For Quick Alerts
ALLOW NOTIFICATIONS  
For Daily Alerts

ಇಷ್ಟಾರ್ಥ ಸಿದ್ಧಿಗೆ ನಿತ್ಯ ಪಠಿಸಿ ಶಿವನ ಅಷ್ಟೋತ್ತರ ಶತ ನಾಮಾವಳಿ

|

ಹಿಂದೂ ಧರ್ಮದ ಪ್ರಕಾರ ಚಾಂದ್ರಮಾನ ಪಂಚಾಗದ ಐದನೇ ಮಾಸ ಶ್ರಾವಣ. ಇಂದಿನಿಂದ ಈ ಶುಭ ಶ್ರಾವಣ ಮಾಸ ಆರಂಭವಾಗುತ್ತಿದೆ. ಯುಗಾದಿಯ ನಂತರ ಹಬ್ಬಗಳ ಸಾಲು ಶ್ರಾವಣ ಮಾಸದಿಂದಲೇ ಶುರುವಾಗುತ್ತದೆ. ಈ ಮಾಸದಲ್ಲಿ ಶಿವನನ್ನು ಆರಾಧಿಸಿದರೆ ಶುಭಫಲ ಸಿಗಲಿದೆ, ಬೇಡಿಕೆಗಳು ಈಡೇರಲಿದೆ ಎಂಬ ನಂಬಿಕೆ ಇದೆ.

Shiva Ashtottara Sata Namavali Chant | ಶಿವನ ಅಷ್ಟೋತ್ತರ ಶತ ನಾಮಾವಳಿ ಹಾಗೂ ಅದರ ಅರ್ಥ | Boldsky Kannada
Shiva Ashtottara Sata Namavali In kannada And Its Meaning

ಶಿವನ ಸ್ಮರಣೆಗಾಗಿ ಹಲವಾರು ಶ್ಲೋಕ, ಸ್ತೋತ್ರಗಳನ್ನು ಹಿಂದಿನ ಲೇಖನಗಳಲ್ಲಿ ನಿಮಗೆ ತಿಳಿಸಿದ್ದೇವೆ. ಇಂದಿನ ಲೇಖನದಲ್ಲಿ ಶಿವನ ಅತ್ಯಂತ ಶುಭವಾದ 108 ಶಿವನ ಅಷ್ಟೋತ್ತರ ನಾಮಾವಳಿಗಳನ್ನು ತಿಳಿಸಿಕೊಡಲಿದ್ದೇವೆ. ಅಷ್ಠೋತ್ತರದ ಜತೆಗೆ ಅದರ ಅರ್ಥಸಹಿತ ವಿವರಿಸಲಾಗಿದೆ. ಶ್ರಾವಣ ಮಾಸದಲ್ಲಿ ನಿತ್ಯ ಪೂಜೆ ಮಾಡುವಾಗ ಮಡಿಯಿಂದ ಈ ಶ್ಲೋಕಗಳನ್ನು ಪಠಿಸಿದರೆ ಇಷ್ಟಾರ್ಥ ನೆರವೇರುತ್ತದೆ, ಶುಭಫಲಗಳನ್ನು ನಿರೀಕ್ಷಿಸಬಹುದು ಎನ್ನಲಾಗುತ್ತದೆ.

ಶಿವನ ನಾಮಾವಳಿ - ನಾಮಾವಳಿಯ ಅರ್ಥ

ಶಿವನ ನಾಮಾವಳಿ - ನಾಮಾವಳಿಯ ಅರ್ಥ

ಓಂ ಶಿವಾಯ ನಮಃ - ಮಹಾನ್‌ ದೇವ ಶಿವನಿಗೆ ನಮಸ್ಕಾರಗಳು

ಓಂ ಮಹೇಶ್ವರಾಯ ನಮಃ - ಶ್ರೇಷ್ಠ ಅಧಿಪತಿ

ಓಂ ಶಂಭವೇ ನಮಃ - ಮಹಾನ್‌ ಶಂಭುವೇ ನೀನು

ಓಂ ಪಿನಾಕಿನೇ ನಮಃ - ಪಿನಾಕಾ ಎಂಬ ಬಿಲ್ಲು ಹಿಡಿದವನು

ಓಂ ಶಶಿಶೇಖರಾಯ ನಮಃ - ಚಂದ್ರನನ್ನು ಜಟೆಯಲ್ಲಿ ಹಿಡಿದವನು

ಓಂ ವಾಮದೇವಾಯ ನಮಃ - ಆತನು ಮಹಾನ್‌ ದೇವಾನು ದೇವ

ಓಂ ವಿರೂಪಾಕ್ಷಾಯ ನಮಃ - ಮೂರು ಕಣ್ಣುಗಳು ಉಳ್ಳವನು

ಓಂ ಕಪರ್ದಿನೇ ನಮಃ - ಸ್ಮಶಾನವಾಸಿಯೇ ತಲೆಬುರುಡೆಗಳನ್ನು ಹಿಡಿದವನು

ಓಂ ನೀಲಲೋಹಿತಾಯ ನಮಃ - ನೀಲಿ ಬಣ್ಣದ ದೇಹ ಉಳ್ಳವನು

ಓಂ ಶಂಕರಾಯ ನಮಃ - ಶಂಕರನೇ ನಿನಗೆ ನಮೋ ನಮಃ

ಓಂ ಶೂಲಪಾಣಯೇ ನಮಃ- ತ್ರಿಶೂಲವನ್ನು ಹಿಡಿದವನೇ

ಓಂ ಶೂಲಪಾಣಯೇ ನಮಃ- ತ್ರಿಶೂಲವನ್ನು ಹಿಡಿದವನೇ

ಓಂ ಖಟ್ವಾಂಗಿನೇ ನಮಃ -ಕತ್ತಿಯನ್ನು ಹಿಡಿದವನು

ಓಂ ವಿಷ್ಣುವಲ್ಲಭಾಯ ನಮಃ - ವಿಷ್ಣುವಿನ ಸ್ವರೂಪಿ ಭಗವಂತ

ಓಂ ಶಿಪಿವಿಷ್ಟಾಯ ನಮಃ - ಬೆಳಕಿನ ಕಿರಣದೊಂದಿಗೆ ಇರುವವನು

ಓಂ ಅಂಬಿಕಾನಾಥಾಯ ನಮಃ - ಪಾರ್ವತಿಯ ಪತಿರಾಯನೇ ಭಗವಂತ

ಓಂ ಶ್ರೀಕಂಠಾಯ ನಮಃ - ಕಂಠದಲ್ಲಿ ವಿಷವನ್ನೇ ಇಟ್ಟುಕೊಂಡಿರುವ ವಿಷಕಂಠ

ಓಂ ಭಕ್ತವತ್ಸಲಾಯ ನಮಃ - ತನ್ನ ಭಕ್ತರನ್ನು ಪ್ರೀತಿಸುವವನು

ಓಂ ಭವಾಯ ನಮಃ - ಸದಾ ಭಕ್ತರ ಪಾಲಿಗೆ ಕರುಣಿಸುವವವನು

ಓಂ ಶರ್ವಾಯ ನಮಃ - ವಿನಾಶಕಾರಿ ಶಿವ

ಓಂ ತ್ರಿಲೋಕೇಶಾಯ ನಮಃ- ಮೂರು ವಿಧದ ಕೂದಲು (ಜಟೆ) ಯನ್ನು ಹೊಂದಿರುವವನು

ಓಂ ಶಿತಿಕಂಠಾಯ ನಮಃ - ಕಪ್ಪು ಕುತ್ತಿಗೆ ಹೊಂದಿರುವವನು

ಓಂ ಶಿತಿಕಂಠಾಯ ನಮಃ - ಕಪ್ಪು ಕುತ್ತಿಗೆ ಹೊಂದಿರುವವನು

ಓಂ ಶಿವಾಪ್ರಿಯಾಯ ನಮಃ - ಪಾರ್ವತಿಯಿಂದ ಇಷ್ಟಪಟ್ಟವನು

ಓಂ ಉಗ್ರಾಯ ನಮಃ - ಉಗ್ರ ಸ್ವರೂಪನೇ

ಓಂ ಕಪಾಲಿನೇ ನಮಃ - ರುಂಡಮಾಲಾ ಧರಿಸಿದವನು

ಓಂ ಕೌಮಾರಯೇ ನಮಃ - ಕುಮಾರನೇ ನಮಃ

ಓಂ ಅಂಧಕಾಸುರ ಸೂದನಾಯ ನಮಃ - ಅಂಧಕಾಸುರನನ್ನು ಕೊಂದವನು

ಓಂ ಗಂಗಾಧರಾಯ ನಮಃ - ಗಂಗೆಯನ್ನು ಶಿರದಲ್ಲಿ ಧರಿಸಿದವನು

ಓಂ ಲಲಾಟಾಕ್ಷಾಯ ನಮಃ - ಹಣೆಯಲ್ಲಿ ಕಣ್ಣು (ಮುಕ್ಕಣ್ಣ) ಇರುವವನು

ಓಂ ಕಾಲಕಾಲಾಯ ನಮಃ - ಸಾವಿನ ದೇವರಿಗೆ ಸಾವು ಯಾರು

ಓಂ ಕೃಪಾನಿಧಯೇ ನಮಃ - ಕರುಣೆಯ ನಿಧಿಯೇ ನೀನು

ಓಂ ಭೀಮಾಯ ನಮಃ - ಪರಿಪೂರ್ಣನು

ಓಂ ಭೀಮಾಯ ನಮಃ - ಪರಿಪೂರ್ಣನು

ಓಂ ಪರಶುಹಸ್ತಾಯ ನಮಃ - ಕೈಯಲ್ಲಿ ಕೊಡಲಿ ಇರುವವನು

ಓಂ ಮೃಗಪಾಣಯೇ ನಮಃ - ಕೈಯಲ್ಲಿ ಜಿಂಕೆ ಹಿಡಿದವನು

ಓಂ ಜಟಾಧರಾಯ ನಮಃ - ಜಟೆಯನ್ನು ಹೊಂದಿರುವವನು

ಓಂ ಕ್ತೆಲಾಸವಾಸಿನೇ ನಮಃ - ಕೈಲಾಸದಲ್ಲಿ ವಾಸಿಸುವವನು

ಓಂ ಕವಚಿನೇ ನಮಃ - ರಕ್ಷಾಕವಚವನ್ನು ಧರಿಸಿದವನು

ಓಂ ಕಠೋರಾಯ ನಮಃ - ತುಂಬಾ ಕಠೋರನು

ಓಂ ತ್ರಿಪುರಾಂತಕಾಯ ನಮಃ - ಮೂರು ನಗರಗಳಲ್ಲಿನ ರಾಕ್ಷಸರನ್ನು ನಾಶಪಡಿಸಿದವನು

ಓಂ ವೃಷಾಂಕಾಯ ನಮಃ - ನಂದಿಯ ಮಿತ್ರ

ಓಂ ವೃಷಭಾರೂಢಾಯ ನಮಃ - ನಂದಿಯನ್ನು ವಾಹನವಾಗಿ ಇರಿಸಿಕೊಂಡವನು

ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ - ತನ್ನ ದೇಹವನ್ನು ಬೂದಿಯಿಂದ ಶೃಂಗರಿಸಿಕೊಂಡವನು

ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ - ತನ್ನ ದೇಹವನ್ನು ಬೂದಿಯಿಂದ ಶೃಂಗರಿಸಿಕೊಂಡವನು

ಓಂ ಸಾಮಪ್ರಿಯಾಯ ನಮಃ - ಸಾಮ ವೇದವನ್ನು ಇಷ್ಟಪಡುವವನು

ಓಂ ಸ್ವರಮಯಾಯ ನಮಃ - ಎಲ್ಲೆಡೆ ತನ್ನ ಪ್ರಭಾವ ಬೀರಿರುವವನು

ಓಂ ತ್ರಯೀಮೂರ್ತಯೇ ನಮಃ - ತ್ರಿಮೂರ್ತಿ

ಓಂ ಅನೀಶ್ವರಾಯ ನಮಃ - ವಿನಾಶ ಮಾಡುವವನು

ಓಂ ಸರ್ವಙ್ಞಾಯ ನಮಃ - ಎಲ್ಲವನ್ನು ತಿಳಿದವನು

ಓಂ ಪರಮಾತ್ಮನೇ ನಮಃ - ದೈವಿಕ ಆತ್ಮ ಉಳ್ಳವನು

ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ - ಚಂದ್ರ, ಸೂರ್ಯ ಮತ್ತು ಕೋಪವನ್ನು ತನ್ನ ಕಣ್ಣುಗಳಂತೆ ಹೊಂದಿರುವವನು

ಓಂ ಹವಿಷೇ ನಮಃ - ಅಗ್ನಿಯಿಂದ ಅರ್ಪಣೆ ಮಾಡಿಸಿಕೊಳ್ಳುವವನು

ಓಂ ಯಙ್ಞಮಯಾಯ ನಮಃ - ಬೆಂಕಿಯಂತೆ ತ್ಯಾಗದ ವ್ಯಕ್ತಿತ್ವ

ಓಂ ಸೋಮಾಯ ನಮಃ - ಜಟೆಯಲ್ಲಿ ಚಂದ್ರನನ್ನು ಧರಿಸಿದವನು

ಓಂ ಸೋಮಾಯ ನಮಃ - ಜಟೆಯಲ್ಲಿ ಚಂದ್ರನನ್ನು ಧರಿಸಿದವನು

ಓಂ ಪಂಚವಕ್ತ್ರಾಯ ನಮಃ - ಐದು ಕುತ್ತಿಗೆಗಳನ್ನು ಹೊಂದಿರುವವನು

ಓಂ ಸದಾಶಿವಾಯ ನಮಃ - ಸದಾ ಶಾಂತಿಯುತವಾಗಿ ಇರುವವನು

ಓಂ ವಿಶ್ವೇಶ್ವರಾಯ ನಮಃ - ಬ್ರಹ್ಮಾಂಡಕ್ಕೆ ಭಗವಂತ

ಓಂ ವೀರಭದ್ರಾಯ ನಮಃ -ವೀರಭದ್ರಾ

ಓಂ ಗಣನಾಥಾಯ ನಮಃ - ಗಣಗಳ ನಾಯಕ

ಓಂ ಪ್ರಜಾಪತಯೇ ನಮಃ - ಎಲ್ಲ ಜೀವಿಗಳ ಅಧಿಪತಿ

ಓಂ ಹಿರಣ್ಯರೇತಸೇ ನಮಃ - ದೇವರಂತೆ ಹೊಳೆಯುವವನು

ಓಂ ದುರ್ಧರ್ಷಾಯ ನಮಃ - ಅವನ್ನು ನೋಡಲು ಬಹಳ ಕಷ್ಟ

ಓಂ ಗಿರೀಶಾಯ ನಮಃ - ಪರ್ವತಗಳ ರಾಜ

ಓಂ ಗಿರಿಶಾಯ ನಮಃ - ಪರ್ವತಗಳ ಪ್ರಭು

ಓಂ ಅನಘಾಯ ನಮಃ - ದೋಷರಹಿತ

ಓಂ ಭುಜಂಗ ಭೂಷಣಾಯ ನಮಃ - ಹಾವನ್ನು ಆಭರಣವಾಗಿ ಧರಿಸಿದವನು

ಓಂ ಭುಜಂಗ ಭೂಷಣಾಯ ನಮಃ - ಹಾವನ್ನು ಆಭರಣವಾಗಿ ಧರಿಸಿದವನು

ಓಂ ಭರ್ಗಾಯ ನಮಃ - ಶಿವನ ಮತ್ತೊಂದು ಹೆಸರು

ಓಂ ಗಿರಿಧನ್ವನೇ ನಮಃ - ಬಿಲ್ಲಿನಂತೆ ಪರ್ವತವನ್ನು ಹೊಂದಿರುವವನು

ಓಂ ಗಿರಿಪ್ರಿಯಾಯ ನಮಃ - ಪರ್ವತಗಳನ್ನು ಪ್ರೀತಿಸುವವನು

ಓಂ ಕೃತ್ತಿವಾಸಸೇ ನಮಃ - ಮರೆಮಾಚುವವನು

ಓಂ ಪುರಾರಾತಯೇ ನಮಃ - ಎಂದೆಂದಿಗೂ ಸಂತೋಷಪಡುವವನು

ಓಂ ಭಗವತೇ ನಮಃ - ಅದ್ಭುತ ಬಿಲ್ಲುಗಾರ

ಓಂ ಪ್ರಮಧಾಧಿಪಾಯ ನಮಃ - ಅವನೇ ಬೃಹತ್‌ ದೀಪ

ಓಂ ಮೃತ್ಯುಂಜಯಾಯ ನಮಃ -ಸಾವನ್ನೇ ಗೆದ್ದವನು

ಓಂ ಮೃತ್ಯುಂಜಯಾಯ ನಮಃ -ಸಾವನ್ನೇ ಗೆದ್ದವನು

ಓಂ ಸೂಕ್ಷ್ಮತನವೇ ನಮಃ - ಸೂಕ್ಷ್ಮ ದೇಹವನ್ನು ಹೊಂದಿರುವವನು

ಓಂ ಜಗದ್ವ್ಯಾಪಿನೇ ನಮಃ - ಪ್ರಪಂಚದಾದ್ಯಂತ ಹರಡಿರುವವನು

ಓಂ ಜಗದ್ಗುರವೇ ನಮಃ - ಜಗತ್ತಿನ ಗುರು

ಓಂ ವ್ಯೋಮಕೇಶಾಯ ನಮಃ - ಆಕಾಶದಂಥ ಕೇಶ ರಾಶೀಯನ್ನು ಹೊಂದಿರುವವನು

ಓಂ ಮಹಾಸೇನ ಜನಕಾಯ ನಮಃ -ದೊಡ್ಡ ಸೈನ್ಯವನ್ನು ಸೃಷ್ಟಿಸಬಲ್ಲವನು

ಓಂ ಚಾರುವಿಕ್ರಮಾಯ ನಮಃ - ಸುಂದರ ಮತ್ತು ಶೂರನಾದವನು

ಓಂ ರುದ್ರಾಯ ನಮಃ - ತೀವ್ರ ಕೋಪಗೊಂಡವನು

ಓಂ ಭೂತಪತಯೇ ನಮಃ - ಭೂತ ಭಗವಂತ

ಓಂ ಸ್ಥಾಣವೇ ನಮಃ - ಸ್ಥಿರವಾದವನು

ಓಂ ಅಹಿರ್ಭುಥ್ನ್ಯಾಯ ನಮಃ - ಸರ್ಪವನ್ನು ಧರಿಸಿದವನು

ಓಂ ಅಹಿರ್ಭುಥ್ನ್ಯಾಯ ನಮಃ - ಸರ್ಪವನ್ನು ಧರಿಸಿದವನು

ಓಂ ದಿಗಂಬರಾಯ ನಮಃ - ದಿಕ್ಕುಗಳನ್ನೇ ವಸ್ತ್ರವಾಗಿ ಧರಿಸಿದವನು

ಓಂ ಅಷ್ಟಮೂರ್ತಯೇ ನಮಃ - ಎಂಟು ರೂಪಗಳನ್ನು ಹೊಂದಿರುವವನು

ಓಂ ಅನೇಕಾತ್ಮನೇ ನಮಃ - ಹಲವಾರು ರೂಪಗಳನ್ನು ಹೊಂದಿರುವವನು

ಓಂ ಸ್ವಾತ್ತ್ವಿಕಾಯ ನಮಃ - ಸಾತ್ವಿಕ (ಶಾಂತಿಯುತ)ವಾಗಿರುವವನೇ

ಓಂ ಶುದ್ಧವಿಗ್ರಹಾಯ ನಮಃ - ಸ್ವಚ್ಛವಾದ ಚಿತ್ರಣವನ್ನು ಹೊಂದಿರುವವನು

ಓಂ ಶಾಶ್ವತಾಯ ನಮಃ - ದೀರ್ಘಕಾಲನು

ಓಂ ಖಂಡಪರಶವೇ ನಮಃ - ಕೊಡಲಿಯಿಂದ ಶಸ್ತ್ರಸಜ್ಜಿತನಾದವನು

ಓಂ ಅಜಾಯ ನಮಃ - ಎಂದಿಗೂ ಗೆಲ್ಲುವವನು

ಓಂ ಪಾಶವಿಮೋಚಕಾಯ ನಮಃ - ಕಷ್ಟಗಳಿಂದ ನಮ್ಮನ್ನು ಮುಕ್ತಗೊಳಿಸುವವನು

ಓಂ ಮೃಡಾಯ ನಮಃ - ಸಾವು ಇಲ್ಲದವನು

ಓಂ ಮೃಡಾಯ ನಮಃ - ಸಾವು ಇಲ್ಲದವನು

ಓಂ ಪಶುಪತಯೇ ನಮಃ - ಸಕಲ ಜೀವಿಗಳಿಗೂ ಪ್ರಭು

ಓಂ ದೇವಾಯ ನಮಃ - ದೇವಾನ್ ದೇವತೆ

ಓಂ ಮಹಾದೇವಾಯ ನಮಃ - ಮಹಾನ್ ದೇವರು

ಓಂ ಅವ್ಯಯಾಯ ನಮಃ -ಎಂದಿಗೂ ಬದಲಾಗದವನು

ಓಂ ಹರಯೇ ನಮಃ - ವಿನಾಶಕನು

ಓಂ ಪೂಷದಂತಭಿದೇ ನಮಃ - ಪುಷ್ಪದಂತನನ್ನು ಕೊಂದವನು

ಓಂ ಅವ್ಯಗ್ರಾಯ ನಮಃ - ಆಕ್ರೋಶಗೊಳ್ಳದವನು

ಓಂ ದಕ್ಷಾಧ್ವರಹರಾಯ ನಮಃ - ದಕ್ಷಿನ ಮನೆಯನ್ನು ನಾಶಪಡಿಸಿದವನು

ಓಂ ಹರಾಯ ನಮಃ - ನಾಶಮಾಡುವವನು

 ಓಂ ಭಗನೇತ್ರಭಿದೇ ನಮಃ - ಸೂರ್ಯ, ಚಂದ್ರ ಮತ್ತು ಬೆಂಕಿಯನ್ನು ಕಣ್ಣುಗಳಂತೆ ಹೊಂದಿರುವವನು

ಓಂ ಭಗನೇತ್ರಭಿದೇ ನಮಃ - ಸೂರ್ಯ, ಚಂದ್ರ ಮತ್ತು ಬೆಂಕಿಯನ್ನು ಕಣ್ಣುಗಳಂತೆ ಹೊಂದಿರುವವನು

ಓಂ ಅವ್ಯಕ್ತಾಯ ನಮಃ - ಸ್ಪಷ್ಟವಾಗಿಲ್ಲದವನು

ಓಂ ಸಹಸ್ರಾಕ್ಷಾಯ ನಮಃ - ಸಾವಿರ ಕಣ್ಣುಗಳನ್ನು ಹೊಂದಿರುವವನು

ಓಂ ಸಹಸ್ರಪಾದೇ ನಮಃ - ಸಾವಿರ ಪಾದಗಳನ್ನು ಹೊಂದಿರುವವನು

ಓಂ ಅಪಪರ್ಗಪ್ರದಾಯ ನಮಃ - ಪೂರ್ಣಗೊಳಿಸಲು ನಮಗೆ ಸಹಾಯ ಮಾಡುವವನು

ಓಂ ಅನಂತಾಯ ನಮಃ - ಅಂತ್ಯವಿಲ್ಲದವನು

ಓಂ ತಾರಕಾಯ ನಮಃ - ನಕ್ಷತ್ರನಿವನು

ಓಂ ಪರಮೇಶ್ವರಾಯ ನಮಃ - ದೈವಿಕ ಭಗವಂತನೇ ಈ ಶಿವ

English summary

Shiva Ashtottara Sata Namavali In kannada And Its Meaning

Here we are discussing about Shiva Ashtottara Sata Namavali In kannada And Its Meaning. Read more.
X
Desktop Bottom Promotion