For Quick Alerts
ALLOW NOTIFICATIONS  
For Daily Alerts

ಸರಸ್ವತಿ ಪೂಜೆ 2021: ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ

|

ಜ್ಞಾನ, ವಿದ್ಯೆಯ ದೇವತೆ ಸರಸ್ವತಿ. ಮಗುವಿಗೆ ವಿದ್ಯೆ ಕಲಿಸಲು ಪ್ರಾರಂಭಿಸುವ ಮುನ್ನ ಸರಸ್ವತಿಗೆ ಪೂಜೆ ಮಾಡುತ್ತೇವೆ... ವಿದ್ಯೆಯಿಲ್ಲ, ಜ್ಞಾನವಿಲ್ಲ ಎಂದರೆ ಜೀವನ ಕತ್ತಲಿನಲ್ಲಿಯೇ ಕಳೆದಂತೆ. ಬದುಕಿನಲ್ಲಿ ಬೆಳಕು ಬರಬೇಕಾದರೆ ಜ್ಞಾನ ಇರಬೇಕಾಗುತ್ತದೆ. ಆದಿಶಕ್ತಿಯ ಹಲವು ರೂಪಗಳಲ್ಲೊಂದು ಮಹಾಸರಸ್ವತಿ ರೂಪ.

ನವರಾತ್ರಿಯ ಸಮಯದಲ್ಲಿ ಶಾರದಾ ಪೂಜೆಗೆ ತುಂಬಾನೇ ಮಹತ್ವವಿದೆ. ವೀಣಾಪಾಣೆ, ಪುಸ್ತಕಧಾರಿಣಿಯಾದ ಸರಸ್ವತಿ ದೇವಿಯು ಜ್ಞಾನ, ಕಲೆ, ಸಂಗೀತ, ಕೌಶಲ್ಯ, ವಿದ್ಯೆ ಇವುಗಳ ಪ್ರತೀಕವಾಗಿದೆ. ನವರಾತ್ರಿಯಲ್ಲಿ ಸರಸ್ವತಿ ಪೂಜೆಯ ಆರಾಧನೆಯನ್ನು 7ನೇ ದಿನದಿಂದ ಮಾಡಲಾಗುವುದು. ಮೂರು ದಿನಗಳವರೆಗೆ ಸರಸ್ವತಿ ಪೂಜೆ ಮಾಡಲಾಗುವುದು. ವಿದ್ಯಾರ್ಥಿಗಳು ಒಳ್ಳೆಯ ವಿದ್ಯೆ ನೀಡು, ನೆನಪಿನ ಶಕ್ತಿ ನೀಡು, ನಾವು ಸಾಧನೆ ಮಾಡುವಂತೆ ಅನುಗ್ರಹಿಸು ಎಂದು ಸರಸ್ವತಿಯಲ್ಲಿ ಪ್ರಾರ್ಥಿಸುತ್ತಾರೆ.

2021ರಲ್ಲಿ ನವರಾತ್ರಿ ಸರಸ್ವತಿ ಪೂಜೆಯ ದಿನಾಂಕ, ಶುಭ ಮುಹೂರ್ತ, ಹೇಳಬೇಕಾದ ಮಂತ್ರಗಳು, ಪೂಜಾ ವಿಧಿಗಳ ಇವುಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ:

2021ರಲ್ಲಿ ಸರಸ್ವತಿ ಪೂಜಾ ಸಮಯ

2021ರಲ್ಲಿ ಸರಸ್ವತಿ ಪೂಜಾ ಸಮಯ

* ಅಕ್ಟೋಬರ್‌ 12, ಬೆಳಗ್ಗೆ11:27ಕ್ಕೆ: ಪೂರ್ವ ಆಷಾಢ ನಕ್ಷತ್ರದಲ್ಲಿ ಪ್ರಾರಂಭ

* ಅಕ್ಟೋಬರ್‌ 13, ಬೆಳಗ್ಗೆ 10:19ಕ್ಕೆ: ಪೂರ್ವ ಆಷಾಢ ನಕ್ಷತ್ರದಲ್ಲಿ ಮುಕ್ತಾಯ

* ಅಕ್ಟೋಬರ್ 11, ಸೋಮವಾರ ಸರಸ್ವತಿ ಆವಾಹನ

* ಅಕ್ಟೋಬರ್ 13, ಬುಧವಾರ ಸರಸ್ವತಿ ಬಲಿದಾನ

* ಅಕ್ಟೋಬರ್ 14, ಗುರುವಾರ, ಸರಸ್ವತಿ ವಿಸರ್ಜನೆ

ಸರಸ್ವತಿ ಪೂಜಾ ವಿಧಿ

ಸರಸ್ವತಿ ಪೂಜಾ ವಿಧಿ

ಸರಸ್ವತಿ ಪೂಜೆಯಲ್ಲಿ ಸರಸ್ವತಿ ಮೂರ್ತಿ ಅಥವಾ ಫೋಟೋ ಇಟ್ಟು ಪೂಜಿಸಲಾಗುವುದು. ಬಿಳಿಯ ವಸ್ತ್ರಧಾರಣಿಯಾದ ಸರಸ್ವತಿಯ ಹಂಸದಲ್ಲಿ ವಿರಾಜಮಾನಳಾಗಿರುತ್ತಾಳೆ. ಅವಳಿಗೆ ಬಿಳಿ ಹೂ, ಸಿಹಿ ತಿಂಡಿ, ನೈವೇದ್ಯಗಳನ್ನು ಇಟ್ಟು ಪೂಜಿಯನ್ನು ಸಲ್ಲಿಸಲಾಗುವುದು.ಬ ಬಿಳಿಯ ಹೂವಿನ ಮಾಲೆ ಹಾಕಿ, ರಂಗೋಲಿ ಇಟ್ಟು, ಅಕ್ಕಿ ಪಾಯಸ, ಅವಲಕ್ಕಿ-ಎಳ್ಳು-ತೆಂಗಿನಕಾಯಿ, ಹಾಲು ಇವುಗಳನ್ನು ನೈವೇದ್ಯವಾಗಿ ಇಡಲಾಗುವುದು.

ಸರಸ್ವತಿ ಧನಂ

ಸರಸ್ವತಿ ಧನಂ

10 ವರ್ಷದ ಕೆಳಗಿನ ಬಾಲಕಿಯರನ್ನು ಸರಸ್ವತಿ ಪೂಜೆಯಂದು ಕೂರಿಸಿ ಅವರಿಗೆ ಅರಿಶಿನ-ಕುಂಕುಮ ಹಚ್ಚಿ, ಬಳೆ, ಬಟ್ಟೆ, ಪುಸ್ತಕ, ಅಲಂಕಾರಿಕ ವಸ್ತುಗಳು ಇವುಗಳನ್ನು ಉಡುಗೊರೆಯಾಗಿ ನೀಡಲಾಗುವುದು. ಇದನ್ನು ಸರಸ್ವತಿ ಧನಂ ಎಂದು ಕರೆಯಲಾಗುವುದು. ಹೀಗೆ ನೀಡಿದರೆ ಸರಸ್ವತಿ ಸಂತುಷ್ಟಳಾಗುತ್ತಾಳೆ ಎಂದು ನಂಬಲಾಗಿದೆ.

ಸರಸ್ವತಿ ಮಂತ್ರ

ಸರಸ್ವತಿ ಮಂತ್ರ

ಓಂ ಅರಂ ಮುಖ ಕಮಲ ವಾಸಿನಿ

ಪಾಪಾತ್ಮಾಂ ಕ್ಷಯಂ ಕರಾರೀ

ವಾಡ ವಾಡ ವಾಗ್ವಾದಿನೀ ಸರಸ್ವತಿ ಐಂಗ್‌ ಹ್ರೀಂಗ್‌ ನಮಃ ಸ್ವಾಹಾ|

ಸರಸ್ವತಿ ನಮಸ್ತುಭ್ಯಂ||

ವರದೇ ಕಾಮರೂಪಿಣಿ

ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತು ಮೇ ಸದಾ||

ಸರಸ್ವತಿ ನಮಸ್ತುಭ್ಯಂ||

ವರದೇ ಕಾಮರೂಪಿಣಿ

ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತು ಮೇ ಸದಾ||

|| ಓಂ ಐಂ ಸರಸ್ವತ್ಯೈ ನಮಃ||

ಸರಸ್ವತಿ ಪೂಜೆ

ಸರಸ್ವತಿ ಪೂಜೆ

* ಸರಸ್ವತಿ ಆಹ್ವಾನ ಮಂತ್ರಗಳನ್ನು ಪಠಿಸಿ ಶುಭ ಮುಹೂರ್ತದಲ್ಲಿ ಪೂಜೆ ಪ್ರಾರಂಭಿಸಬೇಕು.

* ಸರಸ್ವತಿಯನ್ನು ಮನಸ್ಸಿನಲ್ಲಿ ಸಂಕಲ್ಪ ತೆಗೆದುಕೊಳ್ಳಬೇಕು.

* ಸರಸ್ವತಿಗೆ ಶ್ರೀಗಂಧದ ಪೇಸ್ಟ್‌, ಕುಂಕುಮ, ಬಿಳಿ ಹೂ ಇವುಗಳನ್ನು ಅರ್ಪಿಸಬೇಕು.

* ನಂತರ ದೇವಿಗೆ ನೈವೇದ್ಯವನ್ನು ಅರ್ಪಿಸಿ

* ಸರಸ್ವತಿ ಪೂಜೆಗೆ ಇಟ್ಟ ವಸ್ತುಗಳನ್ನು ಮುಟ್ಟಬಾರದು, ಏಕೆಂದರೆ ಸರಸ್ವತಿ ಆ ಸ್ಥಳದಲ್ಲಿ ನೆಲೆಸಿರುತ್ತಾಳೆ. ವಿಜಯದಶಮಿ ಬಳಿಕ ಸರಸ್ವತಿ ವಿಸರ್ಜನೆ ಮಾಡಿದ ಬಳಿಕವಷ್ಟೇ ಪೂಜೆಗೆ ಇಟ್ಟ ವಸ್ತುಗಳನ್ನು ತೆಗೆಯಬೇಕು.

English summary

Saraswati Puja 2021: Date, Significance, Shubh Muhurat and Puja Vidhi During Navratri in Kannada

Saraswati Puja 2021: Date, Significance, Shubh Muhurat and Puja Vidhi During Navratri in Kannada,
X
Desktop Bottom Promotion