ದೀಪಾವಳಿ ಹಬ್ಬದ ಪೌರಾಣಿಕ ಹಿನ್ನೆಲೆ ಹಾಗೂ ಆಚರಣೆಯ ಮಹತ್ವ

By: Divya Pandith
Subscribe to Boldsky

ಭಾರತೀಯರು ಆಚರಿಸುವ ಪ್ರತಿಯೊಂದು ಹಬ್ಬ-ಹರಿದಿನಗಳಿಗೆ ಅದರದ್ದೇ ಆದ ವಿಶೇಷ ಹಿನ್ನೆಲೆ ಹಾಗೂ ಕಥೆ ಪುರಾಣಗಳಿರುತ್ತವೆ. ಹಾಗೆಯೇ ದೀಪಾವಳಿ ಹಬ್ಬವೂ ವಿಶೇಷ ಹಿನ್ನೆಲೆ ಹಾಗೂ ಪದ್ಧತಿಗಳನ್ನು ಒಳಗೊಂಡಿದೆ. ದೀಪಾವಳಿ ಹಬ್ಬವು ಪ್ರಾಚೀನ ಕಾಲದಿಂದಲೂ ವ್ಯವಸಾಯ ಮಾಡಿರುವ ಬೆಳೆಯ ಕೊಯ್ಲಿನ ಸಮಯದಲ್ಲಿ ಆಚರಿಸಿಕೊಂಡು ಬರಲಾಗುತ್ತಿತ್ತು. ಧರ್ಮದ ಅಭಿವೃದ್ಧಿ ಹೊಂದಿದಂತೆಯೇ ಹಲವಾರು ಪೌರಾಣಿಕ ಕಥೆಗಳು ಮತ್ತು ಪುರಾಣಗಳು ಸೇರಿಕೊಳ್ಳುತ್ತಾ ಬಂದಿತು.

ಈ ಹಬ್ಬದ ಆಚರಣೆಗೆ ಧಾರ್ಮಿಕ ಮೌಲ್ಯಮಾಪನ ಮಾಡುವುದಲ್ಲದೆ ಅದಕ್ಕೊಂದು ಪವಿತ್ರ ಮಹತ್ವವನ್ನು ನೀಡಲಾಯಿತು. ಈ ಹಬ್ಬಕ್ಕೆ ಸಂಬಂಧಿಸಿದಂತೆ ಅನೇಕ ಬಗೆಯ ವಿವಿಧ ದಂತಕಥೆಗಳು ಇವೆ. ಅವು ಪ್ರದೇಶಗಳಿಗನುಗುಣವಾಗಿ ವಿಭಿನ್ನತೆ ಹೊಂದಿರುವುದು ವಿಶೇಷ. ಭಾರತದಲ್ಲಿರುವ ವಿಭಿನ್ನ ಪಂಗಡದವರು ಬಗೆ ಬಗೆಯ ಕಾರಣಗಳು ಹಾಗೂ ಮಹತ್ವದಡಿಯಲ್ಲಿ ದೀಪಾವಳಿಯನ್ನು ಆಚರಿಸುತ್ತಾರೆ.

ದೀಪಾವಳಿ ದಿನ ಮನೆಗೆ ಉಪ್ಪು ತರಬೇಕು ಹೇಳುತ್ತಾರೆ, ಯಾಕೆ ಗೊತ್ತೇ?

ಕಾರಣಗಳು ಬೇರೆ ಬೇರೆಯಾದರೂ ದೀಪಾವಳಿಯ ಆಚರಣೆಯ ಉದ್ದೇಶ ಒಂದೇ. ದೀಪಾವಳಿ ಎಂದರೆ ಕೇವಲ ದೀಪದ ಹಬ್ಬವಲ್ಲ. ಅದು ಸಮಗ್ರ ಕುಟುಂಬಕ್ಕೆ ಆನಂದ ಹಾಗೂ ಚೈತನ್ಯವನ್ನು ನೀಡುವ ಸಮಯ. ಸಂಭ್ರಮದಿಂದ ಕೂಡಿರುವ ಈ ಹಬ್ಬ ಭವಿಷ್ಯದ ಬಗ್ಗೆ ನಿರೀಕ್ಷೆ ಹಾಗೂ ಸಂತಸವನ್ನು ಹೆಚ್ಚಿಸುತ್ತದೆ. ಸಂಬಂಧಗಳ ಬೆಸುಗೆ ಹಾಗೂ ಬಾಂಧವ್ಯದ ಬೆಲೆ ಹೆಚ್ಚಿಸುವ ಸುಂದರ ಹಬ್ಬ ಇದು. ಈ ಹಬ್ಬಕ್ಕೆ ಸಂಬಂಧಿಸಿದಂತೆ ಕೆಲವು ದಂತಕಥೆಗಳು ಈ ಕೆಳಗಿನಂತಿವೆ... 

ದೀಪಾವಳಿಗೆ ರಾಮಾಯಣದ ನಂಟು

ದೀಪಾವಳಿಗೆ ರಾಮಾಯಣದ ನಂಟು

ದೀಪಾವಳಿಗೆ ಸಂಬಂಧಿಸಿದ ರಾಮಾಯಣದ ದಂತಕಥೆಯು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಭಗವಾನ್ ಶ್ರೀರಾಮನು 14 ವರ್ಷ ವನವಾಸವನ್ನು ಮುಗಿಸಿದ. ಜೊತೆಗೆ ತನ್ನ ಪತ್ನಿ ಸೀತೆಯ ಅಪಹರಣ ಮಾಡಿದ್ದ ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂತಿರುಗಿದ ದಿನ ದೀಪಾವಳಿ. ಅಂದಕಾರ ಹಾಗೂ ಬೇಸರದಲ್ಲಿದ್ದ ಅಯೋಧ್ಯೆಯ ಜನರಿಗೆ ರಾಮನ ಆಗಮನವು ಬೆಳಕನ್ನು ತಂದಿತು. ಈ ಖುಷಿಗಾಗಿ ಮನೆಯನ್ನು ಹಾಗೂ ಊರನ್ನು ದೀಪ ಹಚ್ಚುವುದರ

ಮೂಲಕ ಬೆಳಗಿದರು. ಜೊತೆಗೆ ಪರಸ್ಪರ ಒಬ್ಬರಿಗೊಬ್ಬರು ಸಿಹಿಯನ್ನು ನೀಡುವುದರ ಮೂಲಕ ಸಂತೋಷವನ್ನು ವ್ಯಕ್ತ ಪಡಿಸಿದರು. ಈ ಪದ್ಧತಿಯು ಇಂದಿಗೂ ಮುಂದುವರಿದಿದೆ.

ನರಕಾಸುರನ ದಂತಕಥೆ

ನರಕಾಸುರನ ದಂತಕಥೆ

ಈ ಕಥೆಯ ಪ್ರಕಾರ ಶ್ರೀಕೃಷ್ಣನು ನರಕಾಸುರನನ್ನು ಕೊಂದ ದಿನ. ನರಕಾಸುರನು ವಿಷ್ಣುವಿನಿಂದ ದೀರ್ಘಾಯುಷ್ಯದ ವರವನ್ನು ಪಡೆದುಕೊಂಡಿದ್ದನು. ತ್ರಿಲೋಕದಲ್ಲಿ ಇರುವ ಮಹಿಳೆಯರು ಹಾಗೂ ರಾಣಿಯರ ಮೇಲೆ ಹಲ್ಲೆ ಮಾಡುತ್ತಿದ್ದನು. ಅಲ್ಲದೆ ಅವರನ್ನು ತನ್ನ ವಶದಲ್ಲಿ ಇರಿಸಿಕೊಂಡಿದ್ದನು. ಈ ದುಷ್ಟನನ್ನು ಶ್ರೀಕೃಷ್ಣನು ಕೊಂದು, ಮಹಿಳೆಯರನ್ನು ಬಿಡುಗಡೆಮಾಡಿದನು. ಹಾಗಾಗಿಯೇ ಆ ದಿನವನ್ನು ನರಕಚತುರ್ದಶಿ ಎಂದು ಕರೆಯಲಾಯಿತು.

ದೀಪಾವಳಿ ವಿಶೇಷ: ನರಕ ಚತುರ್ದಶಿ ಹಬ್ಬದ ಹಿನ್ನೆಲೆ

ಲಕ್ಷ್ಮಿ ದೇವಿಯ ಅವತಾರ

ಲಕ್ಷ್ಮಿ ದೇವಿಯ ಅವತಾರ

ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಂಥನ ಮಾಡುವುದರ ಮೂಲಕ ಅಮೃತವನ್ನು ಪಡೆದರು. ಆಗ ಅದನ್ನು ರಾಕ್ಷಸರು ಕುಡಿಯಬಾರದೆಂದು ಲಕ್ಷ್ಮಿ ದೇವಿಯು ಅಮೃತವನ್ನು ದೇವತೆಗಳಿಗೆ ನೀಡಿದ ಸಂದರ್ಭ ಎಂದು ಹೇಳಲಾಗುತ್ತದೆ.

ಪಾಂಡವರ ಕಥೆ

ಪಾಂಡವರ ಕಥೆ

ಹನ್ನೆರಡು ವರ್ಷಗಳ ಕಾಲ ಗಡಿಪಾರು ಮಾಡಲಾದ ಪಾಂಡವರು ತಮ್ಮ ಶಿಕ್ಷೆಯನ್ನು ಅನುಭವಿಸಿ ಪುನಃ ಹಸ್ತಿನಾಪುರಕ್ಕೆ ಮರಳಿದರು. ಅದು ದೀಪಾವಳಿಯ ದಿನವಾಗಿತ್ತು. ಈ ಸಂದರ್ಭದಲ್ಲಿ ಮಣ್ಣಿನಿಂದ ಮಾಡಿದ ಹಣತೆಯಲ್ಲಿ ದೀಪ ಬೆಳಗುವುದರ ಮೂಲಕ ಸಂತೋಷ ವ್ಯಕ್ತಪಡಿಸಿದರು ಎನ್ನಲಾಗುತ್ತದೆ.

ಬಲಿ ರಾಜನ ಕಥೆ

ಬಲಿ ರಾಜನ ಕಥೆ

ದೀಪಾವಳಿಯ ಹಬ್ಬಕ್ಕೆ ಬಲಿರಾಜನ ಕತೆಯೂ ಸೇರಿಕೊಂಡಿದೆ. ವಾಮನ ಅವತಾರದಲ್ಲಿ ಬಂದ ವಿಷ್ಣುವು ಬಲಿರಾಜನನ್ನು ಮೂರು ಅಡಿ ಜಾಗ ಬೇಕೆಂದು ಕೇಳಿದನು. ಆಗ ಬಲಿರಾಜ ಅಹಂಕಾರ ಹಾಗೂ ಕ್ಷುಲಕ ಎನ್ನುವ ಭಾವದಿಂದ ಸಮ್ಮತಿ ವ್ಯಕ್ತ ಪಡಿಸಿದನು. ಆಗ ವಾಮನನು ಒಂದು ಹೆಜ್ಜೆಯನ್ನು ಭೂಮಿಯಲ್ಲಿ, ಇನ್ನೊಂದು ಹೆಜ್ಜೆಯನ್ನು ಸ್ವರ್ಗದಲ್ಲಿ ಇಟ್ಟನು. ನಂತರ ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕೆಂದು ಬಲಿ ರಾಜನನ್ನು ಕೇಳಿದನು. ಆಗ ಬಲಿ ರಾಜನು ತನ್ನ ತಲೆಯ ಮೇಲೆ ಇಡು ಎಂದು ಹೇಳಿದನು. ಆಗ ಬಲಿರಾಜನು ಮಣ್ಣಲ್ಲಿ ಮಣ್ಣಾದನು. ಈ ಸಂದರ್ಭವೂ ದೀಪಾವಳಿ ಹಬ್ಬದಂದೇ ನಡೆಯಿತು ಎನ್ನಲಾಗುತ್ತದೆ.

ವಿಕ್ರಮಾದಿತ್ಯನ ಪಟ್ಟಾಭಿಷೇಕ

ವಿಕ್ರಮಾದಿತ್ಯನ ಪಟ್ಟಾಭಿಷೇಕ

ರಾಜ ವಿಕ್ರಮಾದಿತ್ಯನ ರಾಜ್ಯ ಪಟ್ಟಾಭಿಷೇಕವು ದೀಪಾವಳಿಯ ದಿನದಂದೆ ನೆರವೇರಿತು ಎನ್ನಲಾಗುತ್ತದೆ. ಆ ದಿನದಂದು ಅಲ್ಲಿಯ ಜನರು ಬಹಳ ಸಂತೋಷದಿಂದ ಹಬ್ಬವನ್ನು ಆಚರಿಸಿದರು ಎನ್ನಲಾಗುತ್ತದೆ.

ದೀಪಾವಳಿಯು ಸುಗಿಯ ಸಂದರ್ಭದ ಹಬ್ಬ

ದೀಪಾವಳಿಯು ಸುಗಿಯ ಸಂದರ್ಭದ ಹಬ್ಬ

ಪುರಾತನ ಕಾಲದಲ್ಲಿ ದೀಪಾವಳಿಯನ್ನು ಪೈರನ್ನು ಕೊಯ್ಯುವ ಸಂದರ್ಭದಲ್ಲಿ ಆಚರಿಸಲಾಗುತ್ತಿತ್ತು. ಭಾರತದ ರೈತರು ತಾವು ಬೆಳೆದ ಬೆಳೆಯ ಮೊದಲ ಕೊಯ್ಲನ್ನು ತಂದು ದೇವಿ ಲಕ್ಷ್ಮಿಗೆ ನೀಡುವ ಮೂಲಕ ಪೂಜೆ ಮಾಡುತ್ತಿದ್ದರು ಎನ್ನಲಾಗುತ್ತದೆ. ದೇವಿಯು ಸಮೃದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಿದ್ದಳು ಎನ್ನುವ ನಂಬಿಕೆಯಿದೆ.

ಸಿಖ್ಖರ ದೀಪಾವಳಿ ಹಬ್ಬ

ಸಿಖ್ಖರ ದೀಪಾವಳಿ ಹಬ್ಬ

ಸಿಖ್ಖರ ಈ ಹಬ್ಬವನ್ನು ಬಾಂಡಿ ಚೋರ್ ದೇವಸ್ ಎಂದು ಕರೆಯುತ್ತಾರೆ. ಈ ಹಬ್ಬವನ್ನು ಅವರ ಆರನೇ ಗುರುಗಳಾದ ಹರ್ಗೋಬಿಂದ್‍ಸಿಂಗ್‍ರನ್ನು ಕೋಟೆಯಿಂದ 1619ರಲ್ಲಿ ಬಿಡುಗಡೆಮಾಡಲಾಯಿತು. ಚಕ್ರವರ್ತಿ ಜಹಾಂಗೀರ್ ಗುರುವನ್ನು ಗುರುವನ್ನು ಬಿಡುಗಡೆಮಾಡಲು ಒಪ್ಪಿಕೊಂಡಾಗ, ಗುರುಗಳು ಸೆರೆಹಿಡಿದ ರಾಜಕುಮಾರರನ್ನು ಬಿಡುಗಡೆಮಾಡಬೇಕೆಂದು ಘೋಷಿಸಿದರು. ಈ ಹಿನ್ನೆಲೆಯಲ್ಲಿಯೇ ಗುರು ರಾಜಕುಮಾರರನ್ನು ಬಿಡುಗಡೆ ಮಾಡಲು

ಯಶಸ್ವಿಯಾದರು. ನಂತರ 1577ರಲ್ಲಿ ದೀಪಾವಳಿಯ ದಿನದಂದೇ ಗೋಲ್ಡನ್ ಟೆಂಪಲ್‍ನ ಅಡಿಪಾಯವನ್ನು ಇರಿಸಲಾಯಿತು.

ಜೈನ್ ದರ್ಮದಲ್ಲಿ ದೀಪಾವಳಿ ಮಹತ್ವ

ಜೈನ್ ದರ್ಮದಲ್ಲಿ ದೀಪಾವಳಿ ಮಹತ್ವ

ಈ ದಿನದಂದು ಮಹಾರಾಜ (ಕೊನೆಯ ಜೈನ ತೀರ್ಥಂಕರ)ನಿರ್ವಾಣವನ್ನು ತಲುಪಿದ ಕಾರಣ ದೀಪಾವಳಿ ಉತ್ಸವ ಜೈನರಿಗೆ ಹೆಚ್ಚು ಪ್ರಾಮುಖ್ಯವಾಗಿದೆ. ಮಹಾವೀರ ಮಹಾವೀರನನ್ನು ಜ್ಞಾನೋದಯಗೊಳಿಸಿದ ಅನೇಕ ದೇವರುಗಳ ಉಪಸ್ಥಿತಿಯಲ್ಲಿ ನಿರ್ವಾಣವನ್ನು ಪಡೆದುಕೊಂಡನು ಮತ್ತು ಅವನ ಜೀವನದಿಂದ ಕತ್ತಲನ್ನು ತೆಗೆದುಹಾಕಿದ್ದನೆಂದು ಹೇಳಲಾಗುತ್ತದೆ. ಅಲ್ಲದೆ, ಗಣಧರ ಗೌತಮ್ ಸ್ವಾಮಿ (ಮಹಾವೀರನ ಮುಖ್ಯ ಶಿಷ್ಯ) ಈ ದಿನ ಸಂಪೂರ್ಣ ಜ್ಞಾನ ಪಡೆದುಕೊಂಡನು.

ಬೌದ್ಧರಲ್ಲಿ ದೀಪಾವಳಿಯ ಪ್ರಾಮುಖ್ಯತೆ

ಬೌದ್ಧರಲ್ಲಿ ದೀಪಾವಳಿಯ ಪ್ರಾಮುಖ್ಯತೆ

ಈ ದಿನದಂದೇ ಚಕ್ರವರ್ತಿ ಅಶೋಕನು ಬೌದ್ಧ ಧರ್ಮಕ್ಕೆ ಪರಿವರ್ತನೆಗೊಂಡನು. ಈ ಹಿನ್ನೆಲೆಯಲ್ಲಿಯೇ ಬೌದ್ಧರು ಈ ಹಬ್ಬವನ್ನು ಅಶೋಕ ವಿಜಯದಶಮಿ ಎಂದು ಕರೆಯುತ್ತಾರೆ. ಈ ದಿನವನ್ನು ಮಠವನ್ನು ಅಲಂಕರಿಸುವುದು ಹಾಗೂ ಪ್ರಾರ್ಥನೆ ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಆಚರಿಸುತ್ತಾರೆ.

English summary

significance of diwali festival

Every festival in India is steeped deep in history and the festival of Diwali is no exception. The celebration of Diwali can be traced back to ancient India when it was an important harvesting season. As the religion developed, various mythological stories and explanations were attributed to this festival to give it religious validation. There are different legends associated with Diwali, which vary from region to region in India. Different religious groups have different reasons to celebrate the festival.
Subscribe Newsletter