For Quick Alerts
ALLOW NOTIFICATIONS  
For Daily Alerts

ಈ ಪಾಪಗಳನ್ನು ಭಗವಾನ್ ಶಿವ ಎಂದೂ ಕ್ಷಮಿಸಲ್ಲ!

By
|

ಹಿಂದು ಧರ್ಮದಲ್ಲಿ ಬಲುಬೇಗನೆ ಆಶೀರ್ವಾದ ನೀಡುವಂತಹ ದೇವರೆಂದರೆ ಅದು ಶಿವ ದೇವರು. ಭಕ್ತರ ಪ್ರಾರ್ಥನೆಗೆ ಬೇಗನೆ ಶಿವ ದೇವರು ಒಲಿಯುವರು. ದೊಡ್ಡ ಮಟ್ಟದ ಪೂಜೆಗಳನ್ನು ಮಾಡಲು ಬದಲಿಗೆ ಪ್ರತಿನಿತ್ಯ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಿದರೆ ಶಿವ ದೇವರು ಒಲಿಯುವರು. ಶಿವ ದೇವರ ಹೃದಯವು ತುಂಬಾ ವಿಶಾಲ ಹಾಗೂ ಅವರು ಮುಗ್ಧರೆಂದು ಹೇಳಲಾಗುತ್ತದೆ. ಇದರಿಂದಾಗಿಯೇ ಅವರನ್ನು ಭೋಲೆನಾಥ್ ಎಂದು ಕರೆಯಲಾಗುತ್ತದೆ. ಶಿವ ದೇವರು ತುಂಬಾ ಮುಗ್ದರಾಗಿದ್ದರೂ ಕೆಲವು ಪಾಪಗಳನ್ನು ಅವರು ಕ್ಷಮಿಸುವುದಿಲ್ಲವೆಂದು ಪುರಾಣಗಳಲ್ಲಿ ಹೇಳಲಾಗಿದೆ.

ಹಿಂದೂ ಧರ್ಮದ ಪ್ರಕಾರ ಕೆಲವು ಆಲೋಚನೆ, ಮಾತು ಮತ್ತು ಕೃತ್ಯವನ್ನು ಶಿವ ದೇವರು ಕ್ಷಮಿಸುವುದಿಲ್ಲ. ಕೇವಲ ನಿಮ್ಮ ಕರ್ಮಗಳನ್ನು ಮಾತ್ರವಲ್ಲದೆ ಕೆಲವು ಆಲೋಚನೆಗಳನ್ನು ಕೂಡ ಶಿವನು ಕ್ಷಮಿಸುವುದಿಲ್ಲ. ಈ ಲೇಖನದಲ್ಲಿ ಶಿವ ದೇವರನ್ನು ಕ್ರೋಧಗೊಳಿಸುವ ಕೆಲವು ಪಾಪಗಳ ಬಗ್ಗೆ ಹೇಳಲಾಗಿದೆ. ಇದನ್ನು ತಿಳಿದು, ತಪ್ಪು ತಿದ್ದಿ ಶಿವನ ಆಶೀರ್ವಾದ ಪಡೆಯಿರಿ....

ಪರರ ಸಂಪತ್ತಿಗೆ ಆಸೆ ಪಡುವುದು

ಪರರ ಸಂಪತ್ತಿಗೆ ಆಸೆ ಪಡುವುದು

ಬೇರೆಯವರ ಹಣವನ್ನು ಯಾವತ್ತೂ ದುರ್ಬಳಕೆ ಮಾಡಿಕೊಳ್ಳಬೇಡಿ. ಸಾಲ ಪಡೆದಿರುವ ಹಣವನ್ನು ಹಿಂತಿರುಗಿಸಲು ಮರೆಯಬೇಡಿ. ಬೇರೆಯವರ ಹಣದ ಮೇಲೆ ಕಣ್ಣು ಹಾಕಬಾರದು. ಇದರಿಂದ ಶಿವ ದೇವರು ಕ್ರೋಧಗೊಳ್ಳುವರು.

ಬೇರೆಯವರ ಪತ್ನಿಗೆ ಆಸೆ ಪಡುವುದು

ಬೇರೆಯವರ ಪತ್ನಿಗೆ ಆಸೆ ಪಡುವುದು

ಬೇರೆಯವರ ವೈವಾಹಿಕ ಜೀವನಕ್ಕೆ ತೊಂದರೆ ನೀಡುವುದು ದೊಡ್ಡ ಪಾಪವೆಂದು ಶಿವ ದೇವರು ಪರಿಗಣಿಸಿದ್ದಾರೆ. ಬೇರೆಯವರ ಪತ್ನಿಯನ್ನು ಪಡೆಯುವ ಆಕಾಂಕ್ಷೆ ಇಟ್ಟುಕೊಳ್ಳುವುದು ಮತ್ತು ಅವರ ಸಂಬಂಧದಲ್ಲಿ ಬಿರುಕು ಉಂಟು ಮಾಡುವುದು ಶಿವ ದೇವರಿಗೆ ಇಷ್ಟವಾಗಲ್ಲ.

ಇತರರನ್ನು ಮೋಸಗೊಳಿಸುವ ಯೋಜನೆ ರೂಪಿಸುವುದು

ಇತರರನ್ನು ಮೋಸಗೊಳಿಸುವ ಯೋಜನೆ ರೂಪಿಸುವುದು

ಬೇರೆಯವರನ್ನು ಮೋಸಗೊಳಿಸುವುದು ಶಿವ ದೇವರನ್ನು ಕೋಪಗೊಳ್ಳುವಂತೆ ಮಾಡುವುದು. ಬೇರೆಯವರಿಗೆ ಮೋಸ ಮಾಡುವುದು ಅಥವಾ ಅವರ ಸಂತೋಷ ನಾಶ ಮಾಡುವುದನ್ನು ಶಿವ ದೇವರು ಇಷ್ಟಪಡಲ್ಲ. ತನ್ನಂತೆ ಭಕ್ತರು ಕೂಡ ಮುಗ್ಧರಾಗಿರಬೇಕೆಂದು ಅವರು ಬಯಸುವರು.

ದುಷ್ಟ ಮಾರ್ಗದಲ್ಲಿ ನಡೆಯುವುದು

ದುಷ್ಟ ಮಾರ್ಗದಲ್ಲಿ ನಡೆಯುವುದು

ಕೆಲವು ವ್ಯಕ್ತಿಗಳು ದುಷ್ಟ ಕಾರ್ಯಗಳಲ್ಲಿ ತೊಡಗಿಕೊಳ್ಳುವರು ಮತ್ತು ಸಮಾಜಕ್ಕೆ ಕಂಟಕವಾಗಿರುವರು. ಇಂತಹ ಕೃತ್ಯಗಳನ್ನು ಶಿವ ದೇವರನ್ನು ಕೋಪಗೊಳಿಸುವುದು.

ಮಹಿಳೆಯ ಅವಮಾನ

ಮಹಿಳೆಯ ಅವಮಾನ

ಮಹಿಳೆಗೆ ಅವಮಾನ ಮಾಡಿದರೆ ಲಕ್ಷ್ಮೀ ಕುಪಿತಗೊಂಡು ಮನೆ ಬಿಟ್ಟು ಹೋಗುವಳು ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಇದು ಶಿವ ದೇವರಿಗೂ ಇಷ್ಟವಾಗಲ್ಲ. ಮಹಿಳೆಗೆ ಗೌರವ ನೀಡದೆ ಇರುವ ಮನೆಯಲ್ಲಿ ಯಾವ ದೇವರು ವಾಸಿಸಲ್ಲ. ಕೆಲವರು ಮಹಿಳೆಯ ಬಗ್ಗೆ ಕೆಟ್ಟ ಮತ್ತು ಅನಾರೋಗ್ಯಕರ ಮಾತುಗಳನ್ನು ಆಡುವರು. ಇದು ಆಕೆಯನ್ನು ಅವಮಾನಿಸುವುದು ಮಾತ್ರವಲ್ಲದೆ ಈಶ್ವರ ದೇವರ ಕೋಪಕ್ಕೂ ಕಾರಣವಾಗುವುದು. ಶಿವನು ಒಲಿದಷ್ಟೇ ವೇಗದಲ್ಲಿ ಕುಪಿತಗೊಳ್ಳುವನು.

ಪರ ನಿಂದನೆ

ಪರ ನಿಂದನೆ

ಶಿವ ದೇವರು ತನ್ನಷ್ಟೇ ಮುಗ್ದರಾಗಿರುವವರನ್ನು ಇಷ್ಟಪಡುವರು. ಬೇರೆಯವರ ಘನತೆ ಮತ್ತು ಗೌರವಕ್ಕೆ ಧಕ್ಕೆ ತರಲು ಪ್ರಯತ್ನಿಸಿದರೆ, ಅದು ಶಿವ ದೇವರನ್ನು ಕೋಪಗೊಳಿಸುವುದು. ವ್ಯಕ್ತಿಯ ದೂಷಿಸುವುದು ದೊಡ್ಡ ಪಾಪವೆಂದು ಪರಿಗಣಿಸಲಾಗಿದೆ. ಬೇರೆಯವರ ಬಗ್ಗೆ ಸುಳ್ಳು ಹೇಳುವುದು ಮತ್ತು ಅಪಪ್ರಚಾರ ಮಾಡುವುದು ಈಶ್ವರ ದೇವರಲ್ಲಿ ಕ್ರೋಧ ಉಂಟು ಮಾಡುವುದು. ವ್ಯಕ್ತಿಯೊಬ್ಬನ ಬೆನ್ನ ಹಿಂದೆ ಮಾತನಾಡುವುದು ಕೂಡ ಇದರಲ್ಲಿ ಸೇರಿದೆ.

ಕೆಲವು ವಸ್ತುಗಳ ಸೇವನೆ

ಕೆಲವು ವಸ್ತುಗಳ ಸೇವನೆ

ಹಿಂದೂ ಧರ್ಮದ ಪ್ರಕಾರ ಪ್ರಾಣಿಗಳನ್ನು ಕೊಂದು ತಿನ್ನುವುದು ಪಾಪ ಎಂದು ಪರಿಗಣಿಸಲಾಗಿದೆ. ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ಶಿವ ದೇವರಿಗೆ ಇಷ್ಟವಾಗಲ್ಲ. ಹಿಂಸಾಕೃತ್ಯಗಳು ಶಿವದೇವರಿಗೆ ಕ್ರೋಧ ಉಂಟು ಮಾಡುವುದು.

ಮಾದಕ ವಸ್ತುಗಳ ಸೇವನೆ

ಮಾದಕ ವಸ್ತುಗಳ ಸೇವನೆ

ಶಿವ ದೇವರು ಭಾಂಗ್ ಸೇವನೆ ಮಾಡುತ್ತಾರೆಂದು ಎನ್ನಲಾಗುತ್ತದೆ. ಆದರೆ ಭಕ್ತರ ವಿಚಾರಕ್ಕೆ ಬಂದಾಗ ಅವರು ಮದ್ಯಪಾನ ಸೇವಿಸಬಾರದು ಎಂದು ಶಿವ ದೇವರು ಬಯಸುವರು. ಮಾದಕದ್ರವ್ಯಗಳು ದೇಹದ ಮೇಲೆ ಪರಿಣಾಮ ಬೀರುವುದು ಮತ್ತು ಇದು ಜೀವನವನ್ನು ನಾಶ ಮಾಡುವುದು ಎಂದು ನಂಬಲಾಗಿದೆ.

ಕಳ್ಳತನ

ಕಳ್ಳತನ

ಬ್ರಾಹ್ಮಣರ ಆಸ್ತಿ ಅಥವಾ ದೇವಸ್ಥಾನದಿಂದ ಕಳವು ಮಾಡುವುದು ಶಿವ ದೇವರ ಶಾಪಕ್ಕೆ ಕಾರಣವಾಗುವುದು.

 ಹಿರಿಯರಿಗೆ ಅಗೌರವ ತೋರಿಸುವುದು

ಹಿರಿಯರಿಗೆ ಅಗೌರವ ತೋರಿಸುವುದು

ಬೇರೆಯವರ ಪೋಷಕರನ್ನು, ಶಿಕ್ಷಕರನ್ನು ದೂಷಿಸುವುದು ಅಥವಾ ಟೀಕಿಸುವುದರಿಂದ ಶಿವ ದೇವರ ಕ್ರೋಧಕ್ಕೀಡಾಗಬೇಕಾಗುತ್ತದೆ. ಸನ್ಯಾಸಿಗಳನ್ನು ಬೈಯ್ಯುವುದು ಕೂಡ ಇದರಲ್ಲಿ ಒಳಗೊಂಡಿದೆ.

ಶಿವ ದೇವರ ದೃಷ್ಟಿಯಲ್ಲಿ ಇತರ ಕೆಲವು ಪಾಪಗಳು

ಶಿವ ದೇವರ ದೃಷ್ಟಿಯಲ್ಲಿ ಇತರ ಕೆಲವು ಪಾಪಗಳು

ಸೊಸೆ ಅಥವಾ ನಾದಿನಿ ಜತೆಗೆ ಅನೈತಿಕ ಸಂಬಂಧ ಹೊಂದಿರುವುದು, ಗೋವುಗಳ ಕೊಟ್ಟಿಗೆಗೆ, ಅರಣ್ಯಕ್ಕೆ ಬೆಂಕಿ ಹಚ್ಚುವುದು ಕೂಡ ಶಿವ ದೇವರ ಕ್ರೋಧಕ್ಕೆ ಕಾರಣವಾಗಬಹುದು.

ಶಿವನು ಯಾವುದೇ ಸಾಮಾನ್ಯ ದೇವರಲ್ಲ!

ಶಿವನು ಯಾವುದೇ ಸಾಮಾನ್ಯ ದೇವರಲ್ಲ!

ಶಿವನು ಯಾವುದೇ ಸಾಮಾನ್ಯ ದೇವರಲ್ಲ. ತಮ್ಮದೇ ಆದ ರಹಸ್ಯಗಳು ಮತ್ತು ಪ್ರಾಮುಖ್ಯತೆಗಳ ಮೂಲಕ ಶಿವನು ಶ್ರೇಷ್ಠನಾಗಿದ್ದಾರೆ. ಇವರಿಗಿರುವ ಶಕ್ತಿ ಎಣಿಕೆಗೂ ನಿಲುಕದ್ದಾಗಿದೆ. ಅವರು ಧರಿಸುವ ಉಡುಪು ಕೂಡ ಸರಳವಾಗಿದ್ದು ಇದು ಶಿವನ ಶ್ರೇಷ್ಠತೆಯನ್ನು ತೋರಿಸುತ್ತದೆ. ಭಕ್ತರ ಅಳಲನ್ನು ಆಲಿಸುವ ಶಿವ ದೇವರು, ಭಕ್ತರ ಭಕ್ತಿಗೆ ಮೆಚ್ಚಿ ವರಪ್ರಸಾದವನ್ನು ನೀಡುತ್ತಾರೆ. ಹಿಮಾಲಯದಲ್ಲಿ ಎಷ್ಟೋ ವರ್ಷಗಳ ಕಾಲ ಧ್ಯಾನವನ್ನು ಶಿವನು ಮಾಡುತ್ತಾರೆ. ಅವರ ಸಿಟ್ಟಿನ ರೂಪ ತುಂಬಾ ಕಠೋರವಾಗಿರುತ್ತದೆ ಮತ್ತು ಭಕ್ತರಿಗೆ ಈ ರೂಪವೇ ಹೆದರಿಕೆಯನ್ನುಂಟು ಮಾಡುತ್ತದೆ. ಅವರು ಮಾಡುವ ತಾಂಡವ ನೃತ್ಯವು ನೀರು, ಭೂಮಿ, ಆಕಾಶ, ಬೆಂಕಿ ಮತ್ತು ಗಾಳಿಯನ್ನು ಆವರಿಸಿದೆ.

ಒಳ್ಳೆಯವರಿಗೆ ಒಳ್ಳೆಯವ, ಕೆಟ್ಟವರಿಗೆ ಕೆಟ್ಟವ!

ಒಳ್ಳೆಯವರಿಗೆ ಒಳ್ಳೆಯವ, ಕೆಟ್ಟವರಿಗೆ ಕೆಟ್ಟವ!

ಸಾಮಾನ್ಯವಾಗಿ ಹಿಮಾಲಯದ ಹಿಮಾಚ್ಛಾದಿತ ಬೆಟ್ಟಗಳ ಮೇಲೆ ಸದಾ ಧ್ಯಾನಾಸಕ್ತನಾಗಿರುವ ಶಿವ ತನ್ನ ಭಕ್ತರ ಮೊರೆಯನ್ನು ಕೇಳಿ ಅವರ ಸಹಾಯಕ್ಕೆ ಧಾವಿಸುತ್ತಾನೆ. ದುಷ್ಟರ ಉಪಟಳ ತಾಳಲಾರದೇ ಶಿವನಲ್ಲಿ ಮೊರೆಯಿಡುವ ಭಕ್ತರ ರಕ್ಷಣೆಗೆ ಧಾವಿಸುವ ಶಿವ ದುಷ್ಟರ ರುಂಡವನ್ನು ಚೆಂಡಾಡುತ್ತಾನೆ. ಪ್ರಸನ್ನನಾಗಿದ್ದಾಗ ತಾಂಡವನೃತ್ಯ ಮಾಡುವ ಶಿವ ತನ್ನ ಭಕ್ತರ ಮನದಲ್ಲಿದ್ದ ದುಗುಡವನ್ನು ನಿವಾರಿಸುತ್ತಾನೆ. ತಾಂಡವನೃತ್ಯ ಸತ್ಯದ ಸಂಕೇತವೂ ಆಗಿದೆ.

English summary

Shiva Does Not Forgive These Sins

Lord Shiva is known as the deity who can be pleased with minimal offerings. Even if you offer water to the Shivalinga everyday, that is sufficient to please Lord Shiva. Outwardly ferocious, Lord Shiva is very innocent inside. That is why he is also known as Bholenath, which is a Hindi word translating to "innocent Natha".
X
Desktop Bottom Promotion