For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸ 2019: ದಿನಾಂಕ, ಸಮಯ ಹಾಗೂ ಮಹತ್ವ

|

ಹಿಂದೂ ಧರ್ಮದಲ್ಲಿ ಶ್ರಾವಣ ತಿಂಗಳು ತುಂಬಾ ಶುಭ ಮಾಸ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ನ ಐದನೇ ತಿಂಗಳು ಬರುವುದೇ ಶ್ರಾವಣ ತಿಂಗಳು. ಈ ತಿಂಗಳ ವೇಳೆ ಶ್ರಾವಣ ನಕ್ಷತ್ರವು ಹುಣ್ಣಿಮೆಯ ದಿನ ಇರುವುದು. ಈ ಕಾರಣದಿಂದಾಗಿ ಇದನ್ನು ಶ್ರಾವಣ ಮಾಸ ಎಂದು ಕರೆಯಲಾಗುತ್ತದೆ. ಶ್ರಾವಣ ಮಾಸವು ಸಂಪೂರ್ಣವಾಗಿ ಶಿವನಿಗೆ ಮೀಸಲಾಗಿದ್ದು, ಆತನನ್ನು ಭಕ್ತರು ಪೂಜಿಸುವರು. ಶ್ರಾವಣ ಮಾಸದಲ್ಲಿ ಶಿವನ ಪೂಜೆ ಮಾಡಿದರೆ ಅದರಿಂದ ಮಂಗಳವಾಗುವುದು ಎಂದು ನಂಬಲಾಗಿದೆ. ಕೆಲವು ಜನರು ಸಂಪೂರ್ಣ ತಿಂಗಳು ಉಪವಾಸ ಮಾಡುವರು ಮತ್ತು ಪ್ರತಿದಿನವು ಶಿವನ ಪೂಜೆ ಮಾಡಿ ವಿಶೇಷ ಪ್ರಸಾದ ಅರ್ಪಿಸುವರು. ನಮ್ಮ ಪುರಾಣ ಮತ್ತು ಪೌರಾಣಿಕ ಕಥೆಗಳ ಪ್ರಕಾರ ಈ ತಿಂಗಳಲ್ಲಿ ಶಿವನ ಪೂಜೆ ಮಾಡಿದರೆ ಅದರಿಂದ ಶುಭವಾಗುವುದು ಎಂದು ನಂಬಲಾಗಿದೆ.

Shravan

ಶ್ರಾವಣ ತಿಂಗಳು 2019

ಉತ್ತರ ಭಾರತದ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಬಿಹಾರದಲ್ಲಿ ಜುಲೈ 17, 2019 ರಿಂದ ಶ್ರಾವಣ ತಿಂಗಳು ಆರಂಭವಾಗಿ ಆಗಸ್ಟ್ 15, 2019ರಂದು ಕೊನೆಗೊಳ್ಳಲಿದೆ. ಶ್ರಾವಣ ಸೋಮವಾರದ ವ್ರತವು ಪ್ರತೀ ಸೋಮವಾರ ಅಂದರೆ ಜುಲೈ22, ಜುಲೈ 29, ಆಗಸ್ಟ್ 5 ಮತ್ತು 12ರಂದು ಆಚರಿಸಲಾಗುತ್ತದೆ.

ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳು(ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ತಮಿಳುನಾಡು) ಶ್ರಾವಣ ಮಾಸವು 1ನೇ ಆಗಸ್ಟ್ 2019ರಂದು ಆರಂಭವಾಗಲಿದೆ ಮತ್ತು ಆಗಸ್ಟ್ 30, 2019ರಂದು ಕೊನೆಗೊಳ್ಳಲಿದೆ. ಶ್ರಾವಣ ಸೋಮವವಾರ ವ್ರತವು ಆಗಸ್ಟ್ 5, ಆಗಸ್ಟ್ 12, ಆಗಸ್ಟ್ 19 ಮತ್ತು ಆಗಸ್ಟ್ 26ರಂದು ನಡೆಯಲಿದೆ.

ಈ ಸಂಪೂರ್ಣ ಅವಧಿಯು ಶಿವನ ಪೂಜಿಸುವ ಭಕ್ತರಿಗೆ ತುಂಬಾ ಶುಭವಾಗಿರಲಿದೆ ಮತ್ತು ಇದರಲ್ಲಿ ಹೆಚ್ಚಿನವರು ಸಂಪೂರ್ಣ ತಿಂಗಳು ಅಥವಾ ಪ್ರತೀ ಸೋಮವಾರದಂದು ವ್ರತಾಚರಣೆ ಮಾಡುವರು.

Shravan

ಶ್ರಾವಣ ತಿಂಗಳಲ್ಲಿ ಬರುವ ಕೆಲವು ಪವಿತ್ರ ದಿನಗಳು ಮತ್ತು ಹಬ್ಬಗಳು.

*ಆಗಸ್ಟ್ 1: ಹರಿಯಾಳಿ ಅಮವಾಸ್ಯೆ

*ಆಗಸ್ಟ್ 3: ಹರಿಯಾಳಿ ತೀಜ್

*ಆಗಸ್ಟ್ 5: ನಾಗ ಪಂಚಮಿ

*ಆಗಸ್ಟ್ 15: ರಕ್ಷಾ ಬಂಧನ

*ಆಗಸ್ಟ್ 24: ಕೃಷ್ಣ ಜನ್ಮಾಷ್ಟಮಿ

ಶ್ರಾವಣ ತಿಂಗಳ ಬಗ್ಗೆ ಇರುವ ಪೌರಾಣಿಕ ಕಥೆ

ಪುರಾಣಗಳು ಹೇಳುವ ಪ್ರಕಾರ ಶ್ರಾವಣ ತಿಂಗಳಲ್ಲಿ ಸಮುದ್ರ ಮಂಥನ ಮಾಡಲಾಗಿತ್ತಂತೆ. ದೇವತೆಗಳು ಮತ್ತು ರಾಕ್ಷಸರು ಸೇರಿಕೊಂಡು ಈ ಸಮುದ್ರ ಮಂಥನ ಮಾಡಿದರು. ಸುಮೆರು ಪರ್ವತವನ್ನು ಕಡಗೋಲಾಗಿ ಬಳಕೆ ಮಾಡಲಾಯಿತು ಮತ್ತು ಶಿವನ ಕುತ್ತಿಗೆಯಲ್ಲಿರುವ ವಾಸುಕಿ ಸರ್ಪವನ್ನು ಪರ್ವತಕ್ಕೆ ಸುತ್ತಲಾಗಿತ್ತು. ಮಂಥನದ ವೇಳೆ ತುಂಬಾ ಅಮೂಲ್ಯವಾದ ರತ್ನಗಳು ಹಾರೂ ಹರಳುಗಳು ಸಮುದ್ರದಿಂದ ಮೇಲೆ ಬಂದವು. ಅದಾಗ್ಯೂ, ಅಂತಿಮವಾಗಿ ಹಾಲಾಹಲ(ವಿಷ)ವು ಎಲ್ಲವನ್ನು ಧ್ವಂಸ ಮಾಡಲು ಬಂದಿತು. ಈ ವಿಷವನ್ನು ನಿಭಾಯಿಸಲು ದೇವತೆಗಳಿಗೆ ಮತ್ತು ರಾಕ್ಷಸರಿಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಈಶ್ವರ ದೇವರು ರಕ್ಷಣೆಗೆ ಬಂದರು. ಶಿವ ದೇವರು ಈ ಸಂಪೂರ್ಣ ವಿಷವನ್ನು ಕುಡಿದು ಕಂಠದಲ್ಲಿ ಸಂಗ್ರಹಿಸಿಟ್ಟುಕೊಂಡರು. ಇದರಿಂದಾಗಿ ಅವರ ಕಂಠವು ನೀಲಿಯಾಗಿದೆ ಮತ್ತು ಅವರನ್ನು ನೀಲಕಂಠನೆಂದು ಕರೆಯುವರು. ಈ ರೀತಿಯಾಗಿ ಈಶ್ವರ ದೇವರು ಈ ತಿಂಗಳಲ್ಲಿ ಪ್ರತಿಯೊಬ್ಬರಿಗೂ ಒಂದು ಹೊಸ ಜೀವನ ನೀಡಿದರು. ಇದರಿಂದಾಗಿ ಶ್ರಾವಣ ತಿಂಗಳು ತುಂಬಾ ಶುಭವೆಂದು ಪರಿಗಣಿಸಲಾಗಿದೆ.

Shravan

ಶ್ರಾವಣ ತಿಂಗಳಲ್ಲಿ ಮಾಡಬೇಕಾದ ಕೆಲಸಗಳು

ಶ್ರಾವಣ ತಿಂಗಳನ್ನು ತುಂಬಾ ಶುಭವೆಂದು ಪರಿಗಣಿಸಲಾಗಿದೆ ಮತ್ತು ಕೆಲವೊಂದು ಒಳ್ಳೆಯ ಕೆಲಸಗಳನ್ನು ಮಾಡಿದರೆ ಅದರಿಂದ ಶಿವನ ಆಶೀರ್ವಾದ ಸಿಗುವುದು ಎಂದು ಪರಿಗಣಿಸಲಾಗಿದೆ.

ಸಾಧ್ಯವಾದರೆ ಶ್ರಾವಣ ತಿಂಗಳಲ್ಲಿ ಸಂಪೂರ್ಣವಾಗಿ ಉಪವಾಸ ಮಾಡಬೇಕು. ಪ್ರತಿನಿತ್ಯ ಸ್ನಾನ ಮಾಡಿದ ಬಳಿಕ ಶಿವನ ಮಂದಿರಕ್ಕೆ ಹೋಗಬೇಕು ಮತ್ತು ಪಂಚಮೂರ್ತ ಅರ್ಪಿಸಬೇಕು. ಪಂಚಮೂರ್ತವೆಂದರೆ ಐದು ಸಾಮಗ್ರಿಗಳಾದ ಹಾಲು, ಮೊಸರು, ಬೆಣ್ಣೆ, ಜೇನುತುಪ್ಪ ಮತ್ತು ಗಂಗಾಜಲವನ್ನು ಬಳಸಿಕೊಂಡು ಮಾಡಿರುವ ನೈವೇದ್ಯ. ಇದರೊಂದಿಗೆ ಬಿಲ್ವ ಪತ್ರೆಯನ್ನು ಕೂಡ ಅರ್ಪಿಸಬೇಕು. ಉಪವಾಸದ ವೇಳೆ ಹಾಲು ಮತ್ತು ಹಾಲಿನ ಉತ್ಪನ್ನಗಳು, ಹಣ್ಣುಗಳು ಮತ್ತು ಇತರ ಕೆಲವೊಂದು ಸಾಮಗ್ರಿಗಳನ್ನು ಬಳಸಬಹುದು ಮತ್ತು ಶಿವನ ಪೂಜೆ ಮಾಡಬಹುದು.

ಪ್ರತಿದಿನವೂ ಉಪವಾಸ ಸಾಧ್ಯವಾಗದೆ ಇದ್ದರೆ ಆಗ ಪ್ರತೀ ಸೋಮವಾರ ಉಪವಾಸ ಮಾಡಿದರೆ ತುಂಬಾ ಒಳ್ಳೆಯದು. ರುದ್ರಾಕ್ಷಿ ಮಾಲೆ ಧರಿಸುವುದು ಕೂಡ ಈ ತಿಂಗಳಲ್ಲಿ ತುಂಬಾ ಶುಭ ಎಂದು ಪರಿಗಣಿಸಲ್ಪಟ್ಟಿದೆ.

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಅದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.

ಓಂ ತ್ರೈಯಂಬಕಮ್ ಯಜಮಾಹೆ ಸುಂಧಿಮ್ ಪುಶ್ತಿ ವರ್ಧನಾಮ್

ಉರ್ರುಕ್ಮಿವ್ಬಂಧನನ್ ಮೃತ್ಯೊರ್ಮುಕ್ಷೆ ಮಾಮೃತಾತ್''

English summary

Shravan 2019 Month Dates, Time, and Significance

Shravan Month for Northern States of India ( Rajasthan, U.P, M.P, Punjab, Himachal Pradesh & Bihar ) will start from Wednesday, 17th of July 2019 and will end on Thursday, 15th of August 2019. Shravan Somvar Vrat will be observed on every Monday i.e. on 22nd July, 29th July, 5th August and 12th August.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X