಬೆಲ್ಲದ ಹಂಚಿಕೆ

ಯುಗಾದಿಯ ಸಮಯ ಬರುವ ಒಳಗೆ ಪ್ರಕೃತಿಯಲ್ಲಿ ಗಿಡ-ಮರಗಳು ತಮ್ಮ ಹಳೆಯ ಎಲೆಗಳನ್ನು ಕೊಡವಿಕೊಂಡು, ಹೊಸ ಚಿಗುರುಗಳಿಂದ ಕಂಗೊಳಿಸುತ್ತವೆ. ಅಂತೆಯೇ ನಮ್ಮ ಜೀವನದಲ್ಲೂ ಹೊಸತನವನ್ನು ಪಡೆದುಕೊಳ್ಳಲು ಹೊಸ ವರ್ಷವನ್ನು ಸ್ವಾಗತಿಸಲಾಗುವುದು. ಈ ವಿಶೇಷ ಹಬ್ಬದ ಸಂದರ್ಭದಲ್ಲಿ ಭೌಗೋಳಿಕವಾಗಿಯೂ ಮಹತ್ತರ ಮದಲಾವಣೆ ಉಂಟಾಗುತ್ತದೆ. ಚಂದ್ರನು ಸೂರ್ಯನಿಗೆ ಸ್ವಲ್ಪ ಸಮೀಪ ಚಲಿಸುತ್ತಾನೆ. ಹಾಗಾಗಿ ಚಂದ್ರನನ್ನು ವೀಕ್ಷಿಸಲು ಸ್ವಲ್ಪ ಕಷ್ಟವಾಗುವುದು ಎನ್ನುತ್ತಾರೆ. ಧಾರ್ಮಿಕ, ನೈಸರ್ಗಿಕ ಹಾಗೂ ಭೌಗೋಳಿಕವಾಗಿ ವಿಭಿನ್ನ ಬದಲಾವಣೆಯನ್ನು ಸೂಚಿಸುತ್ತಾ ಹೊಸ ಯುಗವನ್ನು ತರುವ ಹಬ್ಬ ಯುಗಾದಿ. ಈ ಹಬ್ಬದಂದು ಅಭ್ಯಂಗ ಸ್ನಾನ, ಗೃಹಾಲಂಕಾರ, ಬೇವು-ಬೆಲ್ಲದ ಹಂಚಿಕೆ, ವಿಶೇಷವಾದ ದೇವರ ಪೂಜೆ, ವಿಶೇಷ ನೈವೇದ್ಯಗಳನ್ನು ತಯಾರಿಸುವುದರ ಮೂಲಕ ಹಬ್ಬದ ಸೊಗಡನ್ನು ಸವಿಯುತ್ತಾರೆ.

Most Read: ಯುಗಾದಿ 2019: ದಿನಾಂಕ, ಮಹತ್ವ, ಇತಿಹಾಸ, ಸಂಪ್ರದಾಯ

ಹಿಂದೂ ಪಂಚಾಂಗದಲ್ಲಿ ಹೊಸ ದಿನದ ಆರಂಭ

ಹಿಂದೂ ಪಂಚಾಂಗದಲ್ಲಿ ಹೊಸ ದಿನದ ಆರಂಭ

ಹಿಂದೂ ಪಂಚಾಂಗದಲ್ಲಿ ಹೊಸ ದಿನದ ಆರಂಭವಾಗುವ ಈ ದಿನವನ್ನು ಗ್ರಾಮೀಣ ಪ್ರದೇಶದಲ್ಲೂ ವಿಶೇಷವಾಗಿ ಆಚರಿಸಲಾಗುವುದು. ಯುಗಾದಿಯ ಹಬ್ಬದಲ್ಲಿ ಬೇವಿನ ಎಲೆ, ಬೆಲ್ಲ, ಮಾವಿನ ಕಾಯಿ, ಉಪ್ಪು, ಮೆಣಸು, ಹುಣಸೆ ಕಾಯಿ ಸೇರಿದಂತೆ ಇನ್ನಿತರ ವಸ್ತುಗಳು ಹಾಗೂ ಖಾದ್ಯಗಳು ಅತ್ಯಂತ ಮಹತ್ವ ಹಾಗೂ ಪಾವಿತ್ರತೆಯನ್ನು ಪಡೆದುಕೊಂಡಿದೆ. ಇವು ಮನುಷ್ಯನ ಜೀವನದಲ್ಲಿ ವಿಶೇಷವಾದ ಆರು ಭಾವನೆಯನ್ನು ತಂದುಕೊಡುವುದು. ಜೊತೆಗೆ ಜೀವನದಲ್ಲಿ ಸಮೃದ್ಧಿ, ಸಂತೋಷ, ಸಮತೋಲನ, ಮಾರ್ಗದರ್ಶನವನ್ನು ನೀಡುವುದು. ಧಾರ್ಮಿಕ ಹಿನ್ನೆಲೆಯಲ್ಲಿಯೇ ನಮ್ಮ ಭಾವನೆ ಹಾಗೂ ವರ್ತನೆಗಳನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಂಡರೆ ಜೀವನವು ಅತ್ಯಂತ ಸಂತೋಷ ಹಾಗೂ ಸುಂದರವಾಗಿ ಇರುತ್ತದೆ ಎನ್ನಲಾಗುವುದು. ಯುಗಾದಿಯಲ್ಲಿ ವಿಶೇಷವಾಗಿ ಆರು ಬಗೆಯ ರುಚಿಯನ್ನು ತಿಳಿಸುವ ವಸ್ತುಗಳನ್ನು ಸವಿಯಬೇಕು. ಈ ಆರು ರುಚಿಗಳು ನಮ್ಮಲ್ಲಿ ಆರು ಭಾವನೆಗಳನ್ನು ಮೂಡಿಸುತ್ತವೆ. ಅವು ನಮ್ಮ ಜೀವನದ ಮೇಲೆ ಗಮನಾರ್ಹ ಬದಲಾವಣೆಯನ್ನು ನೀಡುವವು. ಹಾಗಾದರೆ ಆ ಆರು ರುಚಿಗಳು ಯಾವವು? ಅವುಗಳೊಂದಿಗೆ ನಮ್ಮ ಭಾವನೆಗಳು ಹೇಗೆ ಬೆಸದುಕೊಳ್ಳುತ್ತವೆ? ಯಾವ ಭಾವನೆಗಳು ಯುಗಾದಿ ಹಬ್ಬದ ಸಂಭ್ರಮದಲ್ಲಿ ಬದಲಾವಣೆಯನ್ನು ತಂದುಕೊಳ್ಳುತ್ತವೆ? ಎನ್ನುವಂತಹ ಅನೇಕ ಪ್ರಶ್ನೆಗಳಿಗೆ ನೀವು ಉತ್ತರವನ್ನು ಹುಡುಕುತ್ತಿದ್ದರೆ ಲೇಖನದ ಮುಂದಿನ ಭಾಗದಲ್ಲಿ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ಆರು ರುಚಿಗಳು ಮತ್ತು ಆರು ಭಾವನೆಗಳು

ಆರು ರುಚಿಗಳು ಮತ್ತು ಆರು ಭಾವನೆಗಳು

ಬೇವು ಬೆಲ್ಲ ಎನ್ನುವುದು ಮೂಲತಃ ಕಹಿ ಹಾಗೂ ಸಿಹಿಯ ರುಚಿಯನ್ನು ಸೂಚಿಸುತ್ತದೆ. ಇದರೊಟ್ಟಿಗೆ ಆರು ವಿಭಿನ್ನ ರುಚಿಯನ್ನು ಒಳಗೊಂಡಿದೆ. ಅದು ನಮ್ಮ ಅನುಭವಕ್ಕೆ ತರುತ್ತದೆ ಅದನ್ನು ಗ್ರಹಿಸುವ ಸಾಮಥ್ರ್ಯ ನಮ್ಮಲ್ಲಿ ಇರಬೇಕು. ಪ್ರತಿಯೊಂದು ರುಚಿಯು ನಮ್ಮ ಭಾವನೆಗಳ ಮೇಲೆ ಗಮನಾರ್ಹ ಬದಲಾವಣೆಯನ್ನು ತಂದುಕೊಡುವುದು. ಅಂತೆಯೇ ನಮ್ಮ ಜೀವನದ ಏರಿಳಿತವನ್ನು ಸಹ ಸಂಕೇತಿಸುವುದು ಎನ್ನಲಾಗುವುದು. ಹೊಸ ದಿನದ ಆರಂಭ, ಹೊಸತನವನ್ನು ನೀಡುವುದರ ಮೂಲಕ ಹೊಸ ಯುಗಕ್ಕೆ ಕರೆದೊಯ್ಯುವುದು. ಆರು ವಿಭಿನ್ನ ರುಚಿಗಳು ನಮ್ಮ ಭಾವನೆಗಳ ಮೇಲೆ ಪರಿಣಾಮ ಬೀರುವುದರ ಜೊತೆಗೆ ನಮ್ಮ ಜೀವನದಲ್ಲಿ ಹೇಗೆ ಸೂಕ್ತ ಮಾರ್ಗವನ್ನು ಕಂಡುಕೊಳ್ಳಬೇಕು? ಹಾಗೂ ಅದರಲ್ಲಿ ಹೇಗೆ ಸಾಗಬೇಕು ಎನ್ನುವುದನ್ನು ತಿಳಿಸಿಕೊಡುವುದು.

ಬೇವಿನ ಎಲೆ ದುಃಖ/ನೋವನ್ನು ಸೂಚಿಸುತ್ತದೆ

ಬೇವಿನ ಎಲೆ ದುಃಖ/ನೋವನ್ನು ಸೂಚಿಸುತ್ತದೆ

ಯುಗಾದಿ ಎನ್ನುವ ಹಬ್ಬದ ಸಂಕೇತವೇ ಬೇವು-ಬೆಲ್ಲ. ಪವಿತ್ರ ಅರ್ಥ ಹಾಗೂ ಆಚರಣೆಯನ್ನು ಹೊಂದಿರುವ ಈ ಹಬ್ಬದಲ್ಲಿ ಬೇವು ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಅತ್ಯಂತ ಆರೋಗ್ಯಕರ ಔಷಧೀಯ ಸಸ್ಯ. ಇದರ ಎಲೆಗಳು ಅನೇಕ ರೋಗಗಳನ್ನು ದೂರ ಇರಿಸುತ್ತದೆ. ಧಾರ್ಮಿಕವಾಗಿ ಹಾಗೂ ಭಾವನಾತ್ಮಕವಾಗಿಯೂ ಅದ್ಭುತ ಮಾಹಿತಿಯನ್ನು ನೀಡುವುದು. ಮನುಷ್ಯನ ಜೀವನ ಕೇವಲ ಸಂತೋಷದ ಸವಾರಿಯಿಂದ ಕೂಡಿರುವುದಿಲ್ಲ. ದುಃಖ ಹಾಗೂ ನೋವು ಎನ್ನುವುದು ಬೆಸೆದುಕೊಮಡಿರುತ್ತದೆ. ಹಾಗಾಗಿ ವ್ಯಕ್ತಿ ತನ್ನ ಸುತ್ತಲಲ್ಲಿ ಇರುವ ನೋವು ಹಾಗೂ ಕಷ್ಟವನ್ನು ಸರಿಯಾಗಿ ಸ್ವೀಕರಿಸಬೇಕು. ಜೀವನದ ಕಹಿಯನ್ನು ಒಪ್ಪಿಕೊಳ್ಳಬೇಕು. ಆಗಲೇ ಅಹಂಕಾರವನ್ನು ಮೆಟ್ಟಿ ನಿಲ್ಲಲು ಸಾಧ್ಯ. ಜೊತೆಗೆ ಜೀವನದ ಪರಿಪೂರ್ಣತೆಯನ್ನು ತಿಳಿದುಕೊಳ್ಳಬಹುದು ಎನ್ನುವ ಭಾವನೆಯನ್ನು ಸೂಚಿಸುತ್ತದೆ.

Most Read: ಯುಗಾದಿ ಹಬ್ಬದ ನಂಬಿಕೆಗಳು ಮತ್ತು ಆಚರಣೆಗಳು

ಬೆಲ್ಲ ಸಿಹಿಯನ್ನು ಸೂಚಿಸುತ್ತದೆ

ಬೆಲ್ಲ ಸಿಹಿಯನ್ನು ಸೂಚಿಸುತ್ತದೆ

ಬೆಲ್ಲದ ಸಾಮಾನ್ಯವಾದ ಗುಣ ಹಾಗೂ ಎಲ್ಲರಿಗೂ ಇಷ್ಟವಾಗುವ ಸಂಗತಿ ಸಿಹಿ. ಬೆಲ್ಲದ ಸಿಹಿಯು ಸಂತೋಷ ಅಥವಾ ಆನಂದದ ಭಾವನೆಯನ್ನು ಸೂಚಿಸುವುದು. ಮನುಷ್ಯ ತನ್ನ ಜೀವನದಲ್ಲಿ ಸಿಹಿಯನ್ನು ಪಡೆದುಕೊಳ್ಳಲು ಅಥವಾ ಸಂತೋಷವನ್ನು ಅನುಭವಿಸಲು ಸಾಕಷ್ಟು ಪ್ರಯತ್ನ ಹಾಗೂ ಶ್ರಮವನ್ನು ವಹಿಸುತ್ತಾನೆ. ಯುಗಾದಿ ಹಬ್ಬವು ಸಹ ಬೆಲ್ಲವನ್ನು ನೀಡುವ ಸಂದೇಶವನ್ನು ಸಾರುವುದು. ಜೀವನದಲ್ಲಿ ಹೊಸತನದ ಬದಲಾವಣೆಯನ್ನು ತಂದುಕೊಳ್ಳುವುದರ ಮೂಲಕ ಆನಂದವನ್ನು ಅನುಭವಿಸಲಿ ಎನ್ನುವ ಧಾರ್ಮಿಕ ಒಳಾರ್ಥ ಹಾಗೂ ಭಾವನೆಯನ್ನು ಸೂಚಿಸುವುದು. ಜೀವನದಲ್ಲಿ ಬರುವ ಎಲ್ಲಾ ಸಂಗತಿಗಳನ್ನು ಬೆಲ್ಲದ ರೀತಿಯಲ್ಲಿಯೇ ಸ್ವೀಕರಿಸಿ ಅನುವಿಸಬೇಕು ಎನ್ನುವ ಅರ್ಥವನ್ನು ನೀಡುವುದು.

ಕಾಳು ಮೆಣಸು ಕೋಪವನ್ನು ಸೂಚಿಸುತ್ತದೆ

ಕಾಳು ಮೆಣಸು ಕೋಪವನ್ನು ಸೂಚಿಸುತ್ತದೆ

ಪ್ರತಿಯೊಬ್ಬರಲ್ಲೂ ಕೋಪ ಎನ್ನುವುದು ಸಾಮಾನ್ಯವಾದ ಸಂವೇದನೆ ಅಥವಾ ಭಾವನೆಗಳು ಇರುತ್ತವೆ. ತನಗೆ ಬೇಕಾಗಿರುವುದು ಸಿಗದೆ ಹೋದಾಗ ಅಥವಾ ಇನ್ನೊಬ್ಬರಿಂದ ಮೋಸ ಹೋದಾಗ ಸಾಮಾನ್ಯವಾಗಿ ಹೊರ ಹೊಮ್ಮುವ ಭಾವನೆ ಕೋಪ. ಕೋಪದಲ್ಲಿ ಕೈಗೊಂಡ ತಪ್ಪನ್ನು ಕೋಪ ಹೋದ ನಂತರ ಸರಿಪಡಿಸಲು ಸಾಧ್ಯವಿಲ್ಲ. ಅಂತೆಯೇ ನಮ್ಮಲ್ಲಿರುವ ಕೋಪದ ಗುಣವನ್ನು ಬಳಸಿಕೊಂಡು ಇತರರು ದುರುಪಯೋಗ ಪಡಿಸಿಕೊಳ್ಳಬಹುದು. ಹಾಗಾಗಿ ಕೋಪದ ನಿಯಂತ್ರಣವನ್ನು ನಾವು ಅರಿಯಬೇಕು. ಯುಗಾದಿ ಹಬ್ಬದಲ್ಲಿ ಕಾಳು ಮೆಣಸಿನ ಸೇವನೆ ಮಾಡುವುದರ ಮೂಲಕ ಕೋಪವನ್ನು ನುಂಗಿಕೊಳ್ಳಬೇಕು. ಆಗ ಉಂಟಾಗುವ ಅನೇಕ ಅನರ್ಥಗಳನ್ನು ತಪ್ಪಿಸಬಹುದು. ವ್ಯಕ್ತಿಯೂ ಸಂತೋಷದಿಂದ ಇರಬಹುದು.

ಉಪ್ಪು ಭಯವನ್ನು ಸೂಚಿಸುತ್ತದೆ

ಉಪ್ಪು ಭಯವನ್ನು ಸೂಚಿಸುತ್ತದೆ

ಉಪ್ಪು ಎಲ್ಲಾ ಪದಾರ್ಥಗಳಿಗೂ ಬೇಕಾದಂತಹ ವಿಶೇಷವಾದ ಸಾಮಾಗ್ರಿ. ಇದರಿಂದಲೇ ಎಲ್ಲಾ ಆಹಾರ ಪದಾರ್ಥಗಳು ಹೆಚ್ಚು ರುಚಿಕರವಾಗಿ ತೋರುವುದು. ಉಪ್ಪು ಸಾಂಪ್ರದಾಯಿಕ ಅಥವಾ ಧಾರ್ಮಿಕ ರೂಪದಲ್ಲೂ ವಿಶೇಷ ಅರ್ಥ ಮತ್ತು ಭಾವನೆಯನ್ನು ನೀಡುವುದು. ನಾವು ಕೈಗೊಳ್ಳುವ ಕೆಲಸ ಹಾಗೂ ನಿರ್ಧಾರದಲ್ಲಿ ಆರೋಗ್ಯಕರವಾದ ಭಯವನ್ನು ಹೊಂದಿರಬೇಕು. ಎಲ್ಲಿ ಎಳ್ಳಷ್ಟು ಭಯವನ್ನು ಹೊಂದಿರುವುದಿಲ್ಲವೋ ಅಂತಹ ಸಂಗತಿಯಲ್ಲಿ ವ್ಯಕ್ತಿ ತಪ್ಪು ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ವ್ಯಕ್ತಿ ತನ್ನಲ್ಲಿ ಕೊಂಚ ಭಯದ ಭಾವನೆಗಳನ್ನು ಹೊಂದಿದ್ದರೆ ಅನಗತ್ಯವಾಗಿ ತಪ್ಪು ಮಾಡಲು ಮುಂದಾಗುವುದಿಲ್ಲ. ಭಯ ಎನ್ನುವುದನ್ನು ಹೇಗೆ ಹೊಂದಿರಬೇಕು? ಮತ್ತು ಹೇಗೆ ನಿಯಂತ್ರಿಸಬೇಕು ಎನ್ನುವುದನ್ನು ತಿಳಿದಿರಬೇಕು ಎನ್ನುವ ಅರ್ಥವನ್ನು ಉಪ್ಪು ನೀಡುವುದು.

Most Read: ಯುಗಾದಿ ವಿಶೇಷ: ಹಬ್ಬದ ಗಮ್ಮತ್ತಿಗೆ ಬಿಸಿ ಬಿಸಿ 'ಒಬ್ಬಟ್ಟು'

ಹುಣಸೇ ಹಣ್ಣು ಜೀರ್ಣಕಾರಿ ವಿಷಯವನ್ನು ಸೂಚಿಸುವುದು

ಹುಣಸೇ ಹಣ್ಣು ಜೀರ್ಣಕಾರಿ ವಿಷಯವನ್ನು ಸೂಚಿಸುವುದು

ಹುಣಸೇ ಹಣ್ಣಿನ ಹುಳಿ ಅಸಮಧಾನವನ್ನು ಮೂಡಿಸುವುದು. ಅದನ್ನು ಹೇಗೆ ನಿಯಂತ್ರಿಸಬೇಕು ಎನ್ನುವುದನ್ನು ತಿಳಿದಿದ್ದರೆ ಜೀವನದಲ್ಲಿ ನೀವು ಹೆಚ್ಚು ಗಮನವನ್ನು ವಹಿಸುವಿರಿ. ಆಗ ಜೀವನದಲ್ಲಿ ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯ. ಹುಳಿಯ ಗುಣವನ್ನು ಹೊಂದಿರುವ ಹುಣಸೆ ಹಣ್ಣು ಅತ್ಯುತ್ತಮ ಜೀರ್ಣಕಾರಿ ಕೆಲಸವನ್ನು ನಿರ್ವಹಿಸುವುದು. ಹಾಗೆಯೇ ಧಾರ್ಮಿಕವಾಗಿಯೂ ಉತ್ತಮ ಸಂದೇಶವನ್ನು ನೀಡುವುದು. ವ್ಯಕ್ತಿ ತನ್ನ ಜೀವನದಲ್ಲಿ ಬರುವ ಎಲ್ಲಾ ವಿಷಯ ಅಥವಾ ಸಂದರ್ಭಗಳನ್ನು ಸೂಕ್ತ ರೀತಿಯಲ್ಲಿ ಸ್ವೀಕರಿಸುವುದರ ಮೂಲಕ ಜೀರ್ಣಿಸಿಕೊಳ್ಳಬೇಕು ಎನ್ನುವ ಸಂದೇಶವನ್ನು ನೀಡುವುದು.

ಮಾವು ಅಚ್ಚರಿಯನ್ನು ಸೂಚಿಸುವುದು

ಮಾವು ಅಚ್ಚರಿಯನ್ನು ಸೂಚಿಸುವುದು

ಕೊನೆಯ ಭಾವನೆ ನೀಡುವುದು ಮಾವು. ಇದು ಆಶ್ಚರ್ಯದ ಭಾವನೆಯನ್ನು ಸಂಕೇತಿಸುವುದು. ಜೀವನದಲ್ಲಿ ಅಚ್ಚರಿಯ ಸಂಗತಿ ಇಲ್ಲದೆ ಹೋದರೆ ಉತ್ಸಾಹ ಅಥವಾ ಹುಮ್ಮಸ್ಸು ಕಡಿಮೆಯಾಗುವುದು. ಬೇವು ಬೆಲ್ಲದ ಜೊತೆಗೆ ಮಾವಿನ ಕಾಯಿಯ ರುಚಿಯು ಸೇರಿಕೊಂಡರೆ ಅದೊಂದು ಹೊಸ ರುಚಿ ಹಾಗೂ ಭಾವನೆಯನ್ನು ನೀಡುವುದು. ಜೊತೆಗೆ ಹೊಸತನ ಹಾಗೂ ಆಶ್ಚರ್ಯಕರವಾದ ರುಚಿಯನ್ನು ನೀಡುವುದು. ಅಲ್ಲದೆ ಜೀವನದಲ್ಲಿ ಆಶ್ಚರ್ಯಗಳನ್ನು ಹೊಂದುವುದರ ಮೂಲಕ ಹೊಸ ಸಂಗತಿಗಳನ್ನು ಪಡೆದುಕೊಳ್ಳಬೇಕು ಎನ್ನುವುದನ್ನು ಸೂಚಿಸುವುದು.

English summary

Significance of Bevu Bella for Ugadi-Things You must Know

Ugadi is the celebration of Hindu New Year in Andhra Pradesh and Karnataka. This is celebrated on Chaitra Shukla Pratipada.As this is the New Year, according to the Hindu Calender, it is celebrated in different names in several parts of India. Every festival has its own significance and customs.If you know these importances behind the rituals of festivals,the enjoyment of celebrating the occasion can be doubled.
X
Desktop Bottom Promotion