For Quick Alerts
ALLOW NOTIFICATIONS  
For Daily Alerts

ಶಂಕರಾಚಾರ್ಯ ಜಯಂತಿ 2022: ಆದಿ ಶಂಕರರ ಬಗ್ಗೆ ಈ ವಿಷಯಗಳು ಗೊತ್ತೇ?

By Shreeraksha
|

ಪ್ರತಿವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಲ್ಲಿ ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಆದಿ ಶಂಕರರ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತದೆ. 'ಜಗದ್ಗುರು ಶಂಕರಾಚಾರ್ಯ' ಎಂದೂ ಕರೆಯಲ್ಪಡುವ ಆದಿ ಶಂಕರಾಚಾರ್ಯರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಈ ವರ್ಷ ಆದಿ ಶಂಕರಾಚಾರ್ಯ ಜಯಂತಿಯನ್ನು ಮೇ 6ರಂದು ಆಚರಿಸಲಾಗುತ್ತದೆ

ಆದಿ ಶಂಕರಾಚಾರ್ಯ ಜಯಂತಿಯ ದಿನಾಂಕ, ಮಹತ್ವ ಹಾಗೂ ಆಚರಣೆಯ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಆದಿ ಶಂಕರಾಚಾರ್ಯ ಜಯಂತಿಯ ದಿನಾಂಕ, ಮಹತ್ವ ಹಾಗೂ ಆಚರಣೆಯ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಆದಿ ಶಂಕರಾಚಾರ್ಯ ಜಯಂತಿಯ ದಿನಾಂಕ:

ದಿನಾಂಕ: ಮೇ 6 2022 ಶುಕ್ರವಾರ

ಪಂಚಮಿ ತಿಥಿ ಪ್ರಾರಂಭ: ಮೇ 5 2022ರಂದು ಬೆಳಗ್ಗೆ 10:00ಕ್ಕೆ

ಪಂಚಮಿ ತಿಥಿ ಅಂತ್ಯ: ಮೇ 6 2022ರಂದು ಮಧ್ಯಾಹ್ನ 12:32ಕ್ಕೆ

ಆದಿ ಶಂಕರಾಚಾರ್ಯ ಜಯಂತಿಯ ಮಹತ್ವ:

ಆದಿ ಶಂಕರಾಚಾರ್ಯ ಜಯಂತಿಯ ಮಹತ್ವ:

ಶಂಕರರು ಕೇರಳದ ಕಾಲಟಿ ಎಂಬ ಹಳ್ಳಿಯಲ್ಲಿ ಬ್ರಾಹ್ಮಣ ದಂಪತಿಗೆ ಜನಿಸಿದರು. ಅವರು ಕೇವಲ 32 ವರ್ಷ ವಯಸ್ಸಿನವರಾಗಿದ್ದಾಗ ನಿಧನರಾದರು, ಆದರೆ, ಅವರು ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಲು ನೀಡಿದ ಕೊಡುಗೆಯನ್ನು ಇಂದಿಗೂ ಮರೆಯುವಂತಿಲ್ಲ. ಶಂಕರಾಚಾರ್ಯರು ತಮ್ಮ ಜೀವಿತಾವಧಿಯಲ್ಲಿ ಸರಿಸುಮಾರು 23 ಪುಸ್ತಕಗಳನ್ನು ಬರೆದಿದ್ದಾರೆ. ಇವರು ಅದ್ವೈತ ಸಿದ್ಧಾಂತದಲ್ಲಿ ನಂಬಿಕೆಯನ್ನಿಟ್ಟವರು, ಅದರಲ್ಲೇ ವೇದಗಳನ್ನು ವಿವರಿಸಿದವರು.

ಆದಿ ಶಂಕರಾಚಾರ್ಯರು ಒಬ್ಬ ಮಹಾನ್ ದಾರ್ಶನಿಕನಲ್ಲದೆ, ಅವನು ಒಬ್ಬ ಮಹಾನ್ ಕವಿಯೂ ಆಗಿದ್ದರು, ಸೌಂದರ್ಯ ಲಹರಿ, ನಿರ್ವಾಣ ಶಾಲ್ಕಂ ಮತ್ತು ಶಿವಾನಂದ ಲಹರಿ ಅವರ ಗಮನಾರ್ಹ ಸಂಯೋಜನೆಗಳಾಗಿವೆ. ಅಷ್ಟೇ ಅಲ್ಲ, ಆದಿ ಶಂಕರರು ಉಪನಿಷತ್ತುಗಳ, ಭಗವದ್ಗೀತೆ ಮತ್ತು ಬ್ರಹ್ಮ ಸೂತ್ರಗಳ ಬಗ್ಗೆ ತಮ್ಮ ತಿಳುವಳಿಕೆಯನ್ನು ಬರೆದಿದ್ದಾರೆ. ದ್ವಾರಕಾ, ಕಾಶ್ಮೀರ, ಶೃಂಗೇರಿ ಮತ್ತು ಪುರಿಯಲ್ಲಿ ನೆಲೆಗೊಂಡಿರುವ ಪ್ರಮುಖ ಮಠಗಳನ್ನು ಭಾರತದಲ್ಲಿ ನಿರ್ಮಿಸಿದ ಕೀರ್ತಿ ಶಂಕರಾಚಾರ್ಯರಿಗೆ ಸಲ್ಲುತ್ತದೆ. ಇಂತಹ ಮಹಾನ್ ವ್ಯಕ್ತಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿ ವರ್ಷ ಜನ್ಮದಿನಾಚರಣೆಯನ್ನು ಆಚರಿಸಲಾಗುವುದು.

ಶಂಕರಾಚಾರ್ಯಯ ಜಯಂತಿಯ ಆಚರಣೆ:

ಶಂಕರಾಚಾರ್ಯಯ ಜಯಂತಿಯ ಆಚರಣೆ:

ಆಚರಣೆಗಳ ಕಪಿಮುಷ್ಠಿಯಿಂದ ಸನಾತನ ಧರ್ಮವನ್ನು ಹೊರತಂದ ಆದಿ ಶಂಕರಾಚಾರ್ಯರನ್ನು ಶಿವನ ಅವತಾರವೆಂದೂ ಅನೇಕ ಜನರು ಪರಿಗಣಿಸುತ್ತಾರೆ. ಈ ದಿನವನ್ನು ಅನೇಕ ದೇವಾಲಯಗಳು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಆಚರಿಸುತ್ತವೆ. ಕಡ್ಡಾಯ ಪ್ರಾರ್ಥನಾ ಸಭೆಗಳ ಹೊರತಾಗಿ, ತಾತ್ವಿಕ ಕೃತಿಗಳ ಕುರಿತು ಚರ್ಚೆಯನ್ನು ನಡೆಸಲಾಗುತ್ತದೆ. ಆದಿ ಶಂಕರರ ಕೃತಿಗಳ ತರಬೇತಿ ಶಿಬಿರಗಳು ಈ ದಿನದಿಂದ ಪ್ರಾರಂಭವಾಗುತ್ತವೆ.

ಶಂಕರಾಚಾರ್ಯರ ಕೆಲವು ಬೋಧನೆಗಳು:

ಶಂಕರಾಚಾರ್ಯರ ಕೆಲವು ಬೋಧನೆಗಳು:

ಅಜ್ಞಾನದ ನಾಶವೇ ಮೋಕ್ಷ

ಸರಿಯಾದ ಸಮಯದಲ್ಲಿ ದಾನ ಮಾಡುವುದು ಅಮೂಲ್ಯ

ಜೀವಿಗಳಿಗೆ ಸಹಾಯ ಮಾಡುವುದೇ ಸತ್ಯ

ಒಬ್ಬರ ಸ್ವಂತ ಶುದ್ಧ ಮನಸ್ಸು ಶ್ರೇಷ್ಠ ತೀರ್ಥಯಾತ್ರೆ

English summary

Shankaracharya jayanti 2022 Date, Time and Significance of Adi Shankaracharya Birth anniversary in Kannada

Here we talking about Shankaracharya jayanti 2022 Date, Time and Significance of Adi Shankaracharya birth anniversary in kannada, read on
Story first published: Friday, May 6, 2022, 11:41 [IST]
X
Desktop Bottom Promotion