For Quick Alerts
ALLOW NOTIFICATIONS  
For Daily Alerts

Shravana Mass 2022 Dates : ಶ್ರಾವಣ ಮಾಸ : ದಿನಾಂಕ, ಪೂಜಾ ವಿಧಿ, ಸೋಮವಾರದ ಮಹತ್ವ

|

ಹಬ್ಬಗಳ ಆರಂಭದ ಮಾಸ ಶ್ರಾವಣ ತಿಂಗಳನ್ನು ಅತ್ಯಂತ ಮಂಗಳಕರ, ಶಿವನ ಮಾಸ ಎಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಶಿವನನ್ನು ಪೂಜಿಸಿದರೆ ಮತ್ತು ಭಕ್ತರು ಅದರಲ್ಲೂ ಕನ್ಯೆಯರು/ಮಹಿಳೆಯರು ಪ್ರತಿ ಸೋಮವಾರ ಉಪವಾಸ ಆಚರಿಸಿದರೆ ಪುಣ್ಯಪ್ರಾಪ್ತಿ ಎಂಬ ನಂಬಿಕೆ ಇದೆ. ಶ್ರಾವಣ ಮಾಸದಲ್ಲಿ ಆಚರಿಸುವ ಮಂಗಳಗೌರಿ ವ್ರತ ಸಹ ಮಹಿಳೆಯರಿಗೆ ಬಹಳ ಶ್ರೇಷ್ಠವಾದ ವ್ರತವಾಗಿದೆ.

2022ನೇ ಸಾಲಿನಲ್ಲಿ ಶುಕ್ರವಾರ, ಜುಲೈ 29ರಿಂದ ಶ್ರಾವಣ ತಿಂಗಳ ಮೊದಲ ದಿನ ಆರಂಭವಾಗುತ್ತದೆ ಹಾಗೂ ಆಗಸ್ಟ್‌ನ ಶನಿವಾರ, 27ರಂದು ಶ್ರಾವಣ ತಿಂಗಳ ಕೊನೆಯ ದಿನ.

1. ಶ್ರಾವಣ ಮಾಸಕ್ಕೆ ಈ ಹೆಸರು ಹೇಗೆ ಬಂತು?

1. ಶ್ರಾವಣ ಮಾಸಕ್ಕೆ ಈ ಹೆಸರು ಹೇಗೆ ಬಂತು?

ಶ್ರವಣ ನಕ್ಷತ್ರವು ಪೂರ್ಣಿಮಾ ಅಥವಾ ಹುಣ್ಣಿಮೆಯ ದಿನದಂದು ಆಕಾಶವನ್ನು ಆಳುತ್ತದೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಇದರ ಹೆಸರು ನಕ್ಷತ್ರದಿಂದ ಬಂದಿದೆ. ಈ ಮಾಸದಲ್ಲಿ ಶಿವಲಿಂಗಕ್ಕೆ ಹಗಲು, ರಾತ್ರಿಯಿಡೀ ಪವಿತ್ರ ನೀರು ಮತ್ತು ಹಾಲಿನಿಂದ ಅಭಿಷೇಕ ಮಾಡುತ್ತಾರೆ.

2. ಶ್ರಾವಣ ಮಾಸದ ಹಬ್ಬಗಳು ಹಾಗೂ ದಿನ

2. ಶ್ರಾವಣ ಮಾಸದ ಹಬ್ಬಗಳು ಹಾಗೂ ದಿನ

● ನಾಗ ಪಂಚಮಿ - ಆಗಸ್ಟ್‌ 2, ಮಂಗಳವಾರ

● ಶ್ರಾವಣ ಪುತ್ರದ ಏಕಾದಶಿ/ ಏಕಾದಶಿ - ಆಗಸ್ಟ್‌ 8, ಮಂಗಳವಾರ

● ವರಲಕ್ಷ್ಮಿ ವ್ರತ- ಆಗಸ್ಟ್‌ 12, ಶುಕ್ರವಾರಪವಿತ್ರ

● ನರಲಿ ಪೂರ್ಣಿಮಾ - ಆಗಸ್ಟ್‌ 12, ಶುಕ್ರವಾರ

3. ಶ್ರಾವಣ ಮಾಸದ ಮಹತ್ವ

3. ಶ್ರಾವಣ ಮಾಸದ ಮಹತ್ವ

ಹಿಂದೂ ಧರ್ಮಗ್ರಂಥಗಳ ಪ್ರಕಾರ ಶ್ರಾವಣ ಮಾಸವು ಅಪೇಕ್ಷಿತ ಜೀವನ ಸಂಗಾತಿಯನ್ನು ಪಡೆಯಲು ಬಯಸುವ ಅವಿವಾಹಿತ ಮಹಿಳೆಯರಿಗೆ ಬಹಳ ಮುಖ್ಯವಾಗಿದೆ. ಶ್ರಾವಣ ಸೋಮವಾರದಂದು ಉಪವಾಸವನ್ನು ಆಚರಿಸುವವರಿಗೆ ಶಿವನು ಸಂತೋಷ, ಆರೋಗ್ಯ, ಸಂಪತ್ತು ಮತ್ತು ಬಯಸಿದ ಆಸೆಗಳನ್ನು ಈಡೇರಿಸುತ್ತಾನೆ ಎಂದು ನಂಬಲಾಗಿದೆ.

ಮಹಿಳೆಯರು ತಮ್ಮ ಪತಿಯ ದೀರ್ಘ ಆಯುಷ್ಯಕ್ಕಾಗಿ ಮತ್ತು ಕನ್ಯೆಯರು ಶಿವನಂತಹ ಪತಿ ತಮಗೆ ದೊರೆಯಬೇಕೆಂದು, ಇಚ್ಛಿಸುವ ಪತಿ ತಮಗೆ ಪತಿಯಾಗಿ ದೊರೆಯಬೇಕೆಂದು ಶಿವನಿಗೆ ಉಪವಾಸವನ್ನು ಕೈಗೊಳ್ಳುತ್ತಾರೆ. ಪ್ರಾತಃ ಕಾಲದಲ್ಲಿ ಎದ್ದು ಸ್ನಾನ ಮಾಡಿ ಶಿವನ ಪೂಜೆಯನ್ನು ನಡೆಸಿ ಆಹಾರವನ್ನು ತೆಗೆದುಕೊಳ್ಳದೆಯೇ ತಮ್ಮ ದೈನಂದಿನ ಕೆಲಸವನ್ನು ಮಾಡುತ್ತಾರೆ. ನಂತರ ಸಂಜೆ ಪುನಃ ಶಿವನ ಪೂಜೆಯನ್ನು ಮಾಡಿ ಆಹಾರವನ್ನು ಸೇವಿಸುತ್ತಾರೆ.

ಶಿವನು ಪಾರ್ವತಿ ದೇವಿಯೊಂದಿಗೆ ತನ್ನ ಅತ್ತೆಯ ಮನೆಯಲ್ಲಿ ಶ್ರಾವಣ ಮಾಸ ಪೂರ್ತಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಭಗವಾನ್ ಶಿವನು ರಾಜ ದಕ್ಷನಿಗೆ 'ಶ್ರಾವಣ' ಮಾಸದಲ್ಲಿ ಇಲ್ಲಿ ನೆಲೆಸುವುದಾಗಿ ಭರವಸೆ ನೀಡಿದ್ದನು ಮತ್ತು ಆ ದೇವಾಲಯವನ್ನು ದಕ್ಷೇಶ್ವರ ಮಹಾದೇವ ಎಂದು ಹೆಸರಿಸಲಾಗಿದೆ, ಇದು ಹರಿದ್ವಾರದ ಕಂಖಾಲ್‌ನಲ್ಲಿದೆ.

4. ಶ್ರಾವಣ ಸೋಮವಾರದ ಮಹತ್ವ

4. ಶ್ರಾವಣ ಸೋಮವಾರದ ಮಹತ್ವ

ಸೋಮವಾರವು ಶಿವನಿಗೆ ಸಮರ್ಪಿತವಾದ ದಿನವಾಗಿದೆ ಮತ್ತು ಶ್ರಾವಣ ಮಾಸದಲ್ಲಿ ಸೋಮವಾರದಂದು ಉಪವಾಸವನ್ನು ಆಚರಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. 'ಸೋಮವಾರ' ಎಂಬ ಪದವು ಸಂಸ್ಕೃತ ಪದವಾದ 'ಸೋಮ'ದಿಂದ ಹುಟ್ಟಿಕೊಂಡಿದೆ ಸೋಮ ಎಂದರೆ ಚಂದ್ರ, ಹಿಂದೂ ದೇವತೆ ಚಂದ್ರ ಮತ್ತು ಶಿವನು ತನ್ನ ಹಣೆಯ ಮೇಲೆ ಅರ್ಧಚಂದ್ರನನ್ನು ಧರಿಸುತ್ತಾನೆ, ಅದಕ್ಕಾಗಿಯೇ ಶಿವನನ್ನು 'ಸೋಮೇಶ್ವರ' ಎಂದು ಕರೆಯಲಾಗುತ್ತದೆ.

ಭಕ್ತರು ಶಿವನನ್ನು ಮೆಚ್ಚಿಸಲು ಮತ್ತು ಆತನ ಆಶೀರ್ವಾದ ಪಡೆಯಲು ಸೋಮವಾರದ ಉಪವಾಸವನ್ನು ಆಚರಿಸುತ್ತಾರೆ. ಈ ಬಾರಿ ಶ್ರಾವಣ ಮಾಸದಲ್ಲಿ 4 ಸೋಮವಾರಗಳು ಬರಲಿವೆ.

ಶ್ರಾವಣ ಸೋಮವಾರ ದಿನಗಳು

ಮೊದಲ ಸೋಮವಾರ, 01 ಆಗಸ್ಟ್ ಶ್ರಾವಣ ಸೋಮವಾರ ವ್ರತ

ಎರಡನೇ ಸೋಮವಾರ, 08 ಆಗಸ್ಟ್ ಶ್ರಾವಣ ಸೋಮವಾರ ವ್ರತ

ಮೂರನೇ ಸೋಮವಾರ, 15 ಆಗಸ್ಟ್ ಶ್ರಾವಣ ಸೋಮವಾರ ವ್ರತ

ನಾಲ್ಕನೇ ಸೋಮವಾರ, 22 ಆಗಸ್ಟ್ ಶ್ರಾವಣ ಸೋಮವಾರ ವ್ರತ

5. ಶ್ರಾವಣ ಸೋಮವಾರ 2022 ಆಚರಣೆಗಳು

5. ಶ್ರಾವಣ ಸೋಮವಾರ 2022 ಆಚರಣೆಗಳು

1. ಬೇಗನೆ ಎದ್ದೇಳಬೇಕು (ಬ್ರಹ್ಮ ಮುಹೂರ್ತ), ಪವಿತ್ರ ಸ್ನಾನ ಮಾಡಿ ಮತ್ತು ಒಳ್ಳೆಯ ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು.

2. ಶಿವ ಮತ್ತು ಪಾರ್ವತಿ ದೇವಿಯ ವಿಗ್ರಹವನ್ನು ಇರಿಸಿ ಮತ್ತು ದೀಪವನ್ನು ಬೆಳಗಿಸಿ.

3. ಬಿಳಿ ಮತ್ತು ಕೆಂಪು ಹೂವುಗಳು, ಬಿಳಿ ಸಿಹಿತಿಂಡಿಗಳು, ವೀಳ್ಯದೆಲೆ, ಅಡಿಲೆ, ಏಲಕ್ಕಿ, ಐದು ಹಣ್ಣುಗಳು ಮತ್ತು ಪಂಚಾಮೃತ (ಹಾಲು, ಮೊಸರು, ಜೇನುತುಪ್ಪ, ಸಕ್ಕರೆ ಮತ್ತು ತುಪ್ಪದ ಮಿಶ್ರಣ) ಅರ್ಪಿಸಿ.

4. ಭಕ್ತರು ಭಗವಾನ್ ಶಿವ ಮತ್ತು ಪಾರ್ವತಿ ದೇವಿಗೆ ವಸ್ತ್ರವನ್ನು ಅರ್ಪಿಸಬೇಕು.

5. ಮಹಿಳಾ ಭಕ್ತರು ಪಾರ್ವತಿ ದೇವಿಗೆ ಶೃಂಗಾರ ಸಾಮಾಗ್ರಿಗಳನ್ನು ಅರ್ಪಿಸಬಹುದು.

6. ಶಿವ ಚಾಲೀಸವನ್ನು ಪಠಿಸಬೇಕು ಮತ್ತು ಶಿವನ ಆರತಿಯನ್ನು ಮಾಡಬೇಕು.

7. ಭಕ್ತರು ರುದ್ರಾಕ್ಷ ಮಣಿಗಳ ಜತೆ 108 ಬಾರಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕು.

8. ಶ್ರಾವಣ ಸೋಮವಾರದಂದು ದೇವಸ್ಥಾನಕ್ಕೆ ಭೇಟಿ ನೀಡಬೇಕು ಮತ್ತು ಶಿವಲಿಂಗಕ್ಕೆ ಪಂಚಾಮೃತದಿಂದ ಅಭಿಷೇಕವನ್ನು ಮಾಡಬೇಕು.

9. ಶಿವಲಿಂಗಕ್ಕೆ ಕನಿಷ್ಠ 11 ಅಥವಾ 21 ಬಿಲ್ವಪತ್ರೆ ಮತ್ತು ಧಾತುರವನ್ನು ಅರ್ಪಿಸಬೇಕು.

10. ಸಾಧ್ಯವಾದರೆ ಅಭಿಷೇಕ ಮಾಡುವಾಗ ಶಿವನಿಗೆ ಗಂಗಾಜಲವನ್ನು ಅರ್ಪಿಸಬೇಕು.

6. ಶ್ರಾವಣ ಮಾಸದಲ್ಲಿ ಇವುಗಳನ್ನು ಮಾಡುವುದನ್ನು ತಪ್ಪಿಸಬೇಕು

6. ಶ್ರಾವಣ ಮಾಸದಲ್ಲಿ ಇವುಗಳನ್ನು ಮಾಡುವುದನ್ನು ತಪ್ಪಿಸಬೇಕು

1. ಮಾಂಸಾಹಾರಿ, ಮೊಟ್ಟೆ, ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಯಾವುದೇ ತಾಮಸ ಆಹಾರವನ್ನು ಸೇವಿಸಬಾರದು.

2. ಧೂಮಪಾನ ಮತ್ತು ಮದ್ಯಪಾನ ಮಾಡುವುದನ್ನು ತಪ್ಪಿಸಬೇಕು.

3. ಉಪವಾಸವನ್ನು ಆಚರಿಸುವ ಸಮಯದಲ್ಲಿ ಜನರು ಯಾವುದೇ ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು.

4. ಸ್ತ್ರೀಯರಿಗೆ ಜನೆಯು ನಿಷಿದ್ಧವಾಗಿರುವುದರಿಂದ ಶಿವನಿಗೆ ಜನೆಯು ಅರ್ಪಿಸಬಾರದೆಂದು ಸ್ತ್ರೀ ಭಕ್ತರು ಮರೆಯದಿರಿ.

7. ಶ್ರಾವಣ ಮಾಸದಲ್ಲಿ ಪಠಿಸಬೇಕಾದ ಮಂತ್ರಗಳು

7. ಶ್ರಾವಣ ಮಾಸದಲ್ಲಿ ಪಠಿಸಬೇಕಾದ ಮಂತ್ರಗಳು

1. ಓಂ ತ್ರಯಂಭಕಂ ಜಜಾಮಹೇ

ಸುಗನ್ಧಿಂ ಪುಷ್ಟಿವರ್ಧನಮ್

ಉರ್ವರುಕ್ಮಿವ್ ಬಂಧನನ್ ಮೃತ್ಯೋರ್

ಮುಕ್ಷಿಯ ಮಮೃತಾತ್..!!

2. ಕರ್ಪೂರ ಗೌರಮ್ಮ ಕರುಣಾವತಾರ

ಸಂಸಾರಸಾರಂ ಭುಜಗೈಂದ್ರ ಹಾರಂ

ಸದಾ ವಸಂತಂ ಹೃದ್ಯ ಅರವಿನ್ದೇ

ಭಾವಂ ಭವಾನಿ ಸಹಿತಂ ನಮಾಮಿ..!!

3. ಓಂ ನಮಃ ಶಿವಯೇ..!!

8. ಶ್ರಾವಣ ಮಾಸದ ಹಿಂದಿನ ದಂತಕಥೆ

8. ಶ್ರಾವಣ ಮಾಸದ ಹಿಂದಿನ ದಂತಕಥೆ

ಹಿಂದೂ ಧರ್ಮದ ಪ್ರತಿಯೊಂದು ಹಬ್ಬಗಳಂತೆ ಶ್ರಾವಣ ವ್ರತದ ಹಿಂದೆಯೂ ಒಂದು ಕಥೆಯಿದೆ. ಒಂದಾನೊಂದು ಕಾಲದಲ್ಲಿ ಒಬ್ಬ ಶ್ರೀಮಂತ ವ್ಯಕ್ತಿ ವಾಸಿಸುತ್ತಿದ್ದನು ಮತ್ತು ಐಷಾರಾಮಿ ಜೀವನವನ್ನು ಕಳೆಯುತ್ತಿದ್ದನೆಂದು ನಂಬಲಾಗಿದೆ. ಅವನಿಗೆ ಎಲ್ಲಾ ರೀತಿಯ ಸೌಕರ್ಯಗಳಿದ್ದವು, ಆದರೆ ಮಗುವಿನ ಅನುಪಸ್ಥಿತಿಯು ಅವನ ಜೀವನದಲ್ಲಿ ಒತ್ತಡಕ್ಕೆ ಕಾರಣವಾಗಿತ್ತು.

ಅತ ಮತ್ತು ಅವನ ಹೆಂಡತಿ ಶಿವನ ಭಕ್ತರಾಗಿದ್ದು, ಶಿವನನ್ನು ಮೆಚ್ಚಿಸಲು ಸೋಮವಾರದಂದು ಉಪವಾಸ ಮಾಡುತ್ತಿದ್ದರು. ಅವರ ಅಚಲವಾದ ಭಕ್ತಿಯನ್ನು ಗಮನಿಸಿದ ಪಾರ್ವತಿ ದೇವಿಯು ಮಹಾದೇವನಿಗೆ ಮಗುವನ್ನು ಅನುಗ್ರಹಿಸುವಂತೆ ಒತ್ತಾಯಿಸಿದರು. ಪರಿಣಾಮವಾಗಿ, ಅವರು ಅಂತಿಮವಾಗಿ ಆರೋಗ್ಯಕರ ಮಗನನ್ನು ಹೊಂದಲು ಸಾಧ್ಯವಾಯಿತು. ಮಗನಿಗೆ ಅಮರ್ ಎಂದು ಹೆಸರಿಸಲಾಯಿತು, ಆದರೆ ಅವನ ಜನನದ ಜೊತೆಗೆ, ಮಗು 12ನೇ ವಯಸ್ಸಿನಲ್ಲಿ ಸಾಯುತ್ತದೆ ಎಂಬ ಭವಿಷ್ಯವಾಣಿಯು ಬಂದಿತು.

ಮಗು ಬೆಳೆದಂತೆ ಕಾಶಿಗೆ ಶಿಕ್ಷಣಕ್ಕಾಗಿ ಕಳುಹಿಸಲಾಯಿತು. ಅವನು ತನ್ನ ತಾಯಿಯ ಚಿಕ್ಕಪ್ಪನ ಜೊತೆಯಲ್ಲಿದ್ದನು ಮತ್ತು ಅವನು ಹೋದಲ್ಲೆಲ್ಲಾ ಯಾಗ ಮತ್ತು ದಾನವನ್ನು ಮಾಡುವಂತೆ ಅವನ ಹೆತ್ತವರು ಹೇಳಿದ್ದರು. ದಾರಿಯಲ್ಲಿ, ಅವರು ರಾಜಕುಮಾರಿಯ ವಿವಾಹ ಸಮಾರಂಭವನ್ನು ಕಂಡರು, ಆದರೆ ರಾಜಕುಮಾರಿಯು ಮದುವೆ ಆಗಬೇಕಿದ್ದ ವರನ ಅರೆ ದೃಷ್ಟಿಯವನಾಗಿದ್ದ. ವರನ ಮನೆಯವರು ತಮ್ಮ ಮಗನ ಅರ್ಧ ಕುರುಡುತನದ ರಹಸ್ಯವನ್ನು ಕಂಡುಹಿಡಿಯಬಹುದು ಎಂದು ಹೆದರುತ್ತಿದ್ದರು. ವರನ ಸ್ಥಾನವನ್ನು ಪಡೆಯಲು ಅವರು ಅಮರ್ ಅವರನ್ನು ವಿನಂತಿಸಿದರು, ಅದಕ್ಕೆ ಅವರು ಒಪ್ಪಿದರು. ಅವನು ರಾಜಕುಮಾರಿಯನ್ನು ಮದುವೆಯಾದನು, ಆದರೆ ಅವಳಿಗೆ ದ್ರೋಹ ಮಾಡಲು ಇಷ್ಟವಿರಲಿಲ್ಲ. ಅವನು ತನ್ನ ವಧುವಿನ ಮದುವೆಯ ದುಪ್ಪಟಾದ ಮೇಲೆ ಸತ್ಯವನ್ನು ಬರೆಯಲು ಆರಿಸಿಕೊಂಡನು. ವಧು ಅವನ ಸಂದೇಶವನ್ನು ಓದಿದಾಗ, ಅವಳು ತನ್ನ ಮೂಲ ಪತಿಗಾಗಿ ಕಾಯುತ್ತಿದ್ದಳು ಮತ್ತು ತನ್ನ ಪೋಷಕರ ಮನೆಯನ್ನು ಬಿಟ್ಟು ಹೋಗಲಿಲ್ಲ. ಅಮರನು ತನ್ನ ಪ್ರಯಾಣವನ್ನು ಮುಂದುವರೆಸಿದನು ಮತ್ತು ಕಾಶಿಗೆ ಹೊರಟನು.

ಈ ಸಮಯದಲ್ಲಿ, ಅಮರ್ ತನ್ನ ಹೆತ್ತವರ ಮಾತಿಗೆ ಬದ್ಧನಾಗಿದ್ದನು ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದನು. ಅವರು 12 ನೇ ವರ್ಷಕ್ಕೆ ಕಾಲಿಟ್ಟ ದಿನ, ಅವರು ಶಿವ ದೇವಾಲಯದಲ್ಲಿ ಕುಳಿತು, ಶಿವನಿಗೆ ಬಿಲ್ವ ಎಲೆಗಳು ಅರ್ಪಿಸುವುದನ್ನು ಮುಂದುವರೆಸಿದರು. ಯಮನು ಹುಡುಗನ ಜೀವವನ್ನು ತೆಗೆದುಕೊಳ್ಳಲು ಬಂದಾಗ, ಶಿವನು ಮಗುವಿಗೆ ದೀರ್ಘಾಯುಷ್ಯದ ವರವನ್ನು ಆಶೀರ್ವದಿಸಲು ಆರಿಸಿಕೊಂಡನು ಮತ್ತು ಪರಿಣಾಮವಾಗಿ, ಅಮರನು ಸಾಯಲಿಲ್ಲ ಮತ್ತು ಯಮರಾಜನು ಬರಿಗೈಯಲ್ಲಿ ಹಿಂದಿರುಗಿದನು.

ಸ್ವತಃ ಮಹಾದೇವನಿಂದ ಆಶೀರ್ವಾದ ಪಡೆದ ಅಮರನು ತನ್ನ ವಧುವಿನೊಂದಿಗೆ ಮನೆಗೆ ಹಿಂದಿರುಗಿದನು ಮತ್ತು ಮಹಾದೇವನಿಗೆ ಅವರ ಕುಟುಂಬದ ಅಚಲವಾದ ಸಮರ್ಪಣೆಯು ಶಿವನು ತನ್ನ ನಿಜವಾದ ಭಕ್ತರಿಗೆ ಸಹಾಯ ಮಾಡಲು ಮತ್ತು ಅವರಿಗೆ ತನ್ನ ದೈವಿಕ ಆಶೀರ್ವಾದವನ್ನು ನೀಡುತ್ತಾನೆ ಎಂದು ಸಾಬೀತುಪಡಿಸಿತು.

9. ಜ್ಯೋತಿಷ್ಯ ಮಹತ್ವ

9. ಜ್ಯೋತಿಷ್ಯ ಮಹತ್ವ

ಶ್ರಾವಣ ಪ್ರಾರಂಭದೊಂದಿಗೆ, ಸೂರ್ಯನು ರಾಶಿಚಕ್ರ ಚಿಹ್ನೆ ಸಿಂಹವನ್ನು ಪ್ರವೇಶಿಸುತ್ತಾನೆ ಎಂದು ನಂಬಲಾಗಿದೆ, ಇದು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ.

English summary

Shravana Mass 2022 Start & End Dates, Muhurta, Puja Vidhi, Significance, & Rituals in kannada

Here we are discussing about Sawan Month 2022 Start & End Dates, Muhurta, Puja Vidhi, Significance, & Rituals in kannada. Read more.
X
Desktop Bottom Promotion