For Quick Alerts
ALLOW NOTIFICATIONS  
For Daily Alerts

ರಕ್ಷಾ ಬಂಧನದ ಪೂಜಾ ವಿಧಿಗಳು ಹಾಗೂ ಭದ್ರಾ ಕಾಲದಲ್ಲಿ ರಾಖಿ ಕಟ್ಟಬಾರದು ಏಕೆ?

|

ರಕ್ಷಾ ಬಂಧನ ಅಣ್ಣ-ತಂಗಿಯರ ಪವಿತ್ರ ಸಂಬಂಧವನ್ನು ಸಾರುವ ಹಬ್ಬವಾಗಿದೆ. ದೇಶದೆಲ್ಲಡೆ ರಕ್ಷಾ ಬಂಧನವನ್ನು
ಸಡಗರ -ಸಂಭ್ರಮದಿಂದ ಆಚರಿಸಲಾಗುವುದು. ಆಗಸ್ಟ್ 22ಕ್ಕೆ ರಕ್ಷಾ ಬಂಧನವನ್ನು ಆಚರಿಸಲಾಗುವುದು.
ವೈದಿಕ ಶಾಸ್ತ್ರದ ಪ್ರಕಾರ ದುಷ್ಟ ಶಕ್ತಿಗಳು, ಪಿಶಾಚಿಗಳು ಇವುಗಳನ್ನು ದೂರವಿಡಲು ರಕ್ಷಾ ಬಂಧನ ಆಚರಿಸಲಾಗುವುದು. ರಕ್ಷಾ ಬಂಧನ ಆಚರಣೆ ಮಾಡುವುದರಿಂದ ಎಲ್ಲಾ ಬಗೆಯ ಕಾಯಿಲೆಗಳು, ಕೆಟ್ಟ ಶಕ್ತಿಗಳನ್ನು ದೂರವಿಡಬಹುದು. ರಕ್ಷಾ ಬಂಧನ ಉತ್ತರ ಭಾರತದಲ್ಲಿ ಆಚರಿಸುವ ಹೋಲಿ ದಹನದಷ್ಟೇ ಪವಿತ್ರವಾಗಿದೆ. ಈ ರಕ್ಷಾ ಬಂಧನ ಆಚರನೆ ಮಾಡುವುದರಿಂದ ಅದರ ಫಲ ವರ್ಷಪೂರ್ತಿ ಇರುವುದು ಎಂದು ವೈದಿಕ ಶಾಸ್ತ್ರ ಹೇಳುತ್ತದೆ.

ರಕ್ಷಾ ಬಂಧನವನ್ನು ಆಚರಿಸಲು ವಿಧಿ-ವಿಧಾನಗಳಿವೆ, ಆ ಸಮಯದಲ್ಲಿ ಮಂತ್ರ ಹೇಳುತ್ತಾ ರಾಖಿ ಕಟ್ಟುವುದರಿಂದ ಅದರ ಶುಭ ಫಲ ಸಿಗುವುದು. ರಕ್ಷಾ ಬಂಧನದ ಪೂಜಾ ವಿಧಿಗಳೇನು? ಹೇಳಬೇಕಾದ ಮಂತ್ರ ಯಾವುದು? ರಾಖಿಯನ್ನು ಯಾವ ರೀತಿ ಕಟ್ಟಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ:

ಭದ್ರಾ ಕಾಲದಲ್ಲಿ ರಾಖಿ ಕಟ್ಟಬಾರದು?

ಭದ್ರಾ ಕಾಲದಲ್ಲಿ ರಾಖಿ ಕಟ್ಟಬಾರದು?

ರಕ್ಷಾ ಬಂಧನವನ್ನು ಶ್ರಾವಣ ಪೂರ್ಣಿಮಾದಂದು ಆಚರಿಸಲಾಗುವುದು.

ರಕ್ಷಾ ಬಂಧನ ಆಚರಣೆಯನ್ನು ಕೆಟ್ಟ ಘಳಿಗೆಯಲ್ಲಿ ಮಾಡಬಾರದು ಎಂದು ಹೇಳಲಾಗುತ್ತದೆ. ಅದರಲ್ಲಿ ಭದ್ರಾಕಾಲ ಹಾಗೂ ರಾಹುಕಾಲದಲ್ಲಿ ಯಾವುದೇ ಶುಭ ಕಾರ್ಯ ಮಾಡಿದರೆ ಅದರ ಫಲ ಸಿಗುವುದಿಲ್ಲ ಎಂದು ವೈದಿಕ ಶಾಸ್ತ್ರ ಹೇಳುತ್ತದೆ.

ಆಗಸ್ಟ್ 22ಕ್ಕೆ ರಾಹುಕಾಲ ಹಾಗೈ ಭದ್ರಾ ಕಾಲ ಸಮಯ

ರಾಹುಕಾಲ: ಸಂಜೆ 05:03ರಿಂದ 06:37ರವರೆಗೆ

ಭದ್ರಾ ಸಮಯ: ಬೆಳಗ್ಗೆ 06:08ರಿಂದ 06:12ರವರೆಗೆ

ಈ ಎರಡು ಸಮಯ ಬಿಟ್ಟು ಆ ದಿನದಲ್ಲಿ ನೀವು ಯಾವ ಸಮಯದಲ್ಲಿ ಬೇಕಾದರೂ ಸಹೋದರಿನಿಗೆ ರಾಖಿ ಕಟ್ಟಬಹುದು.

ರಕ್ಷಾ ಬಂಧನ ಪೂಜಾ ವಿಧಿ

ರಕ್ಷಾ ಬಂಧನ ಪೂಜಾ ವಿಧಿ

ರಕ್ಷಾ ಬಂಧನ ಪೂಜಾ ವಿಧಿಯನ್ನು ವ್ರತರಾಜ ಎಂದು ಕರೆಯಲಾಗುವುದು. ಇದರ ಬಗ್ಗೆ ಪವಿತ್ರವಾದ ದಾರದ ಮೂಲಕ ರಾಖಿಯನ್ನು ಕಟ್ಟಲಾಗುವುದು. ಈ ರಕ್ಷಾ ಎಲ್ಲಾ ದುಷ್ಟ ಶಕ್ತಿ, ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುವುದು. ರಕ್ಷಾವನ್ನು ಜಯ ಸಿಗಲಿ, ರಕ್ಷಣೆ ಸಿಗಲಿ, ಐಶ್ವರ್ಯ, ಆರೋಗ್ಯ ಲಭಿಸಲಿ ಎಂಬ ಉದ್ದೇಶದಿಂದ ಕಟ್ಟಲಾಗುವುದು.

ಪೌರಾಣಿಕ ಕತೆಯ ಪ್ರಕಾರ ಇಂದ್ರನ ಪತ್ನಿ ಶಚಿ ಯುದ್ದದಲ್ಲಿ ತನ್ನ ರಕ್ಷಣೆಗಾಗಿ ರಕ್ಷಾವನ್ನು ತಯಾರಿಸಿದಳು ಎಂಬ ಕತೆಯಿದೆ.

ಪೂಜಾ ವಿಧಿ

ಪೂಜಾ ವಿಧಿ

* ಮಂಜಾನೆ ಎದ್ದು, ಸ್ನಾನ ಮಾಡಿ ಪೂಜೆ ಮಾಡಿ ಈ ಆಚರಣೆ ಮಾಡಬೇಕು. ಬೆಳಗ್ಗೆ ಸ್ನಾನದ ಬಳಿಕ ದೇವ ಹಾಗೂ ಪಿತೃ ತರ್ಪಣ ನೀಡಬೇಕು. ಈ ಮೂಲಕ ಪಿತೃಗಳ ಹಾಗೂ ದೇವರ ಆಶೀರ್ವಾದ ಪಡೆಯಬೇಕು.

* ವ್ರತರಾಜ್‌ ಪ್ರಕಾರ ರಕ್ಷಾ ಬಂಧನವನ್ನು ಮಧ್ಯಾಹ್ನದ ಹೊತ್ತಿಗೆ ಮಾಡಲಾಗುವುದು. ಅಕ್ಕಿ, ಬಿಳಿ ಸಾಸಿವೆ ಹಾಗೂ ಚಿನ್ನದ ದಾರದಲ್ಲಿ ರಕ್ಷಾ ಪೋಟ್ಲಿ ತಯಾರಿಸಲಾಗುವುದು. ರೇಷ್ಮೆ ಅಥವಾ ಹತ್ತಿಯ ನೂಲಿನಲ್ಲಿ ರಾಖಿಯನ್ನು ತಯಾರಿಸಿ ಅದನ್ನು ಶುದ್ಧವಾದ ಬಟ್ಟೆಯ ಮೇಲಿಟ್ಟು ಪೂಜೆಯನ್ನು ಮಾಡಬೇಕು. ಪೂಜೆ ಮಾಡುವಾಗ ಹೊಸ ವಸ್ತ್ರವನ್ನು ಬುಧನಿಗೆ ಸಮರ್ಪಿಸಬೇಕು. ಬುಧ ಗ್ರಹದ ಪೂಜೆಯ ಬಳಿಕ ರಕ್ಷಾವನ್ನು ಪೂಜಿಸಲಾಗುವುದು, ರಕ್ಷಾ ಪೋಟ್ಲಿಯನ್ನು ಮಂತ್ರವನ್ನು ಹಳುತ್ತಾ ಕೈಗೆ ಕಟ್ಟಬೇಕು.

ರಾಖಿ ಕಟ್ಟುವಾಗ ಈ ಮಂತ್ರಗಳನ್ನು ಹೇಳಿ

ರಾಖಿ ಕಟ್ಟುವಾಗ ಈ ಮಂತ್ರಗಳನ್ನು ಹೇಳಿ

ರಾಖಿ ಮಂತ್ರ

'ಯೇನ್ ಬದ್ದೋ ಬಲಿ ರಾಜ, ದಾನ್‌ವೇಂದ್ರೋ ಮಹಾಬಲ್‌: ತೇನ್ ತ್ವಾಂ ಪ್ರತಿ ಬಂಧನ್'

ಅರ್ಥ: ನಾನು ನಿನಗೆ ಕಟ್ಟಿರುವ ಈ ರಕ್ಷಾ ಬಲಿ ರಾಜನಿಗೆ ಕಟ್ಟಿದ ರಕ್ಷಾಗೆ ಸಮ, ಓ ರಕ್ಷಾವೇ ಬಲವಾಗಿರು, ಎಂದಿಗೂ ಅಲುಗಾಡಬೇಡ, ಸ್ಥಿರವಾಗಿರು.

ಶ್ರಾವಣ ಪೂರ್ಣಿಮೆಯಂದು ರಾಖಿಯನ್ನು ಕಟ್ಟುವುದರಿಂದ ವರ್ಷ ಪೂರ್ತಿ ಒಳಿತಾಗುವುದು ಎಂಬ ನಂಬಿಕೆ. ಸಹೋದರಿ ಸಹೋದರನ ಕೈಗೆ ರಾಖಿಯನ್ನು ಕಟ್ಟಿ ರಕ್ಷೆಯನ್ನು ಬಯಸುತ್ತಾಳೆ. ಈ ರಕ್ಷಾ ಬಂಧನ ನಿಮ್ಮನ್ನು ಎಲ್ಲಾ ದುಷ್ಟ ಶಕ್ತಿಗಳಿಂದ ರಕ್ಷಿಸಲಿ. ರಕ್ಷಾ ಬಂಧನ ಹಬ್ಬದ ಶುಭಾಶಯಗಳು...

English summary

Raksha Bandhan Rakhi: Puja Vidhi & Mantra : Rakhi Tying Vidhi Mantra Step By Step in kannada

Raksha Bandhan Rakhi 2021: Puja Vidhi & Mantra : Rakhi Tying Vidhi Mantra Step By Step in kannada, read on...
X
Desktop Bottom Promotion