For Quick Alerts
ALLOW NOTIFICATIONS  
For Daily Alerts

ಶಿವ ಪೂಜೆ ಮಾಡುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

|

ಭಗವಂತ ಶಿವನ ಹೆಸರು ಕೇಳುತ್ತಿದ್ದಂತೆಯೇ ಮನದಲ್ಲಿ ಮೂಡುವ ಚಿತ್ರವೆಂದರೆ ಹಿಮಪರ್ವತದ ಮೇಲೆ ಕುಳಿತು ಶಿಖದಲ್ಲಿ ಚಂದ್ರನನ್ನೂ, ಕೊರಳಲ್ಲಿ ನಾಗನನ್ನೂ, ರುದ್ರಾಕ್ಷಿಮಾಲೆಗಳನ್ನೂ, ಕೈಯಲ್ಲೊಂದು ತ್ರಿಶೂಲ, ಡಮರುಗ ಮತ್ತು ತಲೆಯಿಂದ ಚಿಮ್ಮುತ್ತಿರುವ ಗಂಗೆ, ಹೀಗೆ ಅನೇಕ ರೀತಿಯ ಕಲ್ಪನೆಗಳು ಮನದಲ್ಲಿ ಮೂಡುತ್ತದೆ. ಹಿಂದೂ ಧರ್ಮದಲ್ಲಿ ಶಿವನು "ದೇವಾದಿದೇವ" (ದೇವರುಗಳಿಗೆ ದೇವನಾದ ಅಗ್ರಗಣ್ಯನು) ಎ೦ದೇ ಲೋಕಪ್ರಸಿದ್ಧನಾಗಿರುವವನು.

ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿದೇವರಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೆನಾಥ ಇತ್ಯಾದಿ.

ಅತಿ ಪರಾಕ್ರಮಿಯಾಗಿದ್ದರೂ ಅಗತ್ಯಬೀಳದೇ ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ ಸರಳವಾದ, ಹಿಮಾಚ್ಛಾದಿತ ಪ್ರದೇಶದಲ್ಲಿ ನೆಲೆಸುವ, ವೈಜ್ರವೈಢೂರ್ಯಗಳಿಂದ ಭೂಷಿತನಾಗಬಹುದಾದರೂ ಸರಳವಾದ ಉಡುಗೆಗಳಿಂದ, ಭಕ್ತನ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನೂ, ಜಟಿಲನೂ ಆಗಿದ್ದಾರೆ.

ಸರಳ ಭಕ್ತಿಗೆ ಒಲಿಯುವ ಮಹಾಮಹಿಮ ಎಂದು ಶಿವನನ್ನು ಪೂಜಿಸಲಾಗುತ್ತದೆ. ಬರಿಯ ಬಿಲ್ವ ಪತ್ರೆ ಮತ್ತು ವಿಭೂತಿಯಿಂದ ಪೂಜಿಸಿದರೆ ಒಲಿಯುವ ಶಿವ ಕಾರುಣ್ಯಮಯಿ ಹಾಗೂ ದಯಾಮಯನೂ ಹೌದು. ಅದಾಗ್ಯೂ ಶಿವನನ್ನು ಪೂಜಿಸಲು ಕೆಲವೊಂದು ನಿಯಮಗಳಿದ್ದು ಆ ನಿಯಮಗಳೇನು ಎಂಬುದನ್ನು ನೀವು ಅರಿತು ನಂತರ ಶಿವನ ಪ್ರಾರ್ಥನೆಯನ್ನು ಮಾಡಬೇಕು ಬನ್ನಿ ಇಂದಿಲ್ಲಿ ಆ ನಿಯಮ ಮತ್ತು ಆಚರಣೆಗಳೇನು ಎಂಬುದನ್ನು ತಿಳಿಯೋಣ....

ಶಿವನಿಗೆ ಪ್ರಾರ್ಥನೆಯನ್ನು ಯಾವ ರೀತಿಯಲ್ಲಿ ಸಲ್ಲಿಸಬೇಕು

ಶಿವನಿಗೆ ಪ್ರಾರ್ಥನೆಯನ್ನು ಯಾವ ರೀತಿಯಲ್ಲಿ ಸಲ್ಲಿಸಬೇಕು

ಶಿವನಿಗೆ ಪ್ರಾರ್ಥನೆಯನ್ನು ನಾವು ಸಲ್ಲಿಸುವಾಗ ಕೆಲವೊಂದು ನಿಯಮಗಳನ್ನು ನಾವು ಅನುಸರಿಸಬೇಕು. ಕಾಲ ಎಂಬ ಹೆಸರನ್ನು ಪಡೆದುಕೊಂಡಿರುವ ಶಿವನು ಮುಗ್ಧ ಮತ್ತು ಸರಳ ಮತ್ತು ಭಕ್ತಿಯ ಪ್ರಾರ್ಥನೆಗೆ ಒಲಿಯುವವರು. ಅದಾಗ್ಯೂ ನಾವು ಕೆಲವೊಂದು ಆಚರಣೆಗಳನ್ನು ಅನುಸರಿಸುವ ಮೂಲಕ ಶಿವನ ಪ್ರಾರ್ಥನೆಯನ್ನು ಮಾಡಬೇಕಾಗುತ್ತದೆ. ಶಿವನನ್ನು ಪೂಜಿಸುವ ಮೊದಲು ಗಣಪನಿಗೆ ಪೂಜೆಯನ್ನು ಸಲ್ಲಿಸಬೇಕು. ಏಕೆಂದರೆ ಪ್ರಥಮ ಪೂಜೆಯನ್ನು ಸ್ವೀಕರಿಸುವ ಗಣಪತಿಗೆ ಪೂಜೆಯನ್ನು

ಸಲ್ಲಿಸಿಯೇ ನಂತರ ಉಳಿದ ದೇವರಿಗೆ ಪ್ರಾರ್ಥನೆ ಮತ್ತು ಪೂಜೆಯನ್ನು ಮಾಡಬೇಕಾಗುತ್ತದೆ.

ಸೋಮವಾರವೇ ಏಕೆ ಶಿವನಿಗೆ ಪ್ರಾರ್ಥನೆ ಸಲ್ಲಿಸಬೇಕು

ಸೋಮವಾರವೇ ಏಕೆ ಶಿವನಿಗೆ ಪ್ರಾರ್ಥನೆ ಸಲ್ಲಿಸಬೇಕು

ಸೋಮವಾರವನ್ನು ಶಿವನಿಗೆ ಅತಿ ಪ್ರಿಯ ದಿನವೆಂದು ಕರೆಯಲಾಗುತ್ತದೆ. ಈ ದಿನವೇ ಹೆಚ್ಚಿನವರು ಶಿವ ದೇವರಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಹುಡುಗಿಯರು ಹದಿನಾರು ವಾರಗಳ ಕಾಲ ಉಪವಾಸವನ್ನು ಕೈಗೊಂಡರೆ ಅವರಿಗೆ ಶಿವನಂತಿರುವ ಪತಿ ದೊರಕುತ್ತಾನೆ ಎಂಬ ವಿಶ್ವಾಸವಿದೆ. ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಗೃಹಿಣಿಯರು ಈ ದಿನ ಉಪವಾಸವನ್ನು ಕೈಗೊಳ್ಳುತ್ತಾರೆ. ಶ್ರಾವಣ ಮಾಸದ ಸೋಮವಾರವನ್ನು ಅತ್ಯಂತ ಪೂಜನೀಯ ಎಂದು ಕರೆಯಲಾಗುತ್ತದೆ. ಸಂತನಾಗಿರುವ ಶಿವನು ದೇಹ ಮತ್ತು ಮನಸ್ಸಿನ ಶುದ್ಧತೆಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಆದ್ದರಿಂದ ಸ್ನಾನವನ್ನು ಮಾಡದೆಯೇ ಶಿವನ ಪೂಜೆಯನ್ನು ಮಾಡಬಾರದು, ಅದರಲ್ಲೂ

ವಿವಾಹಿತ ಸ್ತ್ರೀಯರು. ನಿಮ್ಮ ಮನಸ್ಸಿನಲ್ಲಿ ಯಾವುದೇ ಕೆಟ್ಟ ಚಿಂತೆಗಳು ಬರದೇ ಶಿವ ಭಗವಂತನನ್ನು ಪ್ರಾರ್ಥಿಸಬೇಕು.

ಶಿವನಿಗೆ ಅರ್ಪಿಸುವ ಪ್ರಸಾದ

ಶಿವನಿಗೆ ಅರ್ಪಿಸುವ ಪ್ರಸಾದ

ಬಿಲ್ವ ಪತ್ರೆಯನ್ನು ಶಿವನು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಇದನ್ನು ಭಕ್ತರು ಶಿವನಿಗೆ ನೀಡಲು ಮರೆಯಬಾರದು. ಶಿವನ ಮೂರು ಕಣ್ಣುಗಳನ್ನು ಈ ಬಿಲ್ವ ಪತ್ರೆ ಪ್ರತಿನಿಧಿಸುತ್ತದೆ. ಶಿವರಾತ್ರಿಯಂದು ಶಿವನಿಗೆ ನೀಡುವ ಅತಿ ಪ್ರಮುಖವಾದುದು ಇದಾಗಿದೆ. ಬಿಲ್ವ ಪತ್ರೆಯನ್ನು ಚತುರ್ಥಿ, ಅಷ್ಟಮಿ, ಚತುರ್ದಶಿ, ಅಮವಾಸ್ಯೆಯಂದು ಕೀಳಬಾರದು. ಸಂಕ್ರಾಂತಿ ಮತ್ತು ಸೋಮವಾರದಂದು ಕೂಡ ಬಿಲ್ವಪತ್ರೆಯನ್ನು ಕೀಳುವುದು ಅಮಂಗಳವಾಗಿದೆ. ಹಿಂದಿನ ದಿನ ಈ ಪತ್ರೆಯನ್ನು ನೀವು ಕೀಳಬೇಕು.

ಅಂತೆಯೇ ಪತ್ರೆಯನ್ನು ಯಾವುದೇ ಕೀಟ ತಿಂದಿಲ್ಲವೆಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಶಿವನಿಗೆ ಅರ್ಪಿಸುವ ಪ್ರಸಾದ

ಶಿವನಿಗೆ ಅರ್ಪಿಸುವ ಪ್ರಸಾದ

ಶಿವನಿಗೆ ಚಿನ್ನದಂತಹ ಬೆಲೆಬಾಳುವ ವಸ್ತುವನ್ನು ಅರ್ಪಿಸಬೇಕಾಗಿಲ್ಲ. ಅಂತೆಯೇ ಸರಳ ವಸ್ತುಗಳನ್ನು ದೇವರಿಗೆ ಅರ್ಪಸಿಕೊಂಡು ನೀವು ಭಗವಂತನ ಪೂಜೆಯನ್ನು ನಡೆಸಬಹುದಾಗಿದೆ. ಅವರನ್ನು ಮೆಚ್ಚಿಸಲು ಹಾಲು, ಮೊಸರನ್ನು ಅರ್ಪಿಸಬಹುದಾಗಿದೆ. ಶಿವ ಲಿಂಗಕ್ಕೆ ಹಾಲನ್ನು ಅರ್ಪಿಸುವುದು ಹೆಚ್ಚು ಪವಿತ್ರವಾದುದು. ಹಾಲು ಸಿಗದೇ ಇದ್ದ ಪಕ್ಷದಲ್ಲಿ ನೀರು ಮಿಶ್ರಿತ ಹಾಲಿನ ಅಭಿಷೇಕವನ್ನು ನಡೆಸಬಹುದಾಗಿದೆ.ಬಿಳಿ ಬಣ್ಣದ ಹೂವುಗಳೆಂದರೆ ಶಿವನಿಗೆ ಹೆಚ್ಚು ಪ್ರೀತಿ. ಭಗವಂತನನ್ನು ಮೆಚ್ಚಿಸಲು ಈ ಬಣ್ಣದ ಹೂವುಗಳನ್ನು ಕೂಡ ನೀವು ಅರ್ಪಿಸಬಹುದು. ಕೇತಕಿ, ಕೇವಡ ಮತ್ತು

ಪ್ಲುಮೇರಿಯ ಹೂವುಗಳು ಶಿವನ ಶಾಪಕ್ಕೆ ಒಳಗಾಗಿರುವುದರಿಂದ ಈ ಹೂವುಗಳನ್ನು ದೇವರಿಗೆ ಅರ್ಪಿಸಬಾರದು.

ಶಿವನಿಗೆ ಏನನ್ನು ಅರ್ಪಿಸಬಾರದು

ಶಿವನಿಗೆ ಏನನ್ನು ಅರ್ಪಿಸಬಾರದು

ಅರಶಿನವನ್ನು ದೇವರಿಗೆ ಅರ್ಪಿಸಬಾರದು. ತುಳಸಿ ದಳವನ್ನು ಅರ್ಪಿಸಬಾರದು. ಕುಂಕುಮವನ್ನು ದೇವರಿಗೆ ಅರ್ಪಿಸಬಾರದು. ಬಿಲ್ವ ಪತ್ರೆಯನ್ನು ಮಾತ್ರವೇ ದೇವರಿಗೆ ಅರ್ಪಿಸಬೇಕು. ಭಸ್ಮವನ್ನು ತಿಲಕದಂತೆ ಧರಿಸಿಕೊಳ್ಳಬೇಕು. ತೆಂಗಿನ ನೀರನ್ನು ದೇವರಿಗೆ ಅರ್ಪಿಸಬಾರದಾಗಿದೆ.

ಭಾಂಗ್ - ಶಿವನಿಗೆ ಹೆಚ್ಚು ಅಚ್ಚುಮೆಚ್ಚಿನದಾಗಿದೆ

ಭಾಂಗ್ - ಶಿವನಿಗೆ ಹೆಚ್ಚು ಅಚ್ಚುಮೆಚ್ಚಿನದಾಗಿದೆ

ಶಿವನಿಗೆ ಭಾಂಗ್ ಹೆಚ್ಚು ಇಷ್ಟವಾದ ಪೇಯವಾಗಿರುವುದರಿಂದ ಭಕ್ತರು ಇದನ್ನು ಅರ್ಪಿಸಬೇಕು. ಜಲಧಾರ ಇಲ್ಲದೆಯೇ ನೀವು ಶಿವಲಿಂಗವನ್ನು ಖರೀದಿಸಬಾರದು. ಅಂತೆಯೇ ಸ್ಟೀಲ್ ತಟ್ಟೆಯಲ್ಲಿ ಶಿವಲಿಂಗವನ್ನು ಇರಿಸಬಾರದು.

ಹಿತ್ತಾಳೆಯ ಪಾತ್ರೆಯನ್ನು ಬಳಸಬೇಡಿ

ಹಿತ್ತಾಳೆಯ ಪಾತ್ರೆಯನ್ನು ಬಳಸಬೇಡಿ

ಹಿತ್ತಾಳೆಯಿಂದ ಮಾಡಿದ ಯಾವುದೇ ಪರಿಕರ ಇಲ್ಲವೇ ಪಾತ್ರೆಯನ್ನು ದೇವರಿಗೆ ಅರ್ಪಿಸಬೇಡಿ. ಅಂತೆಯೇ ಶಿವಲಿಂಗಕ್ಕೆ ನೀರು ಹಾಕಬೇಡಿ. ತಾಮ್ರವನ್ನು ನೀವು ಬಳಸಬಹುದಾಗಿದೆ. ನೀರು, ಹಾಲು ಇಲ್ಲವೇ ಮೊಸರಿನಲ್ಲಿ ನಿಮ್ಮ ಉಗುರಗಳನ್ನು ನೆನೆಯಿಸಬೇಡಿ. ಉಗುರು ಮತ್ತು ಹಿತ್ತಾಳೆ ದೇವರಿಗೆ ಅರ್ಪಿಸುವ ವಸ್ತುವನ್ನು ಕಲುಷಿತಗೊಳಿಸುತ್ತದೆ ಎಂದು ನಂಬಲಾಗಿದೆ.

ಬಿಲ್ವಪತ್ರೆಯನ್ನು ತರಲು ಮರೆಯಬೇಡಿ

ಬಿಲ್ವಪತ್ರೆಯನ್ನು ತರಲು ಮರೆಯಬೇಡಿ

ಶಿವಪೂಜೆಯಲ್ಲಿ ಬಿಲ್ವಪತ್ರೆಯ ಪಾತ್ರ ಅತಿ ಮಹತ್ತರವಾಗಿದೆ. ಇದನ್ನು ಅರ್ಪಿಸುವ ಮೂಲಕ ಭಕ್ತರ ಪಾಪವನ್ನು ತೊಳೆದು ಜೀವನದಲ್ಲಿ ಸುಖ ಸಂತೋಷ ಸಮೃದ್ಧಿ ನೆಲೆಸಲು ನೆರವಾಗುತ್ತದೆ. ಆದ್ದರಿಂದ ಸೋಮವಾರದ ಶಿವಪೂಜೆಯಲ್ಲಿ ಯಾವುದೇ ಕಾರಣಕ್ಕೂ ಬಿಲ್ವಪತ್ರೆಯನ್ನು ತರಲು ಮರೆಯಬಾರದು..ಶಾಸ್ತ್ರಗಳ ಪ್ರಕಾರ ಶಿವಪೂಜೆಗೂ ಬಿಲ್ವಪತ್ರೆಗೂ ನಿಕಟವಾದ ನಂಟಿದೆ. ಅಲ್ಲದೇ ಹಿಂದೂ ಪಂಚಾಂಗದ ಪ್ರಕಾರ ಶಿವಪೂಜೆ ಮತ್ತು ಗಣಪತಿಪೂಜೆಗೆ ವಿಶೇಷ ದಿನಗಳಿವೆ. ಈ ದಿನಗಳಲ್ಲಿ ಬಿಲ್ವಪತ್ರೆಯನ್ನು ಮರೆಯುವುದು ಅಥವಾ ಇದ್ದ ಎಲೆಗಳನ್ನು ಮುರಿಯುವುದು ಶಿವ ಮತ್ತು ಶಿವನ ಪುತ್ರನಾದ ಗಣಪತಿಯ ಪೂಜೆಗೆ ಭಂಗತರುತ್ತದೆ. ಇದು ಶಿವಪೂಜೆಯ ದೋಷಕ್ಕೂ ಕಾರಣವಾಗಬಲ್ಲುದು. ಶಾಸ್ತ್ರಗಳ ಪ್ರಕಾರ ಈ ಕೆಳಗಿನ ದಿನಗಳು ಪವಿತ್ರವಾಗಿದ್ದು ಈ ದಿನಗಳಲ್ಲಿ ಬಿಲ್ವಪತ್ರೆಯನ್ನು ಮುರಿಯಲೇಬಾರದು: *ಚತುರ್ಥಿ *ಅಷ್ಟಮಿ *ನವಮಿ *ಚತುರ್ಧಶಿ *ಅಮಾವಾಸ್ಯೆ *ಸಂಕ್ರಾಂತಿ *ಸೋಮವಾರ

ಸಾಮಾನ್ಯವಾಗಿ ಮರೆಯುವ ಶಿವಪೂಜೆಗೆ ಅಗತ್ಯವಾದ ಪರಿಕರಗಳು

ಸಾಮಾನ್ಯವಾಗಿ ಮರೆಯುವ ಶಿವಪೂಜೆಗೆ ಅಗತ್ಯವಾದ ಪರಿಕರಗಳು

ಹಾಲು - ಇದನ್ನು ಅರ್ಪಿಸುವುದರಿಂದ ಪಾವಿತ್ರ್ಯತೆ ಮತ್ತು ಧರ್ಮಶ್ರದ್ಧೆ ಮೂಡುತ್ತದೆ

ಮೊಸರು - ಇದನ್ನು ಅರ್ಪಿಸುವುದರಿಂದ ಉತ್ತಮ ಸಂತಾನ ಮತ್ತು ಸಮೃದ್ಧಿ ದೊರಕುತ್ತದೆ.

ಜೇನು - ಇದನ್ನು ಅರ್ಪಿಸುವುದರಿಂದ ನಿಮ್ಮ ಸ್ವರ ಅತ್ಯಂತ ಮಧುರವಾಗುತ್ತದೆ

ಸಕ್ಕರೆ - ಇದನ್ನು ಅರ್ಪಿಸುವುದರಿಂದ ಸಂತೋಷ ಲಭಿಸುತ್ತದೆ ಹಾಗೂ ಕಷ್ಟ ಕಾರ್ಪಣ್ಯ ನಾಶವಾಗುತ್ತದೆ.

ನೀರು -ಇದನ್ನು ಅರ್ಪಿಸುವುದರಿಂದ ಮನಃಶಾಂತಿ ದೊರಕುತ್ತದೆ.

ಶ್ರೀಗಂಧ - ಇದರ ಲೇಪನವನ್ನು ಅರ್ಪಿಸುವುದರಿಂದ ಮಹಾಲಕ್ಷ್ಮಿಯ ಅನುಗ್ರಹ ಪಡೆಯಬಹುದು.

ವಿಭೂತಿ - ಇದನ್ನು ಅರ್ಪಿಸುವುದರಿಂದ ಶಿವನ ಅನುಗ್ರಹ ಪಡೆಯಬಹುದು.

English summary

Rules To Be Observed While Worshiping Lord Shiva

Prayers are the most important part of the daily worship; they are the words that we speak the most softly, and wish to be heard the first. We make sure not to make any mistake while performing the puja, in order to please the deity. We observe a number of rules, depending on the day of the week and the deity being worshipped; what things are dear to the deity and what should never be offered to him, etc.
X
Desktop Bottom Promotion