For Quick Alerts
ALLOW NOTIFICATIONS  
For Daily Alerts

ಮಕರ ಸಂಕ್ರಾಂತಿ ಆಚರಣೆಯ ಹಿಂದಿನ ಕಾರಣಗಳೇನು ಗೊತ್ತೇ?

|

ಮಕರ ಸಂಕ್ರಾಂತಿ ಹಿಂದೂಗಳಿಗೆ ತುಂಬಾ ಮಹತ್ವವಾದ ದಿನವಾಗಿದೆ. ಮಕರ ಸಂಕ್ರಾಂತಿಯನ್ನು ಭಾರತದ ಎಲ್ಲೆಡೆ ಆಚರಿಸಲಾಗುವುದು. ಭಕ್ತರು ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಮಾಡುತ್ತಾರೆ.

ಮಕರ ಸಂಕ್ರಾಂತಿಯನ್ನು ಒಂದೊಂದು ಕಡೆ ಒಂದೊಂದು ಹೆಸರಿನಲ್ಲಿ ಆಚರಣೆ ಮಾಡಲಾಗುವುದು. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ, ಆಂಧ್ರಪ್ರದೇಶ ತಮಿಳುನಾಡಿನಲ್ಲಿ ಪೊಂಗಲ್‌, ಪಂಜಾಬ್‌, ಹರಿಯಾಣದಲ್ಲಿ ಲೋಹರಿ (ಇದನ್ನು ಮಕರ ಸಂಕ್ರಾಂತಿ ಹಿಂದಿನ ದಿನ ಅಂದ್ರೆ ಜನವರಿ 13ಕ್ಕೆ ಆಚರಿಸಲಾಗುವುದು), ಅಸ್ಸಾಂನಲ್ಲಿ ಮಘಾ ಬಿಹು ಬಿಹಾರದಲ್ಲಿ ಕಿಚಡಿ ಎಂದು ಆಚರಿಸಲಾಗುವುದು.

ಮನೆಮಂದಿಯೆಲ್ಲಾ ಒಟ್ಟಾಗಿ ಎಳ್ಳು-ಬೆಲ್ಲ ಮಾಡಿ ಸವಿಯುತ್ತಾರೆ, ಪೊಂಗಲ್‌, ಕಿಚಡಿ ಇಮಥವುಗಳನ್ನು ಮಾಡಿ ಸವಿಯಲಾಗುವುದು. ಗುಜರಾತ್‌ ಮುಂತಾದ ಕಡೆ ಗಾಳಿಪಟವನ್ನು ಹಾರಿಸಿ ಸಂಭ್ರಮಿಸಲಾಗುವುದು.

ಒಂದೊಂದು ಹಬ್ಬದ ಆಚರಣೆಯ ಹಿಂದೆ ಒಂದೊಂದು ಕಾರಣವಿರುತ್ತದೆ, ಹಾಗೆಯೇ ಮಕರ ಸಂಕ್ರಾಂತಿ ಆಚರಣೆಯ ಹಿಂದಿರುವ ಕಾರಣಗಳನ್ನು ನೋಡುವುದಾದರೆ:

1. ಹಿಂದುಗಳಿಗೆ ಪ್ರಮುಖ ಹಬ್ಬ

1. ಹಿಂದುಗಳಿಗೆ ಪ್ರಮುಖ ಹಬ್ಬ

ಮಕರ ಸಂಕ್ರಾಂತಿ ಕೊಯ್ಲು ಸಮಯದಲ್ಲಿ ಆಚರಿಸುವ ಹಬ್ಬವಾಗಿದೆ. ಇದನ್ನು ತುಂಬಾ ಅದ್ಧೂರಿಯಾಗಿ ಆಚರಿಸಲಾಗುವುದು. ಈ ಹಬ್ಬದ ವಿಶೇಷತೆಯೆಂದರೆ ಬೇರೆಯೆಲ್ಲಾ ಹಬ್ಬಗಳನ್ನು ಚಾಂದ್ರಮಾನ ಕ್ಯಾಲೆಂಡರ್‌ ನೋಡಿ ಆಚರಿಸಲಾಗುವುದು. ಈ ಹಬ್ಬವನ್ನು ಸೌರಮಾನ ಕ್ಯಾಲೆಂಡರ್ ನೋಡಿ ಆಚರಿಸಲಾಗುವುದು. ಈ ದಿನ ಎಳ್ಳು-ಬೆಲ್ಲ ಮಾಡಿ ಹಂಚಲಾಗುವುದು. ಎಳ್ಳು-ಬೆಲ್ಲ ತಿನ್ನುವುದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಚಳಿಗಾಲದಲ್ಲಿ ತ್ವಚೆ ಒಣಗಿರುತ್ತದೆ, ತ್ವಚೆಯನ್ನು ರಕ್ಷಣೆ ಮಾಡುವಲ್ಲಿ ಎಳ್ಳು ಸಹಕಾರಿ ಅಲ್ಲದೆ ಬೆಲ್ಲ ದೇಹವನ್ನು ಬೆಚ್ಚಗಿಡುವುದು.

2. ಸೂರ್ಯ ಸಂಕ್ರಮಣ

2. ಸೂರ್ಯ ಸಂಕ್ರಮಣ

ಜ್ಯೋತಿಷ್ಯದ ಪ್ರಕಾರ ಮಕರ ಸಂಕ್ರಾಂತಿಯಂದು ಸೂರ್ಯ ಸಂಕ್ರಮಣವಾಗುವುದು. ಅಂದರೆ ಜನವರಿ 14ಕ್ಕೆ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಮಕರರಾಶಿಯ ಅಧಿಪತಿ ಶನಿ. ಶನಿ ಸೂರ್ಯದೇವನ ಪುತ್ರ. ಇದೀಗ ಸೂರ್ಯ ಮಕರ ರಾಶಿ ಪ್ರವೇಶಿಸುವುದರಿಂದ ಸೂರ್ಯನು ಪುತ್ರನ ಜೊತೆ ಮಕರ ರಾಶಿಯಲ್ಲಿ ಇರಲಿದ್ದಾನೆ. ಇದರಿಂದ ಒಳಿತಾಗುವುದು ಎಂಬ ನಂಬಿಕೆ.

3. ರೈತರಿಗೆ ಸುಗ್ಗಿಯ ಕಾಲ

3. ರೈತರಿಗೆ ಸುಗ್ಗಿಯ ಕಾಲ

ರೈತರು ಬೆಳೆದ ಬೆಳೆ ಕಟಾವಿಗೆ ಬಂದಿರುತ್ತದೆ. ಇದು ಸುಗ್ಗಿಯ ಸಮಯ. ರೈತರು ಸುಗ್ಗಿಯ ಸಂಭ್ರಮವನ್ನು ಮಕರ ಸಂಕ್ರಾಂತಿ ಆಚರಣೆ ಮೂಲಕ ಆಚರಿಸುತ್ತಾರೆ. ಇಷ್ಟು ದಿನ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಸಮಯ, ಬೆಳೆ ಕೊಯ್ಲು ಆದ ಮೇಲೆ ಸ್ವಲ್ಪ ವಿಶ್ರಾಂತಿ ಸಿಗುವುದು.

4. ಮಹಿಳೆಯರು ಮುತ್ತೈದೆ ಭಾಗ್ಯ ನೀಡುವಂತೆ ದೇವರನ್ನು ಪ್ರಾರ್ಥಿಸುತ್ತಾರೆ

4. ಮಹಿಳೆಯರು ಮುತ್ತೈದೆ ಭಾಗ್ಯ ನೀಡುವಂತೆ ದೇವರನ್ನು ಪ್ರಾರ್ಥಿಸುತ್ತಾರೆ

ಉತ್ತರ ಭಾರತದ ಕಡೆ ಮಕರ ಸಂಕ್ರಾಂತಿಯಂದು ಮಹಿಳೆಯರು ಪುಣ್ಯ ನದಿಯಲ್ಲಿ ಮುಳುಗಿ ಗಂಡನಿಗೆ ದೀರ್ಘಾಯುಸ್ಸು ನೀಡುವಂತೆ ಪ್ರಾರ್ಥಿಸುತ್ತಾರೆ. ನಂತರ ಗಂಡನ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಾರೆ. ಅಲ್ಲದೆ ಈ ದಿನದಿಂದ ಕುಂಭಮೇಳ ಶುರುವಾಗುವುದು.

 5. ಉತ್ತಾರಾಯಣ ಪ್ರಾರಂಭ

5. ಉತ್ತಾರಾಯಣ ಪ್ರಾರಂಭ

ಮಕರ ಸಂಕ್ರಾಂತಿಯಿಂದ ಉತ್ತಾರಾಯಣ ಪ್ರಾರಂಭ. ಮಕರ ಸಂಕ್ರಾಂತಿ ಪ್ರಾರಂಭವಾದಾಗಿನಿಂದ 6 ತಿಂಗಳು ಉತ್ತಾರಾಯಣ ಸಮಯ. ಈ ಸಮಯದಲ್ಲಿ ಮರಣವೊಂದಿದವರು ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಇದೆ. ಮಹಾಭಾರತ ಕತೆಯಲ್ಲಿ ಭೀಷ್ಮ ಉತ್ತರಾಯಣ ಕಾಲದವರೆಗೆ ಕಾದು ನಂತರ ದೇಹ ತ್ಯಾಗ ಮಾಡಿದರು ಎಂಬ ಉಲ್ಲೇಖವಿದೆ.

ಹೀಗೆ ಈ ಎಲ್ಲಾ ಕಾರಣಗಳಿಂದಾಗಿ ಮಕರ ಸಂಕ್ರಾಂತಿ ತುಂಬಾ ಶುಭ ದಿನನವಾಗಿದೆ. ಅಲ್ಲದ ವರ್ಷದ ಮೊದಲ ಹಬ್ಬ ಇದಾಗಿರುವುದರಿಂದ ತುಂಬಾ ಸಡಗರ-ಸಂಭ್ರಮದಿಂದ ಆಚರಿಸಲಾಗುವುದು.

English summary

Reasons Why We Should Celebrate Makar Sankranti in Kannada

Reasons why celebrate Makar Sankranti, read on...
X