For Quick Alerts
ALLOW NOTIFICATIONS  
For Daily Alerts

ರಾಮ ನವಮಿ 2023: ಶ್ರೀರಾಮನಿಗೆ ಈ 7 ಆಹಾರಗಳನ್ನು ನೈವೇದ್ಯವಾಗಿ ಅರ್ಪಿಸಿ

|

ಮಾರ್ಚ್‌ 30ಕ್ಕೆ ರಾಮ ನವಮಿ ಆಚರಿಸಲಾಗುವುದು. ಈ ದಿನ ಅಯೋಧ್ಯೆಯಲ್ಲಂತೂ ಹಬ್ಬ ಕಳೆಗಟ್ಟಿರುತ್ತದೆ. ದೇಶದ ಎಲ್ಲಾ ಕಡೆ ರಾಮ ನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.

ರಾಮ ನವಮಿಗೆ ಏನು ಸ್ಪೆಷಲ್ ಎಂದು ನೋಡುವುದಾದರೆ ಪಾನಕ. ನಮ್ಮ ಕರ್ನಾಟಕದಲ್ಲಿ ಈ ದಿನಕ್ಕೆಂದೇ ಸ್ಪೆಷಲ್ ಪಾನಕ ತಯಾರಿಸಲಾಗುದು.

Ram Navami 2023

ಪಾನಕ ಮಾತ್ರವಲ್ಲ ಇನ್ನು ಹಲವು ಬಗೆಯ ತಿನಿಸುಗಳನ್ನು ಶ್ರೀರಾಮನಿಗೆ ಅರ್ಪಿಸಲಾಗುವುದು. ಅಯೋಧ್ಯೆ ಭೂಮಿ ಪೂಜೆಯಲ್ಲೂ ಈ ತಿಂಡಿಗಳನ್ನು ಶ್ರೀರಾಮನಿಗೆ ನೈವೇದ್ಯವಾಗಿ ಅರ್ಪಿಸಲಾಗಿತ್ತು. ಇನ್ನು ದಕ್ಷಿಣ ಭಾರತದ ಕಡೆ ಈ ದಿನ ಕೆಲ ಸ್ಪೆಷಲ್ ತಿನಿಸುಗಳನ್ನು ಮಾಡಲಾಗುವುದು.

ನಾವಿಲ್ಲಿ ಶ್ರೀರಾಮ ನವಮಿಯಂದು ಯಾವೆಲ್ಲಾ ತಿನಿಸುಗಳನ್ನು ಶ್ರೀರಾಮನಿಗೆ ನೈವೇದ್ಯವಾಗಿ ಅರ್ಪಿಸಬಹುದೆಂದು ನೀಡಿದ್ದೇವೆ ನೋಡಿ:

1. ಪಾನಕ

1. ಪಾನಕ

ಈ ಪಾನೀಯ ಮಾಡಲು ಸುಲಭವಾಗಿದ್ದು ಇದನ್ನು ಶ್ರೀರಾಮನಿಗೆ ಪ್ರಸಾದವಾಗಿ ಅರ್ಪಿಸಲಾಗುವುದು. ಇದು ಬೇಸಿಗೆಯಲ್ಲಿ ಮೈಯನ್ನು ತಂಪಾಗಿಸುತ್ತದೆ. ಇದನ್ನು ಬೆಲ್ಲ, ಏಲಕ್ಕಿ, ಒಣ ಶುಂಠಿ ಬಳಸಿ ತಯಾರಿಸಲಾಗುವುದು.

ನೀವು 1 ಕಪ್‌ ಪಾನಕ ಮಾಡಲು ಬೇಕಾಗುವ ಸಾಮಗ್ರಿ

1/4 ಕಪ್‌ ಬೆಲ್ಲದ ಪುಡಿ

ಒಂದು ಚಮಚ ನಿಂಬೆ ರಸ

ನೀರು 1ಕಪ್‌

ಏಲಕ್ಕಿ 2

ಚಿಟಿಕೆಯಷ್ಟು ಒಣಶುಂಠಿ

ಮಾಡುವ ವಿಧಾನ

* ನೀರಿಗೆ ಬೆಲ್ಲ ಹಾಕಿ ಕರಗಿಇಸ

* ನಂತರ ನೀರನ್ನು ಸೋಸಿ ಆ ನೀರಿಗೆ ಏಲಕ್ಕಿ ಪುಡಿ ಹಾಕಿ ನಿಂಬೆರಸ ಹಿಂಡಿದರೆ ಪಾ ನಕ ರೆಡಿ.

2. ನೀರು ಮಜ್ಜಿಗೆ

2. ನೀರು ಮಜ್ಜಿಗೆ

ಇನ್ನು ಚೈತ್ರ ಮಾಸದಲ್ಲಿ ಬಿಸಿಲಿನ ಝಳ ಅಧಿಕವಿರುತ್ತದೆ. ಮಜ್ಜಿಗೆಯನ್ನು ಮತ್ತಷ್ಟು ನೀರು ರೀತಿ ಮಾಡಿ ಪ್ರಸಾದವಾಗಿ ಅರ್ಪಿಸಲಾಗುವುದು.

3. ಕೋಸಂಬರಿ

3. ಕೋಸಂಬರಿ

ಇನ್ನು ರಾಮ ನವಮಿಯಂದು ಕೋಸಂಬರಿ ಮಾಡಿ ಕೂಡ ನೈವೇದ್ಯವಾಗಿ ಇಡಲಾಗುವುದು. ಕೋಸಂಬರಿ, ಪಾನಕವನ್ನು ಅಯೋಧ್ಯೆ ಭೂಮಿ ಪೂಜೆಯಲ್ಲೂ ಶ್ರೀರಾಮನಿಗೆ ಅರ್ಪಿಸಲಾಗಿತ್ತು.

ಇವುಗಳ ಜೊತೆಗೆ ಈ ತಿನಿಸುಗಳನ್ನೂ ಶ್ರೀರಾಮನಿಗೆ ಅರ್ಪಿಸಲಾಗಿತ್ತು

4.ಚಲೈಮಿಡಿ/ ಸಿಹಿ ಕಡಬು

4.ಚಲೈಮಿಡಿ/ ಸಿಹಿ ಕಡಬು

ಉತ್ತರ ಭಾರತದ ಕಡೆ ಇದನ್ನು ಚಲೈಮಿಡಿ ಎಂದು ಕರೆದರೆ ನಮ್ಮಲ್ಲಿ ಸಿಹಿ ಕಡಬು ಎಂದು ತಯಾರಿಸಲಾಗುವುದು. ಅಕ್ಕಿ ಪುಡಿ ಮಾಡಿ,ಅದನ್ನು ಕಡಬುಗೆ ತಯಾರಿಸುವತೆ ತಯಾರಿಸಿ ಅದರೊಳಗೆ ಬೆಲ್ಲ ಹಾಗೂ ತುರಿ ಮಿಶ್ರಣ ತುಂಬಿ ಬೇಯಿಸುವುದು.

5. ರೋಟ್

5. ರೋಟ್

ಇದು ಹನುಮಂತನಿಗೆ ಪ್ರಿಯವಾದ ಆಹಾರವಾಗಿದೆ. ಇದನ್ನು ಗೋಧಿ ಹಿಟ್ಟು ತುಪ್ಪ,ಬೆಲ್ಲ, ಡ್ರೈ ಫ್ರೂಟ್ಸ್, ಏಲಕ್ಕಿ ಬಳಸುವ ತಿಂಡಿ ಇದಾಗಿದೆ.

6. ಲಡ್ಡು

6. ಲಡ್ಡು

ಶ್ರೀರಾಮನ ಭಕ್ತ ಹನುಮಂತನಿಗೆ 3 ಬಗೆಯ ಲಡ್ಡುಗಳೆಂದರೆ ಇಷ್ಟ. ಕೇಸರಿ ಬೂಂದಿ ಲಡ್ಡು, ಕಡ್ಲೆ ಹಿಟ್ಟಿನ ಲಡ್ಡು, ಮಲೈ ಮಿಶ್ರಿ ಲಡ್ಡು ಇವುಗಳನ್ನು ಕೂಡ ಪ್ರಸಾದವನ್ನಾಗಿ ಅರ್ಪಿಸಲಾಗುವುದು.

7. ಖೀರ್ ಪಾಯಸ ಮಾಡಲಾಗುವುದು

7. ಖೀರ್ ಪಾಯಸ ಮಾಡಲಾಗುವುದು

ಈ ದಿನ ಸಾಬುದಾನ ಖೀರ್ ಮಾಡಿ ಅರ್ಪಿಸಲಾಗುವುದು. ಖೀರ್ ಅನ್ನು ತುಂಬಾ ಹಬ್ಬಗಳಲ್ಲಿ

ಮಾಡಲಾಗುವುದು.

English summary

Ram Navami: Foods traditionally offered to Lord Rama

Ram Navami 2022: Foods traditionally offered to Lord Rama, read on...
X
Desktop Bottom Promotion