For Quick Alerts
ALLOW NOTIFICATIONS  
For Daily Alerts

ಶುಕ್ರವಾರ ತುಂಬಾ ಶುಭ ದಿನವೆಂದು ಹೇಳುವುದು ಇದೇ ಕಾರಣಕ್ಕೆ

|

ವಾರದಲ್ಲಿ 7 ದಿನ, ಹಿಂದೂ ಧರ್ಮದ ಪ್ರಕಾರ ಒಂದೊಂದು ದಿನಕ್ಕೆ ಒಂದೊಂದು ವಿಶೇಷವಿದೆ. ಆದರೆ ಶುಕ್ರವಾರಕ್ಕೇ ತುಂಬಾನೇ ಮಹತ್ವವಿದೆ. ಶುಕ್ರವಾರದಂದು ದೇವಿ ಪೂಜೆಗೆ ಶ್ರೇಷ್ಠವೆಂದು ಹೇಳಲಾಗುವುದು.

ಶಕ್ತಿ ದೇವತೆ ದುರ್ಗಾಮಾತೆ, ಕಾಳಿ, ಲಕ್ಷ್ಮೀ, ಸರಸ್ವತಿ ಈ ಎಲ್ಲಾ ದೇವತೆಗಳನ್ನು ಶುಕ್ರವಾರ ಆರಾಧಿಸುವುದರಿಂದ ತುಂಬಾ ಒಳಿತಾಗುವುದು ಎಂಬ ನಂಬಿಕೆ ಇದೆ.

ಶುಕ್ರವಾರ ಶುಕ್ರಗ್ರಹಕ್ಕೆ ಸಂಬಂಧಿಸಿದ ದಿನ, ಶುಕ್ರ ಗ್ರಹವನ್ನು ದಾನವರ ಗುರು ಎಂದು ಹೇಳಲಾಗುವುದು. ಅಲ್ಲದೆ ಶುಕ್ರಗ್ರಹ ಸೌಂದರ್ಯ, ಐಶ್ವರ್ಯ ಮತ್ತು ಶುಭ ವಿಷಯಕ್ಕೆ ಸಂಬಂಧಿಸಿದ್ದಾಗಿದೆ.

ಶುಕ್ರವಾರದ ಉಪವಾಸದ ಮಹತ್ವ

ಶುಕ್ರವಾರದ ಉಪವಾಸದ ಮಹತ್ವ

ಶುಕ್ರವಾರದಂದು ತುಂಬಾ ಜನರು ಉಪವಾಸ ಆಚರಿಸುತ್ತಾರೆ. ಕುಟುಂಬದಲ್ಲಿ ನೆಮ್ಮದಿ, ಸಂತೋಷ, ಸಮೃದ್ಧಿಗಾಗಿ ಉಪವಾಸವಿದ್ದು ದೇವಿಯನ್ನು ಆರಾಧಿಸಲಾಗುವುದು.

ಒಂದು ಶುಕ್ರವಾರ ಉಪವಾಸ ಆಚರಿಸಿದರೆ 16 ಶುಕ್ರವಾರ ಉಪವಾಸ ಆಚರಿಸಬೇಕು, 17ನೇ ಶುಕ್ರವಾರದಂದು 16 ವರ್ಷದ ಕೆಳಗಿನ ಹೆಣ್ಮಕ್ಕಳನ್ನು ಮನೆಗೆ ಆಹ್ವಾನಿಸಿ ಅವರಿಗೆ ಉಡುಗೊರೆ, ಹಣ್ಣುಗಳನ್ನು ನೀಡಿದರೆ ಉಪವಾಸ ಮುಕ್ತಾಯವಾಗುವುದು.

ಶುಕ್ರವಾರದಂದು ಲಕ್ಷ್ಮೀಯ ಆರಾಧನೆ

ಶುಕ್ರವಾರದಂದು ಲಕ್ಷ್ಮೀಯ ಆರಾಧನೆ

ಶುಕ್ರವಾರದಂದು ಲಕ್ಷ್ಮೀಯ ಆರಾಧನೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುವುದು. ಆರ್ಥಿಕ ಸಂಕಷ್ಟದಲ್ಲಿ ಇರುವವರು ಲಕ್ಷ್ಮೀಯ ಪೂಜೆ ಮಾಡುವುದರಿಂದ ಅವಳ ಕೃಪೆಯಿಂದ ಕಷ್ಟಗಳು ದೂರವಾಗುವುದು. ಲಕ್ಷ್ಮಿ ಪೂಜೆ ಮಾಡುವಾಗ ಕಲಸ ಇಡಬೇಕು ಜೊತೆಗೆ ಅಡಿಕೆಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಇಡಬೇಕು. ಪ್ರತೀ ಶುಕ್ರವಾರ ಅಡಿಕೆಯನ್ನು ಬದಲಾಯಿಸಬಹುದು. ಹೀಗೆ ಮಾಡುವುದರಿಂದ ಸಂಪತ್ತು, ಆರೋಗ್ಯ ವೃದ್ಧಿಯಾಗುವುದು.

ಶುಕ್ರವಾರದಂದು ಈ ಮಂತ್ರ ಪಠಿಸಿ

ಶುಕ್ರವಾರದಂದು ಈ ಮಂತ್ರ ಪಠಿಸಿ

ಲಕ್ಷ್ಮೀ ಬೀಜಮಂತ್ರ 1

||ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ|

ಲಕ್ಷ್ಮೀ ಬೀಜಮಂತ್ರ 2

||ಓಂ ಶ್ರಿಂಗ್ ಶ್ರೀಯೇ ನಮಃ||

ಲಕ್ಷ್ಮೀ ಗಾಯತ್ರಿ ಮಂತ್ರ

||ಓಂ ಶ್ರೀ ಮಹಾಲಕ್ಷ್ಮೈಚ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್ ಓಂ||

ಇದನ್ನು 108 ಬಾರಿ ಪಠಿಸಿದರೆ ಒಳ್ಳೆಯದು.

ದಾನ ಮಾಡಿ

ದಾನ ಮಾಡಿ

ದೇವಿಯನ್ನು ಪೂಜಿಸಿದಷ್ಟೇ ಫಲ ದಾನ ಮಾಡುವುದರಿಂದಲೂ ಸಿಗುವುದು. ಶುಕ್ರವಾರದಂದು ದೇವಾಲಯಕ್ಕೆ ಧೂಪ, ದ್ರವ್ಯಗಳನ್ನು ಅರ್ಪಿಸಿ. ಬಡವರಿಗೆ ದಾನ ಮಾಡಿ. ದಾನ ಮಾಡುವುದರಿಂದ ನಿಮ್ಮ ಪುಣ್ಯದ ಫಲ ಹೆಚ್ಚುವುದು.

English summary

Reasons Why Fridays Are Considered Auspicious For Hindu

Reasons why fridays are considered auspicious for hindu, read on....
Story first published: Thursday, June 24, 2021, 18:24 [IST]
X
Desktop Bottom Promotion