For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸ 2021: ಯಾವಾಗ ಪ್ರಾರಂಭ? ಈ ತಿಂಗಳ ಮಹತ್ವ ಹಾಗೂ ಪೂಜಾ ವಿಧಿಗಳೇನು?

|

ಹಿಂದೂಗಳಿಗೆ ಆಷಾಢ ಕಳೆದು ಬರುವ ಶ್ರಾವಣ ತುಂಬಾ ವಿಶೇಷಗಳನ್ನು ಹೊತ್ತು ತರುವ ತಿಂಗಳಾಗಿದೆ. ಹಿಂದೂ ಕನ್ನಡ ಕ್ಯಾಲೆಂಡರ್‌ನಲ್ಲಿ ಶ್ರಾವಣ 5ನೇ ತಿಂಗಳಾಗಿದೆ.

ಶ್ರಾವಣ ಎಂದರೆ ಸಾಲು-ಸಾಲು ಹಬ್ಬಗಳನ್ನು ಹೊತ್ತು ಬರುವ ಮಾಸವಾಗಿದೆ. ಶ್ರಾವಣದಲ್ಲಿ ನಾಗರ ಪಂಚಮಿ, ವರಲಕ್ಷ್ಮಿ ವ್ರತ, ರಿಗ್ ಮತ್ತು ಯುಜುರ್‌ ಉಪಕರ್ಮ, ಶ್ರೀ ಕೃಷ್ಣ ಜಯಂತಿ ಹೀಗೆ ಅನೇಕ ಹಬ್ಬಗಳು-ಆಚರಣೆಗಳಿವೆ. ಇನ್ನು ಶ್ರಾವಣ ಮಾಸದ ಎಲ್ಲಾ ಮಂಗಳವಾರದಂದು ಮಂಗಳಗೌರಿ ಪೂಜೆ ಮಾಡಲಾಗುವುದು. ಶ್ರಾವಣ ಸೋಮವಾರ ಕೂಡ ಆಚರಿಸಲಾಗುವುದು.

ಶ್ರಾವಣ ಯಾವಾಗ?
ಆಗಸ್ಟ್‌ 9ರಿಂದ ಶ್ರಾವಣ ಪ್ರಾರಂಭ, ಸೆಪ್ಟೆಂಬರ್‌ 7ಕ್ಕೆ ಮುಕ್ತಾಯ

ಶ್ರಾವಣದಲ್ಲಿ ಶ್ರಾವಣ ಸೋಮವಾರದ ಮಹತ್ವ

ಶ್ರಾವಣದಲ್ಲಿ ಶ್ರಾವಣ ಸೋಮವಾರದ ಮಹತ್ವ

ಶ್ರಾವಣದಲ್ಲಿ ಶ್ರಾವಣ ಸೋಮವಾರ ತುಂಬಾ ವಿಶೇಷ ದಿನವಾಗಿದೆ. ಈ ದಿನ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಿ ಶಿವನನ್ನು ಆರಾಧಿಸಲಾಗುವುದು.

ಪೌರಾಣಿಕ ಕತೆಗಳ ಪ್ರಕಾರ ದೇವತೆಗಳು ಹಾಗೂ ಅಸುರರ ನಡುವೆ ಯುದ್ಧ ನಡೆದಾಗ ನೀರಿನಲ್ಲಿ ವಿಷ ಉತ್ಪತ್ತಿಯಾಗುತ್ತೆ, ಆಗ ಶಿವ ಮನುಕುಲದ ರಕ್ಷಣೆಗೆ ವಿಷವನ್ನು ಕುಡಿಯುತ್ತಾನೆ, ಶಿವನಿಗೆ ವಿಷವನ್ನು ಕುಡಿದಾಗ ಉರಿ ತಾಳಲಾಗದೆ ಚಂದ್ರನೊಳಗೆ ತನ್ನ ತಲೆ ಇಡುತ್ತಾನೆ, ಇಂದ್ರನು ಶಿವನ ಮೇಲೆ ಮಳೆಯನ್ನು ಸರಿಸುತ್ತಾನೆ, ಎಲ್ಲಾ ದೇವತೆಗಳು ಶಿವನ ಮೇಲೆ ಗಂಗಾಜಲ ಸುರಿದು ಶಿವನ ದೇಹದ ಉರಿಯನ್ನು ಕಡಿಮೆ ಮಾಡುತ್ತಾರೆ. ಇದೆಲ್ಲಾ ನಡೆದಿರುವುದು ಶ್ರಾವನ ಮಾಸದಲ್ಲಿ. ಹೀಗಾಗಿ ಶ್ರಾವಣ ಮಾಸ ಅದರಲ್ಲೂ ಶ್ರಾವಣ ಸೋಮವಾರ ಶಿವನಿಗೆ ಮೀಸಲಿಟ್ಟ ದಿನವಾಗಿದೆ.

ಶ್ರಾವಣ ಸೋಮವಾರದಂದು ಶಿವ ಲಿಂಗವನ್ನು ಗಂಗಾ ಜಲದಿಂದ ಅಭಿಷೇಕ ಮಾಡಿ ಆರಾಧಿಸಲಾಗುವುದು.

ಶ್ರಾವಣ ಸೋಮವಾರದ ಪೂಜಾವಿಧಿ

ಶ್ರಾವಣ ಸೋಮವಾರದ ಪೂಜಾವಿಧಿ

* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಬೇಕು

* ನಂತರ ಶಿವನ ದೇವಾಲಯಕ್ಕೆ ಹೋಗಿ ರುದ್ರಾಭಿಷೇಕ ಪೂಜೆ ಮಾಡಿಸಿ, ಮೆಯಲ್ಲಿಯೇ ಮಾಡುವುದಾದರೆ ಸರಿಯಾದ ಕ್ರಮದಲ್ಲಿ ಮಾಡಬೇಕು.

* ಶಿವಲಿಂಗಕ್ಕೆ ಬಿಲ್ವೆ ಪತ್ರೆ ಅರ್ಪಿಸಿ.

* ಶಿವನಿಗೆ ನೈವೇದ್ಯ ಅರ್ಪಿಸಿ

* ನಂತರ ಶಿವನ ಮಂತ್ರಗಳನ್ನು ಪಠಿಸಿ, ನಂತರ ಆರತಿ ಮಾಡಿ.

* ಪೂಜೆ ಮುಗಿದ ಬಳಿಕ ಪ್ರಸಾದವನ್ನು ಹಂಚಿ.

ಸೂಚನೆ: ಶ್ರಾವಣ ಸೋಮವಾರದಂದು ಉಪವಾಸ ವ್ರತ ಪಾಲಿಸಿ ಶಿವನ ಆರಾಧನೆ ಮಾಡಿದರೆ ಹೆಚ್ಚು ಫಲ ಸಿಗುವುದು.

ಶ್ರಾವಣ ಮಾಸದಲ್ಲಿ ಶಿವ ಪೂಜೆ ಮಾಡುವುದರಿಂದ ದೊರೆಯುವ ಪ್ರಯೋಜನಗಳು

ಶ್ರಾವಣ ಮಾಸದಲ್ಲಿ ಶಿವ ಪೂಜೆ ಮಾಡುವುದರಿಂದ ದೊರೆಯುವ ಪ್ರಯೋಜನಗಳು

* ಶಿವನ ಆರಾಧನೆಯಿಂದ ಗ್ರಹಗಳ ದೋಷವಿದ್ದರೆ ಅದು ದೂರವಾಗುವುದು.

* ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಕಾಯಿಲೆಯಿಂದ ಗುಣಮುಖರಾಗುವಿರಿ, ಆರ್ಥಿಕ ಸಮಸ್ಯೆಯಿದ್ದರೆ ದೂರವಾಗುವುದು, ಪಾಪ ಕರ್ಮಗಳಿಂದ ಮೋಕ್ಷ ಸಿಗುವುದು.

* ಶಿವನ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.

* ಉದ್ಯಮ ಹಾಗೂ ವೃತ್ತಿ ಜೀವನದಲ್ಲಿ ಯಶಸ್ಸು ಉಂಟಾಗುವುದು.

ಈ ವರ್ಷ ಶ್ರಾವಣ ಸೋಮವಾರದ ದಿನಾಂಕಗಳು

ಈ ವರ್ಷ ಶ್ರಾವಣ ಸೋಮವಾರದ ದಿನಾಂಕಗಳು

ಆಗಸ್ಟ್ 9 , 2021

ಆಗಸ್ಟ್ 16, 2021

ಆಗಸ್ಟ್ 23, 2021

ಆಗಸ್ಟ್‌ 30, 2021

ಸೆಪ್ಟೆಂಬರ್ 6, 2021

English summary

Shravan Month 2021: Dates, Significance, Puja Vidhi & Fast Rituals in Kannada

Shravan Month 2021: Dates, Significance, Puja Vidhi & Fast Rituals, read on....
X
Desktop Bottom Promotion