For Quick Alerts
ALLOW NOTIFICATIONS  
For Daily Alerts

ದಾನಗಳಲ್ಲೇ ಅತ್ಯಂತ ಶ್ರೇಷ್ಠ ದಾನ ಕನ್ಯಾದಾನದ ಮಹತ್ವವೇನು?

|

ದಾನಗಳಲ್ಲಿ ಅತ್ಯಂತ ಶ್ರೇಷ್ಠ ದಾನ ಕನ್ಯಾದಾನ ಎಂದು ಕರೆಯಲಾಗಿದೆ. ಪಿತನು ತನ್ನ ಮಗಳನ್ನು ಗೊತ್ತುಪಡಿಸಿದ ವರನಿಗೆ ದಾರೆ ಎರೆದು ಕೊಡುವುದನ್ನೇ ಕನ್ಯಾದಾನ ಎಂದು ಕರೆಯಲಾಗಿದೆ. ಅದಕ್ಕೆ ಈ ದಾನವನ್ನು ಅತ್ಯಂತ ಶ್ರೇಷ್ಠ ದಾನ ಎಂದು ಕರೆಯಲಾಗಿದೆ. ಹೆತ್ತು ಹೊತ್ತು ಸಾಕಿ ಸಲಹಿದ ಮಗಳನ್ನು ಆಕೆಯ ಪತಿಯ ಕೈಯಲ್ಲಿ ತನ್ನ ಮಗಳ ಸಕಲ ಜವಬ್ದಾರಿಯನ್ನು ವಹಿಸಿಕೊಡುತ್ತಾರೆ. ಇನ್ನುಮುಂದೆ ಕಷ್ಟದಲ್ಲಿ ಸುಖದಲ್ಲಿ ತನ್ನ ಮಗಳ ಜೊತೆಗಿದ್ದು ಆಕೆಯನ್ನು ಜೋಪಾನವಾಗಿ ನೋಡಿಕೊಳ್ಳಿ ಎಂಬುದೇ ಈ ದಾನದ ಹಿಂದಿರುವ ಮಹತ್ವವಾಗಿದೆ.

Kanyadaan

ತಮ್ಮ ಮನೆಯ ಮಗಳು ಏನು ಮಾಡಿದರೂ ಅದನ್ನು ತಂದೆ ತಾಯಿಗಳು ಸಹಿಸಿಕೊಳ್ಳುತ್ತಾರೆ ಮತ್ತು ಆಕೆಯನ್ನು ಕ್ಷಮಿಸಿ ಪ್ರೀತಿ ಮಾಡುತ್ತಾರೆ. ಆದರೆ ಪರರ ಮನೆಯಲ್ಲಿ ಅಂದರೆ ತನ್ನ ಅತ್ತೆ ಮಾವನ ಮನೆಯಲ್ಲಿ ಈ ರೀತಿಯ ಸ್ವಾತಂತ್ರ್ಯ ಆಕೆಗೆ ಇರುವುದಿಲ್ಲ. ಹೊಸದಾಗಿ ಮದುವೆಯಾದ ಸಂದರ್ಭದಲ್ಲಿ ಆ ಮನೆಯಲ್ಲಿರುವವರು ಅಪರಿಚಿತರಾಗಿರುತ್ತಾರೆ. ಈ ಸಂದರ್ಭದಲ್ಲಿ ತನ್ನ ಮಗಳ ಸರ್ವ ಸುಖವನ್ನು ದುಃಖವನ್ನು ತಂದೆ ತನ್ನ ಅಳಿಯನಿಗೆ ಧಾರೆ ಎರೆದು ಕೊಡುತ್ತಾರೆ. ಆಕೆ ಏನಾದರೂ ತಪ್ಪು ಮಾಡಿದಲ್ಲಿ ಆಕೆಯನ್ನು ಕ್ಷಮಿಸಿ ಮನ್ನಿಸಬೇಕೆಂಬ ವಿನಂತಿ ಕೂಡ ಈ ಕನ್ಯಾದಾನದಲ್ಲಡಗಿದೆ.

ಕನ್ಯಾದಾನ ಮಾಡುವಾಗ ತಂದೆಯು ತನ್ನ ಮಗಳ ಕೈಯನ್ನು ವರನ ಕೈಯಲ್ಲಿ ಅಂದರೆ ತಮ್ಮ ಅಳಿಯನ ಕೈಯಲ್ಲಿ ಇಟ್ಟು ನೀರು ಎರೆಯುತ್ತಾರೆ. ಈ ಸಮಯದಲ್ಲಿ ಹೇಳಲಾಗುವ ಮಂತ್ರಗಳು ಆಕೆ ಇನ್ನು ಅವರ ಸ್ವತ್ತು ಎಂಬುದನ್ನು ತಿಳಿಸುತ್ತದೆ. ಹಾಗೆಯೇ ವರ ಮತ್ತು ವಧುವಿನ ಬಾಂಧವ್ಯವನ್ನು ಇದು ಗಟ್ಟಿಗೊಳಿಸುತ್ತದೆ.

ಎರಡೂ ಮನೆಯವರ ಸಂಬಂಧ ಕೂಡ ಇನ್ನಷ್ಟು ಪ್ರಖರವಾಗುತ್ತದೆ. ಮೊದಲೇ ಹೇಳಿದಂತೆ ದಾನಗಳಲ್ಲಿ ಕನ್ಯಾದಾನಕ್ಕೆ ಹೆಚ್ಚಿನ ಮಹತ್ವವಿದೆ. ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ದೇವರಿದ್ದಂತೆ ಎಂಬುದು ಈಗಲೂ ಜನಜನಿತವಾಗಿರುವ ಮಾತಾಗಿದೆ. ಇಂದಿನ ಲೇಖನದಲ್ಲಿ ಕನ್ಯಾದಾನದ ಕುರಿತು ಮತ್ತಷ್ಟು ಅಂಶಗಳನ್ನು ಅರಿತುಕೊಳ್ಳೋಣ.

ಕನ್ಯಾದಾನಕ್ಕಿರುವ ಮಹತ್ವ
ಮದುವೆಯ ಸಮಯದಲ್ಲಿ ಹಿಂದಿನ ಪರಂಪರೆ ಹೇಳುವಂತೆ ವರನಿಗೆ ತಂದೆಯು ತನ್ನ ಮಗಳನ್ನು ಉಡುಗೊರೆಯ ರೂಪದಲ್ಲಿ ದಾನ ನೀಡುತ್ತಾರೆ ಎಂದಾಗಿದೆ. ಈ ದಿನ ಮದುಮಗಳನ್ನು ಲಕ್ಷ್ಮೀ ದೇವರಿಗೆ ಹೋಲಿಸಲಾಗಿದೆ. ಅಂತೆಯೇ ವರನನ್ನು ವಿಷ್ಣುವೆಂದು ಪರಿಗಣಿಸಲಾಗಿದೆ. ವಿಷ್ಣುವಿನ ಕೈಯಲ್ಲಿ ಲಕ್ಷ್ಮೀ ದೇವಿಯನ್ನು ಇಟ್ಟು ಅವರನ್ನು ಒಂದು ಮಾಡುವ ಶುಭ ಸಂದರ್ಭವಾಗಿದೆ ಕನ್ಯಾದಾನ. ಲಕ್ಷ್ಮೀ ಮನೆಯನ್ನು ಪ್ರವೇಶ ಮಾಡುವುದರಿಂದ ಹೋದ ಮನೆಯಲ್ಲಿ ಕೂಡ ಸಂತೋಷ, ಸುಖ ಸೌಭಾಗ್ಯಗಳು ನೆಲೆಗೊಳ್ಳುತ್ತದೆ.

ಕನ್ಯಾದಾನದ ಅರ್ಥ
ವಧುವಿನ ಹೆತ್ತವರು ಕನ್ಯಾದಾನವನ್ನು ಮಾಡುತ್ತಾರೆ. ಅಂತೆಯೇ ಕುಟುಂಬದ ಹಿರಿಯ ಸದಸ್ಯರು ಈ ಕಾರ್ಯವನ್ನು ನೆರವೇರಿಸಿಕೊಡುತ್ತಾರೆ. ವಧುವಿನ ಕೈಯನ್ನು ವರನ ಕೈಯಲ್ಲಿ ಇಟ್ಟು ಎಲೆ, ಅಡಿಕೆ, ಹೂವು, ಹಣ್ಣು, ಚಿನ್ನದೊಂದಿಗೆ ನೀರು ಹಾಕಿ ದಾನವನ್ನು ನಡೆಸುತ್ತಾರೆ. ಈ ಸಮಯದಲ್ಲಿ ವಧುವು ವರನ ಬಲ ಭುಜವನ್ನು ಹಿಡಿದುಕೊಳ್ಳಬೇಕು. ಈ ಸಮಯದಲ್ಲಿ ವೇದ ಮಂತ್ರಗಳ ಘೋಷಣೆಯನ್ನು ಅರ್ಚಕರು ಮಾಡುತ್ತಾರೆ.

ಆಚರಣೆಯ ವಿಶೇಷತೆ
ತಮ್ಮ ಜವಬ್ದಾರಿಯನ್ನು ಕಳೆದುಕೊಂಡು ವರನಿಗೆ ತಮ್ಮ ಮಗಳನ್ನು ದಾರೆ ಎರೆದುಕೊಡುವುದರಿಂದ ಇನ್ನುಮುಂದೆ ತಮ್ಮ ಮಗಳ ಸಕಲ ಸೌಭಾಗ್ಯದಲ್ಲಿ ಆಕೆಯ ಪತಿಯೇ ಮಹತ್ವದವರು ಎಂಬುದನ್ನು ಈ ಕನ್ಯಾದಾನ ತಿಳಿಸುತ್ತದೆ. ತಮ್ಮ ಮಗಳ ಸುಖ ದುಃಖದಲ್ಲಿ ವರನು ಸಮಪಾಲು ಹೊಂದಿದ್ದಾರೆ ಮತ್ತು ತಮ್ಮ ಮಗಳ ಕಣ್ಣಿನಲ್ಲಿ ಕಣ್ಣೀರನ್ನು ಹರಿಸದೆ ಸುಖದಿಂದ ನೋಡಿಕೊಳ್ಳಬೇಕೆಂಬ ಆಶಯವನ್ನು ಇಲ್ಲಿ ತಂದೆ ತಾಯಂದಿರು ಹೊಂದಿದ್ದಾರೆ. ತಮ್ಮ ಮಗಳ ಸಂಪೂರ್ಣ ಜವಬ್ದಾರಿಯನ್ನು ತಂದೆಯು ತನ್ನ ಅಳಿಯನಿಗೆ ದಾರೆ ಎರೆದು ಕೊಡುತ್ತಾರೆ.

English summary

Significance Of Kanyadaan: Hindu Marriage Ritual

Kanyadaan is a popular Hindu ritual in which the father gives away his maiden daughter in marriage to the groom. It is a highly valued Hindu marriage ritual. Kanyadaan literally means 'gifting a girl'. This signifies that the father gives away his daughter to the groom as a gift as part of his duty as a parent. The ritual of Kanyadaan is performed in almost all Hindu marriages where the father puts the hand of his daughter into the groom's hand. The Vedic mantras are chanted to ensure that the bond between the bride and the groom remains strong.
X
Desktop Bottom Promotion