For Quick Alerts
ALLOW NOTIFICATIONS  
For Daily Alerts

ರವಿ ಪ್ರದೋಷ ವ್ರತ: ಭಾನುವಾರ ಈ ಮುಹೂರ್ತದಲ್ಲಿ ಶಿವ ಪೂಜೆ ಮಾಡಿದರೆ ಬಯಸಿದ್ದು ನೆರವೇರುವುದು

|

ಈ ಬಾರಿ ಪ್ರದೋಷ ವ್ರತ ಭಾನುವಾರ ಬಂದಿರುವುದರಿಂದ ರವಿಪ್ರದೋಷ ವ್ರತ ಉಂಟಾಗಿದೆ. ಜೂನ್ 26, ಭಾನುವಾರದಂದು ಆಷಾಢ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಪ್ರದೋಷ ವ್ರತ ಆಚರಿಸಲಾಗುತ್ತಿದೆ.

ಶಿವನ ಪ್ರದೋಷ ವ್ರತವನ್ನು ಆಚರಿಸಿದರೆ ಶಿವ ಮೆಚ್ಚಿ ಭಕ್ತರ ಜೀವನವನ್ನು ಸಂತೋಷ, ಶಾಂತಿ ಮತ್ತು ಸಮೃದ್ಧಿಯಿಂದ ತುಂಬುತ್ತಾನೆ ಎಂಬುವುದು ಧಾರ್ಮಿಕ ನಂಬಿಕೆ. ರವಿ ಪ್ರದೋಷದಂದು ಶಿವನ ಆರಾಧನೆ ಜೊತೆಗೆ ಸೂರ್ಯನ ಆರಾಧನೆ ಮಾಡಿದರೆ ಹೆಚ್ಚು ಶುಭ ಫಲಿತಾಂಶ ಸಿಗಲಿದೆ. ರವಿಪ್ರದೋಷದ ವ್ರತದ ಶುಭ ಸಮಯ, ಪೂಜೆಯ ಮಹತ್ವ ಮತ್ತಷ್ಟು ಮಾಹಿತಿ ತಿಳಿಯೋಣ:

ರವಿ ಪ್ರದೋಷದ ಶುಭ ಮುಹೂರ್ತ

ರವಿ ಪ್ರದೋಷದ ಶುಭ ಮುಹೂರ್ತ

ಪಂಚಾಂಗದ ಪ್ರಕಾರ, ಆಷಾಢ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯು ಜೂನ್ 25, ಶನಿವಾರದಂದು ರಾತ್ರಿ 01.09 ಕ್ಕೆ ಪ್ರಾರಂಭವಾಗುತ್ತದೆ, ಅದು ಜೂನ್ 27, ಸೋಮವಾರದ ರಾತ್ರಿ 03.25 ರವರೆಗೆ ಇರುತ್ತದೆ.

ತ್ರಯೋದಶಿ ತಿಥಿಯ ಸೂರ್ಯೋದಯವು ಜೂನ್ 26 ರಂದು ಆಗಿರುವುದರಿಂದ, ಈ ದಿನಾಂಕದಂದು ಈ ಉಪವಾಸವನ್ನು ಆಚರಿಸುವುದು ಉತ್ತಮ. ಈ ದಿನದಂದು ಅಭಿಜಿತ್ ಮುಹೂರ್ತವು ಬೆಳಗ್ಗೆ 11:56 ರಿಂದ ಮಧ್ಯಾಹ್ನ 12:52 ರವರೆಗೆ ಇರುತ್ತದೆ.

ಪ್ರದೋಷ ವ್ರತದ ಶುಭ ಸಮಯವು ಸಂಜೆ 07:23 ರಿಂದ ರಾತ್ರಿ 09:23 ರವರೆಗೆ ಇರುತ್ತದೆ. ಈ ದಿನ ಧಾತ ಎಂಬ ಶುಭ ಯೋಗವೂ ರೂಪುಗೊಳ್ಳುತ್ತಿದೆ.

 ರವಿ ಪ್ರದೋಷ ವ್ರತದ ಉಪವಾಸ ನಿಯಮಗಳು

ರವಿ ಪ್ರದೋಷ ವ್ರತದ ಉಪವಾಸ ನಿಯಮಗಳು

* ಭಾನುವಾರ ಬೆಳಗ್ಗೆ ಸ್ನಾನ ಇತ್ಯಾದಿಗಳನ್ನು ಮುಗಿಸಿ ಉಪವಾಸ ವ್ರತ ಸಂಕಲ್ಪ ಮಾಡಿ ಪೂಜೆ ಆರಂಭಿಸಿ.

* ಈ ದಿನ ಉಪವಾಸವಿದ್ದು ಸಂಜೆ ಶುಭ ಮುಹೂರ್ತದಲ್ಲಿ ಶಿವ ಪೂಜೆ ಮಾಡಿ.

* ಶಿವಲಿಂಗವನ್ನು ಶುದ್ಧ ನೀರು ಹಾಕಿ ತೊಳೆದು ಶಿವನಿಗೆ ಅಭಿಚೇಕ ಮಾಡಿ.

* ಶಿವನಿಗೆ ಪೂಜೆ ಮಾಡುವಾಗ ಬಿಲ್ವೆ ಪತ್ರೆಗಳನ್ನು ಅರ್ಪಿಸಿ, ಹೂಗಳು, ಶ್ರೀಗಂಧ ಅರ್ಪಿಸಿ.

* ಶಿವ ಪೂಜೆ ಮಾಡುವಾಗ ಶಿವ ಮಂತ್ರಗಳನ್ನು ಪಠಿಸಿ.

ಶಿವ ಮಂತ್ರಗಳು

ಶಿವ ಮಂತ್ರಗಳು

ಪಂಚಾಕ್ಷರಿ ಶಿವ ಮಂತ್ರ

ಓಂ ನಮಃ ಶಿವಾಯ

ಮಹಾಮೃತ್ಯುಂಜಯ ಮಂತ್ರ

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಂವಾ ಬಂಧನಾ ಮೃತ್ಯೋರ್-ಮುಕ್ಷೀಯ ಮಾಮೃತಾತ್||

ರುದ್ರ ಮಂತ್ರ

ಓಂ ನಮೋ ಭಗವತೇ ರುದ್ರಾಯ

ಶಿವ ಗಾಯತ್ರಿ ಮಂತ್ರ

ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್

ಶಿವ ಧ್ಯಾನ ಮಂತ್ರ

ಕರ್ಚರನ್‌ಕೃತಂ ವಾ ಕೈಜಮ್ ಕರ್ಮಜಂ ವಾ ಶ್ರಾವಣ್ಣನಂಜಂ ವಾ ಮಾನ್ಸಮ್ ವಾ ಪರಧಮ್ ವಿಹಿತಂ ವಿಹಿತಂ ವಾ ಸರ್ವ್ ಮೆಟಾಟ್ ಕ್ಷಮಾಸ್ವ ಜೇ ಜೇ ಕರುನಾಬ್ಧೆ ಶ್ರೀ ಮಹಾದೇವ್ ಶಂಭೋ

ಪ್ರದೋಷ ವ್ರತದ ಪ್ರಯೋಜನಗಳು

ಪ್ರದೋಷ ವ್ರತದ ಪ್ರಯೋಜನಗಳು

* ರವಿ ಪ್ರದೋಷ ವ್ರತ ಆಚರಿಸುವುದರಿಂದ ಮೋಕ್ಷ ಸಿಗುತ್ತದೆ

* ಬಯಕೆಗಳು ಈಡೇರುವುದು

* ಕಷ್ಟಗಳು ದೂರಾಗುವುದು

* ಬದುಕಿನಲ್ಲಿ ನೆಮ್ಮದಿ, ಖುಷಿ ಇರುತ್ತದೆ.

English summary

Pradosh Vrat June 2022 date, Trayodashi Tithi timings, Shiva Puja shubh muhurat & other details in Kannada

Pradosh Vrat June 2022 date, Trayodashi Tithi timings, Shiva Puja shubh muhurat & other details in Kannada, read on....
Story first published: Sunday, June 26, 2022, 7:49 [IST]
X
Desktop Bottom Promotion