For Quick Alerts
ALLOW NOTIFICATIONS  
For Daily Alerts

ದೇವಶಯಣಿ ಏಕಾದಶಿ ಯಾವಾಗ? ಇದರ ಪ್ರಾಮುಖ್ಯತೆಗಳೇನು

By Hemanth
|

ಹಿಂದೂ ಧರ್ಮದಲ್ಲಿ ಪ್ರತಿ ಘಳಿಗೆಯು ತುಂಬಾ ಪ್ರಾಮುಖ್ಯ ಹಾಗೂ ವಿಶೇಷತೆಯನ್ನು ಹೊಂದಿರುವುದು. ಘಳಿಗೆ, ದಿನ ಹಾಗೂ ತಿಂಗಳುಗಳು ಹಿಂದೂ ಕ್ಯಾಲೆಂಡರ್ ಪ್ರಕಾರ ಹಲವಾರು ಮುಖ್ಯ ವಿಚಾರಗಳನ್ನು ತಿಳಿಸುವುದು. ಅದರಲ್ಲಿ ಒಂದು ಏಕಾದಶಿ. ಏಕಾದಶಿಯೆಂದರೆ ಮಾಸಾರ್ಧದ ಹನ್ನೊಂದನೇ ದಿನ. ಪ್ರತೀ ತಿಂಗಳು ಎರಡು ಸಲ ಏಕಾದಶಿ ಬರುವುದು. ಒಂದು ಸಲ ಚಂದ್ರ ಕ್ಷೀಣಿಸುವಾಗ ಮತ್ತೊಂದು ಚಂದ್ರನು ಪ್ರಬಲನಾಗುವಾಗ. ಇದನ್ನು ಕೃಷ್ಣ ಪಕ್ಷ ಹಾಗೂ ಶುಕ್ಲ ಪಕ್ಷ ಎಂದು ಕರೆಯಲಾಗುತ್ತದೆ. ಇದರಿಂದ ವರ್ಷದಲ್ಲಿ ಸುಮಾರು 24 ಏಕಾದಶಿ ಬರುವುದು...

 ದೇವಶಯಣಿ ಏಕಾದಶಿ 2018

ದೇವಶಯಣಿ ಏಕಾದಶಿ 2018

ಹಿಂದೂ ಕ್ಯಾಲೆಂಡರ್ ಪ್ರಕಾರ ಹೆಚ್ಚುವರಿ ತಿಂಗಳಿನಿಂದಾಗಿ ಏಕಾದಶಿಯು 26 ಆಗಬಹುದು. ಹೆಚ್ಚುವರಿ ತಿಂಗಳನ್ನು ಅಧಿಕ ಮಾಸ ಎಂದು ಕರೆಯಲಾಗುತ್ತದೆ. ಧಾರ್ಮಿಕ ಪ್ರಾಮುಖ್ಯತೆಗೆ ಅನುಗುಣವಾಗಿ ಏಕಾದಶಿಗಳಿಗೆ ಬೇರೆ ಬೇರೆ ಹೆಸರುಗಳನ್ನು ನೀಡಲಾಗಿದೆ. ಈ ತಿಂಗಳು ದೇವಶಯಣಿ ಏಕಾದಶಿಯು ಜುಲೈ 23, 2018ರಂದು ಬರಲಿದೆ.

ದೇವಶಯಣಿ ಏಕಾದಶಿಯ ಮಹತ್ವ

ದೇವಶಯಣಿ ಏಕಾದಶಿಯ ಮಹತ್ವ

ಪ್ರತಿಯೊಂದು ಏಕಾದಶಿಯನ್ನು ವಿಷ್ಣು ದೇವರಿಗೆ ಮೀಸಲಿಡಲಾಗುತ್ತದೆ. ದೇವಶಯಣಿ ಏಕಾದಶಿಯು ಆಷಾಢ ಮಾಸದ ಹನ್ನೊಂದನೆ ದಿನದಂದು ಬರುವುದು. ಇದರ ಬಳಿಕ ವಿಷ್ಣು ನಾಲ್ಕು ತಿಂಗಳ ಕಾಲ ನಿದ್ರಿಸಲು ತೆರಳುವನು. ಈ ನಾಲ್ಕು ತಿಂಗಳ ಅವಧಿಯನ್ನು ಚತುರ್ಮಾಸವೆಂದು ಕರೆಯಲಾಗುತ್ತದೆ. ಸಂಸ್ಕೃತದಲ್ಲಿ `ಏಕಾದಶಿ'ಎಂದರೆ `ದೇವರು ನಿದ್ರಿಸುವುದು'ಎಂದರ್ಥ. ದೇವಶಯಣಿ ಏಕಾದಶಿಯನ್ನು ಭಕ್ತರು ಉಪವಾಸದ ಮೂಲಕ ಆಚರಿಸಿಕೊಳ್ಳುವರು. ಈ ಏಕಾದಶಿಯನ್ನು ನಿಜವಾಗಿಯೂ ಯಾವ ರೀತಿ ಆಚರಿಸಿಕೊಳ್ಳಲಾಗುವುದು ಎಂದು ತಿಳಿಯುವ.

ದೇವಶಯಣಿ ಏಕಾದಶಿಯ ಪೂಜಾ ವಿಧಿ

ದೇವಶಯಣಿ ಏಕಾದಶಿಯ ಪೂಜಾ ವಿಧಿ

ಪೂಜೆಗಳನ್ನು ಕೈಗೊಳ್ಳುವಾಗ ಭಕ್ತರು ಆ ದಿನ ಬೇಗನೆ ಎದ್ದು ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿಕೊಳ್ಳಬೇಕು ಎನ್ನುವುದು ಆಚರಣೆ. ಅದು ಏಕಾದಶಿಗೂ ಪಾಲನೆಯಾಗುವುದು. ಈ ದಿನ ಎಲ್ಲಾ ಒಳ್ಳೆಯ ಕಾರ್ಯಗಳು ಸಫಲವಾಗುವುದು. ಪೂಜೆ ಮಾಡುವಂತಹ ಜಾಗಕ್ಕೆ ಗಂಗಾಜಲ ಸಿಂಪಡಿಸಿ. ಇದರ ಬಳಿಕ ವಿಷ್ಣುವಿನ ಮೂರ್ತಿಯನ್ನು ಅಲ್ಲಿಡಬೇಕು. ಬೇರೆ ಏಕಾದಶಿಯಂದು ಮಾಡುವ ರೀತಿಯಲ್ಲೇ ಈ ಏಕಾದಶಿಯಂದು ಕೂಡ ಪೂಜೆ ಮಾಡಬೇಕು. ಸ್ಥಳವನ್ನು ಶುದ್ಧೀಕರಿಸಿದ ಬಳಿಕ ನೀವು ನೇರವಾಗಿ ಪೂಜೆ ಮಾಡಲು ಆರಂಭಿಸಬೇಕು. ವಿಷ್ಣುವಿಗೆ ಪ್ರಿಯವಾಗಿರುವ ಹಳದಿ ಬಟ್ಟೆ ಮತ್ತು ಇತರ ಸಾಮಗ್ರಿಗಳನ್ನು ಇಡಲು ಮರೆಯಬೇಡಿ. ವ್ರತ ಕಥಾ ಪಠಣ ಮಾಡಿ ಮತ್ತು ಆರತಿ ಬೆಳಗಿ, ಬಳಿಕ ಪ್ರಸಾದ ಹಂಚುವುದರೊಂದಿಗೆ ಪೂಜೆ ಸಮಾಪ್ತಿಗೊಳಿಸಿ.

ನೋಡಿ ಇದೆಲ್ಲಾ ನೆನಪಿನಲ್ಲಿಟ್ಟು ಮಾಡಿ

ನೋಡಿ ಇದೆಲ್ಲಾ ನೆನಪಿನಲ್ಲಿಟ್ಟು ಮಾಡಿ

ಪೂಜೆ ಕೊನೆಗೊಂಡ ಬಳಿಕ ನೀವು ಬಿಳಿ ಬಟ್ಟೆಯಿಂದ ವಿಷ್ಣುವಿನ ಮೂರ್ತಿಯನ್ನು ಮುಚ್ಚಿರಿ ಮತ್ತು ಆತನಿಗೆ ಮಲಗಲು ಒಂದು ತಲೆದಿಂಬು ಇಡಿ. ಅದರ ಮೇಲೆ ಮೂರ್ತಿಯನ್ನು ಇಟ್ಟುಬಿಡಿ. ಈ ಮೂಲಕ ವಿಷ್ಣು ಮಲಗುವನು. ದೇವಶಯಣಿ ಏಕಾದಶಿಯಂದು ಹೀಗೆ ಮಾಡಲಾಗುತ್ತದೆ. ದೇವಶಯಣಿ ಏಕಾದಶಿಯ ಪೂಜೆಯು ಈಗ ಮುಕ್ತಾಯಗೊಂಡಿದೆ. ನೀವು ದಾನ ಮಾಡಿದರೆ ಆಗ ನಿಮ್ಮ ಉಪವಾಸ ಸತ್ಯಾಗ್ರಹವು ತುಂಬಾ ಫಲಪ್ರದವಾಗುವುದು ಮತ್ತು ದೇವರಿಗೆ ಮೆಚ್ಚುಗೆಯಾಗುವುದು. ಇದರಿಂದ ಬಡವರಿಗೆ ದಾನ ಮಾಡಿ.

ಏಕಾದಶಿಯಂದು ಪಾಲಿಸುವ ಬೇರೆ ನಿಯಮಗಳು

ಏಕಾದಶಿಯಂದು ಪಾಲಿಸುವ ಬೇರೆ ನಿಯಮಗಳು

ಏಕಾದಶಿಯಂದು ಉಪವಾಸ ಮಾಡುವಾಗ ನೀವು ಧಾನ್ಯಗಳನ್ನು ಸೇವನೆ ಮಾಡಬಾರದು ಮತ್ತು ಅನ್ನದಿಂದ ದೂರವಿರಬೇಕು. ಈ ದಿನ ಉಗುರು ಹಾಗೂ ಕೂದಲು ಕತ್ತರಿಸಿಕೊಳ್ಳಬಾರದು. ಮಹಿಳೆಯರು ಈ ದಿನ ಕೂದಲು ಕೂಡ ತೊಳೆಯಬಾರದು. ಈ ದಿನ ಮಾಂಸಾಹಾರ ಸೇವನೆ ಮಾಡಬಾರದು. ಏಕಾದಶಿಯಂದು ಉಪವಾಸ ಮಾಡುವವರಿಗೆ ಮೋಕ್ಷ ಪ್ರಾಪ್ತಿಯಾಗುವುದು. ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದರೆ ಆಗ ಜನರ ಎಲ್ಲಾ ಪಾಪಗಳು ಮತ್ತು ಮಾಡಿರುವಂತಹ ತಪ್ಪುಗಳು ಪರಿಹಾರವಾಗುವುದು. ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಕೂಡ ತುಮಬಾ ಒಳ್ಳೆಯದು ಮತ್ತು ಇದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.

English summary

Significance Of Devshayani Ekadashi

Every Ekadashi is dedicated to Lord Vishnu. Devshayani Ekadashi refers to the Ekadashi which falls on the eleventh day of the Ashadha month. Beginning from this, Lord Vishnu is believed to go to sleep for the next four months. Thus, begins the Chaturmas, the period of four months as the name itself suggests. The Sanskrit name of the Ekadashi translates to "when God sleeps". Devshayani Ekadashi is observed as a fasting day by the devotees. Let us now learn in detail about how this Ekadashi is actually celebrated.
X