For Quick Alerts
ALLOW NOTIFICATIONS  
For Daily Alerts

ಪಿತೃಪಕ್ಷದಲ್ಲಿ ಹೀಗೆ ಮಾಡಿದರೆ ಎಲ್ಲಾ ದೋಷ ನಿವಾರಣೆ

|

ವೈದಿಕ ಶಾಸ್ತ್ರದಲ್ಲಿ ಏನಾದರೂ ತೊಂದರೆಗಳು ಉಂಟಾದರೆ, ಕಷ್ಟಗಳು ನೀಗದೇ ಹೋದರೆ ಅದಕ್ಕೆ ದೋಷಗಳು ಕಾರಣವೆಂದು ಹೇಳಲಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕು ಉಂಟಾಗುವುದು, ಸಂತಾನ, ಸಾಂಸಾರಿಕ ಯೊಂದರೆಗಳು, ಅನಾರೋಗ್ಯ, ಮಗಳು ಅಥವಾ ಮಗನಿಗೆ ಕಂಕಣಭಾಗ್ಯ ಕೂಡಿ ಬರದಿರುವುದು ಇವೆಲ್ಲಾ ಯಾವುದೋ ಒಂದು ದೋಷದಿಂದಾಗಿ ಉಂಟಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

 pitru dosha remedies

ದೋಷಗಳಲ್ಲಿ ಚಂಡಾಳ ದೋಷ, ಗ್ರಹಣ ದೋಷ, ಸರ್ಪ ದೋಷ, ಪಿತೃ ದೋಷ ಹೀಗೆ ನೂರಾರು ಬಗೆಯ ದೋಷಗಳಿರುತ್ತವೆ. ಕೆಲವೊಮ್ಮೆ ನಮ್ಮ ಕುಂಡಲಿಯಲ್ಲಿ ಯಾವ ದೋಷವಿದೆಯೆಂದು ತಿಳಿದಿರುವುದಿಲ್ಲ, ಆದರೆ ಯಾವುದೋ ಒಂದು ಕಾರಣಕ್ಕೆ ಬದುಕಿನಲ್ಲಿ ಅನೇಕ ಕಷ್ಟಗಳು ಎದುರಾಗುತ್ತಿರುತ್ತವೆ.

ಈ ಎಲ್ಲಾ ದೋಷಗಳಿಗೆ ಒಂದೇ ಪರಿಹಾರವಿದೆಯೇ? ಎಂದು ನೋಡುವುದಾದರೆ ಜ್ಯೋತಿಷ್ಯ ಶಾಸ್ತ್ರ ಪಿತೃಗಳಿಗೆ ಶ್ರಾದ್ಧ ಮಾಡುವುದರಿಂದ ಈ ಎಲ್ಲಾ ದೋಷಗಳಿಗೆ ಪರಿಹಾರ ಸಿಗುವುದು ಎಂದು ಹೇಳಿದೆ.

ಪಿತೃರ ಆಶೀರ್ವಾದದಿಂದ ಚಂಡಾಳ ದೋಷ ನಿವಾರಣೆ

ಪಿತೃರ ಆಶೀರ್ವಾದದಿಂದ ಚಂಡಾಳ ದೋಷ ನಿವಾರಣೆ

ರಾಹು-ಬೃಹಸ್ಪತಿ ಜೊತೆಯಲ್ಲಿದ್ದರೆ ಗುರು ಚಂಡಾಳ ಯೋಗ ಬರುತ್ತದೆ. ಈ ಯೋಗ ಬಂದರೆ ಜೀವನದಲ್ಲಿ ಅನೇಕ ಕಷ್ಟಗಳು ಎದುರಾಗುತ್ತವೆ. ಅನಾರೋಗ್ಯ ಸಮಸ್ಯೆ ಕಾಡುವುದು, ಮಕ್ಕಲಿಗೆ ಕಂಕಣ ಬಲ ಕೂಡಿ ಬರುವುದಿಲ್ಲ, ಉದ್ಯೋಗದಲ್ಲಿ ಅಭದ್ರತೆ ಮುಂತಾದ ತೊಂದರೆ ಕಾಣಿಸುವುದು. ಈ ದೋಷ ನಿವಾರಣೆಗೆ ಪಿತೃ ಪಕ್ಷದಲ್ಲಿ ಪರಿಹಾರವಿದೆ.

ಪರಿಹಾರ: ಬಾಳೆಹಣ್ಣನ್ನು ಹಸಿದವರಿಗೆ ದಾನ ಮಾಡಿ. ಬೆಳಗ್ಗೆ ಮತ್ತು ಸಂಜೆ ಭಗವದ್ಗೀತೆಯ 11ನೇ ಅಧ್ಯಾಯ ಪಠಿಸಬೇಕು.

ಪಿತೃಪಕ್ಷ ಆಚರಣೆಯಿಂದ ಚಂದ್ರಗ್ರಹಣ ದೋಷಕ್ಕೂ ಪರಿಹಾರ

ಪಿತೃಪಕ್ಷ ಆಚರಣೆಯಿಂದ ಚಂದ್ರಗ್ರಹಣ ದೋಷಕ್ಕೂ ಪರಿಹಾರ

ಚಂದ್ರಗ್ರಹದ ದೋಷದಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ, ದಾಂಪತ್ಯ ಜೀವನದಲ್ಲೂ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಇದರ ದೋಷನಿವಾರಣೆಗೆ ಪಿತೃಪಕ್ಷದಲ್ಲಿ ಪರಿಹಾರ ಇದೆ.

ಪರಿಹಾರ: ಅಮಾವಾಸ್ಯೆ ದಿನ ನದಿಯಲ್ಲಿ ಸ್ನಾನ ಮಾಡಿ ಬಿಳಿಯ ಹೂಗಳಿಂದ ಗತಿಸಿದ ಪಿತೃರಿಗೆ ಆರ್ಘ್ಯ ನೀಡಬೇಕು, ಕಷ್ಟದಲ್ಲಿರುವ ಹೆಣ್ಣು ಮಕ್ಕಳಿಗೆ ವಸ್ತ್ರದಾನ ಮಾಡಬೇಕು, ಬಡವರಿಗೆ ಅಕ್ಕಿ ದಾನ ಮಾಡಬೇಕು.

ಸೂರ್ಯಗ್ರಹಣದ ದೋಷ ನಿವಾರಣೆಗೆ ಪಿತೃಪಕ್ಷದಲ್ಲಿ ಪರಿಹಾರ

ಸೂರ್ಯಗ್ರಹಣದ ದೋಷ ನಿವಾರಣೆಗೆ ಪಿತೃಪಕ್ಷದಲ್ಲಿ ಪರಿಹಾರ

ಸೂರ್ಯಗ್ರಹಣ ದೂಷದಿಂದ ಸಂಬಂಧಗಳಲ್ಲಿ ಸಮಸ್ಯೆ ಕಂಡು ಬರುತ್ತದೆ, ಕಣ್ಣಿನ ಆರೋಗ್ಯದಲ್ಲೂ ತೊಂದರೆ ಉಂಟಾಗುತ್ತದೆ.

ಪರಿಹಾರ: ಸೂರ್ಯನಿಗೆ ಎಳ್ಳಿನ ಆರ್ಘ್ಯ ಅರ್ಪಿಸಬೇಕು. ಮಹಾಲಯ ಅಮಾವಾಸ್ಯೆ ದಿನ ಪಿತೃರಿಗೆ ತರ್ಪಣ ನೀಡಬೇಕು. ಈ ರೀತಿ ಮಾಡುವುದರಿಂದ ಎಲ್ಲಾ ದೋಷಗಳು ನಿವಾರಣೆಯಾಗುವುದು.

ತರ್ಪಣ ನೀಡುವಾಗ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು

ತರ್ಪಣ ನೀಡುವಾಗ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು

* ಬೆಳಗ್ಗೆ ಮತ್ತು ಸಂಜೆ ಸ್ನಾನ ಮಾಡಿ ಗತಿಸಿದ ಪಿತೃರನ್ನು ಮನಸ್ಸಿನಲ್ಲಿ ಧ್ಯಾನಿಸಬೇಕು.

* ತರ್ಪಣವನ್ನು ಮಧ್ಯಾಹ್ನದ ಹೊತ್ತಿನಲ್ಲಿ ನೀಡಬೇಕು.

* ತರ್ಪಣ ಅರ್ಪಿಸುವಾಗ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿಂತು ತರ್ಪಣ ನೀಡಬೇಕು.

* ಆ ದಿನ ಸಾತ್ವಿಕ ಆಹಾರ ಮಾತ್ರ ಸೇವಿಸಿ.

* ತರ್ಪಣವನ್ನು ನೀಡುವಾಗ ಸಾಲ ಮಾಡಿ ನೀಡಬಾರದು, ತಮಗೆ ಅನುಕೂಲವಾಗುವಂತೆ ಅರ್ಪಿಸಿದರೆ ಸಾಕು, ಏನೂ ಇಲ್ಲ ಅಂದರೂ ಎಳನೀರು ಅರ್ಪಿಸಿದರೂ ಹಿರಿಯರಿಗೆ ತೃಪ್ತಿ ಉಂಟಾಗುತ್ತದೆ.

English summary

Pitra Paksha 2020: Remedies for Pitra Dosha in Kundli in Kannada

Here are the remedies through vedic astrology for pitru dosha. Read on.
X
Desktop Bottom Promotion