For Quick Alerts
ALLOW NOTIFICATIONS  
For Daily Alerts

Shani Jayanti 2022 : ಶನಿ ದೋಷ ನಿವಾರಣೆ ಮಾಡುವ ಶನಿ ಜಯಂತಿ ಯಾವಾಗ? ಪೂಜಾ ವಿಧಿಗಳೇನು?

|

ಹಿಂದೂ ಧರ್ಮದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗಿದೆ. ಶನಿದೇವನು ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಕಾರ್ಯಗಳ ಫಲವನ್ನು ಖಂಡಿತವಾಗಿಯೂ ನೀಡುತ್ತಾನೆ ಎಂದು ನಂಬಲಾಗಿದೆ. ಶನಿದೇವನು ಒಳ್ಳೆಯ ಕಾರ್ಯಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ, ಅದೇ ಕೆಟ್ಟ ಕಾರ್ಯಗಳನ್ನು ಮಾಡಿದರೆ ಅದರ ಫಲವನ್ನೂ ನೀಡುತ್ತಾನೆ ಎಂದು ಹೇಳಲಾಗುತ್ತದೆ.

ಶನಿ ದೇವನ ಕೃಪೆಗೆ ಪಾತ್ರರಾದರೆ ಕಷ್ಟಗಳು ಕಡಿಮೆಯಾಗುವುದು, ಅದೇ ಶನಿಯ ವಕ್ರದೃಷ್ಟಿ ಬಿದ್ದರೆ ಅವನು ನೀಡುವ ಕಷ್ಟದಿಂದ ಪಾರಾಗುವುದು ತುಂಬಾನೇ ಕಷ್ಟ ಎಂದು ಹೇಳಲಾಗುವುದು. ಶನಿ ದೇವನನ್ನು ಶನಿವಾರ ಪೂಜಿಸಿದರೆ ಅವನ ಕೃಪೆಗೆ ಪಾತ್ರರಾಗಬಹುದು. ಅದರಲ್ಲೂ ಶನಿವಾರ ಅಮವಾಸ್ಯೆ ಬಂದರೆ ಶನಿ ಅಮವಾಸ್ಯೆಯೆಂದು ಆಚರಿಸಲಾಗುವುದು. ಈ ಬಾರಿ ಏಪ್ರಿಲ್‌ 30ಕ್ಕೆ ಶನಿ ಅಮವಾಸ್ಯೆ ಬಂದಿದೆ. ಇನ್ನು ಮುಂದಿನ ತಿಂಗಳು ಶನಿ ಜಯಂತಿ ಇದೆ. ಶನಿ ಜಯಂತಿಯಂದು ಶನಿ ಸಾಡೇಸಾತಿ ಇರುವವರು ಪೂಜಿಸುವುದರಿಂದ ಒಳಿತಾಗುವುದು.

ಶನಿ ಜಯಂತಿಯನ್ನು ಜ್ಯೇಷ್ಠ ಮಾಸದ (ಜ್ಯೇಷ್ಠ ಅಮಾವಾಸ್ಯೆ 2022) ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಶನಿ ಜಯಂತಿ ಯಾವಾಗ, ಪೂಜಾ ಮುಹೂರ್ತ ಹಾಗೂ ಪೂಜಾ ವಿಧಿಗಳ ಬಗ್ಗೆ ತಿಳಿಯೋಣ:

ಶನಿ ಜಯಂತಿ 2022 ದಿನಾಂಕ

ಶನಿ ಜಯಂತಿ 2022 ದಿನಾಂಕ

ಈ ಬಾರಿ ಶನಿ ಜಯಂತಿಯನ್ನು ಮೇ 30, 2022 ರಂದು ಆಚರಿಸಲಾಗುತ್ತದೆ. ಈ ದಿನ ಶನಿದೇವನನ್ನು ಶನೇಶ್ವರನ ದೇವಾಲಯಕ್ಕೆ ಹೋಗಿ ಪೂರ್ಣ ಭಕ್ತಿಯಿಂದ ಪೂಜಿಸುವುದರಿಂದ ಶನಿಯ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ.

ಶನಿ ಜಯಂತಿ 2022 ಶುಭ ಮುಹೂರ್ತ

ಶನಿ ಜಯಂತಿ 2022 ಶುಭ ಮುಹೂರ್ತ

ಶನಿ ಅಮವಾಸ್ಯೆ ತಿಥಿ ಪ್ರಾರಂಭ: ಅಮವಾಸ್ಯೆಯ ತಿಥಿಯು ಮೇ 29 ರಂದು ಮಧ್ಯಾಹ್ನ 2:54 ರಿಂದ ಪ್ರಾರಂಭವಾಗುತ್ತದೆ.

ಶನಿ ಅಮವಾಸ್ಯೆ ತಿಥಿ ಮುಕ್ತಾಯ: ಅಮಾವಾಸ್ಯೆಯ ದಿನಾಂಕವು ಮೇ 30 ರಂದು ಸಂಜೆ 4:59 ಕ್ಕೆ ಕೊನೆಗೊಳ್ಳುತ್ತದೆ

ಶನಿ ಪೂಜಾ ವಿಧಿ

ಶನಿ ಪೂಜಾ ವಿಧಿ

* ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನ ಮಾಡಬೇಕು. ಅದರ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ. ಶನಿದೇವನನ್ನು ಸ್ಮರಿಸಿ ಸಂಕಲ್ಪ ಮಾಡಿ ಉಪವಾಸ ಪ್ರಾರಂಭಿಸಿ.

* ನಂತರ ಕಪ್ಪು ಬಟ್ಟೆ ಧರಿಸಿ ಶನಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆಯನ್ನು ಮಾಡಿಸಿ. ಪೂಜೆಯ ವಿಧಿ-ವಿಧಾನಗಳು ತಿಳಿದಿದ್ದರೆ ಮನೆಯಲ್ಲಿಯೂ ಮಾಡಬಹುದು. ದೇವಾಲಯಕ್ಕೆ ಹೋಗುವಾಗ ಸಾಸಿವೆಯೆಣ್ಣೆ, ಕಪ್ಪು ಎಳ್ಳು ಕೊಂಡೊಯ್ಯಿರಿ. ಬಡವರಿಗೆ ಕಪ್ಪು ವಸ್ತ್ರ ಅಥವಾ ಕಂಬಳಿಯನ್ನು ದಾನ ಮಾಡಿದರೆ ಒಳ್ಳೆಯದು.

English summary

Shani Jayanti 2022 Date, Shubh Muhurat, Rituals, Puja Vidhi, Mantra and Significance in Kannada

Shani Jayanti 2022 Date, Shubh Muhurat, Rituals, Puja Vidhi, Mantra and Significance in Kannada, read on...
X
Desktop Bottom Promotion