For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸದಲ್ಲಿ'ತಪ್ಪದೇ ಮಾಡಿ ಈ ಕೆಲಸವ, ಶಿವ ಸಂತುಷ್ಟನಾಗುವನು

By
|
ಶ್ರಾವಣ ಮಾಸದ ಬಗ್ಗೆ ಕುತೂಹಲಕಾರಿ ಕಥೆ | ಈ ಕೆಲಸ ಮಾಡಿದ್ರೆ ಶಿವ ಸಂತುಷ್ಟನಾಗ್ತಾನೆ

ಶ್ರಾವಣ ಮಾಸ ಬಂದಾಗ ಮಾವು ಚಿಗುರಲೇಬೇಕು,ಕೋಗಿಲೆ ಹಾಡಲೇ ಬೇಕು ಎಂಬ ಒಂದು ಸುಶ್ರಾವ್ಯ ಹಾಡನ್ನು ಕೇಳಿರುತ್ತೀರಿ. ಶ್ರಾವಣದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಈ ಹಾಡೇ ನಮಗೆ ವಿವರಿಸುತ್ತದೆ. ಈ ಮಾಸದಲ್ಲಿ ಚಿಗುರೆಲೆಗಳು ಚಿಗುರಿ ಪ್ರಕೃತಿ ನವ ಉತ್ಸಾಹದಿಂದ ಮೈತುಂಬಿಕೊಳ್ಳುತ್ತದೆ. ಹಕ್ಕಿಗಳು ಸುಶ್ರಾವ್ಯವಾಗಿ ಹಾಡಿ ಶ್ರಾವಣ ಮಾಸದ ಆರಂಭವನ್ನು ಸ್ವಾಗತಿಸುತ್ತವೆ. ಹೀಗೆ ಎಲ್ಲೆಡೆಯೂ ಒಂದು ರೀತಿಯ ಸಂಭ್ರಮ ಮನೆಮಾಡಿರುತ್ತದೆ. ಪ್ರತಿ ದಿನವೂ ಹಬ್ಬದ ಸಡಗರ ಇದ್ದು ಹಬ್ಬಗಳ ಆರಂಭ ಈ ಮಾಸದಿಂದಲೇ ಪ್ರಾರಂಭವಾಗುತ್ತದೆ ಎಂಬುದು ನಾಣ್ಣುಡಿಯಾಗಿದೆ. ದೇವಾಶ್ಯಾನಿ ಏಕಾದಶಿ, ನಾಗರ ಪಂಚಮಿ, ಮಂಗಳ ಗೌರಿ ವೃತ, ರಕ್ಷಾ ಬಂಧನ ಮತ್ತು ಇನ್ನಿತರ ಹಬ್ಬಗಳನ್ನು ಈ ಮಾಸದಲ್ಲಿ ಆಚರಿಸಲಾಗುತ್ತದೆ.

shravana month: these small acts will make lord shiva happy

ಪ್ರತಿಯೊಂದು ಹಬ್ಬದ ಹಿಂದೆಯೂ ಧಾರ್ಮಿಕವಾದ ಒಂದು ತತ್ವ ಸಿದ್ಧಾಂತ ಇದ್ದು ಹೆಚ್ಚಿನ ಧಾರ್ಮಿಕ ಅಂಶಗಳನ್ನು ಒಳಗೊಂಡಿರುತ್ತದೆ. ದೇವರನ್ನು ಒಲಿಸಿಕೊಳ್ಳುವುದಕ್ಕಾಗಿ ಪೂಜೆಗಳನ್ನು ನಡೆಸಲಾಗುತ್ತದೆ. ಅದರಲ್ಲೂ ಶ್ರಾವಣ ಮಾಸದಲ್ಲಿ ಶಿವನಿಗೆ ಹೆಚ್ಚಿನ ರೀತಿಯಲ್ಲಿ ಪೂಜೆಗಳನ್ನು ನಡೆಸಲಾಗುತ್ತದೆ. ಸರಳ ಪೂಜೆಗೆ ಸರಳ ಭಕ್ತಿಗೆ ಒಲಿಯುವ ಮಹಾದೇವನು ಭಕ್ತರು ಬೇಡಿದ್ದನ್ನು ಶೀಘ್ರವೇ ನಡೆಸಿಕೊಡುವ ಭಕ್ತವತ್ಸಲ. ಇಂದಿನ ನಮ್ಮ ಲೇಖನದಲ್ಲಿ ದೇವರನ್ನು ಒಲಿಸಿಕೊಳ್ಳುವ ಕೆಲವೊಂದು ವಿಧಿ ವಿಧಾನಗಳನ್ನು ನಾವು ತಿಳಿಸುತ್ತಿದ್ದು ಇದರಿಂದ ನೀವು ಶಿವ ಕಾರುಣ್ಯವನ್ನು ಶೀಘ್ರವೇ ಪಡೆದುಕೊಳ್ಳಬಹುದಾಗಿದೆ.

ಶ್ರಾವಣ ಯಾವಾಗ ಆರಂಭವಾಗುತ್ತದೆ

ಶ್ರಾವಣ ಯಾವಾಗ ಆರಂಭವಾಗುತ್ತದೆ

ಶ್ರಾವಣ ಮಾಸವನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಜುಲೈ 28 ರಿಂದ ಈ ಮಾಸ ಆರಂಭವಾಗುತ್ತದೆ. ಈ ಮಾಸದಲ್ಲಿ ಶಿವಲಿಂಗವನ್ನು ಆರಾಧಿಸುವುದು ಶಿವ ಪೂಜೆ ಮಾಡುವುದು ಹೆಚ್ಚು ಪ್ರಾಶಸ್ತ್ಯವಾದುದು ಮತ್ತು ಪವಿತ್ರವೆಂದು ನಂಬಲಾಗಿದೆ. ಮಹಿಳೆಯರು ಪುರುಷರು ಅದರಲ್ಲೂ ವಿವಾಹವಾಗದ ಕನ್ಯೆಯರು ಈ ಮಾಸದಂದು ಶಿವನನ್ನು ಪೂಜಿಸಿ ಅನುಗ್ರಹವನ್ನು ಪಡೆದುಕೊಳ್ಳುತ್ತಾರೆ. ಭೋಲೇನಾಥ ಮತ್ತು ಅಶುತೋಷ ಎಂದು ಕರೆಯಿಸಿಕೊಳ್ಳುವ ಶಂಕರ ಸರಳ ಪೂಜೆಗೆ ಒಲಿಯುವ ನಿರಾಡಂಭರ ಪ್ರಿಯ. ಬರಿಯ ಬಿಲ್ವ ಪತ್ರೆಯಿಂದಲೇ ಸಂಪ್ರೀತಗೊಂಡು ಭಕ್ತರ ಪಾಪವನ್ನು ಮನ್ನಿಸುವವರು. ಶಿವ ಎಂದು ಕರೆದರೆ ಸಾಕು ಆ ಭಕ್ತನ ಸಕಲ ಪಾಪ ಕೂಡ ತೊಳೆದು ಹೋಗುತ್ತದೆ ಎಂಬುದು ವೇದದಲ್ಲಿ ತಿಳಿಸುವುದಾಗಿದೆ.

ನೀರು, ಹಾಲು ಮತ್ತು ಎಳ್ಳನ್ನು ಶಿವನಿಗೆ ನೀಡಿ

ನೀರು, ಹಾಲು ಮತ್ತು ಎಳ್ಳನ್ನು ಶಿವನಿಗೆ ನೀಡಿ

ನೀರು ಮಿಶ್ರಿತ ಹಾಲು ಮತ್ತು ಎಳ್ಳನ್ನು ದೇವರಿಗೆ ಅರ್ಪಿಸುವುದರಿಂದ ಶಿವನ ಅನುಗ್ರಹ ಕೂಡಲೇ ಪಡೆದುಕೊಳ್ಳಬಹುದಾಗಿದೆ. ಎಲ್ಲಾ ರೋಗ ರುಜಿನಗಳು ನಿರ್ಮೂಲನೆಯಾಗಲಿದೆ.

ಗೋಧಿ ಚಪಾತಿಯನ್ನು ಮೀನಿಗೆ ನೀಡುವುದು

ಗೋಧಿ ಚಪಾತಿಯನ್ನು ಮೀನಿಗೆ ನೀಡುವುದು

ಸೋಮವಾರದಂದು ಕೊಳದಲ್ಲಿರುವ ಮೀನಿಗೆ ಗೋಧಿ ಚಪಾತಿಯನ್ನು ನೀಡುವುದರಿಂದ ಶುಭ ಎಂದು ಪರಿಗಣಿಸಲಾಗಿದೆ. ಇದರಿಂದ ಶಿವನ ಅನುಗ್ರಹವನ್ನು ಪಡೆದುಕೊಳ್ಳಬಹುದು.

ಮಹಿಳೆಯರು ಶಿವಲಿಂಗವನ್ನು ಯಾವಾಗ ಮುಟ್ಟಬಾರದು

ಮಹಿಳೆಯರು ಶಿವಲಿಂಗವನ್ನು ಯಾವಾಗ ಮುಟ್ಟಬಾರದು

ಮಹಿಳೆಯರು ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸುತ್ತಾರೆ. ಸೋಮವಾರದಂದು ಉಪವಾಸ ಮಾಡುವುದು ಮತ್ತು ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ. ಶಿವನಂತಹ ಪತಿ ಇಲ್ಲವೇ ತಮ್ಮ ಇಚ್ಛೆಯ ಪತಿಯನ್ನು ಪಡೆಯಲು ಹೀಗೆ ಮಾಡುವುದರಿಂದ ಅದು ನಡೆಯುತ್ತದೆ. ಪೂಜೆಯನ್ನು ಮಾಡುವಾಗ ಲಿಂಗವನ್ನು ಸ್ಪರ್ಶಿಸಬಾರದು. ಈ ಸಮಯದಲ್ಲಿ ಶಿವನು ಗಾಢವಾದ ಧ್ಯಾನದಲ್ಲಿರುತ್ತಾರೆ ಇದರಿಂದ ಲಿಂಗವನ್ನು ಸ್ಪರ್ಶಿಸುವುದರಿಂದ ಅವರ ಧ್ಯಾನಕ್ಕೆ ಭಂಗ ಬರಬಹುದು ಎಂದು ಹೇಳಲಾಗುತ್ತದೆ.

ವಿವಾಹ ಸಂಬಂಧಿ ಸಮಸ್ಯೆಗಳು

ವಿವಾಹ ಸಂಬಂಧಿ ಸಮಸ್ಯೆಗಳು

ವಿಳಂಬಿತ ವಿವಾಹ ಅಥವಾ ವಿವಾಹ ಸಂಬಂಧಿ ಇನ್ನಿತರ ಸಮಸ್ಯೆಗಳಿದ್ದಲ್ಲಿ ಸೂಕ್ತ ಪರಿಹಾರಕ್ಕಾಗಿ ಲಿಂಗಕ್ಕೆ ಹಾಲು ಮತ್ತು ಕೇಸರಿ ಅಭಿಷೇಕವನ್ನು ಮಾಡಬಹುದು.

ಮಾನಸಿಕ ನೆಮ್ಮದಿ

ಮಾನಸಿಕ ನೆಮ್ಮದಿ

ಇದಕ್ಕಾಗಿ ಎತ್ತಿಗೆ ಹಸಿರು ಹುಲ್ಲನ್ನು ನೀಡುವುದರಿಂದ ಶಿವನ ಪ್ರೀತಿಗೆ ನಾವು ಪಾತ್ರರಾಗಬಹುದು. ಇದರಿಂದ ಮಾನಸಿಕ ನೆಮ್ಮದಿ ದೊರಕಿ ಶಂಕರನ ಅನುಗ್ರಹ ದೊರೆಯುತ್ತದೆ.

ಕರಿಎಳ್ಳನ್ನು ಶಿವಲಿಂಗಕ್ಕೆ ಅರ್ಪಿಸಿ

ಕರಿಎಳ್ಳನ್ನು ಶಿವಲಿಂಗಕ್ಕೆ ಅರ್ಪಿಸಿ

ಶ್ರಾವಣ ಮಾಸದ ಪ್ರತಿದಿನ ಶಿವಾಲಯಕ್ಕೆ ಭೇಟಿ ನೀಡಿ ಕರಿಎಳ್ಳನ್ನು ಶಿವಲಿಂಗಕ್ಕೆ ಅರ್ಪಿಸಿ. ಬಳಿಕ ದೇವಾಲಯದ ಆವರಣದಲ್ಲಿ ಕೊಂಚ ಹೊತ್ತು ಕುಳಿತು ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ.

ಓಂ ನಮಃ ಶಿವಾಯ ಮಂತ್ರ ಪಠಿಸಿ

ಓಂ ನಮಃ ಶಿವಾಯ ಮಂತ್ರ ಪಠಿಸಿ

ಶ್ರಾವಣ ಸೋಮವಾರದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಆಚರಿಸಿ. ಈ ಅವಧಿಯಲ್ಲಿ ಮಹಾ ಮೃತ್ಯುಂಜಯ ಮಂತ್ರ ಅಥವಾ ಓಂ ನಮಃ ಶಿವಾಯ ಮಂತ್ರವನ್ನು ಇಡಿಯದಿನ ಸಾಧ್ಯವಾದಷ್ಟು ಪಠಿಸಿರಿ.ಕೆಲವು ಪ್ರದೇಶದಲ್ಲಿ ಉಪವಾಸದ ಅವಧಿಯಲ್ಲಿ ಕೇವಲ ಶ್ವೇತವಸ್ತ್ರವನ್ನು ಧರಿಸುತ್ತಾರೆ. ಒಂದು ವೇಳೆ ಇಡಿಯ ದಿನ ಪೂರ್ಣಪ್ರಮಾಣದಲ್ಲಿ ಉಪವಾಸವಿರಲು ಸಾಧ್ಯವಾಗದಿದ್ದರೆ ಕನಿಷ್ಠ ಪ್ರಮಾಣದ ಹಣ್ಣುಗಳನ್ನು ಸೇವಿಸಬಹುದು. ಕೆಲವು ಭಕ್ತರು ಇಡಿಯ ದಿನ ಶಿವಪುರಾಣವನ್ನು ಓದುತ್ತಾರೆ. ಗಂಗಾನದಿಯ ತಟದ ಊರಿನವರು ಗಂಗಾಜಲದಿಂದ ತಮ್ಮ ಮನೆಯ ಶಿವಲಿಂಗಕ್ಕೆ ಅಭಿಶೇಕ ನೀಡುತ್ತಾರೆ.

ಅವಿವಾಹಿತರಾಗಿದ್ದರೆ ಕೇಸರಿ ಬೆರೆತ ಹಾಲು ಅರ್ಪಿಸಿ

ಅವಿವಾಹಿತರಾಗಿದ್ದರೆ ಕೇಸರಿ ಬೆರೆತ ಹಾಲು ಅರ್ಪಿಸಿ

ಒಂದು ವೇಳೆ ನೀವು ಅವಿವಾಹಿತರಾಗಿದ್ದರೆ ಈ ತಿಂಗಳಿಡೀ, ಸಾಧ್ಯವಾದರೆ ಪ್ರತಿದಿನಕ್ಕೆ ಒಂದು ಬಾರಿ ಕೇಸರಿ ಮಿಶ್ರಣ ಮಾಡಿದ ಹಾಲನ್ನು ಶಿವನಿಗೆ ಅರ್ಪಿಸಿ. ಇದರಿಂದ ಸಂಪ್ರೀತನಾಗುವ ಶಿವ ನಿಮಗೆ ಸೂಕ್ತ ವರ/ವಧುವನ್ನು ಪಡೆಯಲು ನೆರವಾಗುವನು.

ಅನ್ನಸಂತರ್ಪಣೆ ಮಾಡಿ

ಅನ್ನಸಂತರ್ಪಣೆ ಮಾಡಿ

ಈ ತಿಂಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಹಸಿದವರಿಗೆ ಆಹಾರವನ್ನು ದಾನ ಮಾಡಿ. ಪ್ರತಿದಿನವೂ ಅಗತ್ಯವಿದ್ದವರಿಗೆ ನೀಡುವುದು ಇನ್ನೂ ಉತ್ತಮ.ಇದರಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರ ಧಾನ್ಯಗಳ ಕೊರತೆಯಾಗದು. ಅಲ್ಲದೇ ನಿಮ್ಮ ಮನೆಯಲ್ಲಿರುವ ನಿಮ್ಮ ವಂಶಜರ ಆತ್ಮಗಳೂ ಶಾಂತಿಯಿಂದಿರುತ್ತವೆ.

ಶ್ರಾವಣ ಮಾಸದಂದು ಶಿವನಿಗೆ ಏಕೆ ಪೂಜೆ ಮಾಡುತ್ತಾರೆ

ಶ್ರಾವಣ ಮಾಸದಂದು ಶಿವನಿಗೆ ಏಕೆ ಪೂಜೆ ಮಾಡುತ್ತಾರೆ

ಶ್ರಾವಣ ಮಾಸದಂದು ಶಿವನಿಗೆ ಸರ್ವೇ ಸಾಮಾನ್ಯವಾಗಿ ಪೂಜೆಯನ್ನು ನಡೆಸಲಾಗುತ್ತದೆ. ಒಮ್ಮೆ ವಿಷ್ಣುವಿನ ಮೇಲೆ ಲಕ್ಷ್ಮೀ ದೇವಿಯು ಕುಪಿತರಾಗುತ್ತಾರೆ. ಅವರನ್ನು ಏಕಾಂಗಿಯಾಗಿ ಬಿಟ್ಟು ಹೋಗುತ್ತಾರೆ ಈ ಸಮಯದಲ್ಲಿ ವಿಷ್ಣುವು ಬ್ರಹ್ಮನ ಹತ್ತಿರ ತಮ್ಮ ಸಮಸ್ಯೆಗೆ ಪರಿಹಾರವನ್ನು ನೀಡಬೇಕಾಗಿ ಕೇಳಿಕೊಳ್ಳುತ್ತಾರೆ. ವಿಷ್ಣುವು ಮಾತ್ರವಲ್ಲದೆ ದೇವಲೋಕದಲ್ಲಿರುವವರು ಲಕ್ಷ್ಮೀಯನ್ನು ಪುನಃ ಪಡೆದುಕೊಳ್ಳಲು ಬಯಸುತ್ತಾರೆ. ಸಂಪತ್ತಿಗೆ ಅಧಿ ದೇವತೆಯಾದ ಲಕ್ಷ್ಮೀಯ ಕಣ್ಮರೆ ಅವರಿಗೆ ತಲ್ಲಣವನ್ನುಂಟು ಮಾಡುತ್ತದೆ. ದೇವತೆಗಳು ಮತ್ತು ಅಸುರರು ಸಮುದ್ರ ಮಥನ ಮಾಡುವುದರಿಂದ ಲಕ್ಷ್ಮೀ ಪುನಃ ಪ್ರತ್ಯಕ್ಷಗೊಳ್ಳುತ್ತಾರೆ. ಸಮುದ್ರ ರಾಜನ ಮಗಳಾಗಿರುವ ಲಕ್ಷ್ಮೀ ಪುನಃ ಕಡಲನ್ನು ಸೇರಿದ್ದಾರೆಂದು ಬ್ರಹ್ಮ ಪರಿಹಾರವನ್ನು ನೀಡುತ್ತಾರೆ. ಇಬ್ಬರೂ ಸಮುದ್ರ ಮಥನವನ್ನು ಮಾಡುತ್ತಿದ್ದ ಸಮಯದಲ್ಲಿ ವಿಷ ಕಾಣಿಸಿಕೊಳ್ಳುತ್ತದೆ. ವಿಷವು ಎಷ್ಟು ಕಠೋರವಾಗಿತ್ತೆಂದರೆ ಅದು ಪ್ರತಿಯೊಬ್ಬರ ಪ್ರಾಣವನ್ನು ತೆಗೆಯುವಂತಹ ಶಕ್ತಿಯನ್ನು ಪಡೆದಿತ್ತು. ವಿಷವನ್ನು ಶಂಕರ ಕುಡಿಯುತ್ತಾರೆ ಇದರಿಂದ ಅವರ ಗಂಟಲು ನೀಲಿಗಟ್ಟಿದೆ. ಆದ್ದರಿಂದ ಶಿವನನ್ನು ನೀಲಕಂಠ ಎಂದು ಕರೆಯುತ್ತಾರೆ. ಶ್ರಾವಣ ಮಾಸದಲ್ಲಿಯೇ ಇದು ಸಂಭವಿಸಿದ್ದರಿಂದಾಗಿ ಜಗತ್ತನ್ನು ವಿಷದ ಆಪತ್ತಿನಿಂದ ಕಾಪಾಡಿದ ಆಪತ್ಬಾಂಧನಾಗಿ ಶಿವನಿಗೆ ಶ್ರಾವಣ ಮಾಸದಲ್ಲಿ ಪೂಜೆಯನ್ನು ಮಾಡುತ್ತಾರೆ.

English summary

Shravana Month: These Small Acts Will Make Shiva Happy

Shravana, the month of festivals, is about to begin. Each day this month seems like a celebration; such is the festivity of the month. The number of festivals and the religious beliefs associated with them are unparalleled. Festivals such as Devshayani Ekadashi, Nag Panchami, Mangala Gauri Vrat, Raksha Bandhan and many more are going to be celebrated during the Shravana month.
X
Desktop Bottom Promotion