For Quick Alerts
ALLOW NOTIFICATIONS  
For Daily Alerts

ವೆಂಕಟೇಶ್ವರ ದೇವರ ಮೂರ್ತಿಯ ಕೆಲವೊಂದು ರಹಸ್ಯಗಳು

By Lekhaka
|

ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳಿರುವ ರಾಜ್ಯವೆಂದರೆ ತಮಿಳುನಾಡು. ಆದರೆ ಅತಿ ಹೆಚ್ಚು ಶ್ರೀಮಂತ ದೇವಾಲಯವೆಂದರೆ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ವೆಂಕಟೇಶ್ವರ ದೇವಾಲಯ. ತಿರುಪತಿಯ ಬಳಿ ಇರುವ ತಿರುಮಲ ಬೆಟ್ಟದ ತುದಿಯಲ್ಲಿರುವ ಈ ದೇವಸ್ಥಾನ ಒಂದು ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುವ ಮತ್ತು ಭಾರತದಲ್ಲಿಯೇ ಅತಿ ಹೆಚ್ಚು ದೇಣಿಗೆಯನ್ನು ದಾನರೂಪದಲ್ಲಿ ಸ್ವೀಕರಿಸುವ ದೇವಾಲಯವಾಗಿದೆ. ತಿರುಮಲ ಪ್ರದೇಶದಲ್ಲಿರುವ ಒಟ್ಟು ಏಳು ಬೆಟ್ಟಗಳಲ್ಲಿ ಒಂದಾದ ವೆಂಕಟಾದ್ರಿ ಬೆಟ್ಟದ ಮೇಲೆ ಈ ದೇವಸ್ಥಾನವಿರುವ ಕಾರಣಕ್ಕೇ ಇದಕ್ಕೆ ಏಳು ಬೆಟ್ಟಗಳ ದೇವಸ್ಥಾನ ಎಂಬ ಅನ್ವರ್ಥನಾಮವೂ ಬಂದಿದೆ.

ವೆಂಕಟೇಶ್ವರನಿಗೆ ವೆಂಕಟಾಚಲಪತಿ, ಶ್ರೀನಿವಾಸ, ಬಾಲಾಜಿ, ತಿರುಪತಿ ತಿಮ್ಮಪ್ಪಎಂಬ ಇತರ ಹೆಸರುಗಳೂ ಇವೆ. ವೆಂಕಟೇಶ್ವರನು ದೇವರ ಒಂದು ಅವತಾರವಾಗಿದ್ದು ಈತನಲ್ಲಿ ಬೇಡಿಕೊಂಡ ಯಾವುದೇ ಹರಕೆ ಫಲಿಸದೇ ಇರುವುದಿಲ್ಲ ಎಂಬ ಕಾರಣಕ್ಕೆ ನಿತ್ಯವೂ ಲಕ್ಷಾಂತರ ಭಕ್ತರು ತಿರುಪತಿಗೆ ಆಗಮಿಸಿ ತಮ್ಮ ಶಕ್ತ್ಯಾನುಸಾರ ಯಾವುದಾದರೊಂದು ಕಾಣಿಕೆಯನ್ನು ನೀಡುತ್ತಾರೆ. ಈ ಕಾಣಿಕೆಗಳ ವೈವಿಧ್ಯವೂ ಅಚ್ಚರಿ ಮೂಡಿಸುವಂತಿದೆ. ತಿರುಮಲ ವೆಂಕಟೇಶ್ವರ ದೇವರ ಮಹಿಮೆ ಗೊತ್ತೇನು?

ಚಿನ್ನ ಬೆಳ್ಳಿ ಧನ ಕನಕಗಳು ಹೇರಳವಾಗಿದ್ದರೂ ಇಲ್ಲದವರು ಸಹಾ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸೈಕಲ್, ಬಾಣಲೆ ಇತ್ಯಾದಿಗಳನ್ನೂ ದೇವರಿಗೆ ಅರ್ಪಿಸಿರುವುದನ್ನು ಆಗಾಗ ವರದಿಗಳ ಮೂಲಕ ಕೇಳಿರುತ್ತೇವೆ. ಆದರೆ ಇವೆಲ್ಲಾ ನಮಗೆ ಸರ್ವೇಸಾಮಾನ್ಯವಾಗಿ ತಿಳಿದಿರುವ ವಿಷಯಗಳಾದರೆ ದೇವಸ್ಥಾನದ ಕುರಿತು ನಮಗೆ ತಿಳಿಯದಿರದ ಹತ್ತು ಹಲವಾರು ಮಾಹಿತಿಗಳಿವೆ. ಮೈನವಿರೇಳಿಸುವಂತಹ ಇಂತಹ ಅಮೂಲ್ಯವಾದ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾಗಿದೆ...

ವೆಂಕಟೇಶ್ವರನಿಗೇ ಪೆಟ್ಟು ನೀಡಿದ ಬೆತ್ತ!

ವೆಂಕಟೇಶ್ವರನಿಗೇ ಪೆಟ್ಟು ನೀಡಿದ ಬೆತ್ತ!

ಪ್ರಧಾನ ಬಾಗಿಲಿನ ಅಥವಾ ಮುಖ್ಯದ್ವಾರದ ಬಲದಿಯಲ್ಲಿ ಒಂದು ಬೆತ್ತವಿದೆ. ಈ ಬೆತ್ತವನ್ನು ಶಿಕ್ಷಕ ಅನಂತಾಲವರ್ ರವರು ವೆಂಕಟೇಶ್ವರ ಸ್ವಾಮಿ ಬಾಲಕನಾಗಿದ್ದಾಗ ಶಿಕ್ಷಣದ ಸಮಯದಲ್ಲಿ ಹೊಡೆಯಲು ಉಪಯೋಗಿಸುತ್ತಿದ್ದರು ಎಂದು ತಿಳಿದುಬರುತ್ತದೆ. ಒಮ್ಮೆ ಹೀಗೇ ಹೊಡೆಯುವ ಭರದಲ್ಲಿ ಅಕಸ್ಮಾತ್ತಾಗಿ ಬಾಲಕ ವೆಂಕಟೇಶ್ವರನ ಕೆನ್ನೆಗೆ ತಾಕಿ ಗಾಯವಾಗಿತ್ತಂತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವೆಂಕಟೇಶ್ವರನಿಗೇ ಪೆಟ್ಟು ನೀಡಿದ ಬೆತ್ತ!

ವೆಂಕಟೇಶ್ವರನಿಗೇ ಪೆಟ್ಟು ನೀಡಿದ ಬೆತ್ತ!

ಆಗ ಇದಕ್ಕೆ ಶಮನ ನೀಡಲು ಗಂಧವನ್ನು ತೇದಿದ ಲೇಪನವನ್ನು ಹಚ್ಚಿದ್ದರಂತೆ. ಇದೇ ಕಾರಣಕ್ಕೆ ಇಂದಿಗೂ ಬಾಲಾಜಿಯ ಮೂರ್ತಿಯ ಕೆನ್ನೆಗೆ ಗಂಧದ ಲೇಪನವನ್ನು ಹಚ್ಚುವುದು ಒಂದು ಸಂಪ್ರದಾಯದಂತೆ ಮುಂದುವರೆದುಕೊಂಡು ಬಂದಿದೆ.

ವಿಗ್ರಹದ ಕೂದಲು ನಿಜವಾದುದು

ವಿಗ್ರಹದ ಕೂದಲು ನಿಜವಾದುದು

ವೆಂಕಟೇಶ್ವರ ಸ್ವಾಮಿಯ ವಿಗ್ರಹದ ತಲೆಗೂದಲು ನಿಜವಾದ ತಲೆಗೂದಲಿನಂತೆಯೇ ಇದ್ದು ಇದು ಎಂದಿಗೂ ಸಿಕ್ಕುಗೊಳ್ಳದೇ ಇರುವುದು ಮತ್ತು ರೇಶ್ಮೆಯಂತೆ ನುಣುಪಾಗಿಯೇ ಇರುವುದು ಇಂದಿಗೂ ಅರಿಯಲಾಗದ ಚಿದಂಬರ ರಹಸ್ಯವಾಗಿದೆ.

ಗ್ರಾಮದಿಂದ ಮಾತ್ರ ದೇವರಿಗೆ ನೈವೇದ್ಯ ಸಾಮಾಗ್ರಿಗಳು

ಗ್ರಾಮದಿಂದ ಮಾತ್ರ ದೇವರಿಗೆ ನೈವೇದ್ಯ ಸಾಮಾಗ್ರಿಗಳು

ಬಾಲಾಜಿಗೆ ನೈವೇದ್ಯವಾಗಿ ಅರ್ಪಿಸಲು ಬಳಸಲಾಗುವ ಹಾಲು, ಹೂವು, ಬೆಣ್ಣೆ, ತುಪ್ಪು ಮೊದಲಾದವುಗಳನ್ನು ತಿರುಮಲದಿಂದ ಇಪ್ಪತ್ತಮೂರು ಕಿ.ಮೀ ದೂರವಿರುವ ಗ್ರಾಮವೊಂದರಿಂದ ಶತಮಾನಗಳಿಂದ ತರಲಾಗುತ್ತದೆ. ಈ ಗ್ರಾಮದಿಂದ ಬಿಟ್ಟರೆ ಬೇರೆ ಯಾವುದೇ ಮನೆಯ ಸಾಮಾಗ್ರಿಯನ್ನು ಬಳಸಿಕೊಳ್ಳಲಾಗುವುದಿಲ್ಲ. ಸ್ವಾರಸ್ಯವೆಂದರೆ ಈ ಗ್ರಾಮಕ್ಕೆ ಆ ಗ್ರಾಮದ ನಿವಾಸಿಗಳನ್ನು ಬಿಟ್ಟು ಬೇರೆ ಯಾರಿಗೂ ಪ್ರವೇಶವೇ ಇಲ್ಲ! ಈ ಗ್ರಾಮಸ್ಥರೆಲ್ಲಾ ಇಂದಿಗೂ ಆ ಕಾಲದ ಕಟ್ಟುಪಾಡುಗಳನ್ನು ಕಟ್ಟುನಿಟ್ಟಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಗ್ರಾಮಸ್ಥರು ಸೊಂಟದಿಂದ ಮೇಲೆ ವಸ್ತ್ರವನ್ನು ತೊಡುವುದಿಲ್ಲ.

ಗರ್ಭಗುಡಿಯ ಮೂಲೆಯಲ್ಲಿರುವ ವಿಗ್ರಹ

ಗರ್ಭಗುಡಿಯ ಮೂಲೆಯಲ್ಲಿರುವ ವಿಗ್ರಹ

ಸಾಮಾನ್ಯವಾಗಿ ದೇವರ ವಿಗ್ರಹ ಗರ್ಭಗುಡಿಯ ಕೇಂದ್ರಭಾಗದಲ್ಲಿರುತ್ತದೆ. ಆದರೆ ಈ ದೇವಸ್ಥಾನದಲ್ಲಿ ಸ್ವಾಮಿ ವೆಂಕಟೇಶ್ವರನ ಮೂರ್ತಿ ಗರ್ಭಗುಡಿಯ ಬಲಮೂಲೆಯಲ್ಲಿದೆ. ಇದನ್ನು ಗರ್ಭಗುಡಿಯ ಹೊರಗಿನಿಂದ ಒಂದು ಕೋನದಿಂದ ನೋಡಿದರೆ ಸ್ಪಷ್ಟವಾಗುತ್ತದೆ.

ಪ್ರತಿದಿನವೂ ದೇವರಿಗೆ ಹೊಸ ಧೋತಿ ಮತ್ತು ಸೀರೆ

ಪ್ರತಿದಿನವೂ ದೇವರಿಗೆ ಹೊಸ ಧೋತಿ ಮತ್ತು ಸೀರೆ

ದೇವರ ಮೂರ್ತಿಯನ್ನು ಪ್ರತಿದಿನವೂ ಹೊಸ ಮತ್ತು ಪವಿತ್ರ ಧೋತಿ (ಸೊಂಟದಿಂದ ಕೆಳಗೆ) ಮತ್ತು ಸೀರೆ (ಎದೆಯಭಾಗದಲ್ಲಿ) ಗಳಿಂದ ಅಲಂಕರಿಸಲಾಗುತ್ತದೆ. ಮರುದಿನ ಹೊಸಬಟ್ಟೆಯನ್ನು ತೊಡಿಸುವಾಗ ನಿವಾರಿಸಿದ ನಿನ್ನೆಯ ಉಡುಪುಗಳನ್ನು ಪವಿತ್ರ ಎಂದು ಭಾವಿಸಲಾಗುತ್ತದೆ ಹಾಗೂ ಇವುಗಳನ್ನು ವಿಶೇಷ ಪೂಜೆ ಸಲ್ಲಿಸಿದ ನೂತನ ದಂಪತಿಗಳಿಗೆ ಅರ್ಪಿಸಲಾಗುತ್ತದೆ. ಇದರಿಂದ ಅವರ ದಾಂಪತ್ಯ ಜೀವನ ಸಾವಿನವರೆಗೂ ಸುಖಕರವಾಗಿರುತ್ತದೆ ಎಂದು ಭಕ್ತರು ನಂಬುತ್ತಾರೆ.

ಪೂಜೆಯ ಹೂವುಗಳು ಜಲಪಾತಕ್ಕೆ

ಪೂಜೆಯ ಹೂವುಗಳು ಜಲಪಾತಕ್ಕೆ

ಗರ್ಭಗುಡಿಯಲ್ಲಿ ದೇವರ ಪೂಜೆಗಾಗಿ ಬಳಸಲ್ಪಡುವ ಹೂವುಗಳನ್ನು ಅಲ್ಲಿಂದ ಹೊರತರುವ ಮಾತೇ ಇಲ್ಲ. ಏಕೆಂದರೆ ಗರ್ಭಗುಡಿಯ ಹಿಂಭಾಗದಲ್ಲಿ ಚಿಕ್ಕ ಜಲಪಾತವೊಂದಿದ್ದು ಗರ್ಭಗುಡಿಯಿಂದ ನೀರು ನೇರವಾಗಿ ಕೆಳಕ್ಕೆ ಧಾವಿಸುತ್ತದೆ. ಈ ನೀರಿನ ಮೂಲಕವೇ ಎಲ್ಲಾ ಹೂವುಗಳನ್ನು ವಿಸರ್ಜಿಸಲಾಗುತ್ತದೆ.

ವಿಸರ್ಜಿಸಿದ ಹೂವುಗಳು ಮತ್ತೆ ಪ್ರತ್ಯಕ್ಷವಾಗುವುದು ಇಪ್ಪತ್ತು ಕಿ.ಮೀ ದೂರದಲ್ಲಿ

ವಿಸರ್ಜಿಸಿದ ಹೂವುಗಳು ಮತ್ತೆ ಪ್ರತ್ಯಕ್ಷವಾಗುವುದು ಇಪ್ಪತ್ತು ಕಿ.ಮೀ ದೂರದಲ್ಲಿ

ಆತ್ಮ ಶರೀರವನ್ನು ತೊರೆದ ಬಳಿಕ ಹಿಂದೆ ನೋಡುವ ಪ್ರಮೇಯ ಬರುವುದಿಲ್ಲವಂತೆ. ಇದೇ ರೀತಿಯಲ್ಲಿ ಸ್ವಾಮಿಯ ಪೂಜೆಗಾಗಿ ಉಪಯೋಗಿಸಿದ ಹೂವುಗಳನ್ನು ಸ್ವಾಮಿಯ ವಿಗ್ರಹ ಹಿಂಭಾಗದ ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಪೂಜೆಯ ವೇಳೆಯಲ್ಲಿ ಪೂಜಾರಿಗಳು ಆ ದಿನವಿಡೀ ದೇವರ ವಿಗ್ರಹದ ಹಿಂಭಾಗವನ್ನು ನೋಡುವುದಿಲ್ಲ. ಇತ್ತ ವಿಸರ್ಜಿಸಲ್ಪಟ್ಟ ಹೂವುಗಳು ಮತ್ತೆ ಪ್ರತ್ಯಕ್ಷವಾಗುವುದು ಇಲ್ಲಿಂದ ಇಪ್ಪತ್ತು ಕಿ.ಮೀ ದೂರವಿರುವ ವೇರ್ಪಡು ಎಂಬ ಸ್ಥಳದಲ್ಲಿ. ಈ ಸ್ಥಳ ತಿರುಪತಿಯಿಂದ ಕಾಳಹಸ್ತಿ ಎಂಬಲ್ಲಿಗೆ ಹೋಗುವ ದಾರಿಯಲ್ಲಿದೆ.

ಸದಾ ತೇವವಾಗಿರುವ ಸ್ವಾಮಿಯ ಬೆನ್ನು

ಸದಾ ತೇವವಾಗಿರುವ ಸ್ವಾಮಿಯ ಬೆನ್ನು

ದೇವರ ವಿಗ್ರಹವನ್ನು ಎಷ್ಟು ಸ್ವಚ್ಛಗೊಳಿಸಿದರೂ ಬೆನ್ನಿನ ಭಾಗ ಸದಾ ತೇವವಾಗಿರುವುದು ಒಂದು ವಿಸ್ಮಯವಾಗಿದೆ. ಒಂದು ವೇಳೆ ಬೆನ್ನಿನ ಭಾಗಕ್ಕೆ ಕಿವಿಗೊಟ್ಟು ಆಲಿಸಿದರೆ ಸಮುದ್ರದ ಅಲೆಗಳ ಸದ್ದನ್ನು ಕೇಳಬಹುದು ಎಂದು ಹೇಳಲಾಗುತ್ತದೆ.

ಲೇಪನ ನಿವಾರಿಸಿದ ಬಳಿಕ ಉಳಿಯುವ ದೇವಿಯ ಚಿತ್ರ

ಲೇಪನ ನಿವಾರಿಸಿದ ಬಳಿಕ ಉಳಿಯುವ ದೇವಿಯ ಚಿತ್ರ

ದೇವರ ಹೃದಯದಲ್ಲಿ ಲಕ್ಷ್ಮಿದೇವಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಪ್ರತಿ ಗುರುವಾರದಂದು ನಡೆಯುವ ನಿಜರೂಪ ದರ್ಶನಂ ಕಾರ್ಯಕ್ರಮದಲ್ಲಿ ಸ್ವಾಮಿಯ ವಿಗ್ರಹವನ್ನು ಬಿಳಿಯ ಮರದ ಕೊರಡನ್ನು ತೇದಿದ ಲೇಪನದಿಂದ ಅಲಂಕರಿಸಲಾಗುತ್ತದೆ. ಕಾರ್ಯಕ್ರಮದ ಬಳಿಕ ಒಣಗಿದ ಈ ಲೇಪನವನ್ನು ಸಿಪ್ಪೆಯಂತೆ ತೆಗೆದು ನಿವಾರಿಸಿದಾಗ ಒಳಭಾಗದಲ್ಲಿ ಲಕ್ಷ್ಮೀದೇವಿಯ ಚಿತ್ರದ ಬಿಂಬವಿರುವುದು ಗೋಚರಿಸುತ್ತದೆ. ಈ ಚಿತ್ರವನ್ನು ಬಳಿಕ ದೇವಾಲಯದ ಅಧಿಕಾರಿಗಳು ಮಾರಾಟ ಮಾಡುತ್ತಾರೆ.

ಸಾವಿರಾರು ವರ್ಷಗಳಿಂದ ಬೆಳಗುತ್ತಿರುವ ದೀಪಗಳು

ಸಾವಿರಾರು ವರ್ಷಗಳಿಂದ ಬೆಳಗುತ್ತಿರುವ ದೀಪಗಳು

ಸ್ವಾಮಿಯ ವಿಗ್ರಹದೆದುದು ಉರಿಯುತ್ತಿರುವ ದೀಪ ಸಾವಿರಾರು ವರ್ಷಗಳಿಂದ ಉರಿಯುತ್ತಲೇ ಇದ್ದು ಇದು ನಂದಿದ್ದನ್ನು ಯಾರೂ ಕಂಡಿಲ್ಲ. ಅಷ್ಟೇ ಅಲ್ಲ, ಈ ದೀಪವನ್ನು ಯಾವಾಗ ಬೆಳಗಿಸಲಾಯಿತು ಎಂದು ಸ್ಪಷ್ಟವಾಗಿ ಹೇಳಲೂ ಸಾಧ್ಯವಿಲ್ಲ.

ಹನ್ನೆರಡು ವರ್ಷಗಳ ಕಾಲ ಮುಚ್ಚಿದ್ದ ದೇವಾಲಯ

ಹನ್ನೆರಡು ವರ್ಷಗಳ ಕಾಲ ಮುಚ್ಚಿದ್ದ ದೇವಾಲಯ

ಇಂದು ಈ ದೇವಾಲಯ ಒಂದು ಕ್ಷಣವೂ ಮುಚ್ಚದೇ ಇದ್ದರು 1800ರಲ್ಲಿ ಹನ್ನೆರಡು ವರ್ಷಗಳ ಅವಧಿಗಾಗಿ ಮುಚ್ಚಿದ್ದುದು ದೇವಾಲಯದ ಇತಿಹಾಸದಲ್ಲಿ ದಾಖಲಾಗಿದೆ. ಈ ಸಮಯದಲ್ಲಿ ತಿರುಪತಿಯನ್ನು ಆಳುತ್ತಿದ್ದ ರಾಜನು ರಾಜದ್ರೋಹದ ಆರೋಪದ ಮೇಲೆ ವರ್ಷಕ್ಕೊಬ್ಬರಂತೆ ಹನ್ನೆರಡು ಜನರಿಗೆ ಸಾವಿನ ಶಿಕ್ಷೆ ವಿಧಿಸಿದ್ದ. ನೇಣು ಹಾಕಿದ ಇವರ ಶವಗಳನ್ನು ದೇವಾಲಯದ ಗೋಡೆಗಳಿಗೆ ತೂಗು ಹಾಕಿದ್ದ ಎಂದು ಇತಿಹಾಸದಲ್ಲಿ ತಿಳಿಸಲಾಗಿದೆ. ಇದೇ ಸಮಯದಲ್ಲಿ ಗರ್ಭಗುಡಿಯ ಮೇಲಿರುವ ಗೋಪುರದಲ್ಲಿ ಗರ್ಭಗುಡಿಯಲ್ಲಿರುವಂತಹದ್ದೇ ಆದರೆ ಗಾತ್ರದಲ್ಲಿ ಚಿಕ್ಕದಾದ ವಿಮಾನ ವೆಂಕಟೇಶ್ವರ ಸ್ವಾಮಿಯ ವಿಗ್ರಹ ಗೋಚರವಾಗಿತ್ತಂತೆ.

ಸ್ವಾಮಿಯ ವಿಗ್ರಹದೆದುರು ಸೋಲೊಪ್ಪುವ ಕರ್ಪೂರ

ಸ್ವಾಮಿಯ ವಿಗ್ರಹದೆದುರು ಸೋಲೊಪ್ಪುವ ಕರ್ಪೂರ

ಪಛೈ ಕರ್ಪೂರಂ ಎಂಬುದು ಒಂದು ವಿಧದ ಕರ್ಪೂರವಾಗಿದ್ದು (Cinnamomum camphora) ಥಟ್ಟನೇ ಹೊತ್ತಿ ಉರಿಯವ ವಸ್ತುವಾಗಿದೆ. ಈ ಕರ್ಪೂರವನ್ನು ಯಾವುದೇ ಕಲ್ಲಿಗೆ ಹಚ್ಚಿದರೆ ಕೆಲವೇ ಹೊತ್ತಿನಲ್ಲಿ ಕಲ್ಲಿನಲ್ಲಿ ಬಿರುಕು ಮೂಡುತ್ತದೆ. ಆದರೆ ಈ ಕರ್ಪೂರವನ್ನು ನಿತ್ಯವೂ ದೇವರ ವಿಗ್ರಹಕ್ಕೆ ಲೇಪನದಂತೆ ಸಾವಿರಾರು ವರ್ಷಗಳಿಂದ ಹಚ್ಚುತ್ತಾ ಬಂದಿದ್ದರೂ ಇದುವರೆಗೂ ಯಾವುದೇ ಹಾನಿಯಾಗಿಲ್ಲ.

ಸದಾ ಒಂದೇ ತಾಪಮಾನದಲ್ಲಿರುವ ವಿಗ್ರಹ

ಸದಾ ಒಂದೇ ತಾಪಮಾನದಲ್ಲಿರುವ ವಿಗ್ರಹ

ಯಾವುದೇ ವಸ್ತುವಿನ ಮೇಲೆ ಬೀಳುವ ದ್ರವದ ತಾಪಮಾನಕ್ಕೆ ಅನುಗುಣವಾಗಿ ಆ ವಸ್ತುವೂ ಬಿಸಿ ಅಥವಾ ತಣ್ಣಗಾಗುತ್ತದೆ. ಆದರೆ ಪ್ರತಿದಿನ ಮುಂಜಾನೆ ನಾಲ್ಕೂವರೆಗೇ ದೇವರ ವಿಗ್ರಹವನ್ನು ನೀರು ಮತ್ತು ಹಾಲಿನಿಂದ ಸ್ನಾನ ಮಾಡಿಸಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸದಾ ಒಂದೇ ತಾಪಮಾನದಲ್ಲಿರುವ ವಿಗ್ರಹ

ಸದಾ ಒಂದೇ ತಾಪಮಾನದಲ್ಲಿರುವ ವಿಗ್ರಹ

ಈ ನೀರು ತಣ್ಣಗಿರಲಿ, ಬಿಸಿ ಇರಲಿ, ಸ್ವಾಮಿಯ ವಿಗ್ರಹ ಮಾತ್ರ 110ಡಿಗ್ರಿ ಫ್ಯಾರನ್ ಹೀಟ್ ತಾಪಮಾನವನ್ನು ಕಾಯ್ದುಕೊಳ್ಳುತ್ತದೆ. ಅಲ್ಲದೇ ವಿಗ್ರಹದ ಮೇಲೆ ನವಿರಾದ ಬೆವರ ಹನಿಗಳಂತೆ ನೀರಿನ ಬಿಂದುಗಳು ಮೂಡುತ್ತವೆ. ಇವುಗಳನ್ನು ಪೂಜಾರಿಗಳು ಪ್ರತಿದಿನ ಒರೆಸಿ ಸ್ವಚ್ಛಗೊಳಿಸುತ್ತಾರೆ.


English summary

Secrets of Lord Venkateswara’s idol, which should surprise you

Tirumala Venkateswara Temple is a famous Hindu Temple of Lord Venkateswara located in the hill town Tirumala of Andhra Pradesh. This temple is reputed as the most ancient temple in India. In the same way there is a hidden secret behind these lord venkateshware idols, Following are the secrets of Lord Venkateswara’s idol which gives you a spine chilling experience after reading them
X
Desktop Bottom Promotion