For Quick Alerts
ALLOW NOTIFICATIONS  
For Daily Alerts

Shivratri Special: ಬೆಂಗಳೂರಿನ ಈ ಶಿವನ ದೇವಾಲಯವು ಭಕ್ತರಿಗೆ ಪ್ರಸಾದದ ರೂಪದಲ್ಲಿ ಮಜ್ಜಿಗೆ ಕೊಡುತ್ತದೆ

|

ಶಿವನನ್ನು ಯಾರು ಭಕ್ತಿಯಿಂದ ಆರಾಧಿಸುತ್ತಾರೋ ಅವರನ್ನು ಶಿವ ಎಂದಿಗೂ ಕೈ ಬಿಡಲ್ಲ ಎಂಬುವುದು ಭಕ್ತರ ಬಲವಾದ ನಂಬಿಕೆ. ಶಿವನಿಗೆ ಪೂಜೆಯಲ್ಲಿ ಅಭಿಷೇಕ ಕೂಡ ಪ್ರಮುಖವಾದದ್ದು. ಶಿವನಿಗೆ ಹಾಲು, ನೀರು, ಜೇನು ತುಪ್ಪ, ತುಪ್ಪ, ಸಕ್ಕರೆ, ಎಳನೀರು, ಶ್ರೀಗಂಧ, ಹಣ್ಣಿನ ರಸ ಇವುಗಳಿಂದ ಅಭಿಷೇಕ ಮಾಡಲಾಗುವುದು. ಶಿವನಿಗೆ ಅಭಿಷೇಕ ಮಾಡಿ ಮಾಡುವ ಪೂಜೆಗೆ ಹೆಚ್ಚಿನ ಫಲ ಸಿಗುವುದು ಎಂಬ ನಂಬಿಕೆ.

Shivaratri Special: Gangadhareshwara Temple in Bengaluru Gives Buttermilk Prasada in Return of the Milk Offered to the Deity

ಶಿವನಿಗೆ ಅಭಿಷೇಕ ಮಾಡಿ ಮಾಡುವ ಸಂಕಲ್ಪಕ್ಕೆ ಬೇಗ ಫಲ ಸಿಗುವುದು. ಎಲ್ಲಾ ಶಿವನ ದೇವಾಲಯಗಳಲ್ಲಿ ಶಿವನಿಗೆ ಅಭಿಷೇಕ ಮಾಡಲಾಗುವುದು. ಹೆಚ್ಚಿನ ಭಕ್ತಾದಿಗಳು ಶಿವನಿಗೆ ಹಾಲಾಭಿಷೇಕ ಮಾಡಿಸುತ್ತಾರೆ. ಹೀಗೆ ಹಾಲಾಭಿಷೇಕ ಮಾಡಿದವರಿಗೆ ಮೊಸರನ್ನು ಪ್ರಸಾದವಾಗಿ ಬೆಂಗಳೂರಿನ ಶಿವನ ದೇವಾಲಯದಲ್ಲಿ ನೀಡಲಾಗುತ್ತಿದೆ.

ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿರುವ ಗಂಗಾಧರೇಶ್ವರ ದೇವಾಲಯದಲ್ಲಿ ಶಿವನಿಗೆ ಹಾಲಾಭಿಷೇಕ ಮಾಡಿದವರಿಗೆ ಮಜ್ಜಿಗೆಯನ್ನು ಪ್ರಸಾದವಾಗಿ ನೀಡಲಾಗುವುದು.

ಸೋಮವಾರವೆಂದರೆ ಶಿವನ ಆರಾಧನೆಗೆ ಮೀಸಲಿಟ್ಟ ದಿನ. ಈ ದಿನದಂದು ಸುಮಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಒಂದು ಅಂದಾಜು ಪ್ರಕಾರ ಭಕ್ತರು ಹಾಲಾಭಿಷೇಕಕ್ಕೆ ನೀಡುವ ಹಾಲು ಸುಮಾರು 500 ಲೀಟರ್‌ಗೂ ಅಧಿಕವಿರುತ್ತದೆ.

ಪ್ರದುಷ ವ್ರತ, ಶಿವರಾತ್ರಿ ಮುಂತಾದ ವಿಶೇಷ ದಿನಗಳಲ್ಲಿ ಇನ್ನೂ ಹೆಚ್ಚಿನ ಹಾಲು ಸಂಗ್ರಹವಾಗುತ್ತದೆ. ಈ ಹಾಲು ಶಿವಲಿಂಗಕ್ಕೆ ಅಭಿಷೇಕ ಮಾಡಿದ ಬಳಿಕ ವ್ಯರ್ಥ ಆಗಬಾರದೆಂದು ಅದರಿಂದ ಮೊಸರು ತಯಾರಿಸಿ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ.

ಹಾಲು ವ್ಯರ್ಥವಾಗಬಾರದೆಂದು ಎಲ್ಲಾ ವ್ಯವಸ್ಥೆ ಮಾಡಿದ್ದು ನೈರ್ಮಲ್ಯ ಕಾಪಾಡಿಕೊಂಡಿದೆ.
ಇಲ್ಲಿ ಮಜ್ಜಿಗೆಯ ಗುಣಮಟ್ಟವನ್ನು ಪರಿಶೀಲಿಸದ ಬಳಿಕ ಭಕ್ತರಿಗೆ ಹಂಚಲಾಗುತ್ತಿದೆ.

English summary

Shivaratri Special: Gangadhareshwara Temple in Bengaluru Gives Buttermilk Prasada in Return of the Milk Offered to the Deity

Shivaratri Special: Gangadhareshwara Temple in Bengaluru Gives Buttermilk Prasada in Return of the Milk Offered to the Deity.
Story first published: Wednesday, February 23, 2022, 17:52 [IST]
X
Desktop Bottom Promotion