For Quick Alerts
ALLOW NOTIFICATIONS  
For Daily Alerts

ರಕ್ಷಾ ಬಂಧನ 2022: ರಕ್ಷಾ ಬಂಧನದ ಬಗ್ಗೆ ಇರುವ ಐತಿಹಾಸಿಕ ಹಾಗೂ ಪೌರಾಣಿಕ ಕಥೆಗಳು

|

ಸಹೋದರ ಬಾಳಿನಲ್ಲಿ ಎಲ್ಲ ವಿಷಯಗಳಲ್ಲೂ ಜಯಸಿಗಲಿ, ಅವರಿಗೆ ಯಾವುದೇ ಸಮಸ್ಯೆ ಎದುರಾಗದಿರಲಿ, ಜೀವನ ಪ್ರತಿ ಹೆಜ್ಜೆಯಲ್ಲೂ ರಕ್ಷಣೆ ಸಿಗಲಿ ಎಂದು ಸಹೋದರಿಯು ಹಾರೈಸಿ ಸಹೋದರ ಮಣಿಕಟ್ಟಿಗೆ ಕಟ್ಟುವ ರಕ್ಷಾ ಕವಚವೇ ರಕ್ಷಾ ಬಂಧನ. ನಮ್ಮ ಭಾರತದ ದೇಶದಲ್ಲಿ ಇದಕ್ಕೆ ಬಹಳ ಪವಿತ್ರವಾದ ಪ್ರಾಮುಖ್ಯತೆ ನೀಡಲಾಗಿದೆ.

ರಕ್ಷಾ ಬಂಧನವನ್ನು ಪ್ರತಿ ವರ್ಷ ಶ್ರಾವಣ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. 2022ನೇ ಸಾಲಿನಲ್ಲಿ ರಕ್ಷಾಬಂಧನದ ಹಬ್ಬವನ್ನು ಆಗಸ್ಟ್ 11ರಂದು ಆಚರಿಸಲಾಗುವುದು. ಈ ಹಬ್ಬವು ಸಹೋದರ-ಸಹೋದರಿಯರ ಪ್ರೀತಿಯ ಸಂಕೇತವಾಗಿದೆ. ರಕ್ಷಾಬಂಧನ ಹಬ್ಬದಂದು ಹಬ್ಬದ ಸ್ನಾನ, ತೆಂಗಿನ ಕಾಯಿ ಉಡುಗೊರೆ ನೀಡುವುದು ಮತ್ತು ಸಮುದ್ರ ದೇವನಿಗೆ ಪೂಜೆ ಮಾಡುವುದು ಈ ಹಬ್ಬದ ದಿನ ನಡೆಯುತ್ತದೆ. ಸದಾ ಕಾಲ ಸಹೋದರ ಏಳ್ಗೆ ಬಯಸುವ ಸಹೋದರಿ ಸಹೋದರರ ಭ್ರಾತೃತ್ವ ಸಾರುವ ಈ ರಕ್ಷಾ ಬಂಧನ ಹಬ್ಬದ ಹಿನ್ನೆಲೆ, ಐತಿಹಾಸಿಕ ಹಾಗೂ ಪೌರಾಣಿಕ ಕಥೆ, ಏಕೆ ರಕ್ಷಾ ಬಂಧನ ಆಚರಿಸುತ್ತಾರೆ ಎಂದು ಮುಂದೆ ತಿಳಿಯೋಣ:

ಕೃಷ್ಣ ಮತ್ತು ದ್ರೌಪದಿ ಕಥೆ

ಕೃಷ್ಣ ಮತ್ತು ದ್ರೌಪದಿ ಕಥೆ

ಭಾರತೀಯ ಪುರಾಣಗಳಲ್ಲಿ ಅತ್ಯಂತ ಜನಪ್ರಿಯವಾದ ಕಥೆಯೆಂದರೆ ಶ್ರೀಕೃಷ್ಣ ಮತ್ತು ದ್ರೌಪದಿ. 'ಪಂಚ ಪಾಂಡವರ ಪತ್ನಿ'. ಕಥೆಯ ಪ್ರಕಾರ, ಮಕರ ಸಂಕ್ರಾಂತಿಯಂದು ಕಬ್ಬನ್ನು ಕತ್ತರಿಸುವಾಗ ಕೃಷ್ಣ ತನ್ನ ಕಿರುಬೆರಳನ್ನು ಕತ್ತರಿಸಿಕೊಂಡ. ರುಕ್ಮಿಣಿ ತಕ್ಷಣವೇ ಅದಕ್ಕೆ ಔಷಧ ತರಲು ಸಹಾಯಕರನ್ನು ಕಳುಹಿಸಿದಳು. ಅಷ್ಟರಲ್ಲಿ ಇಡೀ ಘಟನೆಯನ್ನು ವೀಕ್ಷಿಸುತ್ತಿದ್ದ ದ್ರೌಪದಿ ರಕ್ತಸ್ರಾವವನ್ನು ತಡೆಯಲು ಅವಳ ಸೀರೆಯನ್ನು ಸ್ವಲ್ಪ ಕತ್ತರಿಸಿ ಕೃಷ್ಣನ ಬೆರಳನ್ನು ಕಟ್ಟಿದಳು. ಪ್ರತಿಯಾಗಿ, ಅಗತ್ಯವಿದ್ದಾಗ ಅವಳಿಗೆ ಸಹಾಯ ಮಾಡುವುದಾಗಿ ಕೃಷ್ಣ ಭರವಸೆ ನೀಡಿದನು. ಇದಕ್ಕೆ ಅನುಗುಣವಾಗಿ ದ್ರೌಪದಿಯ ಅನಿಯಂತ್ರಿತ ವಸ್ತ್ರಾಪಹರಣದ ಸಮಯದಲ್ಲಿ ಕೃಷ್ಣನು ನೀಡಿದ ಸಹಾಯದ ಹಿಂದಿನ ಕಥೆಯೆಂದರೆ, ಕೃಷ್ಣನು ಬಂದು ಅವಳ ಸೀರೆಗೆ ಅಂತ್ಯವಿಲ್ಲದಂತೆ ಮಾಡಿದನು, ಅವಳಿಗೆ ಅತ್ಯಂತ ಅಗತ್ಯವಿದ್ದಾಗ ಅವಳ ರಕ್ಷಣೆಯನ್ನು ನೀಡುವ ಮೂಲಕ ಅವಳಿಗೆ ಆಗಬೇಕಿದ್ದ ಮುಜುಗರವನ್ನುಂಟು ತಡೆದನು.

ಲಕ್ಷ್ಮಿ ದೇವತೆ ಮತ್ತು ರಾಜ ಬಲಿ ಚಕ್ರವರ್ತಿ

ಲಕ್ಷ್ಮಿ ದೇವತೆ ಮತ್ತು ರಾಜ ಬಲಿ ಚಕ್ರವರ್ತಿ

ರಾಜ ಬಲಿ ಒಬ್ಬ ಮಹಾನ್‌ ರಾಜನಾಗಿದ್ದನು ಮತ್ತು ವಿಷ್ಣುವಿನ ಪರಮ ಭಕ್ತನಾಗಿದ್ದನು. ಒಮ್ಮೆ ಬಲಿ ಚಕ್ರವರ್ತಿ ಯಜ್ಞವನ್ನು ಮಾಡಿದನು. ಅದೇ ಸಮಯದಲ್ಲಿ ವಿಷ್ಣು ತನ್ನ ಪರಮ ಭಕ್ತನಾದ ಬಲಿಯನ್ನು ಪರೀಕ್ಷಿಸಲು ವಾಮನ ಅವತಾರದಲ್ಲಿ ಬಲಿಯ ಮುಂದೆ ಪ್ರತ್ಯಕ್ಷನಾಗಿ ಮೂರು ರೀತಿಯ ವರ ಬೇಕೆಂದು ಕೇಳುತ್ತಾನೆ. ಮೊದಲನೇ ವರವಾಗಿ ಭೂಮಿ ಕೇಳುತ್ತಾನೆ, ಎರಡನೇ ವರವಾಗಿ ಆಕಾಶ ದಾನಮಾಡುವಂತೆ ಕೇಳುತ್ತಾನೆ, ಮೂರನೇಯದಾಗಿ ಭೂಮಿಗಾಗಿ ಬಲಿಯ ತಲೆಯ ಮೇಲೆ ಪಾದವನ್ನು ಇಡುತ್ತಾನೆ.

ಆಗ ಬಲಿಯು ವಿಷ್ಣುವಿನಲ್ಲಿ ಪ್ರಭು ನಾನು ನನ್ನೆಲ್ಲಾ ಸ್ವತ್ತನ್ನು ನಿನಗೆ ನೀಡಿದ್ದೇನೆ, ಈಗ ನೀನು ನನ್ನ ಕೋರಿಕೆಯ ಮೇರೆಗೆ ನನ್ನೊಂದಿಗೆ ಪಾತಾಳಕ್ಕೆ ಬರಬೇಕೆಂದು ಕೇಳಿಕೊಳ್ಳುತ್ತಾನೆ. ಭಕ್ತನ ಆಸೆಯ ಮೇರೆಗೆ ಭಗವಾನ್‌ ವಿಷ್ಣು ವೈಕುಂಠವನ್ನು ತ್ಯಜಿಸಿ ಪಾತಾಳಕ್ಕೆ ಹೋಗುತ್ತಾನೆ.

ಇದರಿಂದ ಚಿಂತಿತಳಾದ ಲಕ್ಷ್ಮಿಯು ಬಡ ಮಹಿಳೆಯ ರೂಪ ಧರಿಸಿ ಬಲಿಯಿದ್ದಲ್ಲಿಗೆ ಬಂದು ಆತನಿಗೆ ರಕ್ಷಾ ದಾರವನ್ನು ಕಟ್ಟುತ್ತಾಳೆ. ಆಗ ಬಲಿ ಚಕ್ರವರ್ತಿ ತಾಯಿ ನಿಮಗೆ ಉಡುಗೊರೆಯಾಗಿ ನೀಡಲು ನನ್ನ ಬಳಿ ಈಗ ಏನೂ ಉಳಿದಿಲ್ಲ ಎನ್ನುತ್ತಾನೆ. ಲಕ್ಷ್ಮಿ ದೇವಿ ನನಗೆ ನಿನ್ನ ಉಡುಗೊರೆ ನನಗೆ ಏನು ಬೇಕಿಲ್ಲ, ಆದರೆ ನನ್ನ ಪತಿ ವಿಷ್ಣುವನ್ನು ನನಗೆ ಹಿಂದಿರುಗಿಸು ಎಂದು ಕೇಳಿಕೊಳ್ಳುತ್ತಾಳೆ. ನಂತರ ಬಲಿ ವಿಷ್ಣುವನ್ನು ಪಾತಾಳ ಲೋಕದಿಂದ ಲಕ್ಷ್ಮಿಯೊಂದಿಗೆ ವೈಕುಂಠಕ್ಕೆ ಕಳುಹಿಸುತ್ತಾನೆ.

ಯಮ ಮತ್ತು ಯಮುನಾ

ಯಮ ಮತ್ತು ಯಮುನಾ

ಇನ್ನೊಂದು ದಂತಕಥೆಯ ಪ್ರಕಾರ, ರಕ್ಷಾ ಬಂಧನದ ಆಚರಣೆಗೆ ಯಮ ಹಾಗೂ ಯಮುನೆಗೂ ಸಂಬಂಧವಿದೆ. ಭಾರತದಲ್ಲಿ ಹರಿಯುವ ನದಿ ಯಮುನಾ ಯಮನಿಗೆ ರಾಖಿ ಕಟ್ಟಿದಾಗ, ಸಾವಿನ ಅಧಿಪತಿ ಯಮ ಅವಳಿಗೆ ಅಮರತ್ವವನ್ನು ನೀಡಿದನೆಂದು ಕಥೆ ಹೇಳುತ್ತದೆ. ಮತ್ತು ಆತನು ಆ ಭಾವದಿಂದ ಮನನೊಂದನು, ರಾಖಿ ಕಟ್ಟಿದ ಮತ್ತು ತನ್ನ ಸಹೋದರಿಯನ್ನು ರಕ್ಷಿಸಲು ಮುಂದಾದ ಯಾವುದೇ ಸಹೋದರ ಕೂಡ ಅಮರನಾಗುತ್ತಾನೆ ಎಂದು ಆತ ಘೋಷಿಸಿದನೆಂದು ಹೇಳಲಾಗಿದೆ.

ರೊಕ್ಸಾನಾ ಮತ್ತು ಕಿಂಗ್ ಪೋರಸ್

ರೊಕ್ಸಾನಾ ಮತ್ತು ಕಿಂಗ್ ಪೋರಸ್

ಇನ್ನೊಂದು ಚಾರಿತ್ರಿಕ ಕಥೆಯ ಪ್ರಕಾರ, ಅಲೆಕ್ಸಾಂಡರ್ ದಿ ಗ್ರೇಟ್ ಭಾರತವನ್ನು 326 BC ಯಲ್ಲಿ ಆಕ್ರಮಣ ಮಾಡಿದಾಗ, ಅವನ ಪತ್ನಿ ರೊಕ್ಸಾನಾ ವಿರೋಧಿ ಬಣದ ನಾಯಕ ಪೋರಸ್‌ಗೆ ಪವಿತ್ರವಾದ ದಾರವನ್ನು ಕಳುಹಿಸಿದಳು ಮತ್ತು ಯುದ್ಧಭೂಮಿಯಲ್ಲಿ ತನ್ನ ಗಂಡನಿಗೆ ಹಾನಿಯಾಗದಂತೆ ಕೇಳಿಕೊಂಡಳು. ವಿನಂತಿಯನ್ನು ಗೌರವಿಸಿ, ಅವನು ಅಲೆಕ್ಸಾಂಡರ್ ಅನ್ನು ಎದುರಿಸಿದಾಗ, ಪೋರಸ್‌ ಅವಅಲೆಕ್ಸಾಂಡರ್ನನ್ನು ಕೊಲ್ಲಲು ನಿರಾಕರಿಸುತ್ತಾನೆ. ಅಂತಿಮವಾಗಿ, ಪೋರಸ್ ಹೈಡಸ್ಪೆಸ್ ನದಿಯ ಯುದ್ಧವನ್ನು ಕಳೆದುಕೊಳ್ಳುತ್ತಾನೆ ಆದರೆ ಅಲೆಕ್ಸಾಂಡರ್ನನ ಗೌರವವನ್ನು ಪಡೆಯುತ್ತಾನೆ.

ಇಂದ್ರ ಹಾಗೂ ಸಚಿ ದೇವಿ

ಇಂದ್ರ ಹಾಗೂ ಸಚಿ ದೇವಿ

ಅಸುರನಿಂದ ಸೋಲಿಸಲ್ಪಟ್ಟಂತಹ ಇಂದ್ರನಿಗೆ ತನ್ನ ಶತ್ರುಗಳಿಂದ ರಕ್ಷಣೆ ಪಡೆಯಬೇಕಾದರೆ ಕೈಗೆ ರಾಖಿ ಕಟ್ಟಿಕೊಳ್ಳಬೇಕು ಎಂದು ಬ್ರಹಸ್ಪತಿ ಹೇಳಿದರು. ಬ್ರಹಸ್ಪತಿಯ ಮಾತಿನಂತೆ ಇಂದ್ರನ ಒಡನಾಡಿ ಸಚಿ ದೇವಿಯು ಇಂದ್ರನಿಗೆ ರಾಖಿ ಕಟ್ಟಿದಳು ಎಂದು ಪುರಾಣದಲ್ಲಿದೆ.

English summary

Raksha Bandhan Story: Legends Behind Rakhi Purnima

Here we are discussing about Raksha Bandhan 2021: Legends Behind Rakhi Purnima. Read more.
X
Desktop Bottom Promotion