For Quick Alerts
ALLOW NOTIFICATIONS  
For Daily Alerts

ರಾಮಾನುಜಚಾರ್ಯ ಜಯಂತಿ: ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಸಂತ, ಸ್ವರ್ಗಸ್ಥರಾಗಿ 900 ವರ್ಷ ಕಳೆದರೂ ಇವರ ದೇಹ ಕೊಳೆಯದೆ ಹಾಗೇ ಇದೆ!

|

ರಾಮಾನುಚಾರ್ಯ ಇತಿಹಾಸ ಓದಿದ ಪ್ರತಿಯೊಬ್ಬರಿಗೂ ಈ ಹೆಸರಿನ ಪರಿಚಯವಿರುತ್ತದೆ. ಈ ವ್ಯಕ್ತಿ ಬಗ್ಗೆ ಕೆಲವರಿಗೆ ಹೆಚ್ಚಾಗಿ ತಿಳಿದಿಲ್ಲವಾದರೂ ಅವರ ಹೆಸರಿನ ಪರಿಚಯ ಇದ್ದೇ ಇರುತ್ತದೆ. ಆಚಾರ್ಯತ್ರಯರಲ್ಲಿ ಒಬ್ಬರು ರಾಮಾನುಚಾರ್ಯರು. 11ನೇ ಶತಮಾನದ ಮಹಾ ಸಂತ. ಆ ಕಾಲದಲ್ಲಿ ಅಸ್ಪೃಶ್ಯತೆನ್ನು ತೊಡೆದು ಹಾಕಲು ಮುಂದಾದ ಮಹಾನ್ ವ್ಯಕ್ತಿ.

ಕೆಳಜಾತಿಯವರೆಂದು ಅಶ್ಪೃಶ್ಯತೆಯಿಂದ ನಡೆದುಕೊಳ್ಳುತ್ತಿದ್ದ ಆ ಕಾಲದಲ್ಲಿ ಹಿಂದುಳಿದವರನ್ನು ತನ್ನ ಬಳಿ ಕರೆದು ಅವರಿಗೂ ದೇವಾಲಯದ ಒಳಗೆ ಪ್ರವೇಶ ಮಾಡುವಂತೆ ಮಾಡಿದ ಕ್ರಾಂತಿಕಾರರು. ಅವರ 1005ನೇ ಜಯಂತಿಯನ್ನು 2022ರ ಮೇ 6ರಂದು ಆಚರಿಸಲಾಗುವುದು.

ರಾಮಾನುಜಚಾರ್ಯರು ದಕ್ಷಿಣ ಭಾರತದ ಮಹಾನ್‌ ತತ್ವಜ್ಞಾನಿ. ಅದ್ವೈತದಿಂದ ದೂರಾಗಿ ಉಪನಿಷತ್‌,ಬ್ರಹ್ಮ ಸೂತ್ರ ಮತ್ತು ಭಕ್ತಿ ಸಂಪ್ರದಾಯವನ್ನು ಪ್ರತಿಪಾದಿಸಿದವರು. ಓಂ ನಮಃ ನಾರಾಯಣ ನಮಃ ಎನ್ನುವ ಅಷ್ಟಾಕ್ಷರಿ ಮಂತ್ರವನ್ನು ಜಾತಿ-ಮತ-ಪಂಥವನ್ನು ಮೀರಿ ಎಲ್ಲರಿಗೆ ಸಮಾನವಾಗಿ ಉಪದೇಶಿಸಿದ ಸಂತ.

ರಾಮಾನುಜಚಾರ್ಯರ ಜನನ ಮತ್ತು ಬದುಕು

ರಾಮಾನುಜಚಾರ್ಯರ ಜನನ ಮತ್ತು ಬದುಕು

ತಮಿಳುನಾಡಿನ ಪದರಾಸು ಪಟ್ಟಣದ ಹತ್ತಿರ ಶ್ರೀ ಪೆರಂಬದೂರಿನಲ್ಲಿ ಜನಿಸಿದ ರಾಮಾನುಜಚಾರ್ಯರು 120 ವರ್ಷಗಳ ಕಾಲ ಜೀವಿಸಿದ್ದರು. ಇವರಿಗೆ ಹದಿನಾರನೇಯ ವಯಸ್ಸಿನಲ್ಲಿ ವಿವಾಹವಾಯ್ತು, ಇದಾದ ತಿಂಗಳ ಒಳಗೆ ಅವರ ತಂದೆ ಸ್ವರ್ಗಸ್ಥರಾದರು. ನಂತರ ರಾಮಾನುಜರು ಕಾಂಚೀಪುರಕ್ಕೆ ಹೋಗಿ ಅಲ್ಲಿ ಯಾದವ ಪ್ರಕಾಶರೆಂಬ ಪ್ರಸಿದ್ ವಿದ್ವಾಂಸರ ಬಳಿ ಶಿಷ್ಯರಾಗಿ ಸೇರಿಕೊಳ್ಳುತ್ತಾರೆ. ಅವರ ಗುರುಗಳು ಅದ್ವೈತ ಸಿದ್ಧಾಂತವನ್ನು ನಂಬಿದ್ದರು. ಆದರೆ ರಾಮಾನುಜಚಾರ್ಯರು ವಿಶಿಷ್ಟಾದ್ವೈತ ಪ್ರತಿಪಾದಿಸಿದರು.

ಭಗವಂತನನ್ನು ಒಲಿಸಲು ಭಕ್ತಿ ಸಾಕು ಜಾತಿ ಬೇಡ ಎಂದ ಹರಿಕಾರ

ಭಗವಂತನನ್ನು ಒಲಿಸಲು ಭಕ್ತಿ ಸಾಕು ಜಾತಿ ಬೇಡ ಎಂದ ಹರಿಕಾರ

ಭಗವಂತನನ್ನು ಒಲಿಸಿಕೊಳ್ಳಲು ಜಾತಿ ಬೇಕಾಗಿಲ್ಲ, ಭಕ್ತಿ ಮಾರ್ಗವೊಂದಿದ್ದರೆ ಸಾಕು, ಗೋವಿಂದ ಸ್ಮರಣೆಯೊಂದೇ ಸಾಕು ಅವನನ್ನುಒಲಿಸಿಕೊಳ್ಳಲು ಎಂದು ಹೇಳುವ ಮೂಲಕ ಅಸ್ಪೃಶ್ಯತೆ ಬುಡವನ್ನೇ ಅಲುಗಾಡಿಸಿದ ಸಾಧಕ.

ಮೈಲಿಗೆ ಹರಡುವುದಾದರೆ ಮಡಿಯೂ ಹರಡುತ್ತದೆ ಎಂದು ಸಾರಿದ ಸರ್ಜ್ಞ

ಮೈಲಿಗೆ ಹರಡುವುದಾದರೆ ಮಡಿಯೂ ಹರಡುತ್ತದೆ ಎಂದು ಸಾರಿದ ಸರ್ಜ್ಞ

ಆ ಕಾಲದಲ್ಲಿ ಕೆಳವರ್ಗದವರನ್ನು, ಶೂದ್ರರನ್ನು ಮೇಲ್ಜಾತಿ ಜನರು ತಮ್ಮ ಸಮೀಪ ಕೂಡ ಬರಲು ಬಿಡದ ಕಾಲವದು. ಅವರ ನೆರಳು ಸೋಕಿದರೆ ಎಲ್ಲಿ ಮೈಲಿಗೆ ಆಗುತ್ತೋ ಎಂದು ಆಡುತ್ತಿದ್ದರು. ಆಗ ಶ್ರೀ ರಾಮಾನುಜಚಾರ್ಯರು ಎಲ್ಲರೂ ಒಂದೇ ಹೇಳಿದ್ದು ಮಾತ್ರವಲ್ಲದೆ ಶೂದ್ರನನ್ನು ಮುಟ್ಟಿದರೆ ಮೈಲಿಗೆ ಆಗುತ್ತೆ ಎಂದಾದರೆ ನಮ್ಮ ಮಡಿಯೂ ಅವನಿಗೆ ಹರಡಬೇಕಲ್ಲವೇ ಎಂದು ಹೇಳಿ ಎಲ್ಲರ ಎದುರು ಶೂದ್ರನನ್ನು ತಬ್ಬಿಕೊಂಡಿದ್ದರು.

ಕರ್ನಾಟಕದ ಶಿಲ್ಪಕಲೆಗೂ ಇವರ ಕೊಡುಗೆಯಿದೆ

ಕರ್ನಾಟಕದ ಶಿಲ್ಪಕಲೆಗೂ ಇವರ ಕೊಡುಗೆಯಿದೆ

ಇವರು ಮಾನವಕುಲದ ಉದ್ಧಾರಕ್ಕಾಗಿ ಅನೇಕ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದರು. ಕರ್ನಾಟಕದ ದೇವಾಲಯಗಳಿಗೂ ಶಿಲ್ಪಕಲೆಗೆ ತುಂಬಾನೇ ಒತ್ತುನೀಡಿದರು.

ಮನುಕುಲದ ಸಂದೇಶ ಸಾರಿದವರು. ಅಸ್ಪೃಶ್ಯರು ಎಂದು ದೂರವಿಟ್ಟವರನ್ನು ಪ್ರೀತಿಯಿಂದ ಕಂಡು ಹರಿಜರು ಹರಿಯ ಪ್ರೀತಿಯ ಪುತ್ರರರು ಎಂದು ಹೇಳಿದರು. ಎಲ್ಲರೂ ಹರಿನಾಮದ ಮೂಕ ದೇವರನ್ನು ಕಾಣಬಹುದು ಎಂದು ಹೇಳಿಕೊಟ್ಟವರು. ಈ ಸಂತ ಸಾರಿದ ತತ್ವ ಇಂದಿಗೂ ಪ್ರಸ್ತುತ.

ಸತ್ತು 900 ವರ್ಷ ಕಳೆದರೂ ಇವರ ದೇಹ ಕೊಳೆತಿಲ್ಲ

ಸತ್ತು 900 ವರ್ಷ ಕಳೆದರೂ ಇವರ ದೇಹ ಕೊಳೆತಿಲ್ಲ

120 ವರ್ಷ ತುಂಬು ಜೀವನ ನಡೆಸಿದವರು ಶ್ರೀ ರಾಮಾನುಜಚಾರ್ಯರು. ಇವರ ದೇಹ ತಮಿಳುನಾಡಿನ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲೂ ಈಗಲೂ ಕುಳಿತ ಸ್ಥಿತಿಯಲ್ಲಿರುವುದನ್ನು ಕಾಣಬಹುದು. ದೇಹಕ್ಕೆ ಯಾವುದೇ ರಾಸಾಯನಿಕ ಹಾಕದಿದ್ದರೂ ಅವರು ಜೀವ ಬಿಟ್ಟು ಇಷ್ಟು ವರ್ಷಗಳಾದರೂ ದೇಹ ಕೊಳೆಯದೆ ಹಾಗೇ ಇರುವುದು ವಿಜ್ಞಾನಕ್ಕೇ ಸವಾಲಾಗಿದೆ. ಭಕ್ತರೂ ಪ್ರತಿನಿತ್ಯ ಈ ದೇವಾಲಯಕ್ಕೆ ಹೋಗಿ ದರ್ಶನ ಪಡೆಯುತ್ತಾರೆ.

English summary

Ramanuja Jayanthi 2022: Date, history, significance and Birth Story of Ramanujacharya in kannada

Ramanuja Jayanthi 2022: Date, history, significance and Birth Story of Ramanujacharya in kannada
X
Desktop Bottom Promotion