For Quick Alerts
ALLOW NOTIFICATIONS  
For Daily Alerts

ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ

|

ಆಗಸ್ಟ್‌ 18ಕ್ಕೆ ಕೃಷ್ಣ ಜನ್ಮಾಷ್ಟಮಿ ಹಬ್ಬದ ಸಡಗರ. ದೇಶದೆಲ್ಲಡೆ ಈ ಹಬ್ಬನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುವುದು. ಈ ಹಬ್ಬದಲ್ಲಿ ಕೃಷ್ಣನಿಗೆ ಪೂಜೆಯ ಜೊತೆಗೆ ಮುದ್ದು ಮಕ್ಕಳಿಗೆ ಕೃಷ್ಣ-ರಾಧೆ ವೇಷವನ್ನು ಹಾಕಿ ಕಣ್ತುಂಬಿಕೊಳ್ಳುವುದೇ ಸಂಭ್ರಮ.

Krishna Janmashtami

ಕೃಷ್ಣನು ಶ್ರೀ ವಿಷ್ಣುವಿನ ಎಂಟನೇ ಅವತಾರ ಎಂದು ಹೇಳಲಾಗುವುದು, ಹಿಂದೂ ಪಂಚಾಂಗದ ಪ್ರಕಾರ ಶ್ರೀಕೃಷ್ಣನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಎಂಟನೇ ಅಷ್ಟಮಿಯಂದು ಜನಿಸಿದ. ಈ ವರ್ಷ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 18ಕ್ಕೆ ಬಂದಿದೆ.

ಶ್ರೀಕೃಷ್ಣನನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿ ಬದುಕಿನಲ್ಲಿ ನೆಮ್ಮದಿ, ಪ್ರೀತಿಯನ್ನು ಕರುಣಿಸುತ್ತಾನೆ, ಎಂಥದ್ದೇ ಕಷ್ಟಕರ ಸಂದರ್ಭದಲ್ಲಿಯೂ ನಮ್ಮನ್ನು ರಕ್ಷಣೆ ಮಾಡುತ್ತಾನೆ ಎಂಬವುದು ಅವನ ಭಕ್ತರ ಅಚಲ ನಂಬಿಕೆ.

ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ಮಾಡಿದರೆ ತುಂಬಾ ಒಳ್ಳೆಯದು, ವರ್ಷದಲ್ಲಿ ಮಾಡುವ ಉಪವಾಸದ ಫಲ ಈ ದಿನ ಮಾಡುವ ಉಪವಾಸದಿಂದ ಸಿಗುತ್ತದೆ. ಆದ್ದರಿಂದ ಕೃಷ್ಣ ಜನ್ಮಾಷ್ಟಮಿಗೆ ಮಾಡುವ ಉಪವಾಕ್ಕೆ ವ್ರತರಾಜ್ ಸ್ಥಾನಮಾನ ನೀಡಲಾಗಿದೆ. ಇದರಿಂದ ಕಷ್ಟಗಳು ದೂರಾಗುವುದು, ಸಂತೋಷ, ಸಮೃದ್ಧಿ ಹೆಚ್ಚುವುದು.

ಅಲ್ಲದೆ ಈ ದಿನ ಉಪವಾಸ ವ್ರತ ಮಾಡಿ ಶ್ರೀಕೃಷ್ಣನಿಗೆ ಪೂಜೆ ಮಾಡಿದರೆ ಶನಿದೋಷಕ್ಕೆ ಕೂಡ ಪರಿಹಾರ ಮಾಡಿದಂತಾಗುವುದು.

ಹೆಚ್ಚಿನ ಪರಿಹಾರಕ್ಕೆ ಕೃಷ್ಣ ಜನ್ಮಾಷ್ಟಮಿಯಂದು ಏನೆಲ್ಲಾ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಕೃಷ್ಣ ಜನ್ಮಾಷ್ಟಮಿ ದಿನಾಂಕ ಹಾಗೂ ಮುಹೂರ್ತ

ಕೃಷ್ಣ ಜನ್ಮಾಷ್ಟಮಿ ದಿನಾಂಕ ಹಾಗೂ ಮುಹೂರ್ತ

ದಿನಾಂಕ: ಆಗಸ್ಟ್‌ 18 ಮತ್ತು 19, 2022

ಪೂಜೆಗೆ ಮುಹೂರ್ತ: ಆಗಸ್ಟ್‌ 18 ಮಧ್ಯರಾತ್ರಿ 12:03ರಿಂದ 12: 47 (ಇಂಗ್ಲಿಷ್ ಟೈಮಿಂಗ್‌ (12:03 am to 12:47 am)

ಪೂಜೆಗೆ ಸಮಯ: 44 ನಿಮಿಷ

ಅಷ್ಟಮಿ ಪ್ರಾರಂಭ: ಆಗಸ್ಟ್‌ 18 ರಾತ್ರಿ 9:20ಕ್ಕೆ

ಅಷ್ಟಮಿ ಮುಕ್ತಾಯ: ಆಗಸ್ಟ್ 19 ರಾತ್ರಿ 10:59ಕ್ಕೆ

 ಶನಿದೋಷ ನಿವಾರಣೆಗೆ ಜನ್ಮಾಷ್ಟಮಿ ಪೂಜೆ

ಶನಿದೋಷ ನಿವಾರಣೆಗೆ ಜನ್ಮಾಷ್ಟಮಿ ಪೂಜೆ

ಶನಿದೋಷ ಇರುವವರು ಶನಿಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ಜನ್ಮಾಷ್ಟಮಿ ಪೂಜೆ ಮಾಡಿದರೆ ಒಳ್ಳೆಯದು. ಜ್ಯೋತಿಷ್ಯ ಪ್ರಕಾರ ಶನಿ ದೇವನಿಗೂ ಸಂಖ್ಯೆ 8ಕ್ಕೂ ಸಂಬಂಧವಿದೆ. ಶ್ರೀವಿಷ್ಣುವಿನ 8ನೇ ಅವತಾರವಾಗಿರುವ ಶ್ರೀಕೃಷ್ಣ ಜನಿಸಿರುವುದು ಕೂಡ ಅಷ್ಟಮಿಯಂದು, ಅಲ್ಲದೆ ದೇವಕ್ಕಿಯ 8ನೇ ಮಗು.

ಅಲ್ಲದೆ ಶನಿ ದೇವ ಶ್ರೀಕೃಷ್ಣ ಭಕ್ತ. ಆದ್ದರಿಂದ ಶ್ರೀಕೃಷ್ಣನನ್ನು ಪೂಜಿಸಿದರೆ ಶನಿದೇವ ಖುಷಿಯಾಗಿ ತನ್ನ ಕೆಟ್ಟ ದೃಷ್ಟಿ ಬೀರುವುದನ್ನು ನಿಲ್ಲಿಸುತ್ತಾನೆ. ಆದ್ದರಿಂದ ಶನಿದೋಷ ಅಥವಾ ಶನಿ ಸಾಡೇಸಾತಿ ಇದ್ದರೆ ಕೃಷ್ಣ ಜನ್ಮಾಷ್ಟಮಿಯಂದು ಉಪವಾಸವಿದ್ದು ಶ್ರೀ ಕೃಷ್ಣನನ್ನು ಪೂಜಿಸಿ.

ಜನ್ಮಾಷ್ಟಮಿಯಂದು ಈ ಪರಿಹಾರಗಳನ್ನು ಮಾಡಿ

ಜನ್ಮಾಷ್ಟಮಿಯಂದು ಈ ಪರಿಹಾರಗಳನ್ನು ಮಾಡಿ

* ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿಸಲು ಶ್ರೀ ಕೃಷ್ಣನಿಗೆ ಸಿಹಿ ಕಡುಬು ನೈವೇದ್ಯವಾಗಿ ಇಡಿ.

* ಶ್ರೀ ಕೃಷ್ಣನಿಗೆ 8 ಬಗೆಯೆ ಹೂಗಳನ್ನು ಅರ್ಪಿಸುವುದರಿಂದ ಸಂತೋಷ, ಸಮೃದ್ಧಿ ಹೆಚ್ಚುವುದು.

* ದೇವಾಲಯಕ್ಕೆ ಬೆಳ್ಳಿಯ ಕೊಳಲು ನೀಡಿದರೆ ಒಳಿತಾಗುವುದು

* ಈ ದಿನ ಶ್ರೀಕೃಷ್ಣ ಹಾಗೂ ರಾಧೆಯ ಮಂತ್ರಗಳನ್ನು ಪಠಿಸಿ.

English summary

Shani Dosh: Special Remedies to Perform on Krishna Janmashtami

How to eliminate shani dosh by janmashtami puja and special remedies to perform to gain benefits, read on...
Story first published: Wednesday, August 17, 2022, 8:47 [IST]
X
Desktop Bottom Promotion