For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಗಂಗಾಜಲ ಇಟ್ಟಿದ್ದರೆ, ಮರೆತು ಕೂಡ ಈ ತಪ್ಪುಗಳನ್ನು ಮಾಡದಿರಿ

|

ಹಿಂದೂ ಧರ್ಮದಲ್ಲಿ, ಗಂಗಾನದಿಗೆ ಶ್ರೇಷ್ಠ ಸ್ಥಾನವಿದ್ದು, ಪಾಪವನ್ನು ಕಳೆಯವವಳು ಎಂಬ ನಂಬಿಕೆಯಿದೆ. ತಾಯಿ ಗಂಗಾ ಮೋಕ್ಷವನ್ನು ನೀಡುವವಳು ಎಂಬ ನಂಬಿಕೆ ಇಂದಿಗೂ ಜನರಲ್ಲಿದೆ. ಇದೇ ಕಾರಣಕ್ಕೆ ಗಂಗೆಯಲ್ಲಿ ಸ್ನಾನ ಮಾಡುವುದರ ಜೊತೆಗೆ ಗಂಗಾಜಲವನ್ನು ತಮ್ಮ ಮನೆಗಳಿಗೆ ತಂದು ವಿವಿಧ, ಆಚರಣೆಗಳಲ್ಲಿ ಬಳಸಿಕೊಳ್ಳುತ್ತಾರೆ.

ಗಂಗಾಜಲವನ್ನು ಮನೆಯಲ್ಲಿ ಇಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ಉಳಿಸುತ್ತದೆ. ಆದರೆ ಅದನ್ನು ಮನೆಯಲ್ಲಿ ಇಡುವಾಗ ಕೆಲವು ವಿಷಯಗಳನ್ನು ನೋಡಿಕೊಳ್ಳದಿದ್ದರೆ, ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಾಗಾದರೆ, ಆ ವಿಷಯಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಮನೆಯಲ್ಲಿ ಗಂಗಾಜಲವಿದ್ದರೆ ನೆನಪಿಡಬೇಕಾದ ಅಂಶಗಳನ್ನು ಈ ಕೆಳಗೆ ನೀಡಲಾಗಿದೆ:

ಗಂಗಾಜಲವನ್ನು ಬಾಟಲಿಯಲ್ಲಿ ಇಡಬಾರದು:

ಗಂಗಾಜಲವನ್ನು ಬಾಟಲಿಯಲ್ಲಿ ಇಡಬಾರದು:

ಮನೆಗಳಲ್ಲಿ ಗಂಗಾಜಲವನ್ನು ಪ್ಲಾಸ್ಟಿಕ್ ಬಾಟಲಿಗಳು ಅಥವಾ ಡಬ್ಬಿಗಳಲ್ಲಿ ಇಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಗಂಗಾಜಲವನ್ನು ಯಾವಾಗಲೂ ಪವಿತ್ರ ಪಾತ್ರೆಯಲ್ಲಿ ಇಡಬೇಕು. ಗಂಗಾಜಲವನ್ನು ಇಡಲು ತಾಮ್ರ, ಹಿತ್ತಾಳೆ, ಜೇಡಿಮಣ್ಣು ಅಥವಾ ಬೆಳ್ಳಿಯಿಂದ ಮಾಡಿದ ಪಾತ್ರೆಯು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಆದ್ದರಿಂದ ಪ್ಲಾಸ್ಟಿಕ್ ಡಬ್ಬಿ ಹಾಗೂ ಬಾಟಲಿಗಳಲ್ಲಿ ಇಡಬೇಡಿ.

ಮರೆತೂ ಈ ಕೆಲಸವನ್ನು ಮಾಡಬೇಡಿ:

ಮರೆತೂ ಈ ಕೆಲಸವನ್ನು ಮಾಡಬೇಡಿ:

ನಿಮ್ಮ ಮನೆಯಲ್ಲಿ ಗಂಗಾಜಲವನ್ನು ಇಡುವುದಾದರೆ, ಸಾತ್ವಿಕತೆ ಮತ್ತು ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಗಂಗಾಜಲವನ್ನು ಇಡುವ ಸ್ಥಳ ಸ್ವಚ್ಛವಾಗಿರಬೇಕು. ಯಾವುದೇ ರೀತಿಯಲ್ಲಿ ಅಮಲು ಪದಾರ್ಥಗಳು ಮನೆಯೊಳಗೆ ಪ್ರವೇಶಿಸಬಾರದು. ಹೀಗೆ ಮಾಡಿದರೆ ನೀವು ಪಾಪದ ಪಾಲುದಾರರಾಗುತ್ತೀರಿ, ಜೊತೆಗೆ ಗ್ರಹ ದೋಷವೂ ಉಂಟಾಗುತ್ತದೆ. ಇದರಿಂದ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಗಂಗಾಜಲವನ್ನು ಕತ್ತಲೆಯ ಸ್ಥಳದಲ್ಲಿ ಇಡಬೇಡಿ:

ಗಂಗಾಜಲವನ್ನು ಕತ್ತಲೆಯ ಸ್ಥಳದಲ್ಲಿ ಇಡಬೇಡಿ:

ಗಂಗಾಜಲವನ್ನು ಕತ್ತಲೆ ಇರುವ ಸ್ಥಳದಲ್ಲಿ ಎಂದಿಗೂ ಇಡಬಾರದು. ಗಂಗಾಜಲವು ಅತ್ಯಂತ ಪವಿತ್ರವಾದುದಾಗಿದೆ. ಆದ್ದರಿಂದ ಬೆಳಕಿರುವ ಜಾಗದಲ್ಲಿಡಿ. ಜೊತೆಗೆ ಅದನ್ನು ಎಲ್ಲಿ ಇರಿಸಲಾಗುತ್ತದೆಯೋ ಅಲ್ಲಿ ಯಾವುದೇ ರೀತಿಯ ಕೊಳಕು ಇರಬಾರದು ಎಂಬುದನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು.

ಗಂಗಾಜಲವನ್ನು ಎಂದಿಗೂ ಕೊಳಕು ಕೈಗಳಿಂದ ಮುಟ್ಟಬಾರದು:

ಗಂಗಾಜಲವನ್ನು ಎಂದಿಗೂ ಕೊಳಕು ಕೈಗಳಿಂದ ಮುಟ್ಟಬಾರದು:

ಗಂಗಾಜಲವನ್ನು ಮುಟ್ಟುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯಬೇಕು ಎಂಬುದನ್ನು ಮರೆಯಬೇಡಿ. ಕೊಳಕು ಕೈಗಳಿಂದ ಗಂಗಾಜಲವನ್ನು ಮುಟ್ಟಲು ಹೋಗಬೇಡಿ. ಇದು ದೋಷವನ್ನು ಸೃಷ್ಟಿಸುತ್ತದೆ ಮತ್ತು ನೀವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಯಾವಾಗಲೂ ಶುದ್ಧವಾಗಿಯೇ ಗಂಗಾಜಲವನ್ನು ತೆಗೆದುಕೊಳ್ಳಲು ಅಥವಾ ಮುಟ್ಟಲು ಮುಂದಾಗಿ.

English summary

Rules for Keeping Ganga Jal at Home; Do's and Don'ts in Kannada

Here we talking about Rules for Keeping Ganga Jal at Home; Do's and Don'ts in Kannada, read on
X
Desktop Bottom Promotion