For Quick Alerts
ALLOW NOTIFICATIONS  
For Daily Alerts

Good Friday 2022: ಶಾಂತಿ ಸೌಹಾರ್ದತೆ ಸಾರುವ ಗುಡ್ ಫ್ರೈಡೇಯ ಮಹತ್ವ

By Hemanth
|

ಇಂದು ವಿಶ್ವದೆಲ್ಲೆಡೆಯಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರತಿಯೊಬ್ಬರುಗುಡ್ ಫ್ರೈಡೇ ಆಚರಿಸುತ್ತಿದ್ದಾರೆ. ಗುಡ್ ಫ್ರೈಡೆಯನ್ನು ವಿಶ್ವದ ಒಂದೊಂದು ಭಾಗದಲ್ಲಿ ವಿವಿಧ ರೀತಿಯಿಂದ ಆಚರಿಸಲಾಗುತ್ತದೆ. ಗುಡ್ ಫ್ರೈಡೇಯನ್ನು ಗುಡ್ ಎಂದು ಹೇಳಲು ಕಾರಣವೇನು ಮತ್ತು ಇದರ ಮಹತ್ವವೇನು ಎಂದು ತಿಳಿಯಲು ಮುಂದೆ ಓದುತ್ತಾ ಸಾಗಿ.....

ಗುಡ್ ಫ್ರೈಡೆಯಂದು ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಾಗಿದೆ. ಇದು ಈಸ್ಟರ್ ಭಾನುವಾರದ ಮೊದಲು ಬರುತ್ತದೆ. ಈ ವರ್ಷ 2022ರಲ್ಲಿ ಏಪ್ರಿಲ್‌ 15ರಂದು ಗುಡ್‌ ಫ್ರೈಡೇ ಆಚರಿಸಲಾಗುತ್ತಿದೆ.

ಮಾನವ ಕುಲದ ಏಳಿಗೆಗಾಗಿ ಕಿಸ್ತನು ನೀಡಿರುವ ಬಲಿದಾನ ನೆನೆಯಲು ಗುಡ್ ಫ್ರೈಡೇ ಆಚರಿಸಲಾಗುತ್ತದೆ. ಇಂದಿನ ದಿನ ಕ್ರೈಸ್ತ ಧರ್ಮದವರು ಉಪವಾಸ ಮಾಡಿ, ಕ್ರಿಸ್ತನಿಗಾಗಿ ಪ್ರಾರ್ಥಿಸುವರು. ಶಿಲುಬೇಗೆರಿಸಿದ ಬಳಿಕ ಕ್ರಿಸ್ತನ ಉದಯವನ್ನು ಆಚರಿಸುವುದಕ್ಕೆ ಈ ದಿನವು ಆರಂಭವಾಗಿದೆ. ಕ್ರೈಸ್ತರು ಗುಡ್ ಫ್ರೈಡೆಯನ್ನು ತುಂಬಾ ವಿಶೇಷ ದಿನವೆಂದು ಪರಿಗಣಿಸುವರು.

Good Friday

ಈ ದಿನ ಕ್ರಿಸ್ತನನ್ನು ಶಿಲುಬೆಗೇರಿಸಲಾಯಿತು ಮತ್ತು ನಮ್ಮ ಪಾಪಗಳಿಗೆ ಆತ ಬಲಿದಾನ ನೀಡಿದ ಎಂದು ನಂಬಲಾಗಿದೆ. ಎಲ್ಲಾ ದೇವರುಗಳು ತಮ್ಮ ಮಗ ಕ್ರಿಸ್ತನ ಮೂಲಕ ನಮಗೆ ಒಲಿತನ್ನು ಮಾಡಿರುವ ಪ್ರತಿಫಲನವಾಗಿದೆ. ಗುಡ್ ಫ್ರೈಡೇ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಲು ಮುಂದಕ್ಕೆ ಓದಿಕೊಳ್ಳಿ.

ಗುಡ್ ಫ್ರೈಡೇಯನ್ನು ಗುಡ್(ಒಳ್ಳೆಯದು) ಎಂದು ಯಾಕೆ ಕರೆಯಲಾಗುವುದು?
ಈ ದಿನವನ್ನು ಒಳ್ಳೆಯ ದಿನವೆಂದು ಕರೆಯಲು ಹಲವಾರು ರೀತಿಯ ವಿವರಣೆಗಳು ಇವೆ. ಇದರಲ್ಲಿ ತುಂಬಾ ಜನಪ್ರಿಯವಾಗಿರುವುದೆಂದರೆ ಹಿಂದಿನ ಇಂಗ್ಲಿಷ್ ಶಬ್ದಕೋಶದಲ್ಲಿ ಗುಡ್' ಎಂದರೆ ಪವಿತ್ರ'ವೆಂದು ಬಣ್ಣಿಸಲಾಗಿತ್ತು. ಇದರಿಂದ ಇದನ್ನು ಗುಡ್ ಎಂದು ಕರೆಯಲಾಗುತ್ತದೆ. ಆದರೆ ಈ ದಿನ ವಿಶ್ವವೆಲ್ಲಾ ಕ್ರಿಸ್ತನ ಸಾವಿಗೆ ದುಃಖ ಪಡುತ್ತದೆ.

ಈ ದಿನ ಜನರು ಹೇಗೆ ಕಳೆಯುವರು?
ವಿಶ್ವದಲ್ಲಿರುವ ಮಾನವ ಕುಲಕ್ಕಾಗಿ ಏಸುಕ್ರಿಸ್ತನು ನೀಡಿರುವಂತಹ ಬಲಿದಾನವು ಇದಾಗಿದೆ ಎಂದು ಪರಿಗಣಿಸಲಾಗಿದೆ. ಜನರು ಈ ದಿನ ಶೋಕದಲ್ಲಿರುವರು ಮತ್ತು ಯಾವುದೇ ಸಮೂಹ ಪ್ರಾರ್ಥನೆ ಈ ದಿನ ನಡೆಯುವುದಿಲ್ಲ.

ಈ ದಿನಕ್ಕೆ ಬೇರೆ ಹೆಸರುಗಳಿವೆಯಾ?
ಗುಡ್ ಫ್ರೈಡೇಯನ್ನು ಮತ್ತೊಂದು ರೀತಿಯಲ್ಲಿ ಪವಿತ್ರ ಶುಕ್ರವಾರ, ಶ್ರೇಷ್ಠ ಶುಕ್ರವಾರ ಅಥವಾ ಕಪ್ಪು ಶುಕ್ರವಾರವೆಂದು ಕರೆಯುತ್ತಾರೆ. ಎಲ್ಲಾ ಹೆಸರುಗಳು ಆ ದಿನದ ಗಂಭೀರ ಸ್ವರೂಪಕ್ಕೆ ಸಂಬಂಧಿಸಿದ್ದಾಗಿದೆ. ಆಕ್ಸ್ ಫರ್ಡ್ ಇಂಗ್ಲಿಷ್ ಶಬ್ದಕೋಶದಲ್ಲಿ ಇರುವ ವಿವರಣೆ ಪ್ರಕಾರ ಈ ದಿನ ಅಥವಾ ಋತುವನ್ನು ಚರ್ಚ್ ತುಂಬಾ ಪವಿತ್ರವೆಂದು ಪರಿಗಣಿಸುವುದು.

ಗುಡ್ ಫ್ರೈಡೇಯ ಸೇವೆಗಳು
ಗುಡ್ ಫ್ರೈಡೇಯ ದಿನ ಚರ್ಚ್ ನಲ್ಲಿ ಯಾವುದೇ ರೀತಿಯ ಆಚರಣೆ ನಡೆಯುವುದಿಲ್ಲ. ಈ ಸಮಯದಲ್ಲಿ ಆಚರಿಸಲ್ಪಡುವ ಪವಿತ್ರ ವಿಧಿಗಳೆಂದರೆ ಬ್ಯಾಪಿಸ್ಟಮ್(ಸಾವಿನ ಅಪಾಯದಲ್ಲಿರುವವರು), ಪ್ರಾಯಶ್ಚಿತ್ತ ಮತ್ತು ರೋಗಿಗಳಿಗೆ ಅಭಿಷೇಕ. ಈ ವೇಳೆ ಶಿಲುಬೆಗಳು, ಕ್ಯಾಂಡಲ್ ಗಳು ಮತ್ತು ಬಟ್ಟೆಯನ್ನು ಬಲಿಪೀಠದಿಂದ ತೆಗೆಯಲಾಗುತ್ತದೆ.

ಸಂಪ್ರದಾಯದಲ್ಲಿ ಭಿನ್ನತೆ
ಕ್ರೈಸ್ತ ಧರ್ಮದ ವಿವಿಧ ಪಂಗಡದವರು ಇದನ್ನು ಹಲವಾರು ರೀತಿಯಿಂದ ಆಚರಿಸುವರು. ಚರ್ಚ್ ಗಳು ತಮ್ಮ ಸಂಪ್ರದಾಯದ ಆಚರಣೆಗಾಗಿ ನಿರ್ಧರಿಸುವ ಸಮಯ ಕೂಡ ಭಿನ್ನವಾಗಿರುವುದು. ಪಂಗಡಗಳು ಎಷ್ಟೇ ಇದ್ದರೂ ಕ್ರೈಸ್ತರು ಬೈಬಲ್ ನ್ನು ಧರ್ಮಗ್ರಂಥವೆಂದು ಪರಿಗಣಿಸುವರು.

ದಿನಾಂಕ ನಿರ್ಧರಿಸುವುದು
ಪಾಶ್ವಾತ್ಯ ಭಾಗದಲ್ಲಿ ಜಾರ್ಜಿಯನ್ ಕ್ಯಾಲೆಂಡರ್ ಮೂಲಕ ಈ ದಿನವನ್ನು ನಿರ್ಧರಿಸಲಾಗುತ್ತದೆ. ಪೂರ್ವದಲ್ಲಿ ಇದನ್ನು ಜೂಲಿಯನ್ ಕ್ಯಾಲೆಂಡರ್ ಮೂಲಕ ನಿರ್ಧರಿಸಲಾಗುತ್ತದೆ. ಹುಣ್ಣಿಮೆಯ ದಿನದ ಲೆಕ್ಕಾಚಾರ ಕೂಡ ಸಂಪೂರ್ಣ ಭಿನ್ನವಾಗಿರುವುದು. ವಿಶ್ವದ ವಿವಿಧ ಭಾಗಗಳಲ್ಲಿ ಆಚರಣೆ ಕೂಡ ಭಿನ್ನವಾಗಿರುವುದು. ಆದರೆ ಕೊನೆಯದಾಗಿ ನೀಡಲಾಗುವಂತಹ ಸಂದೇಶ ಮಾತ್ರ ಒಂದೇ. ಏಸು ಕ್ರೈಸ್ತನು ಮಾನವ ಕುಲಕ್ಕಾಗಿ ತನ್ನ ಬಲಿದಾನ ನೀಡಿರುವುದನ್ನು ನೆನಪಿಸಿಕೊಂಡು, ಕ್ರಿಸ್ತ ಹೇಳಿದ ಪ್ರೀತಿಯನ್ನು ಹರಡುವುದು.

English summary

Good Friday 2022 Date, History, Meaning, Rituals, Importance and why do we celebrate in kannada

Good Friday is the day on which Jesus was crucified. This comes before the Easter Sunday. Good Friday is considered as a day for remembering the sufferings that Jesus went through for the good of mankind. So on this day, Christians fast and pray to Jesus. This marks the beginning of the celebration of the raising of Jesus after the crucifixion.
X
Desktop Bottom Promotion