For Quick Alerts
ALLOW NOTIFICATIONS  
For Daily Alerts

ಶ್ರಾವಣ ತಿಂಗಳಲ್ಲಿ ಅಪ್ಪಿ ತಪ್ಪಿಯೂ ಈ 7 ತಪ್ಪುಗಳನ್ನು ಮಾಡದಿರಿ!

|
ಶ್ರಾವಣ ಮಾಸದಲ್ಲಿ ಅಪ್ಪಿತಪ್ಪಿ ಕೂಡ ಈ 7 ತಪ್ಪುಗಳನ್ನು ಮಾಡಲೇಬೇಡಿ | Oneindia Kannada

ಶ್ರಾವಣ ಮಾಸವು ಹಿಂದೂ ಧರ್ಮದಲ್ಲಿ ಪವಿತ್ರವಾದ ತಿಂಗಳು. ಈ ಮಾಸದಲ್ಲಿ ವ್ರತ, ಉಪವಾಸ, ಹೋಮ, ಹವನ, ತೀರ್ಥ ಕ್ಷೇತ್ರಗಳ ದರ್ಶನ ಸೇರಿದಂತೆ ಅನೇಕ ಪುಣ್ಯ ಕೆಲಸಗಳನ್ನು ಮಾಡುತ್ತಾರೆ. ಕೆಲವು ಆಚರಣೆಗಳಿಂದ ಜೀವನದಲ್ಲಿ ಕಷ್ಟಗಳು ಕಳೆದು ಸುಖ ಪ್ರಾಪ್ತಿಯಾಗುವುದು ಎನ್ನಲಾಗುವುದು. ಧಾರ್ಮಿಕ ಆಚರಣೆಗೆ ಮೀಸಲಾಗಿರುವ ಈ ಮಾಸವು ಶಿವನಿಗೂ ಸಮರ್ಪಿಸಲಾಗಿದೆ.

ಶ್ರಾವಣ ಮಾಸದಲ್ಲಿ'ತಪ್ಪದೇ ಮಾಡಿ ಈ ಕೆಲಸವ, ಶಿವ ಸಂತುಷ್ಟನಾಗುವನು

ಈ ಪವಿತ್ರ ತಿಂಗಳಲ್ಲಿ ಮನುಷ್ಯನು ತನ್ನ ಕೆಟ್ಟ ಚಿಂತನೆಗಳು ಹಾಗೂ ವರ್ತನೆಗಳಿಂದ ದೂರ ಇರಬೇಕು. ಇಲ್ಲವಾದರೆ ಕೆಲವು ತೊಂದರೆಗಳು ನಮ್ಮನ್ನು ಸುತ್ತಿಕೊಳ್ಳುವುದು ಎನ್ನಲಾಗುತ್ತದೆ. ಶಿವನಿಗೆ ಸಮರ್ಪಿತವಾದ ಈ ತಿಂಗಳಲ್ಲಿ ಅಪ್ಪಿತಪ್ಪಿಯೂ ಕೆಲವು ಕೆಲಸವನ್ನು ಮಾಡಬಾರದು. ಹಾಗಾದರೆ ಆ ಕೆಲಸಗಳು ಯಾವವು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಪೂಜಾ ಸಾಮಾಗ್ರಿಯಲ್ಲಿ ಅರಿಶಿನ

ಪೂಜಾ ಸಾಮಾಗ್ರಿಯಲ್ಲಿ ಅರಿಶಿನ

ಅರಿಶಿನವು ಪೂಜಾ ಸಾಮಾಗ್ರಿಯಲ್ಲಿ ಒಂದು. ಶ್ರಾವಣ ಮಾಸದಲ್ಲಿ ಅರಿಶಿನವನ್ನು ಪೂಜಾಸಾಮಾಗ್ರಿಯಲ್ಲಿ ಕಡ್ಡಾಯವಾಗಿ ಇಡಬೇಕು. ಭಗವಾನ್ ಶಿವನು ತನ್ನ ಮೂಲ ರೂಪದಲ್ಲಿ ಯೋಗಿ ಮತ್ತು ಋಷಿಯಾಗಿ ಕಾಣಿಸಿಕೊಂಡಿದ್ದಾನೆ. (ಆದರೂ ಅವನು ಪಾರ್ವತಿ ದೇವಿಯನ್ನು ವಿವಾಹವಾಗಿದ್ದಾನೆ) ಶಿವನಿಗೆ ಅರಿಶಿನವನ್ನು ಅರ್ಪಿಸದಿದ್ದರೂ ಪಾರ್ವತಿ ದೇವಿಗೆ ಶ್ರೇಷ್ಠವಾದದ್ದು. ಇನ್ನು ಪ್ರಾತಃಕಾಲ ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನ ಮತ್ತು ಪ್ರಾತಃವಿಧಿಗಳನ್ನು ಮುಗಿಸಿದ ಬಳಿಕ ಪ್ರಥಮವಾಗಿ ಗಣೇಶನನ್ನು ಪ್ರಾರ್ಥಿಸಿ. ಬಳಿಕ ಓಂನಮಃಶಿವಾಯ ಪಠಿಸುವ ಮೂಲಕ ಶಿವನನ್ನು ಪ್ರಾರ್ಥಿಸಿ.

ಹಾಲಿನ ಉಪಯೋಗ

ಹಾಲಿನ ಉಪಯೋಗ

ಕಚ್ಚಾ ಹಾಲನ್ನು ಸಾಮಾನ್ಯವಾಗಿ ಶಿವನ ಪೂಜೆಗೆ ಬಳಸಲಾಗುತ್ತದೆ. ಆದರೆ ಶ್ರಾವಣ ಮಾಸದಲ್ಲಿ ಶಿವನಿಗೆ ಕಚ್ಚಾ ಹಾಲನ್ನು ನೀಡಲಾಗುವುದಿಲ್ಲ. ಹಾಗಾಗಿ ಶ್ರಾವಣ ಮಾಸದಲ್ಲಿ ಹಾಲನ್ನು ಕುದಿಸಿದ ನಂತರ ಬಳಕೆ ಮಾಡಬೇಕು.

 ಶ್ರಾವಣ ಮಾಸದಲ್ಲಿ ಸ್ನಾನ

ಶ್ರಾವಣ ಮಾಸದಲ್ಲಿ ಸ್ನಾನ

ಶ್ರಾವಣ ಮಾಸದಲ್ಲಿ ತಡವಾಗಿ ಎದ್ದೇಳಬಾರದು. ಮುಂಜಾನೆ ಬೇಗ ಎದ್ದು ಬ್ರಹ್ಮ ಮುಹೂರ್ತದಲ್ಲಿ ಸ್ನಾನಮಾಡಬೇಕು. ಬ್ರಹ್ಮ ಮುಹೂರ್ತ ಎಂದರೆ ಮುಂಜಾನೆ 4 ರಿಂದ 6 ಗಂಟೆಯ ಒಳಗೆ. ಹೀಗೆ ಮಾಡುವುದರಿಂದ ದೇಹದಲ್ಲಿ ಸಕಾರಾತ್ಮಕ ಶಕ್ತಿಯು ಕ್ರಿಯಾತ್ಮಕಗೊಳ್ಳುವುದು. ಇನ್ನು ಶ್ರಾವಣ ಮಾಸದಾದ್ಯಂತ ಬೆಳೆಗ್ಗಿನ ಹೊತ್ತು ನಿಮಗೆ ಹತ್ತಿರದ ಶಿವಾಲಯಕ್ಕೆ ಭೇಟಿ ನೀಡುವುದು ಶ್ರೇಯಸ್ಕರವಾಗಿದೆ. ಈ ಅವಧಿಯಲ್ಲಿ ಶಿವಪೂಜೆ ನಡೆಸಿ ನೀರು ಮತ್ತು ಕರಿಎಳ್ಳಿನ ತರ್ಪಣೆ ನೀಡುವುದು ಉತ್ತಮ. ಪೂಜೆ ಮುಗಿದ ತಕ್ಷಣ ಮನೆಗೆ ಹಿಂದಿರುಗದೇ ಕೊಂಚ ಹೊತ್ತು ಒಳಗೇ ಕುಳಿತು ಓಂನಮಃಶಿವಾಯ ಮಂತ್ರವನ್ನು ಸಾಕಷ್ಟು ಬಾರಿ ಪಠಿಸಿ.

 ಬದನೆಕಾಯಿ ಬಳಕೆ ಬೇಡ

ಬದನೆಕಾಯಿ ಬಳಕೆ ಬೇಡ

ಶ್ರಾವಣ ಮಾಸದಲ್ಲಿ ಕೆಲವು ತರಕಾರಿಗಳನ್ನು ತಿನ್ನಬಾರದು. ಅವುಗಳಲ್ಲಿ ಬದನೆಕಾಯಿಯೂ ಒಂದು. ಈ ತಿಂಗಳಲ್ಲಿ ಇದನ್ನು ತಿನ್ನುವುದರಿಂದ ದುರಾದೃಷ್ಟ ಉಂಟಾಗುವುದು ಎನ್ನಲಾಗುತ್ತದೆ. ನಮ್ಮ ಗ್ರಂಥದಲ್ಲಿ ಬದನೆಕಾಯಿಯನ್ನು ಅಶುದ್ಧ ತರಕಾರಿ ಎಂದು ಪರಿಗಣಿಸಲಾಗಿದೆ. ಅಲ್ಲದೆ ಮಳೆಗಾಲದ ಸಮಯದಲ್ಲಿ ಬದನೆ ಕಾಯಿಯಲ್ಲೂ ಕೂಡ ಕೀಟಗಳು ಮತ್ತು ಸೂಕ್ಷ್ಮಜೀವಿಗಳು ಸಾಕಷ್ಟು ಕಂಡು ಬರುವ ಕಾರಣ ವೃತಧಾರಿಗಳು ಬದನೆಯನ್ನು ಸೇವಿಸಬಾರದು. ಅಷ್ಟೇ ಅಲ್ಲದೆ ಶ್ರಾವಣ ಮಾಸದಲ್ಲಿ ಹಾಲನ್ನು ಕುಡಿಯುವ ಮುನ್ನ ಅದನ್ನು ಕುದಿಸಿ ಆರಿಸಿ ಕುಡಿಯಬೇಕೆಂಬ ನಿಯಮ ಇದೆ. ಅಂತೆಯೇ ಹಸಿ ಹಾಲನ್ನು ಸೇವಿಸಬಾರದು ಎಂಬುದು ಶ್ರಾವಣ ಮಾಸದ ನಿಯಮವಾಗಿದೆ.

 ಋಣಾತ್ಮಕ ಚಿಂತನೆಯಿಂದ ದೂರವಿರಿ

ಋಣಾತ್ಮಕ ಚಿಂತನೆಯಿಂದ ದೂರವಿರಿ

ಶ್ರಾವಣ ಮಾಸದಲ್ಲಿ ಕೆಟ್ಟ ಯೋಚನೆಗಳು ಹಾಗೂ ಋಣಾತ್ಮಕ ಕೆಲಸಗಳನ್ನು ಮಾಡಬಾರದು. ಇದು ಶಿವನಿಗೆ ಅಸಮಧಾನವನ್ನು ಉಂಟುಮಾಡುವುದು. ಮುಗ್ಧ ಜೀವಿಗಳಿಗೆ ಅಹಿತಕರವಾದದ್ದನ್ನು ಮಾಡಿದರೆ ನಿಮ್ಮ ಜಾತಕದಲ್ಲಿ ದೋಷ ಹಾಗೂ ಕಷ್ಟಗಳ ಸರಮಾಲೆ ಉಂಟಾಗುವುದು. ಹಾಗಾಗಿ ನೀವು ಕೈಗೊಳ್ಳುವ ಕೆಲಸ ಕಾರ್ಯಗಳ ಮೇಲೆ ಹಿಡಿತವನ್ನು ಹೊಂದಿರಿ.

ಮಾಂಸಹಾರ ತಿನ್ನಬಾರದು

ಮಾಂಸಹಾರ ತಿನ್ನಬಾರದು

ಶ್ರಾವಣ ಮಾಸದಲ್ಲಿ ಮಾಂಸಹಾರವನ್ನು ಸೇವಿಸಬಾರದು. ಇದರ ಸೇವನೆ ಮಾಡಿದರೆ ದೇಹದಲ್ಲಿ ನಕಾರಾತ್ಮಕ ಶಕ್ತಿಯು ಸಕ್ರಿಯಗೊಳ್ಳುವುದು. ಇದು ದೀರ್ಘ ಸಮಯದವರೆಗೆ ಪ್ರತಿಬಿಂಬಿಸುತ್ತದೆ. ಹೀಗೆ ಮಾಡುವುದು ರಾಕ್ಷಸ ಗುಣವನ್ನು ಉತ್ತೇಜಿಸುವುದು ಎಂದು ಹೇಳಲಾಗುವುದು. ಅಲ್ಲದೆ ಈ ತಿಂಗಳಲ್ಲಿ ಯಾವುದೇ ಜೀವಿಯ ಹತ್ಯೆಯನ್ನು ಮಾಡಬಾರದು ಎಂದು ಹಿಂದೂ ಧರ್ಮದಲ್ಲಿ ಉಲ್ಲೇಖಿಸಲಾಗಿದೆ. ಹಾಗೊಮ್ಮೆ ಮಾಡಿದರೆ ಅದು ಪಾಪಕ್ಕೆ ಕಾರಣವಾಗುವುದು. ಅಲ್ಲದೆ ವ್ರತಾಧಾರಿಗಳು ಮಾಂಸಹಾರವನ್ನು ಸೇವಿಸಿದರೆ ಪ್ರಾಣಿಗಳನ್ನು ಕೊಂದಂತೆ ಎಂಬ ಕಾರಣಕ್ಕಾಗಿ ಈ ಮಾಸದಲ್ಲಿ ಮಾಂಸಾಹಾರವನ್ನು ಸೇವಿಸಬಾರದೆಂದು ಹೇಳುತ್ತಾರೆ.

 ಮನೆಯಲ್ಲಿ ಶಾಂತಿ ಇರಲಿ

ಮನೆಯಲ್ಲಿ ಶಾಂತಿ ಇರಲಿ

ದೇವತೆಗಳ ಪೂಜೆಗೆ ಮೀಸಲಾಗಿರುವ ಈ ತಿಂಗಳಲ್ಲಿ ಮನೆಯ ವಾತಾವರಣವು ಸುಂದರವಾಗಿರಬೇಕು. ಮನೆಯಲ್ಲಿ ಸದಸ್ಯರೊಂದಿಗೆ ಸಂತೋಷ ಹಾಗೂ ಶಾಂತಿಯ ಜೀವನ ನಡೆಸಬೇಕು. ಮನೆಯಲ್ಲಿ ಉತ್ತಮ ವಾತಾವರಣ ಇದ್ದರೆ ದೈವ ಶಕ್ತಿಯ ಆಗಮನ ಆಗುವುದು. ಅದೇ ಮನೆಯಲ್ಲಿ ಕಿರಿಕಿರಿ, ಜಗಳಗಳು ನಡೆಯುತ್ತಿದ್ದರೆ ನಕಾರಾತ್ಮಕ ಶಕ್ತಿ ನೆಲೆಗೊಳ್ಳುವುದು ಎನ್ನಲಾಗುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ತೊಂದರೆ ಕಂಡುಬಂದರೆ ಶ್ರಾವಣ ಮಾಸದ ಯಾವುದಾದರೊಂದು ದಿನದಲ್ಲಿ ಗೋಮೂತ್ರವನ್ನು ಚಿಮುಕಿಸಿ. ಬಳಿಕ ಇಡಿಯ ಮನೆಯಲ್ಲಿ ಧೂಪದ ಧೂಮವನ್ನು ಇಡಿಯ ಮನೆ ಆವರಿಸುವಂತೆ ಮಾಡಿ. ಇದರಿಂದ ಮನೆಗೆ ಬಂದಿದ್ದ ಕಂಟಕಗಳು ದೂರವಾಗುತ್ತವೆ.

English summary

Shravan Maas 2018: Avoid these 7 common-mistakes

The month of Shravana has started. The preparations for the month are in full swing and a lot of enthusiasm can be seen among the devotees in the temples of Shiva since he is the primary deity for the month. In fact, the whole month is dedicated to Shiva because of his major role in the Samudra Manthan that happened in this month. He had drunk the Halahal poison and saved the Universe.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X