For Quick Alerts
ALLOW NOTIFICATIONS  
For Daily Alerts

ಪಿತೃಪಕ್ಷದಲ್ಲಿ ಗರ್ಭಿಣಿಯರು ಇವುಗಳಿಂದ ದೂರವಿರಿ

|

ಪಿತೃ ಪಕ್ಷ ಆರಂಭವಾಗಿದೆ. ಈ ಸಮಯದಲ್ಲಿ ನಮ್ಮ ಪೂರ್ವಜರಿಗೆ ವಿಶೇಷ ಪೂಜೆ ಸಲ್ಲಿಸುವ ಕ್ರಮವು ಜಾರಿಯಲ್ಲಿದೆ. ಪಿತೃ ಪಕ್ಷದ ಸಮಯದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ಆ ನಿಯಮಗಳನ್ನು ಅವರು ಪಾಲಿಸದೇ ಇದ್ದರೆ ಹುಟ್ಟುವ ಶಿಶುವಿನ ಮೇಲೆ ಕೆಟ್ಟ ಪರಿಣಾಮಗಳಾಗುತ್ತದೆ ಎಂದು ನಂಬಲಾಗುತ್ತದೆ.

Pregnant Women Should Not Do These Things During Pitru Paksha

ಹಿಂದೂ ಧರ್ಮದ ಪ್ರಕಾರ ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಪಿಂಡ ಪ್ರಧಾನ ಮಾಡುವ ಪ್ರಾಮುಖ್ಯತೆ ಇದೆ. ಈ ಪ್ರಕಾರವಾಗಿ ಪಿತೃಗಳ ಆತ್ಮಕ್ಕೆ ಶಾಂತಿ ದೊರಕಿಸಲಾಗುತ್ತದೆ. ಈ ಸಮಯದಲ್ಲಿ ಪಿಂಡ ಪ್ರಧಾನ ಮತ್ತು ತರ್ಪಣ ಬಿಡುವ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಈ ಪೂಜೆಯನ್ನು ವಿಧಿಪೂರ್ವಕವಾಗಿ ಮತ್ತು ಬಹಳ ಶ್ರದ್ಧೆಯಿಂದ ಮಾಡಬೇಕಾಗುತ್ತದೆ. ಪಿಂಡದಾನದ ಸಂದರ್ಬದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರುವುದರಿಂದಾಗಿ ಪೂರ್ವಜರ ಆತ್ಮಗಳು ಕೋಪಗೊಳ್ಳಬಹುದು ಮತ್ತು ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ. ಹಾಗಾಗಿ ಈ ಪೂಜೆಯನ್ನು ಮಾಡುವ ಮೊದಲು ಎಲ್ಲಾ ವಿಚಾರಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗಿರುವ ಅಗತ್ಯವಿದೆ. ಹೇಗೆ ಮಾಡಬೇಕು? ಏನು ಮಾಡಬೇಕು ಇತ್ಯಾದಿ ವಿಚಾರಗಳ ಸ್ಪಷ್ಟನೆ ಇರುವುದು ಬಹಳ ಮುಖ್ಯ.

ಗರ್ಭಿಣಿಯರಿಗೆ ವ್ಯತಿರಿಕ್ತ ಪರಿಣಾಮ

ಪಿತೃ ಪಕ್ಷದ ಸಮಯದಲ್ಲಿ ಪಿತೃಗಳ ಜೊತೆಗೆ ದುಷ್ಟಶಕ್ತಿಗಳೂ ಕೂಡ ಭೂಮಿಗೆ ಬರುತ್ತದೆ ಎನ್ನಲಾಗುತ್ತದೆ. ಇದು ಗರ್ಭಿಣಿ ಸ್ತ್ರೀಯರಿಗೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ. ಇದೇ ಕಾರಣಕ್ಕಾಗಿ 9 ವಿಚಾರಗಳ ಬಗ್ಗೆ ಈ ಸಮಯದಲ್ಲಿ ಗರ್ಭಿಣಿ ಸ್ತ್ರೀಯರು ಜಾಗೃತಿ ವಹಿಸಬೇಕಾಗುತ್ತದೆ ಎಂದು ಧಾರ್ಮಿಕ ಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.

ಗರ್ಭವತಿ ಸ್ತ್ರೀ ಏನು ಮಾಡಬಾರದು?

ಗರ್ಭವತಿ ಸ್ತ್ರೀ ಏನು ಮಾಡಬಾರದು?

1. ಏಕಾಂತ ಸ್ಥಳಕ್ಕೆ ಹೋಗಬಾರದು

ಪಿತೃ ಪಕ್ಷದ ಸಮಯದಲ್ಲಿ ಯಾವುದೇ ರೀತಿಯ ಏಕಾಂತ ಸ್ಥಳಕ್ಕೆ ಗರ್ಭವತಿ ಹೋಗಬಾರದು. ಯಾಕೆಂದರೆ ಅಂತಹ ಸ್ಥಳಗಳಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ ಎನ್ನಲಾಗುತ್ತದೆ. ಅದು ಗರ್ಭಿಣಿ ಸ್ತ್ರೀಗೆ ಕೆಟ್ಟ ಪರಿಣಾಮ ಮಾಡುವ ಸಾಧ್ಯತೆ ಇರುತ್ತದೆ.

2. ರಾತ್ರಿಯ ವೇಳೆ ಸಂಚಾರ ನಿಷಿದ್ಧ

2. ರಾತ್ರಿಯ ವೇಳೆ ಸಂಚಾರ ನಿಷಿದ್ಧ

ಪಿತೃ ಪಕ್ಷದ ಸಮಯದಲ್ಲಿ ಗರ್ಭವತಿ ಮಹಿಳೆ ರಾತ್ರಿಯ ವೇಳೆ ಸಂಚಾರ ಮಾಡಬಾರದು. ರಾತ್ರಿಯ ಸಮಯದಲ್ಲಿ ಕೆಟ್ಟ ಶಕ್ತಿಗಳ ಪ್ರಭಾವ ಅಧಿಕವಾಗಿರುತ್ತದೆ ಮತ್ತು ಅದು ಅವರ ಮೇಲೆ ಕೆಟ್ಟ ಪರಿಣಾಮ ಮಾಡುವ ಸಾಧ್ಯತೆ ಇರುತ್ತದೆ.

3. ವಯಸ್ಸಾದವರ ಮನಸ್ಸನ್ನು ನೋಯಿಸಬಾರದು

3. ವಯಸ್ಸಾದವರ ಮನಸ್ಸನ್ನು ನೋಯಿಸಬಾರದು

ಗರ್ಭವತಿ ಸ್ತ್ರೀ ಈ ಸಮಯದಲ್ಲಿ ಹಿರಿಯರ ಮನಸ್ಸನ್ನ ಅದರಲ್ಲೂ ಮುಖ್ಯವಾಗಿ ವಯಸ್ಸಾದವರ ಮನಸ್ಸನ್ನು ನೋಯಿಸಲೇ ಬಾರದು.ಈ ಕಾರಣದಿಂದ ನಿಮ್ಮ ಪೂರ್ವಜರು ನಿಮ್ಮ ಮೇಲೆ ಕೋಪಗೊಳ್ಳಬಹುದು.

4. ಕಾಗೆಗೆ ಗರ್ಭವತಿಯಿಂದ ಯಾವುದೇ ಹಾನಿ ಆಗಬಾರದು

4. ಕಾಗೆಗೆ ಗರ್ಭವತಿಯಿಂದ ಯಾವುದೇ ಹಾನಿ ಆಗಬಾರದು

ಈ ಸಮಯದಲ್ಲಿ ಗೋವು, ನಾಯಿ ಮತ್ತು ಕಾಗೆಗೆ ಗರ್ಭವತಿ ಸ್ತ್ರೀಯಿಂದ ಯಾವುದೇ ರೀತಿಯ ಹಾನಿ ಆಗಬಾರದು. ಈ ಸಮಯದಲ್ಲಿ ನಮ್ಮ ಪಿತೃಗಳು ಈ ರೂಪದಲ್ಲಿ ಬಂದು ನಾವು ನೀಡುವ ಶ್ರಾದ್ಧದ ಪಿಂಡ ಅಥವಾ ಆಹಾರವನ್ನು ಸೇವಿಸಿ ಹೋಗುತ್ತಾರೆ ಎಂಬ ನಂಬಿಕೆ ಇದೆ.

5. ಬಡವರ ಮನಸ್ಸನ್ನು ನೋಯಿಸಬಾರದು

5. ಬಡವರ ಮನಸ್ಸನ್ನು ನೋಯಿಸಬಾರದು

ಗರ್ಭಿಣಿ ಸ್ತ್ರೀ ಈ ಸಮಯದಲ್ಲಿ ಬಡವರ ಮನಸ್ಸನ್ನು ಯಾವುದೇ ಕಾರಣಕ್ಕೂ ನೋಯಿಸಬಾರದು ಯಾಕೆಂದರೆ ಹೀಗೆ ಮಾಡುವುದರಿಂದ ನಿಮ್ಮ ಪಿತೃಗಳು ನಿಮಗೆ ಶಾಪ ನೀಡುವ ಸಾಧ್ಯತೆ ಇರುತ್ತದೆ.

6. ಧರ್ಮಗ್ರಂಥದಲ್ಲಿ ನಿಷೇಧಿಸಲ್ಪಟ್ಟ ಕೆಲಸ ನಿಷಿದ್ಧ

6. ಧರ್ಮಗ್ರಂಥದಲ್ಲಿ ನಿಷೇಧಿಸಲ್ಪಟ್ಟ ಕೆಲಸ ನಿಷಿದ್ಧ

ಶಾಸ್ತ್ರದಲ್ಲಿ ಅಥವಾ ಧರ್ಮಗ್ರಂಥದಲ್ಲಿ ನಿಷೇಧಿಸಲ್ಪಟ್ಟ ಯಾವುದೇ ಕೆಲಸವನ್ನು ಗರ್ಭವತಿ ಸ್ತ್ರೀ ಮಾಡಬಾರದು. ಪಿತೃಪಕ್ಷದಲ್ಲಿ ನಮ್ಮ ಪಿತೃಗಳು ನಮ್ಮ ಸುತ್ತಲೂ ಇರುತ್ತಾರೆ ಎಂಬ ನಂಬಿಕೆ ಇದೆ.

7. ದೈಹಿಕ ಸಂಬಂಧವನ್ನು ಹೊಂದಬಾರದು

7. ದೈಹಿಕ ಸಂಬಂಧವನ್ನು ಹೊಂದಬಾರದು

ಈ ಸಮಯದಲ್ಲಿ ಗರ್ಭವತಿ ಸ್ತ್ರೀ ದೈಹಿಕ ಸಂಬಂಧವನ್ನು ಹೊಂದಬಾರದು ಯಾಕೆಂದರೆ ಹೀಗೆ ಮಾಡಿದರೆ ಮಗು ಅನಾರೋಗ್ಯದಿಂದ ಜನಿಸುವ ಸಾಧ್ಯತೆ ಇರುತ್ತದೆ.

8. ಸಸ್ಯಾಹಾರಿ ಮಾತ್ರ ಸೇವಿಸಿ

8. ಸಸ್ಯಾಹಾರಿ ಮಾತ್ರ ಸೇವಿಸಿ

ಗರ್ಭಿಣಿ ಸ್ತ್ರೀಯರು ಈ ಸಮಯದಲ್ಲಿ ಸಸ್ಯಾಹಾರಿ ಆಹಾರ ಸೇವಿಸುವುದನ್ನು ಮರೆಯಬಾರದು. ಒಂದು ವೇಳೆ ಈ ನಿಯಮ ಮುರಿದರೆ ಅದು ಅವರ ಪಿತೃಗಳಿಗೆ ನೋವುಂಟು ಮಾಡುತ್ತದೆ.

9. ಸುಗಂಧ ದ್ರವ್ಯ ಬಳಸಬಾರದು

9. ಸುಗಂಧ ದ್ರವ್ಯ ಬಳಸಬಾರದು

ಈ ಸಮಯದಲ್ಲಿ ಗರ್ಭವತಿ ಸ್ತ್ರೀ ಸುಗಂಧ ದ್ರವ್ಯವನ್ನು ಬಳಸಬಾರದು ಅಥವಾ ತಯಾರಿಸಲೂ ಬಾರದು. ಯಾಕೆಂದರೆ ಈ ಸಮಯದಲ್ಲಿ ನಕಾರಾತ್ಮಕ ವಿಷಯಗಳು ತ್ವರಿತವಾಗಿ ಕಾರ್ಯಗತಗೊಳ್ಳುತ್ತದೆ.

English summary

Pregnant Women Should Not Do These Things During Pitru Paksha

Here we are discussing about Pregnant Women Should Not Do These Things During Pitru Paksha. Read more.
X
Desktop Bottom Promotion