For Quick Alerts
ALLOW NOTIFICATIONS  
For Daily Alerts

ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ

|

ಶನಿ ಧೈಯ್ಯಾ, ಶನಿ ದೋಷವಿದ್ದರೆ ಅದಕ್ಕೆ ಪರಿಹಾರ ಮಾಡಿ ಶನಿಯ ಕೆಟ್ಟ ದೃಷ್ಟಿ ಕಡಿಮೆ ಮಾಡಲು ಶನಿ ಜಯಂತಿ ತುಂಬಾ ಸೂಕ್ತವಾದ ದಿನವಾಗಿದೆ. ಮೇ 30, 2022 ಸೋಮವಾರದಂದು ಶನಿ ಜಯಂತಿಯನ್ನು ಆಚರಿಸಲಾಗುವುದು. ಪ್ರತಿ ವರ್ಷ ಜೇಷ್ಠ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ.

Shani Jayanti On May 30,

ಶನಿಯ ಸಾಡೇಸಾತಿ ಮತ್ತು ಧೈಯಾವನ್ನು ತಪ್ಪಿಸಲು, ಶನಿಯನ್ನು ಸಂತೋಷವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಶನಿಯ ಕೋಪಕ್ಕೆ ಗುರಿಯಾದರೆ ವ್ಯಾಪಾರದಲ್ಲಿ ನಷ್ಟ, ಕುಟುಂಬ ಜೀವನದಲ್ಲಿ ಅಶಾಂತಿ, ಅವಮಾನಕ್ಕೆ ಒಳಗಾಗುವುದು, ಮಾಡಿದ ನಿಮ್ಮ ಕಾರ್ಯದಲ್ಲಿ ಯಶಸ್ಸು ಕಾಣದಿರುವುದು ಹೀಗೆ ಅನೇಕ ಸಮಸ್ಯೆಗಳ ಎದುರಾಗುವುದು. ಆದ್ದರಿಂದ ಶನಿ ದೇವನ ಆರಾಧನೆ ಮಾಡಿ ಶನಿ ದೇವನ ಕೃಪೆಗೆ ಪಾತ್ರರಾದರೆ ಜೀವನದಲ್ಲಿ ಇರುವ ಸಮಸ್ಯೆ ದೂರಾಗುವುದು.

ಶನಿ ಜಯಂತಿಯಂದು ಪೂಜೆಗೆ ಮುಹೂರ್ತ

ಶನಿ ಜಯಂತಿಯಂದು ಪೂಜೆಗೆ ಮುಹೂರ್ತ

ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯು ಮೇ 29 ರ ಭಾನುವಾರ ಮಧ್ಯಾಹ್ನ 2:54 ಕ್ಕೆ ಪ್ರಾರಂಭವಾಗಿ ಮೇ 30 ರಂದು 4:59 ಕ್ಕೆ ಕೊನೆಗೊಳ್ಳಲಿದೆ. ಮೇ 30ರ ಸೋಮವಾರದಂದು ಸೂರ್ಯೋದ ನಂತರ ಶನಿ ಜಯಂತಿಯನ್ನು ಆಚರಿಸಲಾಗುವುದು. ಈ ದಿನ ಸುಕರ್ಮ ಯೋಗವಿದೆ, ಮತ್ತು ಬೆಳಗ್ಗೆಯಿಂದ ಸರ್ವಾರ್ಥ ಸಿದ್ಧಿ ಯೋಗವಿದೆ, ಶನಿದೇವರ ಆರಾಧನೆಯ ದಿನದಂದು ಅಭಿಜಿತ್ ಮುಹೂರ್ತವಿದೆ.

ಈ ಮಂತ್ರಗಳನ್ನು ಪಠಿಸಿ

ಈ ಮಂತ್ರಗಳನ್ನು ಪಠಿಸಿ

ಓಂ ಶನಿಶ್ಚರಾಯ ನಮಃ

ಓಂ ಪ್ರಾಂ ಪ್ರೇಂ ಸಾಧಕ: ಶನಿಶ್ಚರಾಯ ನಮಃ

ಶನಿ ಜಯಂತಿಯ ದಿನದಂದು ಈ ಮಂತ್ರಗಳನ್ನು ಪಠಿಸುವ ಮೂಲಕ ಶನಿದೇವನನ್ನು ಪೂಜಿಸಿ. ಇದರಿಂದ ನಿಮ್ಮ ಪಾಪಗಳೆಲ್ಲವೂ ತೊಳೆದುಹೋಗುತ್ತವೆ. ಮನೆಯಲ್ಲಿ ಶಾಂತಿ ಇರುತ್ತದೆ. ನಿಮ್ಮ ವ್ಯಾಪಾರ ಹೆಚ್ಚಾಗುತ್ತದೆ ಹಾಗೂ ಸಂಪತ್ತು ಹೆಚ್ಚಾಗುತ್ತದೆ.

 ಶನಿ ಸಾಡೆ ಸತಿ ಮತ್ತು ಧೈಯಾದಿಂದ ಮುಕ್ತಿ ಪಡೆಯಲು ಪರಿಹಾರಗಳು

ಶನಿ ಸಾಡೆ ಸತಿ ಮತ್ತು ಧೈಯಾದಿಂದ ಮುಕ್ತಿ ಪಡೆಯಲು ಪರಿಹಾರಗಳು

* ಶನಿ ಜಯಂತಿಯಂದು ಬೆಳಿಗ್ಗೆ ಸ್ನಾನ ಇತ್ಯಾದಿ ಮಾಡಿದ ನಂತರ ಆಲದ ಮರಕ್ಕೆ ನೀರನ್ನು ಅರ್ಪಿಸಿ 7 ಬಾರಿ ಪ್ರದಕ್ಷಿಣೆ ಮಾಡಿ. ಸಂಜೆ ಬಂದು ಸಂಜೆ ಸಾಸಿವೆಯೆಣ್ಣೆಯ ದೀಪವನ್ನು ಬೆಳಗಿಸಿ.

* ಶನಿ ಸಾಡೇ ಸಾತಿಯನ್ನು ತೊಡೆದುಹಾಕಲು, ಕಪ್ಪು ಕುದುರೆಯ ಉಗುರಿನಿಂದ ಮಾಡಿದ ಉಂಗುರವನ್ನು ಶನಿ ಜಯಂತಿಯಂದು ಸೂರ್ಯಾಸ್ತದ ಸಮಯದಲ್ಲಿ ಬಲಗೈಯ ಮಧ್ಯದ ಬೆರಳಿಗೆ ಧರಿಸಿ. ಇದರಿಂದ ನೀವು ಲಾಭ ಪಡೆಯುತ್ತೀರಿ.

* ಶನಿ ಜಯಂತಿಯಂದು ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಿ. ಏಕಕಾಲದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.

 ಶನಿ ಸಾಡೆ ಸತಿ ಮತ್ತು ಧೈಯಾದಿಂದ ಮುಕ್ತಿ ಪಡೆಯಲು ಪರಿಹಾರಗಳು

ಶನಿ ಸಾಡೆ ಸತಿ ಮತ್ತು ಧೈಯಾದಿಂದ ಮುಕ್ತಿ ಪಡೆಯಲು ಪರಿಹಾರಗಳು

* ಶನಿ ದೇವನನ್ನು ಪೂಜಿಸುವಾಗ ನೀಲಿ ಹೂವುಗಳನ್ನು ಅರ್ಪಿಸಿ. ಇದರೊಂದಿಗೆ, ರುದ್ರಾಕ್ಷದ ಜಪಮಾಲೆಯೊಂದಿಗೆ ಓಂ ಶನಿಶ್ಚರಾಯ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಇದು ಸಾಡೆ ಸತಿ ಮತ್ತು ಧೈಯಾದಿಂದ ಪರಿಹಾರವನ್ನು ನೀಡುತ್ತದೆ.

* ಈ ದಿನ ಶನಿದೇವನ ಆರಾಧನೆ ಜೊತೆಗೆ ಹನುಮಂತನನ್ನು ಶನಿ ದೋಷಗಳಿಂದ ಮುಕ್ತಿ ಪಡೆಯಬಹುದು.

ಶನಿವಾರದಂದು ಹಿಟ್ಟು, ಸಕ್ಕರೆ, ಕಪ್ಪು ಎಳ್ಳು ಬೆರೆಸಿ ಇರುವೆಗಳಿಗೆ ಆಹಾರ ನೀಡಿ.

* ಶನಿ ಜಯಂತಿಯಂದು ಕಪ್ಪು ಬಟ್ಟೆ, ಕಪ್ಪು ಎಳ್ಳು, ಹೊದಿಕೆ, ಕಬ್ಬಿಣದ ಪಾತ್ರೆಗಳು ಇತ್ಯಾದಿಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ.

* ಶನಿ ಜಯಂತಿಯಂದು ಅಸಹಾಯಕ ಜನರ ಸೇವೆ ಮಾಡುವ ಮೂಲಕ, ಅವರಿಗೆ ಸಹಾಯ ಮಾಡುವ ಮೂಲಕ, ನೀವು ಶನಿ ದೇವರನ್ನು ಮೆಚ್ಚಿಸಬಹುದು

English summary

Shani Jayanti On May 30, Daan Remedies for Sade Sati Dhaiya and Shani Dosh in kannada

Shani Jayanti On May 30 2022 Daan Remedies for Sade Sati Dhaiya and Shani Dosh in kannada, read on...
X
Desktop Bottom Promotion