For Quick Alerts
ALLOW NOTIFICATIONS  
For Daily Alerts

ಸುಗ್ಗಿಯ ಹಿಗ್ಗಿನ ಹಬ್ಬ 'ಸಂಕ್ರಾಂತಿ'-ಏನಿದರ ಮಹತ್ವ?

By Jaya Subramanya
|

ಸಂತೋಷವನ್ನು ಸಿಹಿಯ ರೂಪದಲ್ಲಿ ಹಂಚಿಕೊಳ್ಳುವುದು ವಾಡಿಕೆ. ಈ ಸಂತಸದ ಸವಿಯನ್ನು ನೆನಪು ಮಾಡಲು ಸಂಕ್ರಾಂತಿ ಹಬ್ಬ ಬಂದೇ ಬಿಟ್ಟಿದೆ. ವರ್ಷದ ಪ್ರಾರಂಭದ ಈ ಹಬ್ಬವನ್ನು ಸಾಮಾನ್ಯವಾಗಿ ದಕ್ಷಿಣ ಭಾರತದೆಲ್ಲಡೆ ಆಚರಿಸಲಾಗುತ್ತದೆ. 'ಸಂಕ್ರಾಂತಿ' ಹಬ್ಬವನ್ನು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಸಂಕೇತಾರ್ಥವಾಗಿ ಆಚರಿಸಲಾಗುತ್ತದೆ. ಆದ್ದರಿಂದ ಇದನ್ನು ಮಕರ ಸಂಕ್ರಾಂತಿ ಎಂದು ಕೂಡ ಕರೆಯಲಾಗುತ್ತದೆ.

ಸಾಂಪ್ರದಾಯಿಕವಾಗಿ ಭಾರತದಲ್ಲಿ ಈ ಹಬ್ಬವು ಬೆಳೆಗಳ ಕಟಾವು ಅಥವಾ ಕೊಯ್ಲು ಮಾಡುವ ಸಮಯವನ್ನು ಸೂಚಿಸುತ್ತದೆ. ಇದು ಬೆಳೆಗಳ ಸುಗ್ಗಿಯ ಕಾಲ. ಬೆಳೆಯನ್ನು ನೀಡಿದ ಭೂತಾಯಿಗೆ, ಸಹಾಯಮಾಡಿದ ಎತ್ತುಗಳಿಗೆ, ಶಕ್ತಿ ಕೊಡುವ ಸೂರ್ಯನಿಗೆ ರೈತರು ನಮಸ್ಕರಿಸಿ, ಹುಗ್ಗಿ ತಿಂದು ಸುಗ್ಗಿ ಮಾಡುತ್ತಾರೆ. ಸುಗ್ಗಿ ಹಬ್ಬ 'ಮಕರ ಸಂಕ್ರಾಂತಿಯ' ಇಂಟರೆಸ್ಟಿಂಗ್ ಸಂಗತಿ

ಅಲ್ಲದೆ ಮಳೆಗಾಲದ ಬಳಿಕ ಬಿತ್ತ ಬೀಜ ಮೊಳಕೆಯೊಡೆದು ಗಿಡವಾಗಿ ತೆನೆತುಂಬಿ ಬೆಳೆಯಾಗಿ ಮನೆಯಂಗಳ ಸೇರುವ ಸಂಭ್ರಮದ ಸಂದರ್ಭದಲ್ಲಿ ಈ ಬೆಳೆಯನ್ನು ನಮಗೆ ಆಹಾರದ ರೂಪದಲ್ಲಿ ನೀಡಿದ ದೇವರಿಗೆ ಮತ್ತು ಈ ಬೆಳೆ ಕೈಗೆ ಬರಲು ನೆರವಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸಂಕ್ರಾಂತಿ. ಹಬ್ಬದ ಸಂಭ್ರಮವನ್ನು ಬರೆಯ ಎಳ್ಳು ಬೆಲ್ಲ ನೀಡಿ ಸವಿದರೆ ಸಾಲದು, ಕೆಲವು ಸಿಹಿತಿಂಡಿ, ಹಬ್ಬದೂಟವೂ ಸಂತೋಷವನ್ನು ಹೆಚ್ಚಿಸಲು ನೆರವಾಗುತ್ತವೆ. ಮಕರ ಸಂಕ್ರಾಂತಿಗೆ ಎಳ್ಳು, ಸಕ್ಕರೆ ಅಚ್ಚು, ಹುಗ್ಗಿ

ಸಂಕ್ರಾಂತಿ ಅಂದ್ರೆ ಎಳ್ಳು, ಬೆಲ್ಲ, ಕಬ್ಬು,ನೆಲಗಡಲೆ. ಸಂಕ್ರಾಂತಿ ಕಾಳುಗಳನ್ನು ತಯಾರಿಸೋ ಕೆಲಸಕ್ಕೆ ಮಹಿಳೆಯರು ಅಣಿಯಾಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಜ್ಜುಗೊಂಡಿರ್ತಾರೆ. ಹೀಗಿರುವಾಗ ಯಾವತ್ತಾದ್ರೂ ಒಮ್ಮೆ ಯೋಚಿಸಿದ್ದೀರಾ? ಯಾಕೆ ಪ್ರತಿ ಹಬ್ಬಕ್ಕೂ ಒಂದು ಸಂಪ್ರದಾಯ, ಆಚರಣೆ ಅನ್ನೋದು ರೂಢಿಯಲ್ಲಿದೆ ಅನ್ನುವುದರ ಬಗ್ಗೆ. ಒಮ್ಮೆ ಯೋಚಿಸಿ. ಹಾಗಿದ್ದರೆ ದಕ್ಷಿಣ ಭಾರತದಲ್ಲಿ ಸಂಕ್ರಾಂತಿಯಂದು ಆಚರಿಸುವ ಆಚರಣೆಗಳ ಬಗ್ಗೆ ವಿವರಗಳನ್ನು ನಾವು ನೀಡುತ್ತಿದ್ದು ಇದು ನಿಮ್ಮನ್ನು ಕೌತುಕಗೊಳಿಸುವುದು ನಿಜ...

ಎಳ್ಳು ಬೆಲ್ಲದ ಮಿಶ್ರಣ

ಎಳ್ಳು ಬೆಲ್ಲದ ಮಿಶ್ರಣ

ಸಂಕ್ರಾಂತಿಯ ವಿಶೇಷ ತಿನಿಸಾದ ಇದಕ್ಕೆ ಪ್ರಮುಖವಾಗಿ ಬಳಕೆಯಾಗುವುದು ಬೆಲ್ಲ ಮತ್ತು ಎಳ್ಳಾಗಿದೆ. ಇದಕ್ಕೆ ನೆಲಗಡಲೆ, ತೆಂಗಿನ ಕಾಯಿ ತುಂಡು, ಹುರಿಗಡಲೆಯನ್ನು ಮಿಶ್ರ ಮಾಡಿ ಸಣ್ಣ ಸಣ್ಣ ಡಬ್ಬಿಗಳಲ್ಲಿ ತುಂಬಿ ಬಂಧು ಬಾಂಧವರಿಗೆ ನೀಡುವುದು ವಾಡಿಕೆ.

ಎಳ್ಳು ಮತ್ತು ಬೆಲ್ಲದ ಮಹತ್ವ

ಎಳ್ಳು ಮತ್ತು ಬೆಲ್ಲದ ಮಹತ್ವ

ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನು ನಾವು ಯಾರಿಗಾದರೂ ನೀಡುತ್ತೇವೆ ಎಂದಾದಲ್ಲಿ ನಾವು ಸ್ವತಂತ್ರರಾಗಿದ್ದು, ಆ ವ್ಯಕ್ತಿಯಿಂದ ಯಾವುದನ್ನೂ ಪಡೆದುಕೊಂಡಿಲ್ಲ ಎಂದಾಗಿದೆ. ಇನ್ನೊಂದು ಅರ್ಥದಲ್ಲಿ ಋಣಮುಕ್ತರು ಎಂಬುದನ್ನು ಇದು ಸೂಚಿಸುತ್ತದೆ. ನಮ್ಮ ಮಾತು ಸಿಹಿಯಾಗಿರಬೇಕು ಮತ್ತು ಇನ್ನೊಬ್ಬರಿಗೆ ಒಳಿತನ್ನೇ ಬಯಸಬೇಕು ಎಂಬುದನ್ನು ಬೆಲ್ಲ ಸೂಚಿಸುತ್ತದೆ.

ಕಬ್ಬು

ಕಬ್ಬು

ಸಂಬಂಧವನ್ನು ಗಟ್ಟಿಗೊಳಿಸುವುದನ್ನು ಕಬ್ಬು ಮಾಡುತ್ತದೆ. ನೀವು ಯಾವುದೇ ಕೆಲಸವನ್ನು ಮಾಡಿ ಅದರಲ್ಲಿ ದೃಢತೆ ಇರಲಿ ಎಂಬುದನ್ನು ಕಬ್ಬು ಸೂಚಿಸುತ್ತದೆ. ಸಿರಿ ಸಂಕ್ರಾಂತಿಯ ವಿಶೇಷ: ಸಿಹಿ ಕಬ್ಬಿನ ಮಹತ್ವವೇನು?

ಆಚರಣೆಗಳು

ಆಚರಣೆಗಳು

ಕರ್ನಾಟಕದಲ್ಲಿ, ಹೆಣ್ಣು ಮದುವೆಯಾದ ನಂತರ, ತನ್ನ ಪ್ರಥಮ ವರ್ಷದ ಸಂಕ್ರಾಂತಿಯಂದು, ಐದು ವರ್ಷಗಳಿಗೆ ಐದು ಬಾಳೆಹಣ್ಣುಗಳನ್ನು ಐದು ಮುತ್ತೈದೆಯರಿಗೆ ನೀಡುವುದು ವಾಡಿಕೆಯಾಗಿದೆ. ಪ್ರತೀ ವರ್ಷವೂ ಬಾಳೆಹಣ್ಣಿನ ಸಂಖ್ಯೆ ಹೆಚ್ಚುತ್ತದೆ. ಆದ್ದರಿಂದ ಪ್ರಥಮ ವರ್ಷ ಐದು ಬಾಳೆಹಣ್ಣಾದರೆ, ಎರಡನೇ ವರ್ಷ ಹತ್ತು ಹೀಗೆ ಬಾಳೆಹಣ್ಣಿನ ಸಂಖ್ಯೆ ಏರುತ್ತಾ ಹೋಗುತ್ತದೆ. ಐದನೇ ವರ್ಷ, ಇಪ್ಪತ್ತೈದು ಬಾಳೆಹಣ್ಣುಗಳನ್ನು ಐದು ಮುತ್ತೈದೆಯರಿಗೆ ಎಳ್ಳು ಬೆಲ್ಲ ಮತ್ತು ಕಬ್ಬಿನ ಮಿಶ್ರಣದೊಂದಿಗೆ

ನೀಡಬೇಕು.

ಸಂಪ್ರದಾಯಗಳು

ಸಂಪ್ರದಾಯಗಳು

ದಂಪತಿಗಳಿಗೆ ಗಂಡು ಮಗು ಜನಿಸಿದರೆ, ಮಗುವಿನ ಪ್ರಥಮ ಸಂಕ್ರಾಂತಿಯಂದು ಬೆಳ್ಳಿಯ ಕೃಷ್ಣನ ವಿಗ್ರಹವನ್ನು ತಮ್ಮ ಆತ್ಮೀಯರಿಗೆ ನೀಡಬೇಕು. ಇನ್ನು ಹೆಣ್ಣು ಮಗು ಹುಟ್ಟಿದಲ್ಲಿ ಸಣ್ಣ ಬೆಳ್ಳಿಯ ತಟ್ಟೆಯನ್ನು ಆತ್ಮೀಯರಿಗೆ ನೀಡಬೇಕು.

ಮೂರನೇ ದಿನ

ಮೂರನೇ ದಿನ

ಸಂಕ್ರಾಂತಿಯ ಕೊನೆಯ ದಿನ, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳು ನಾಡಿನ ಭಾಗದಲ್ಲಿರುವ ಜನರು ಹೆಚ್ಚು ವಿಜೃಂಭಣೆಯಿಂದ ಮಾಂಸಾಹಾರವನ್ನು ತಯಾರಿಸಿ ಹಬ್ಬವನ್ನು ಆಚರಿಸುತ್ತಾರೆ. ಇದು ಅವರ ಒಗ್ಗಟ್ಟು ಮತ್ತು ಕುಟುಂಬದ ಸಾಮರಸ್ಯವನ್ನು ಸಂಕೇತಿಸುತ್ತದೆ.

English summary

Rituals Followed For Sankranti In South India

Read more to know the interesting facts and rituals of Sankranti that is followed in South India. These customs and traditions have been followed from many years now. So, today, we shall brief you on the traditions and customs that are followed, specially in South India .
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X