For Quick Alerts
ALLOW NOTIFICATIONS  
For Daily Alerts

ಶಿವರಾತ್ರಿ ವಿಶೇಷ-ಕನ್ಯೆಯರಿಗೂ ಕಾದಿದೆ, ಸಿಹಿ ಸುದ್ದಿ!

By Lekhaka
|

ಶಿವರಾತ್ರಿ ಅಥವಾ ಮಹಾಶಿವರಾತ್ರಿ ಭಾರತದ ಒಂದು ಪ್ರಮುಖ ಹಬ್ಬವಾಗಿದ್ದು ಮಹಿಳೆಯರಿಗೂ ವಿಶೇಷ ಮಹತ್ವದ್ದಾಗಿದೆ. ಈ ರಾತ್ರಿಯನ್ನು ಶಿವನ ರಾತ್ರಿ ಎಂದು ನಂಬಲಾಗಿದ್ದು ಈ ರಾತ್ರಿಯಲ್ಲಿಯೇ ತ್ರಿದೇವರ ಪೈಕಿ ಓರ್ವ ದೇವರು ಪಾರ್ವತಿ ದೇವತೆಯೊಂದಿಗೆ ವಿವಾಹವಾದರು ಎಂದು ಹೇಳಲಾಗುತ್ತದೆ.

ಪ್ರತಿ ವರ್ಷದ ಫಾಲ್ಗುಣ ಮಾಸದ ಕೃಷ್ಣಪಕ್ಷದ ಹದಿಮೂರನೇ ರಾತ್ರಿ ಮತ್ತು ಹದಿನಾಲ್ಕನೆಯ ದಿನದ ಹಗಲಿನಲ್ಲಿ ಬರುವ ಅವಧಿಯಲ್ಲಿ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ವಿಶೇಷ ರಾತ್ರಿಯನ್ನು ಭಕ್ತರು ಇಡಿಯ ರಾತ್ರಿ ಜಾಗರಣೆ, ವಿಶೇಷ ಪೂಜೆ, ಧ್ಯಾನದ ಮೂಲಕ ಆಚರಿಸಿ ದೇವನ ಅನುಗ್ರಹ ಪಡೆಯುತ್ತಾರೆ. ಮಹಾ ಶಿವರಾತ್ರಿ: ಕೈಲಾಸವಾಸಿ ಶಿವನಿಗೆ ಇದು ಮಂಗಳಕರ ರಾತ್ರಿ!

ಈ ರಾತ್ರಿಯ ಮುನ್ನಾದಿನದ ಮುಂಜಾನೆಯ ಸಮಯದಲ್ಲಿ ಗಂಗಾನದಿಯಲ್ಲಿ ಮಿಂದು ಇಡಿಯ ದಿನ ಉಪವಾಸವಿರುವುದು ಈ ಹಬ್ಬದ ಒಂದು ವಿಧಿಯಾಗಿದೆ. ಗಂಗಾನದಿಯ ಸಮೀಪವಿರುವ ಜನರು ಈ ಅವಧಿಯನ್ನು ಸರ್ವಥಾ ಕಳೆದುಕೊಳ್ಳಲು ಸಿದ್ಧರಿಲ್ಲ. ಈ ವಿಶೇಷ ಹಬ್ಬ ಮಹಿಳೆಯರಿಗೂ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ.

ಈ ದಿನದಂದು ಕನ್ಯೆಯರು ಶಿವನಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಆತನಂತಹ ಉತ್ತಮ ಗುಣವುಳ್ಳ ಪತಿ ಸಿಗುತ್ತಾನೆಂಬ ಪ್ರಪೀತಿಯಿದೆ. ವಿವಾಹಿಯ ಮಹಿಳೆಯರು ಈ ದಿನ ಭಕ್ತಿಯಿಂದ ಪ್ರಾರ್ಥಿಸಿದರೆ ಪತಿ, ಪುತ್ರ, ಸಹೋದರರ ಆರೋಗ್ಯ, ಆಯಸ್ಸು ಹೆಚ್ಚುತ್ತದೆ ಎಂದು ನಂಬಲಾಗುತ್ತದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಮುಂದೆ ಓದಿ...

Significance Of Shivratri For Women

ಶಿವಲಿಂಗಕ್ಕೆ ಅಭಿಷೇಕ
ಈ ದಿನದಂದು ಮಹಿಳೆಯರು ಶಿವನನ್ನು ಪ್ರಾರ್ಥಿಸಿ ಆತನ ಮತ್ತು ಪಾರ್ವತಿಯ ಅನುಗ್ರಹ ಪಡೆಯಲು ಯತ್ನಿಸುತ್ತಾರೆ. ಮುಂಜಾನೆಯೇ ಮಿಂದು ಶಿವಲಿಂಗವನ್ನು ಹಾಲು, ನೀರು ಮತ್ತು ಜೇನಿನಿಂದ ಅಭಿಶೇಕ ಮಾಡುತ್ತಾರೆ. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ಖೀರು, ಹಣ್ಣುಗಳು, ದತ್ತೂರಿ, ಅಖಂಡಪುಷ್ಪ ಮೊದಲಾದವುಗಳನ್ನು ಅರ್ಪಿಸುತ್ತಾರೆ. ಇಡಿಯ ದಿನ ಮಹಿಳೆಯರು ಉಪವಾಸವಿದ್ದು ಭಕ್ತಿಗೀತೆಗಳನ್ನು ಹಾಡುತ್ತಾ ಭಜನೆ ಮತ್ತು ಧ್ಯಾನದಲ್ಲಿ ದಿನ ಕಳೆಯುತ್ತಾರೆ. ಈ ದಿನ ಪೂರ್ಣ ಭಕ್ತಿಭಾವದಿಂದ ಶಿವನನ್ನು ಪೂಜಿಸಿದರೆ ಇಷ್ಟಾರ್ಥಗಳು ಸಿದ್ಧಿಸುವುದು ಎಂದು ನಂಬಲಾಗುತ್ತದೆ. ಅಲ್ಲದೇ ಜನ್ಮಜನ್ಮಾಂತರದ ಆವರ್ತದಿಂದ ಮುಕ್ತಿ ಪಡೆಯಲು ಸಾಧ್ಯ ಎಂದೂ ಹೇಳಲಾಗುತ್ತದೆ.

ಶಿವನಂತಹ ಪತಿಗಾಗಿ ಪ್ರಾರ್ಥನೆ
ಈ ದಿನದಂದು ಕನ್ಯೆಯರು ಶಿವನಲ್ಲಿ ವಿಶೇಷವಾಗಿ ಪ್ರಾರ್ಥಿಸುವ ಮೂಲ ಶಿವನ ಗುಣವುಳ್ಳ ಪತಿಯೇ ದೊರಕುತ್ತಾನೆ ಎಂಬ ನಂಬಿಕೆಯಿದೆ. ಕನ್ಯೆಯರೂ ವಿವಾಹಿತ ಮಹಿಳೆಯರೂ ಇಡಿಯ ದಿನ ಉಪವಾಸವನ್ನು ಆಚರಿಸುತ್ತಾರೆ. ವಿವಾಹಿತೆಯರ ಪ್ರಾರ್ಥನೆಯಿಂದ ಶಿವ ಮತ್ತು ಪಾರ್ವತಿಯರ ಅನುಗ್ರಹ ಪಡೆಯುವ ಮೂಲಕ ವೈವಾಹಿಕ ಜೀವನ ಸುಮಧುರವಾಗಿರಲು ಮತ್ತು ಆರೋಗ್ಯಕರವಾಗಿರಲು ಸಾಧ್ಯ ಎಂದು ನಂಬಲಾಗಿದೆ.

ಅಷ್ಟೇ ಅಲ್ಲ, ಸೂಕ್ತ ಜೀವನ ಸಂಗಾತಿಯನ್ನು ಪಡೆಯಲು ಅಸಮರ್ಥರಾದ ಕನ್ಯೆಯರಿಗೆ ಬೇಗನೇ ಸೂಕ್ತ ಜೀವನಸಂಗಾತಿ ಸಿಗಲೂ ಈ ದಿನ ಭಕ್ತಿಯಿಂದ ಮಾಡುವ ಪಾರ್ಥನೆ ಫಲ ನೀಡುತ್ತದೆ ಎಂದು ಹಿರಿಯರು ಹೇಳುತ್ತಾರೆ. ಶಿವರಾತ್ರಿಯ ಈ ಶುಭಸಂದರ್ಭದಲ್ಲಿ ಶಿವನ ಮತ್ತು ಪಾರ್ವತಿಯ ಅನುಗ್ರಹ ಪಡೆಯುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಮಹಿಳೆಯರು ಮತ್ತು ಕನ್ಯೆಯರು ಹೆಚ್ಚು ಉತ್ಸುಕರಾಗಿರುತ್ತಾರೆ.

English summary

Significance Of Shivratri For Women

Maha Shivratri is a Hindu festival which holds a special significance for women. Also known as Shivratri, it is one of the festivals that is beneficial for women. Shivratri is the Night Of Shiva and it is believed that one of the deities of the Tridev tied the knot with Goddess Parvati on this special night.
X
Desktop Bottom Promotion