For Quick Alerts
ALLOW NOTIFICATIONS  
For Daily Alerts

ಹೋಳಿಯ ಆಚರಣೆ ಮತ್ತು ಸಂಪ್ರದಾಯ ಏಕೆ ಮಹತ್ವಪೂರ್ಣ

|

ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಬಣ್ಣಗಳ ಓಕುಳಿಯಾಟ ಸರ್ವ ಮತಬಾಂಧವರನ್ನು ಒಂದುಗೂಡಿಸುತ್ತದೆ. ಜಾತಿ ಮತಗಳ ಭೇದವಿಲ್ಲದೆ ಆಚರಿಸುವ ಬಣ್ಣಗಳ ಹಬ್ಬ ಹೋಳಿ ತನ್ನದೇ ಆಚಾರ ಸಂಪ್ರದಾಯಗಳನ್ನು ಹೊಂದಿದೆ. ಪ್ರತಿಯೊಂದು ಹಬ್ಬಕ್ಕೂ ಆಚಾರ ಸಂಪ್ರದಾಯ ಪ್ರಮುಖವಾಗಿರುತ್ತದೆ ಅದಕ್ಕೆ ಹೋಳಿ ಹಬ್ಬ ಕೂಡ ಹೊರತಲ್ಲ. ಪ್ರೀತಿ, ಸಂತಸ ಮತ್ತು ಸಹೋದರತ್ವದ ಪಾಠವನ್ನು ಬಣ್ಣಗಳ ಹಬ್ಬ ಹೋಳಿ ತಿಳಿಸುತ್ತದೆ.

ಭಾರತದ ಉತ್ತರ ಭಾಗದಲ್ಲಿ ಹೋಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಬಣ್ಣಗಳ ಎರಚಾಟ ಸಂಭ್ರಮಿಸುವ ಪರಿ, ಸದ್ದು ಗದ್ದಲ ಹೀಗೆ ಹಬ್ಬದ ಸಂಭ್ರಮ ಉತ್ತರ ಭಾರತೀಯರಲ್ಲಿ ಎದ್ದು ಕಾಣುತ್ತದೆ. ಹೋಳಿ ಹಬ್ಬದ ಆಚರಣೆಗಳು ಮತ್ತು ಸಂಪ್ರದಾಯಗಳು ಹೋಳಿ ಹಬ್ಬಕ್ಕೆ ಪವಿತ್ರತೆಯನ್ನು ತಂದುಕೊಟ್ಟಿದೆ. ಅದು ಹೇಗೆಂಬುದು ನಿಮ್ಮ ಕುತೂಹಲವಾಗಿದ್ದರೆ ಈ ಲೇಖನವನ್ನು ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಸಂತ ಮಾಸದಲ್ಲಿ ಆಚರಿಸುವ ಹೋಳಿ ಹಬ್ಬದ ಮಹತ್ವವೇನು?

ಹೋಲಿಕಾನ ಕಥೆ

ಹೋಲಿಕಾನ ಕಥೆ

ರಾಕ್ಷಸ ರಾಜ ಹಿರಣ್ಯಕಶಿಪುವಿನ ತಂಗಿಯಾದ ಹೋಲಿಕಾನ ಕಥೆ ಎಲ್ಲರಿಗೂ ತಿಳಿದಿದೆ. ತನ್ನ ಸೋದರಳಿಯ ಪ್ರಹ್ಲಾದನನ್ನು ಸಾಯಿಸಲು ಪ್ರಯತ್ನಿಸಿದ ಆಕೆ ಸ್ವತಃ ಅಗ್ನಿಗೆ ಆಹುತಿಯಾದಳು. ಅಲ್ಲಿಂದೀಚೆಗೆ ಹೋಲಿಕಾ ದಹನವೆಂಬ ಆಚರಣೆ ಚಾಲ್ತಿಗೆ ಬಂದಿತು.

ಹೋಲಿಕಾ ದಹನ:

ಹೋಲಿಕಾ ದಹನ:

ಹೋಳಿಯ ನಿಜವಾದ ಹಬ್ಬ ಆರಂಭಗೊಳ್ಳುತ್ತಿದ್ದಂತೆ, ಜನರು ಹೋಲಿಕಾ ದಹನಕ್ಕಾಗಿ ಒಟ್ಟು ಸೇರುತ್ತಾರೆ. ಹೋಳಿ ಹಬ್ಬದ ಸಂಜೆ ಹೋಲಿಕಾ ದಹನವನ್ನು ಏರ್ಪಡಿಸಲಾಗುತ್ತದೆ. ದುಷ್ಟತೆಯ ವಿರುದ್ಧ ಒಳ್ಳೆಯ ಅಂಶಗಳ ಗೆಲುವೆಂಬ ನೀತಿ ಹೋಲಿಕಾ ದಹನದಲ್ಲಿ ಸಮ್ಮಿಳಿತವಾಗಿದೆ. ಬೆಂಕಿಯು ತನ್ನ ಕೆನ್ನಾಲಿಗೆಯನ್ನು ಚಾಚಿ ಪ್ರಖರವಾಗಿ ಉರಿಯಲು ಪ್ರಾರಂಭಗೊಳ್ಳುತ್ತಿದ್ದಂತೆ ದೀಪೋತ್ಸವದ ಸುತ್ತ ನೆರೆದಿದ್ದ ಜನರು ಹಾಡುಗಳನ್ನು ಹಾಡಲು ಪ್ರಾರಂಭಿಸುತ್ತಾರೆ.

ಬಣ್ಣಗಳೊಂದಿಗೆ ಆಟವಾಡುವುದು:

ಬಣ್ಣಗಳೊಂದಿಗೆ ಆಟವಾಡುವುದು:

ಹೋಳಿಯ ಬೆಳಿಗ್ಗೆ ಸಾಮಾನ್ಯ ಪೂಜೆಯನ್ನು ಏರ್ಪಡಿಸಲಾಗುತ್ತದೆ. 'ಅಬೀರ್' ಅಥವಾ 'ಗುಲಾಲ್' ಅನ್ನು ಮನೆಯ ದೇವರ ಪಾದಗಳಗೆ ಹಚ್ಚುತ್ತಾರೆ. ನಂತರ ಯುವಕರು ಗುಲಾಲ್ ಅನ್ನು ಮನೆಯ ಹಿರಿಯರಿಗೆ ಪಾದಗಳಿಗೆ ಹಚ್ಚಿ ಅವರ ಆಶಿರ್ವಾದವನ್ನು ಪಡೆದುಕೊಳ್ಳಬೇಕಾಗುತ್ತದೆ. ಅದರ ನಂತರವೇ ಪ್ರತಿಯೊಬ್ಬರೂ ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುತ್ತಾರೆ. ವಿವಿಧ ಬಣ್ಣಗಳಿಂದ ಜನರು ಮುಳುಗೇಳುತ್ತಾರೆ ಹೀಗೆ ಹಬ್ಬದ ಸಂಭ್ರಮ ಮುಂದುವರಿಯುತ್ತದೆ.

ಮಡಿಕೆ ಒಡೆಯುವುದು:

ಮಡಿಕೆ ಒಡೆಯುವುದು:

ಭಾರತದ ಕೆಲವೆಡೆಗಳಲ್ಲಿ, ಮಥುರಾ ಮತ್ತು ವೃಂದಾವನದಲ್ಲಿ ಹೋಳಿಯಂದು ಮಡಿಕೆ ಒಡೆಯುವ ಆಚರಣೆಯನ್ನು ಆಚರಿಸುತ್ತಾರೆ. ಮಡಿಕೆಯ ತುಂಬಾ ಹಾಲು ತುಂಬಿಸಿ ಅದನ್ನು ಎತ್ತರದ ಸ್ಥಳದಲ್ಲಿ ಇಡುತ್ತಾರೆ ನಂತರ ಹುಡುಗರು ಮಾನವ ಪಿರಮಿಡ್ ಅನ್ನು ರಚಿಸಿ ಅದನ್ನು ಒಡೆಯುತ್ತಾರೆ. ಹುಡುಗಿಯರು ಸೀರೆಯಿಂದ ಮಾಡಿದ ಹಗ್ಗದಿಂದ ಹುಡುಗರನ್ನು ಹೊಡೆಯುತ್ತಾ ಅವರಿಗೆ ಮಡಿಕೆ ಒಡೆಯದಂತೆ ತಡೆಯಲು ಪ್ರಯತ್ನಿಸುತ್ತಾರೆ. ಅವರು ಬಣ್ಣಗಳಲ್ಲಿ ಆಟವಾಡುತ್ತಾ ಹಾಡುಗಳನ್ನು ಹಾಡುತ್ತಾರೆ.

ಸಿಹಿಯ ಹಬ್ಬ:

ಸಿಹಿಯ ಹಬ್ಬ:

ಸಂಜೆಯ ವೇಳೆಗೆ, ಬಣ್ಣವನ್ನು ತೆಗೆದು ಸ್ನಾನ ಮುಗಿಸಿದ ನಂತರ, ಸಿಹಿಯೊಂದಿಗೆ ಪ್ರತಿಯೊಬ್ಬರೂ ಮನೆಮನೆಗೆ ತೆರಳುತ್ತಾರೆ. ಸಾಂಪ್ರಾದಾಯಿಕ ಸಿಹಿಯಾದ ಗುಜಿಯಾವನ್ನು ಅತಿಥಿಗಳಿಗೆ ಬಡಿಸುತ್ತಾರೆ. ಸಿಹಿಯಲ್ಲದೆ ವಿಶೇಷ ಪೇಯವಾದ ಥಂಡೈ ಅನ್ನು ಹೋಳಿಯಂದು ಅತಿಥಿಗಳಿಗೆ ನೀಡುತ್ತಾರೆ. ಹೀಗೆ ಹೋಳಿ ಜನರನ್ನು ಒಂದಾಗಿಸುತ್ತದೆ ಮತ್ತು ಪ್ರೀತಿ, ಸಾಮರಸ್ಯ, ಸಹೋದರತ್ವವನ್ನು ಉತ್ತೇಜಿಸುತ್ತದೆ.

English summary

Rituals & Traditions Of Holi

The festival of colours- Holi is celebrated with great zeal and enthusiasm throughout India. This festival brings people close to each other and becomes a reason to celebrate the colours of life.
Story first published: Wednesday, March 12, 2014, 13:43 [IST]
X
Desktop Bottom Promotion