For Quick Alerts
ALLOW NOTIFICATIONS  
For Daily Alerts

ಕಾಳಸರ್ಪ ದೋಷ ನಿವಾರಣೆಗೆ-ನಾಗರ ಪಂಚಮಿಯಂದು ಹೀಗೆ ಪೂಜೆ ಮಾಡಿ

By Deepu
|

ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಪ್ರಮುಖ ಹಬ್ಬವಾಗಿದೆ. ಈ ದಿನ ಪ್ರಮುಖವಾಗಿ ಹಾವಿಗೆ ಪೂಜೆಯನ್ನು ನಡೆಸಲಾಗುತ್ತದೆ ಮತ್ತು ಹುತ್ತಕ್ಕೆ ಹಾಲೆರೆಯಲಾಗುತ್ತದೆ. ಈ ದಿನ ಆಗಸ್ಟ್ 15 ರಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತಿದೆ. ಈ ದಿನ ಕಾಳಸರ್ಪ ಪೂಜೆಯನ್ನು ಮಾಡುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಬಹಳಷ್ಟು ಜನರು ನಾಗರ ಪಂಚಮಿಯ ಮಹತ್ವವನ್ನು ತಿಳಿಯದೆಯೇ ಅದನ್ನು ಆಚರಿಸುತ್ತಿರುತ್ತಾರೆ. ಈ ನಾಗ ದೇವತೆಯ ಆಚರಣೆಯ, ಪೂಜೆಯ ಮತ್ತು ನೈವೇಧ್ಯಗಳ ಹಿಂದೆ ಕೆಲವೊಂದು ಪುರಾಣ ಕತೆಗಳು ಮತ್ತು ಸತ್ಯಾಂಶಗಳು ಇವೆ.

ಪಂಚಮಿಯನ್ನು ಏಕೆ ಆಚರಿಸುತ್ತಾರೆ

ಪಂಚಮಿಯನ್ನು ಏಕೆ ಆಚರಿಸುತ್ತಾರೆ

ಇಡೀ ಭಾರತದಾದ್ಯಂತ ಈ ಹಬ್ಬವನ್ನು ಶ್ರದ್ಧಾ ಮತ್ತು ಭಕ್ತಿಗಳ ಜೊತೆಯಲ್ಲಿ ಆಚರಿಸಲಾಗುತ್ತದೆ. ಹಿಂದೂಗಳು ನಾಗರ ಪಂಚಮಿಯನ್ನು ಏಕೆ ಆಚರಿಸಲಾಗುತ್ತದೆ ಮತ್ತು ಅದರ ಹಿಂದಿನ ಕಾರಣಗಳೇನು? ಎಂಬುದನ್ನು ನಾಗರ ಪಂಚಮಿಯನ್ನು ನಾಗ ದೇವತೆಗಳನ್ನು ಅಂದರೆ ಹಾವುಗಳನ್ನು ಆರಾಧಿಸುವ ಒಂದು ಹಬ್ಬವಾಗಿ ಹಿಂದೂಗಳು ಆಚರಿಸುತ್ತಾರೆ. ಹಿಂದೂ ಧರ್ಮವು ಸತ್ಯವನ್ನು ಹುಡುಕುವುದರ ಸುತ್ತ ನೆಲೆಗೊಂಡಿರುವ ಒಂದು ನಂಬಿಕೆಯಾಗಿದೆ. ಹಿಂದೂಗಳಿಗೆ ಇದು ಜೀವನವನ್ನು ಮತ್ತು ಪ್ರಕೃತಿಯ ಶಕ್ತಿಗಳನ್ನು ಪೂಜಿಸುವ ಒಂದು ಮಾರ್ಗವಾಗಿ ಪ್ರಾಚೀನ ಕಾಲದಿಂದಲು ನಡೆದು ಬಂದಿದೆ. ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಐದನೆ ದಿನ ಅಂದರೆ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಬರುತ್ತದೆ.

ಕಾಳ ಸರ್ಪ ದೋಷವು ಜಾತಕದಲ್ಲಿ ಕಂಡುಬಂದರೆ

ಕಾಳ ಸರ್ಪ ದೋಷವು ಜಾತಕದಲ್ಲಿ ಕಂಡುಬಂದರೆ

ಈ ಹಬ್ಬವನ್ನು ಇದೇ ತಿಂಗಳುಗಳಲ್ಲಿ ಆಚರಿಸಲು ಹಿಂದಿರುವ ಪ್ರಧಾನ ಕಾರಣವೆಂದರೆ, ಈ ಸಮಯದಲ್ಲಿ ಹಾವುಗಳು ಜನರಿಗೆ ಭಯಭೀತಿಯನ್ನುಂಟು ಮಾಡಿರುತ್ತವೆ. ಮಳೆಯ ಕಾರಣದಿಂದ ಬಿಲಗಳಲ್ಲಿ ನೀರು ತುಂಬಿಕೊಂಡಾಗ ಹೊರ ಬರುವ ಹಾವುಗಳು ಜನರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಹಾವುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ. ನಾಗರ ಪಂಚಮಿಯಂದು ವಿಶೇಷವಾಗಿ ಕಾಳ ಸರ್ಪ ದೋಷವು ಜಾತಕದಲ್ಲಿ ಕಂಡುಬಂದರೆ ಅದಕ್ಕೆ ಬೇಕಾದ ದೋಷ ಪರಿಹಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಇದನ್ನು ಅಮಂಗಳ ಎಂದು ಕರೆಯಲಾಗಿದೆ. ಈ ಪೂಜೆಯನ್ನು ದೇವಸ್ಥಾನಗಳಲ್ಲಿ ತಿಂಗಳಿಗೆ ಒಮ್ಮೆಯಾಗಿ ಅರ್ಚಕರು ನಡೆಸಿಕೊಡುತ್ತಾರೆ.

ಪೂಜೆಗೆ ಬೇಕಾದ ಸಿದ್ಧತೆ

ಪೂಜೆಗೆ ಬೇಕಾದ ಸಿದ್ಧತೆ

ಈ ಪೂಜೆಗೆ ಬೇಕಾದ ಸಿದ್ಧತೆಗಳನ್ನು ಪ್ರಧಾನವಾಗಿ ಅರ್ಚಕರೇ ಮಾಡುತ್ತಾರೆ. ಕಾಳಸರ್ಪ ಯಾಗದ ಸಂದರ್ಭದಲ್ಲಿ ಪಠಿಸಬೇಕಾದ ಮಂತ್ರವನ್ನು ಕೆಳಗೆ ನೀಡಲಾಗಿದೆ. ಇದನ್ನು 108 ಬಾರಿ ಪಠಿಸಬೇಕು. ಮಂತ್ರವನ್ನು ಪಠಿಸಿದ ಮೇಲೆ ಶಿವಲಿಂಗಕ್ಕೆ ನೀವು ಹಾಲು ಅಭಿಷೇಕ ಮಾಡಬೇಕು.

ಮಂತ್ರ

ಮಂತ್ರ

ಓಂ ರಾಮ್ ರಾಹವೇ ನಮಃ ಅಥವಾ ಓಂ ಕರುಕುಲಯೇ ಹುಮ್ ಪಟ್ ಸ್ವಾಹಾ ಕಪ್ಪು ಎಳ್ಳು, ಕಪ್ಪು ಉದ್ದಿನ ಬೇಳೆ ಮತ್ತು ಬ್ಲ್ಯಾಕ್‌ಬೆರ್ರಿಯನ್ನು ನೀರಿನಲ್ಲಿ ಮುಳುಗಿಸಿಡಬೇಕು. ಕಾಳಸರ್ಪದ ಯಾಗದ ಋಣಾತ್ಮಕ ಅಂಶದಿಂದ ನಮಗೆ ಪರಿಹಾರ ದೊರೆಯುತ್ತದೆ ಎಂದು ನಂಬಲಾಗಿದೆ. ಈ ವಸ್ತುಗಳನ್ನು ದಾನ ಮಾಡುವುದರಿಂದ ಕೂಡ ಉದ್ದೇಶ ಈಡೇರುತ್ತದೆ.

ನಾಗರ ಪಂಚಮಿಯಂದು ನೀವು ಮಾಡಬೇಕಾದ ಇತರ ಸಂಗತಿಗಳು

ನಾಗರ ಪಂಚಮಿಯಂದು ನೀವು ಮಾಡಬೇಕಾದ ಇತರ ಸಂಗತಿಗಳು

*ಓಂ ರಾಮ್ ರಾಹವೇ ನಮಃ ಅಥವಾ ಓಂ ಕೇತು ಕೇತವೇ ನಮಃ ಮಂತ್ರವನ್ನು108 ಬಾರಿ ಪಠಿಸಬೇಕು. ನಂತರ ಶಿವಲಿಂಗಕ್ಕೆ ಹಾಲು ಅಭಿಷೇಕ ಮಾಡಿ.

*ಮಹಾಮೃತ್ಯುಂಜಯ ಮಂತ್ರ ಅಂತೆಯೇ ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ. ಮಧ್ಯ ಬೆರಳಿಗೆ ಉಂಗುರವನ್ನು ಧರಿಸಿ ಅದರಲ್ಲಿ ಹಾವಿನ ಚಿತ್ರವಿರಲಿ. ಕಾಳಸರ್ಪ ಯಾಗಕ್ಕಾಗಿ ಮಾಡಿಸಿರುವ ಯಾವುದೇ ಸಾಮಾಗ್ರಿಯನ್ನು ಈ ದಿನ ಧರಿಸಬೇಕು. ನಿಮ್ಮ ಜನ್ಮ ಕುಂಡಲಿಯನ್ನು ನೋಡಿದ ಜ್ಯೋತಿಷ್ಯರ ಸಲಹೆಯ ಮೇರೆಗೆ ಇದನ್ನು ಅನುಸರಿಸಿ.

*ಮರ್ಕ್ಯೂರಿ ಶಿವಲಿಂಗ 500 ಗ್ರಾಮ್ ತೂಕವಿರುವುದನ್ನು ತೆಗೆದುಕೊಳ್ಳಿ ಮತ್ತು ರುದ್ರಾಭಿಷೇಕವನ್ನು ಮಾಡಿ. ನಿಮ್ಮ ಮನೆಯಲ್ಲಿ ನವಿಲಿನ ಗರಿಯನ್ನು ಇಟ್ಟುಕೊಳ್ಳಿ.

*ಓಂ ನಮೋ ವಾಸುದೇವಾಯ ನಮಃ, ಈ ಮಂತ್ರವನ್ನು ಕೂಡ ಪಠಿಸಬೇಕು. ನವ ನಾಗ ಸ್ತ್ರೋತ್ರವನ್ನು ಕೂಡ ಪಠಿಸಿ ಮತ್ತು ರಾಹು ಯಂತ್ರವನ್ನು ಸಮೀಪದಲ್ಲಿಟ್ಟುಕೊಳ್ಳಿ. ಮಾರುಕಟ್ಟೆಯಿಂದ ರಾಹು ಯಂತ್ರವನ್ನು ನೀವು ಖರೀದಿಸಬಹುದು.

ಅಶ್ವತ್ಥ್ ಮರ

ಅಶ್ವತ್ಥ್ ಮರ

ಅಶ್ವತ್ಥ್ ಮರದ ಕೆಳಗೆ ಇರುವ ನಾಗದೇವರ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡಬೇಕು. ಅದು ಯಾವ ದೇವಸ್ಥಾನದ ಆವರಣದಲ್ಲಿರುವ ಅಶ್ವತ್ಥ್ ಮರ ಅಥವಾ ಆಲದ ಮರದಡಿಯಲ್ಲಿರುವ ನಾಗರ ಕಲ್ಲು ಆಗಿರಬಹುದು. ಅಭಿಷೇಕವನ್ನು 41 ದಿನಗಳಕಾಲ ಮಾಡಬೇಕು. ಜೊತೆಗೆ ನಾಗದೇವರಿಗೆ ಹೇಳುವ ಶ್ಲೋಕವನ್ನು ಹೇಳಬೇಕು. ಆದಷ್ಟು ಬೆಳಗಿನ ಜಾವದಲ್ಲಿ ಅಭೀಷೇಕ ಮತ್ತು ಪೂಜೆಯನ್ನು ಮಾಡಬೇಕು. ಹಾಲಿನ ಒಂದು ಭಾಗವನ್ನು ಆಲದ ಮರ/ಅಶ್ವತ್ಥ್ ಮರದ ಬೇರಿಗೆ ಹಾಕಬೇಕು.

ಗರುಡ ದೇವತೆ, ಸುಬ್ರಹ್ಮಣ್ಯ, ರಾಘವೇಂದ್ರ ಸ್ವಾಮಿ ಸಂಬಂಧಿಸಿದ ಸ್ತೋತ್ರಗಳು

ಗರುಡ ದೇವತೆ, ಸುಬ್ರಹ್ಮಣ್ಯ, ರಾಘವೇಂದ್ರ ಸ್ವಾಮಿ ಸಂಬಂಧಿಸಿದ ಸ್ತೋತ್ರಗಳು

ಶ್ರೀ ಕೃಷ್ಣನಿಗೆ ಸಂಬಂಧಿಸಿದ ಆರಾಧನೆ, ಸ್ತೋತ್ರ ಪಠಿಸುವುದು, ಲಕ್ಷ್ಮಿ, ನರಸಿಂಹ, ಹನುಮಂತ, ಗರುಡ ದೇವತೆ, ಸುಬ್ರಹ್ಮಣ್ಯ, ರಾಘವೇಂದ್ರ ಸ್ವಾಮಿ ಸಂಬಂಧಿಸಿದ ಸ್ತೋತ್ರಗಳನ್ನು ಹೇಳುವುದು ಹಾಗೂ ನಿತ್ಯ ಪೂಜೆ ಗೈಯುವುದರಿಂದ ಸರ್ಪದೋಷದ ಪರಿಹಾರವಾಗುವುದು ಎಂದು ಹೇಳಲಾಗುತ್ತದೆ

ವೃಕ್ಷಕ್ಕೆ 108 ಸುತ್ತು ಬನ್ನಿ

ವೃಕ್ಷಕ್ಕೆ 108 ಸುತ್ತು ಬನ್ನಿ

ಶ್ರಾವಣದ ಇತರ ದಿನ ಕಾಳಸರ್ಪ ಯೋಗಕ್ಕಾಗಿ ಪೂಜೆ

* ಪಂಚಮಿ ತಿಥಿ ಅಂದರೆ ಆಗಸ್ಟ್ 5 ಮತ್ತು ಆಗಸ್ಟ್ 15.

* ಆಗಸ್ಟ್ 6 ನವಮಿ ತಿಥಿಯಾಗಿರುವುದರಿಂದ ಈ ದಿನ ಪೂಜೆಯನ್ನು ನಡೆಸಬಹುದು

*ಆಗಸ್ಟ್ 9 ತ್ರಯೋದಶಿ ತಿಥಿಯಾಗಿರುವುದರಿಂದ ಈ ದಿನ ಪೂಜೆಯನ್ನು ನಡೆಸಬಹುದಾಗಿದೆ. ಈ ದಿನ ಕನ್ವಾರ್ ಪೂಜಾಸ್ಥಳದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕವನ್ನು ನಡೆಸಲಾಗುತ್ತದೆ. ಈ ದಿನ ಪ್ರದೋಷ ವೃತವನ್ನು ಕೈಗೊಳ್ಳಲಾಗುತ್ತದೆ.

*ಆಗಸ್ಟ್ 10 ಅಮವಾಸ್ಯೆ ತಿಥಿಯಾಗಿದೆ. ಚಂದ್ರನ ಕ್ಷೀಣಿಸುವ ಹಂತಹ ಹದಿನೈದನೇ ದಿನ ಪೂಜೆಗೆ ಉತ್ತಮವಾಗಿದೆ.

* ಆಗಸ್ಟ್ 11 ಅನ್ನು ಕೂಡ ಪೂಜೆಗೆ ಉತ್ತಮವೆಂದು ಪರಿಗಣಿಸಲಾಗಿದೆ

*ಆಗಸ್ಟ್ 15 ಪಂಚಮಿ ತಿಥಿಯಾಗಿದ್ದು ಶುಕ್ಷ ಪಕ್ಷದಂದು ಈ ತಿಥಿ ಬಂದಿದೆ.

*ಆಗಸ್ಟ್ 19 ನವಮಿ ತಿಥಿಯಾಗಿದ್ದು ಶುಕ್ಷ ಪಕ್ಷವಾಗಿದೆ

*ಆಗಸ್ಟ್ 20 ದಶಮಿ ತಿಥಿಯಾಗಿದ್ದು ಈ ದಿನ ಪೂಜೆಯನ್ನು ನಡೆಸಬಹುದಾಗಿದೆ

*ಆಗಸ್ಟ್ 24 ಶುಕ್ಷ ಪಕ್ಷದ ತ್ರಯೋದಶಿ ತಿಥಿಯಾಗಿದೆ.

ಅರ್ಚಕರ ಸಮ್ಮುಖದಲ್ಲಿಯೇ ಈ ಪೂಜೆಯನ್ನು ನಡೆಸಬೇಕು ಎಂಬುದನ್ನು ಮರೆಯಬಾರದು. ಐದು ಅಥವಾ ಆರು ದಿನಗಳ ಮುಂಚೆ ಅನುಷ್ಠಾನವನ್ನು ನಡೆಸಬೇಕು.

ಇತರ ಪರಿಹಾರ ಕ್ರಮಗಳು

ಇತರ ಪರಿಹಾರ ಕ್ರಮಗಳು

ತ್ರಯಂಬಕೇಶ್ವರ (ನಾಸಿಕ್) ದೇವಸ್ಥಾನದಲ್ಲಿ ಸರ್ಪ ಶಾಂತಿ; ಶ್ರೀ ಕಾಳಹಸ್ತಿ ದೇವಸ್ಥಾನದಲ್ಲಿ ರಾಹು-ಕೇತು ಪೂಜೆಯ ರುದ್ರಾಭಿಷೇಕದೊಂದಿಗೆ ಶಿವನ ಪೂಜೆ; ತಿರುಮಲ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಕಪಿಲ ತೀರ್ಥಂನಲ್ಲಿರುವ ರುದ್ರಭೀಶ್ಯಾಮ್/ ಸರ್ಪದೋಷ ನಿವಾರಣಾ ಪೂಜೆ; ಸಂಪೂರ್ಣ ಕುಜಾ-ರಾಹು-ಕೇತು ಶಾಂತಿ +ಗಣಪತಿ ಹೋಮ; ಸರ್ಪ ಸೂಕ್ತಂ ಜೊತೆ ಮಹಾನ್ಯಾಸ ಪೂರ್ವಕ ಏಕಾದಶಾವರಾ ರುದ್ರಾಭಿಷೇಕ ಮಾಡಿಸಬೇಕು.

English summary

Remedies On Naag Panchami To Remove Kalsarpa Dosha

Naag Panchami, falls on the fifth day of the fortnight, during the brighter phase of the Moon. This year it will be celebrated on August 15, 2018. This festival is considered very auspicious for performing the puja for Kalsarpa Yoga. However, there are many other auspicious dates for performing this puja during the month.
X
Desktop Bottom Promotion