For Quick Alerts
ALLOW NOTIFICATIONS  
For Daily Alerts

ರಂಜಾನ್‌ 2022: ಯುವಕ ಯುವತಿಯರಿಗೆ ರಂಜಾನ್ ನಿಯಮಗಳು

|

ಇಸ್ಲಾಂ ಧರ್ಮದಲ್ಲಿ ರಂಜಾನ್‌ ಮಾಸ ಹಾಗೂ ರಂಜಾನ್‌ ಉಪವಾಸ ಬಹಳ ಪವಿತ್ರ. ಮುಸ್ಲಿಮರು ರಂಜಾನ್‌ನಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿರ್ದಿಷ್ಟ ಸಮಯದವರೆಗೆ ಮಾತ್ರ ಉಪವಾಸ ಮಾಡುತ್ತಾರೆ. 2022ರಲ್ಲಿ ರಂಜಾನ್‌ ಏಪ್ರಿಲ್‌ 2ರಂದು ಆರಂಭವಾಗಿ ಮೇ 2ರಂದು ಅಂತ್ಯವಾಗಲಿದೆ.

ರಂಜಾನ್‌ ಮಾಸದಲ್ಲಿ ಇಡೀ ದಿನಾ ಅಲ್ಲಾನ ಸ್ಮರಣೆ ಮಾಡುತ್ತಾರೆ, ಕೆಟ್ಟ ಕೆಲಸ, ಕೆಟ್ಟ ಯೋಚನೆಗಳಿಂದ ದೂರವಿರುತ್ತಾರೆ. ರಂಜಾನ್‌ ಸಮಯದಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಜಾಗರೂಕರಾಗಿರಬೇಕು. ಅದರಲ್ಲೂ ಯುವಕ-ಯುವತಿಯರು ಹಾಗೂ ಅವಿವಾಹಿತರು ಯಾವ ರಂಜಾನ್ ಮಾಸದಲ್ಲಿ ಹೇಗಿರಬೇಕು, ಯಾವುದನ್ನು ಕಡ್ಡಾಯವಾಗಿ ಮಾಡಲೇಬಾರದು, ರಂಜಾನ್‌ ಸಮಯದಲ್ಲಿ ಯವ ರೀತಿ ನಿಯಮಗಳನ್ನು ಪಾಲಿಸಬೇಕು ಮುಂದೆ ನೋಡಿ:

1. ಒಟ್ಟಿಗೆ ಪ್ರಾರ್ಥನೆ ಮಾಡಬೇಡಿ

1. ಒಟ್ಟಿಗೆ ಪ್ರಾರ್ಥನೆ ಮಾಡಬೇಡಿ

ಇಸ್ಲಾಂನಲ್ಲಿ, ಒಂಟಿಯಾಗಿ ಪ್ರಾರ್ಥನೆ ಮಾಡುವ ಬದಲು ಒಟ್ಟಿಗೆ ಅಥವಾ ಸಭೆಯಾಗಿ ಪ್ರಾರ್ಥನೆ ಮಾಡುವುದು ಅಭ್ಯಾಸ. ಆದಾಗ್ಯೂ, ಅವಿವಾಹಿತರು, ಯುವಕ ಯುವತಿಯರು ಒಟ್ಟಿಗೆ ಪ್ರಾರ್ಥನೆ ಮಾಡುವುದು ಇಸ್ಲಾಂನಲ್ಲಿ ಕಾನೂನುಬದ್ಧವಾಗಿಲ್ಲ. ಏಕೆಂದರೆ ಇಸ್ಲಾಂನಲ್ಲಿ ಅವಿವಾಹಿತರು, ಅಕ್ರಮ ದಂಪತಿಗಳು ಜೊತೆಯಾಗಿ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಲಾಗಿದೆ.

2. ತಬ್ಬಿಕೊಳ್ಳುವಿಕೆ ಅಥವಾ ಸ್ಪರ್ಶ ನಿಷೇಧ

2. ತಬ್ಬಿಕೊಳ್ಳುವಿಕೆ ಅಥವಾ ಸ್ಪರ್ಶ ನಿಷೇಧ

ಇಸ್ಲಾಂನಲ್ಲಿ, ಅವಿವಾಹಿತ ಸಂಬಂಧದಲ್ಲಿರುವ ದಂಪತಿಗಳು ಕಾನೂನುಬದ್ಧವಾಗಿಲ್ಲ. ಅವಿವಾಹಿತ ಸಂಬಂಧದಲ್ಲಿ ಇರುವುದನ್ನು ನಿಷೇಧಿಸಲಾಗಿದೆ. ಪರಿಣಾಮವಾಗಿ, ಅವರು ವರ್ಷದ ಯಾವುದೇ ಸಮಯದಲ್ಲಿ ದೈಹಿಕವಾಗಿ ಅನ್ಯೋನ್ಯವಾಗಿರಲು ಅನುಮತಿಸುವುದಿಲ್ಲ, ಏಕೆಂದರೆ ಅದು ಪಾಪವಾಗಿದೆ. ಆದಾಗ್ಯೂ, ಎಲ್ಲಾ ಅವಿವಾಹಿತ ದಂಪತಿಗಳು ಈ ನಿಯಮವನ್ನು ಅನುಸರಿಸುತ್ತಾರೆಯೇ?. ಪ್ರಪಂಚದಾದ್ಯಂತ ಅವಿವಾಹಿತ ಮುಸ್ಲಿಂ ದಂಪತಿಗಳು ಇನ್ನೂ ಆಗಾಗ್ಗೆ ದೈಹಿಕವಾಗಿ ನಿಕಟ ಕ್ರಿಯೆಗಳಲ್ಲಿ ತೊಡಗುತ್ತಾರೆ. ಎಲ್ಲಾ ಸಂದರ್ಭಗಳಲ್ಲಿ ಇದನ್ನು ಪಾಪವೆಂದು ಪರಿಗಣಿಸಲಾಗಿದ್ದರೂ, ಪಾಪ ಕಾರ್ಯಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವ ದಂಪತಿಗಳು ಪವಿತ್ರ ರಂಜಾನ್ ತಿಂಗಳಲ್ಲಿ ದೈಹಿಕ ಅನ್ಯೋನ್ಯತೆಯಿಂದ ದೂರವಿರಬೇಕು. ಅವಿವಾಹಿತರು, ಯುವಕ ಯುವತಿಯರು ರಂಜಾನ್ ಸಮಯದಲ್ಲಿ ಒಟ್ಟಿಗೆ ಇರುವುದು, ತಬ್ಬಿಕೊಳ್ಳುವುದು ಅಥವಾ ಚುಂಬಿಸುವುದನ್ನು ಇಸ್ಲಾಂ ಧರ್ಮದಲ್ಲಿ ಸಂಪೂರ್ಣವಾಗಿ ನಿಷೇಧಿಲಾಗಿದೆ.

3. ಫ್ಲರ್ಟಿಂಗ್ ಇಲ್ಲ

3. ಫ್ಲರ್ಟಿಂಗ್ ಇಲ್ಲ

ರಂಜಾನ್‌ ಮಾಸದಲ್ಲಿ ಕೆಟ್ಟ ಯೋಚನೆ ಸಹ ಮಾಡಬಾರದು ಎನ್ನಲಾಗುತ್ತದೆ. ಇನ್ನು ಯುವಕ ಯುವತಿಯರು ವಿರುದ್ಧ ಲಿಂಗದ ಯಾರೊಂದಿಗಾದರೂ ಕೆಟ್ಟ ಸಂಭಾಷಣೆ ನಡೆಸುವುದು, ಲೈಂಗಿಕ ವಿಷಯಗಳ ಚರ್ಚೆ, ಅವರೊಂದಿಗೆ ಫ್ಲರ್ಟ್‌ ಮಾಡುವುದು ನಿಷಿದ್ಧ. ಇಂಥ ಕೃತ್ಯಗಳನ್ನು ಮಾಡುವುದು ಯಾವ ಮಾಸವಾದರೂ ಪಾಪವೇ ಆದರೂ, ರಂಜಾನ್‌ ಮಾಸಲ್ಲಿ ಮಡುವುದು ಹೆಚ್ಚಿನ ಪಾಪಕ್ಕೆ ಕಾರಣವಾಗುತ್ತದೆ.

4. ರಂಜಾನ್ ಸಮಯದಲ್ಲಿ ಜಗಳ ತಪ್ಪಿಸಿ

4. ರಂಜಾನ್ ಸಮಯದಲ್ಲಿ ಜಗಳ ತಪ್ಪಿಸಿ

ಅವಿವಾಹಿತರು, ಯುವಕ-ಯುವತಿಯರು ಅಥವಾ ನಿಮ್ಮ ಪ್ರೀತಿಪಾತ್ರರೊಂದಿಗೆ ಜಗಳವಾಡುವಂತಿಲ್ಲ. ಸಂಬಂಧವು ಏರಿಳಿತಗಳಿಂದ ಕೂಡಿರುತ್ತದೆ, ಅದು ನಿಮ್ಮ ಭಾವನೆಯೊಂದಿಗೆ ಬಹಳಷ್ಟು ಸಂಗತಿಗಳನ್ನು ಹೊಂದಿದೆ. ಅನೇಕ ಬಾರಿ, ಇತರರು ಮಾಡಿದ ಸಣ್ಣ ಕೆಲಸಗಳಿಗೆ ನೀವು ಸುಲಭವಾಗಿ ಕೋಪಗೊಳ್ಳುತ್ತೀರಿ. ರಂಜಾನ್ ಸಮಯದಲ್ಲಿ ನೀವು ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಭೇಟಿ ಮಾಡಬಾರದು ಎಂಬುದಕ್ಕೆ ಇದು ಉತ್ತಮ ಕಾರಣವಾಗಿದೆ ಆದ್ದರಿಂದ ನೀವು ಅವರೊಂದಿಗೆ ಜಗಳವಾಡುವುದನ್ನು ತಪ್ಪಿಸಬಹುದು.

5. ಸಾಧಾರಣ ಉಡುಪುಗಳನ್ನು ಧರಿಸಿ

5. ಸಾಧಾರಣ ಉಡುಪುಗಳನ್ನು ಧರಿಸಿ

ಸಾಮಾನ್ಯವಾಗಿ, ಮುಸ್ಲಿಮರು ಸಾಧಾರಣವಾಗಿರಬೇಕು, ಹಿಜಾಬ್‌, ಬುರ್ಖಾ ಧರಿಸಬೇಕು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಯುವಕ-ಯುವತಿಯರ ಕಾರ್ಯಗಳು, ಮಾತು ಮತ್ತು ಅವರ ದೈಹಿಕ ನೋಟ ಎಲ್ಲದರಲ್ಲೂ ಸಾಧಾರಣವಾಗಿರಬೇಕು.

ಸಾಧಾರಣ ಉಡುಪು ಎಂದರೇನು? ಸಾಧಾರಣ ಉಡುಪು ಎಂದರೆ ಹೆಚ್ಚು ಚರ್ಮವನ್ನು ಬಹಿರಂಗಪಡಿಸದ ಬಟ್ಟೆ, ಸಡಿಲವಾದ ಉಡುಪುಗಳನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಇದು ಮಹಿಳೆಯರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದು ಸಾಮಾನ್ಯ ತಪ್ಪುಗ್ರಹಿಕೆಯಾಗಿದೆ, ಇದು ಎಲ್ಲರಿಗು ಅನ್ವಯಿಸುತ್ತದೆ.ಪುರುಷರು ಸಹ ಸಾಧಾರಣ ಉಡುಪುಗಳನ್ನು ಧರಿಸಬೇಕು.

ಬಹಳಷ್ಟು ಯುವಕ-ಯುವತಿಯರು ಶಾರ್ಟ್ ಸ್ಕರ್ಟ್‌ಗಳಂತಹ ಸಾಧಾರಣವಲ್ಲದ ಉಡುಪುಗಳನ್ನು ಧರಿಸಲು ಒಲವು ತೋರಿದರೂ, ಪವಿತ್ರ ರಂಜಾನ್ ತಿಂಗಳಲ್ಲಾದರೂ ಅವರು ಸಾಧಾರಣ ಉಡುಪುಗಳನ್ನು ಧರಿಸಲು ಪ್ರಯತ್ನಿಸಬೇಕು.

6. ರಂಜಾನ್‌ನಲ್ಲಿ ಪ್ರಾರ್ಥನೆಗಳಿಗೆ ಆದ್ಯತೆ

6. ರಂಜಾನ್‌ನಲ್ಲಿ ಪ್ರಾರ್ಥನೆಗಳಿಗೆ ಆದ್ಯತೆ

ಇದು ಇಡೀ ವರ್ಷದ ಸಂದರ್ಭದಲ್ಲಿ ಇರಬೇಕಾದರೂ, ರಂಜಾನ್ ಸಮಯದಲ್ಲಿ ಮುಖ್ಯವಾಗಿ ಮುಸ್ಲಿಮರು ತಮ್ಮ ಸಂಬಂಧದ ಸ್ಥಿತಿಯನ್ನು ಲೆಕ್ಕಿಸದೆ ದೇವರೊಂದಿಗಿನ ಅವರ ಸಂಬಂಧಕ್ಕೆ ಆದ್ಯತೆ ನೀಡಬೇಕು. ಯುವಕ-ಯುವತಿಯರು ಬೇರೆ ಯಾವುದೇ ವಿಷಯಗಳಿಗೂ ಆದ್ಯತೆ ನೀಡದೇ ಈ ಪವಿತ್ರ ಸಮಯದಲ್ಲಿ ಪ್ರಾರ್ಥನೆಗೆ ಮಾತ್ರ ಪ್ರಾಮುಖ್ಯತೆ ನೀಡಬೇಕು.

7. ಅನಿವಾರ್ಯವಲ್ಲದ ಕಾರಣಗಳಿಗಾಗಿ ಉಪವಾಸದ ಒಂದು ದಿನವನ್ನು ತಪ್ಪಿಸಿಕೊಳ್ಳಬಾರದು

7. ಅನಿವಾರ್ಯವಲ್ಲದ ಕಾರಣಗಳಿಗಾಗಿ ಉಪವಾಸದ ಒಂದು ದಿನವನ್ನು ತಪ್ಪಿಸಿಕೊಳ್ಳಬಾರದು

ಪವಿತ್ರ ರಂಜಾನ್ ತಿಂಗಳಲ್ಲಿ, ಮುಸ್ಲಿಮರು ಮುಂಜಾನೆಯಿಂದ ಸೂರ್ಯಾಸ್ತದವರೆಗೆ ತಿನ್ನುವುದು ಅಥವಾ ಕುಡಿಯುವುದನ್ನು ಮತ್ತು ಇತರ ನಿರ್ದಿಷ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಬೇಕು. ಪ್ರಪಂಚದಾದ್ಯಂತ ಮುಸ್ಲಿಮರು ಉಪವಾಸ ಮಾಡುತ್ತಾರೆ.

ಗರ್ಭಿಣಿಯರು, ಬಾಣಂತಿಯರು, ಅನಾರೋಗ್ಯ ಇರುವವರು, ಚಿಕ್ಕಮಕ್ಕಳು, ದೈಹಿಕವಾಗಿ ಸಾಮರ್ಥ್ಯ ಇಲ್ಲದವರನ್ನು, ಪ್ರಯಾಣ, ವೃದ್ಧಾಪ್ಯ ಹೊತರುಪಡಿಸಿ ಎಲ್ಲರೂ ಉಪವಾಸ ಇರಬೇಕು ಎಂಬುದು ಮಾಡಬೇಕು. ಇಸ್ಲಾಂ ಸಮಯದಲ್ಲಿ ಉಪವಾಸ ಮಾಡದಿರುವ ಕಾರಣವು ಅನಿವಾರ್ಯವಲ್ಲದಿದ್ದರೆ ಅದು ಪಾಪವಾಗಿದೆ. ಆದರೆ ಅನಿವಾರ್ಯವಲ್ಲದ ಕಾರಣ ಯಾವುದು? ಸೋಮಾರಿತನ, ಪಾರ್ಟಿಗೆ ಹೋಗಲು, ಡೇಟಿಂಗ್‌ಗೆ ಹೋಗಲು ಉಪವಾಸವನ್ನು ಕಳೆದುಕೊಳ್ಳುವುದು ಇತ್ಯಾದಿ.

English summary

Ramadan Rules For Unmarried Couples in kannada

Here we are discussing about Ramadan Rules For Unmarried Couples in kannada. Read more.
Story first published: Thursday, March 31, 2022, 12:47 [IST]
X
Desktop Bottom Promotion