For Quick Alerts
ALLOW NOTIFICATIONS  
For Daily Alerts

ಅಂದು ಶಿವನ ಶಾಪಕ್ಕೆ 'ಬ್ರಹ್ಮನಿಗೆ' ಪೂಜೆಯೇ ನಿಂತು ಹೋಯಿತು!

|

ಹಿಂದೂ ಧರ್ಮದಲ್ಲಿ ಹಲವಾರು ದೇವರುಗಳಿವೆ. ಪ್ರತಿಯೊಂದು ದೇವರಿಗೂ ವಿಶೇಷ ಆರಾಧನೆ ಹಾಗೂ ಹರಕೆಗಳನ್ನು ಹೇಳಿಕೊಳ್ಳುವುದು ಸಹಜ ವಾಗಿರುವುದನ್ನು ಕಾಣಬಹುದು. ಜೊತೆಗೆ ಪ್ರತಿಯೊಂದು ದೇವರಿಗೂ ವಿಶಿಷ್ಟವಾದ ಸ್ಥಳದಲ್ಲಿ ದೇವಸ್ಥಾನ ಇರುವುದನ್ನು ನಾವು ಕಾಣುತ್ತೇವೆ. ಬಹಳ ಶಕ್ತಿ ಶಾಲಿ ದೇವರು ಹಾಗೂ ಪ್ರಪಂಚದ ಸೃಷ್ಟಿ, ಪಾಲನೆ ಹಾಗೂ ಲಯ ಎಂದು ಪರಿಗಣಿಸಲಾದ ದೇವರುಗಳು ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರ. ಬ್ರಹ್ಮ ಪ್ರಪಂಚದ ಸೃಷ್ಟಿಕರ್ತನಾದರೆ, ವಿಷ್ಣು ಸೃಷ್ಟಿಯ ಪಾಲಕ, ಅದೇ ರೀತಿ ಶಿವನು ಸೃಷ್ಟಿಯ ಲಯಕಾರಕ ಎಂದು ಪರಿಗಣಿಸಲಾಗುತ್ತದೆ.

ಈ ಶಕ್ತಿಶಾಲಿ ದೇವರುಗಳಿಗೆ ಮನುಜ ಕುಲವು ವಿಶೇಷ ಆರಾಧನೆ ಹಾಗೂ ಪೂಜೆ ಪುನಸ್ಕಾರಗಳನ್ನು ನಡೆಸುತ್ತದೆ. ಅದರಲ್ಲಿ ವಿಷ್ಣು ಮತ್ತು ಶಿವನಿಗೆ ಪ್ರಪಂಚದೆಲ್ಲೆಡೆ ವಿಶೇಷ ಪವಿತ್ರ ಸ್ಥಳಗಳಿರುವುದು ಹಾಗೂ ಭಕ್ತಾದಿಗಳು ಪೂಜೆಗೈಗೊಳ್ಳುವುದನ್ನು ನೋಡಬಹುದು. ಆದರೆ ಸೃಷ್ಟಿ ಕರ್ತನಾದ ಬ್ರಹ್ಮನಿಗೆ ಎಲ್ಲೂ ವಿಶೇಷ ದೇವಸ್ಥಾನಗಳಿರುವುದು ಅಥವಾ ಪೂಜೆ ಮಾಡುವ ಪರಿಯನ್ನು ಎಲ್ಲೂ ಕಾಣುವುದಿಲ್ಲ. ಏಕೆ? ಎನ್ನುವ ಪ್ರಶ್ನೆ ಕೆಲವೊಮ್ಮೆ ನಿಮಗೂ ಕಾಡಿರಬಹುದು. ಅದಕ್ಕೆ ಉತ್ತರವನ್ನು ಕೊಡಲು ಬೋಲ್ಡ್ ಸ್ಕೈ ಇಂದು ನಿಮಗೆ ಈ ವಿಚಾರವನ್ನು ತಿಳಿಸಿಕೊಡುತ್ತಿದೆ.

ಪುರಾಣ ಕಥೆ ಹಾಗೂ ಗ್ರಂಥಗಳ ಪ್ರಕಾರ ಬ್ರಹ್ಮನು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯ ಸೃಷ್ಟಿಕರ್ತ ಎಂದು ಹೇಳಲಾಗುತ್ತದೆ. ಜ್ಞಾನದ ದೇವರಾದ ಬ್ರಹ್ಮನು ನಾಲ್ಕು ಮುಖವನ್ನು ಹೊಂದಿದ್ದಾನೆ. ಈ ನಾಲ್ಕು ಮುಖವು ನಾಲ್ಕು ಶಕ್ತಿ ದೇವತೆಗಳ ಮುಖ ಎಂದು ಹೇಳಲಾಗುವುದು. ಈ ಎಲ್ಲಾ ವಿಚಾರವನ್ನು ತಿಳಿದಿದ್ದರೂ ಬ್ರಹ್ಮನನ್ನು ಯಾರೂ ಆರಾಧಿಸುವುದಿಲ್ಲ. ಬ್ರಹ್ಮ ದೇವರಿಗಾಗಿ ಯಾರೂ ಒಂದು ದೇವಸ್ಥಾನವನ್ನು ಕಟ್ಟಲಿಲ್ಲ... ಇದಕ್ಕೆ ಕಾರಣ ಏನು ಎಂದು ತಿಳಿಯಲು ಮುಂದೆ ಓದಿ...

ಶಿವನ ಶಾಪ

ಶಿವನ ಶಾಪ

ದಂತಕಥೆಗಳ ಪ್ರಕಾರ ಬ್ರಹ್ಮ ಮತ್ತು ವಿಷ್ಣು ಒಮ್ಮೆ ಸ್ವಯಂ-ಪ್ರಾಮುಖ್ಯತೆಯಿಂದ ಹೊರ ಬಂದರು. ಅವರಿಬ್ಬರಲ್ಲಿ ಯಾರು ಹೆಚ್ಚು ಶ್ರೇಷ್ಠರು ಎಂಬ ವಾದ ಪ್ರಾರಂಭವಾಯಿತು. ಈ ವಾದವು ಅತ್ಯಂತ ಗಂಭೀರ ಸ್ಥಿತಿಗೆ ತಲುಪಿತು. ಆ ಸಂದರ್ಭದಲ್ಲಿ ಶಿವನು ಮಧ್ಯ ಪ್ರವೇಶಿಸಬೇಕಾಯಿತು. ಶಿವನು ದೈತ್ಯಾಕಾರದ ಲಿಂಗರೂಪವನ್ನು ತಾಳಿದನು. ಲಿಂಗವು ಬೆಂಕಿಯ ರೂಪದಿಂದ ಕೂಡಿತ್ತು. ಅದು ಆಕಾಶದಿಂದ ಪಾತಾಳದವರೆಗೆ ವಿಸ್ತೀರ್ಣ ಹೊಂದಿತ್ತು. ಆಗ ಲಿಂಗವು ಬ್ರಹ್ಮ ಮತ್ತು ವಿಷ್ಣುವಿಗೆ ಹೇಳಿತು..."ಲಿಂಗದ ಅಂತ್ಯದ ಜಾಗ ಯಾವುದು ಎಂದು ಯಾರು ಮೊದಲು ಕಂಡು ಹಿಡಿಯುತ್ತಾರೋ ಅವರೇ ಶ್ರೇಷ್ಠರು" ಎಂದು ಘೋಷಿಸಲಾಗುವುದು ಎಂದು ಹೇಳಿತು.

ಬ್ರಹ್ಮ ಶಿವನಿಗೆಯೇ ಮೋಸ ಮಾಡಲು ಯೋಚಿಸಿದನು!

ಬ್ರಹ್ಮ ಶಿವನಿಗೆಯೇ ಮೋಸ ಮಾಡಲು ಯೋಚಿಸಿದನು!

ಬ್ರಹ್ಮ ಮತ್ತು ವಿಷ್ಣು ಈ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದರು. ಅಂತೆಯೇ ಲಿಂಗದ ಅಂತ್ಯ ಎಲ್ಲಿದೆ ಎನ್ನುವುದನ್ನು ಹುಡುಕಲು ಪ್ರಾರಂಭಿಸಿದರು. ಒಂದು ವರ್ಷಗಳ ಕಾಲ ಹುಡುಕಾಟ ನಡೆಸುತ್ತಲೇ ಇದ್ದರೂ, ಅಂತ್ಯ ಎಲ್ಲಿ ಎನ್ನುವುದು ಗುರುತಿಸಲು ಸಾಧ್ಯವಾಗದೆ ಹೋಯಿತು. ಆಗ ಲಿಂಗಕ್ಕೆ ಅಂತ್ಯವಿಲ್ಲ ಎನ್ನುವುದನ್ನು ಅರಿತರು. ವಿಷ್ಣುವು ಮೂರು ಲೋಕಕ್ಕೂ ಶಿವನೇ ಅತ್ಯಂತ ಶ್ರೇಷ್ಠ ಎಂದು ಅರಿತುಕೊಂಡನು. ಆದರೆ ಬ್ರಹ್ಮ ಶಿವನನ್ನು ಮೋಸಗೊಳಿಸಲು ನಿರ್ಧರಿಸಿದನು. ಬ್ರಹ್ಮನು ಲಿಂಗದ ಮೇಲಿನ ಭಾಗವನ್ನು ತಲುಪಿದನು. ಜೊತಗೆ ಅಂತ್ಯವನ್ನು ಕಂಡಿರುವುದಾಗಿಯೂ ಅದಕ್ಕೆ ಸಾಕ್ಷಿಯಾಗಿ ಕೇತಕಿ ಪುಷ್ಪವನ್ನು ಅವನು ಕೋರಿದನು. ಕೇತಕಿ ಹೂವು ಒಪ್ಪಿಕೊಂಡಿತು.

ಸುಳ್ಳಿಗೆ ಸಹಕರಿಸಿದ ಕೇತಕಿ ಹೂವು...

ಸುಳ್ಳಿಗೆ ಸಹಕರಿಸಿದ ಕೇತಕಿ ಹೂವು...

ಈ ಸಂಗತಿಯನ್ನು ಶಿವನ ಮುಂದೆ ತಂದಾಗ. ಹೂವು ಬ್ರಹ್ಮನ ಪರವಾಗಿ ಸುಳ್ಳು ಸಾಕ್ಷಿ ಹೇಳಿದೆ ಎಂದು ಶಿವನಿಗೆ ತಿಳಿಯಿತು. ಇದರಿಂದ ಕೋಪಗೊಂಡ ಶಿವನು ಬ್ರಹ್ಮನಿಗೆ ಶಾಪ ನೀಡಿದನು. ಯಾವುದೇ ಮನುಷ್ಯನಿಂದ, ಎಂದಿಗೂ ಬ್ರಹ್ಮನನ್ನು ಆರಾಧಿಸಲ್ಪಡುವುದಿಲ್ಲ ಎಂದು ಶಪಿಸಿದನು. ಈ ಸುಳ್ಳಿಗೆ ಸಹಕರಿಸಿದ ಕೇತಕಿ ಹೂವನ್ನು ಯಾವುದೇ ಆಚರಣೆಯಲ್ಲಿ ಬಳಸಲಾಗುವುದಿಲ್ಲ ಎಂದು ಶಾಪ ನೀಡಿದನು. ಅಂದಿನಿಂದ ಯಾರೂ ಬ್ರಹ್ಮನನ್ನು ಪೂಜಿಸಲಿಲ್ಲ ಎನ್ನಲಾಗುತ್ತದೆ.

ಸರಸ್ವತಿಯ ಶಾಪ

ಸರಸ್ವತಿಯ ಶಾಪ

ಇನ್ನೊಂದು ದಂತಕಥೆಯ ಪ್ರಕಾರ, ಬ್ರಹ್ಮನು ಹುಟ್ಟಿದ ನಂತರ ಶೀಘ್ರದಲ್ಲಿಯೇ ಸರಸ್ವತಿ ದೇವಿಯನ್ನು ಸೃಷ್ಟಿಸಿದನು. ಅವಳು ಅತ್ಯಂತ ಸುರದ್ರೂಪಿ, ಬುದ್ಧಿವಂತೆ ಹಾಗೂ ಅತ್ಯಂತ ವಿಶೇಷ ಶಕ್ತಿಯನ್ನು ಹೊಂದಿದವಳನ್ನಾಗಿ ಸೃಷ್ಟಿಸಿದ್ದನು. ಸರಸ್ವತಿಗೆ ಯಾವುದೇ ದೈಹಿಕ ಸುಖದ ಬಯಕೆಗಳಿರಲಿಲ್ಲ. ಬ್ರಹ್ಮನ ಲೈಂಗಿಕ ಪ್ರಸ್ತಾಪದಿಂದ ತಪ್ಪಿಸಿಕೊಳ್ಳಲು ಸರಸ್ವತಿ ಪ್ರಯತ್ನಿಸಿದಳು. ಆದರೆ ಬ್ರಹ್ಮನು ಅವಳನ್ನು ಬಿಟ್ಟುಕೊಡಲಿಲ್ಲ.

ಸರಸ್ವತಿಯ ಶಾಪ

ಸರಸ್ವತಿಯ ಶಾಪ

ಇದರಿಂದ ಕೋಪಗೊಂಡ ಸರಸ್ವತಿಯು "ಬ್ರಹ್ಮನನ್ನು ಭೂಮಿಯ ಮೇಲೆ ಯಾರೂ ಆರಾಧಿಸಬಾರದು" ಎಂದು ಶಾಪ ನೀಡಿದಳು. ಈ ಹಿನ್ನೆಲೆಯಲ್ಲಿಯೇ ಭೂಮಿಯ ಮೇಲೆ ಇಂದಿಗೂ ಬ್ರಹ್ಮನನ್ನು ಯಾರೂ ಆರಾಧಿಸುವುದಿಲ್ಲ ಎನ್ನಲಾಗುವುದು.

English summary

Reasons Why Brahma Is Not Worshipped

Brahma is also the originator of the four Vedas, which are dear to Hinduism. All of His creations are remembered but not Him. There is definitely a reason behind such an approach to Brahma and the mythological side of it is discussed here. These legends will tell you why.
Story first published: Thursday, February 15, 2018, 13:34 [IST]
X
Desktop Bottom Promotion