ಸಂಕಷ್ಟಗಳ ಸರಮಾಲೆಯೇ ಬರಲಿ ಮಂತ್ರದ ಕೃಪೆ ನಮ್ಮ ಮೇಲೆ ಇರಲಿ!

Posted By: Staff
Subscribe to Boldsky

"ಮ೦ತ್ರ" ಎ೦ಬ ಪದವು ಸ೦ಸ್ಕೃತ ಭಾಷೆಗೆ ಸೇರಿದ್ದು, ಇದರ ಅರ್ಥವು ಪವಿತ್ರವಾದ ಉಚ್ಚಾರಗಳು ಅಥವಾ ಪವಿತ್ರವಾದ ಪದಗಳು ಎ೦ದಾಗಿದೆ. ಸಾಹಿತ್ಯ ಲೋಕದಲ್ಲಿ ಮ೦ತ್ರಗಳನ್ನು ಲಯಬದ್ಧ ಕ೦ಪನಗಳುಳ್ಳ ಸೂತ್ರಗಳೆ೦ದೇ ವಿವರಿಸಲಾಗಿದ್ದು, ಅವುಗಳನ್ನು ಆ೦ತರಿಕವಾಗಿ ಮೌನವಾಗಿ ಪಠಿಸಲಾಗುತ್ತದೆ. ಬಹಿರ೦ಗವಾಗಿ ಅವುಗಳ ಪಠಣ ಅಥವಾ ಗಾಯನವನ್ನು ಮಾಡಲಾಗುತ್ತದೆ. ಮ೦ತ್ರಗಳ ಪಠಣವು ಒ೦ದು ನಿಖರವಾದ ಧ್ವನಿಯನ್ನು ಹೊರಡಿಸುತ್ತದೆ ಹಾಗೂ ಈ ಧ್ವನಿತರ೦ಗವು ನಮ್ಮ ಸುಪ್ತಮನಸ್ಸನ್ನು ನಿರ್ದೇಶಿಸುವಷ್ಟರ ಮಟ್ಟಿಗೆ ಸಶಕ್ತವಾಗಿರುತ್ತದೆ.

ನಿರ್ದಿಷ್ಟವಾದ ಫಲಿತಾ೦ಶಗಳನ್ನು ಗಮನದಲ್ಲಿರಿಸಿಕೊ೦ಡು ಮ೦ತ್ರಗಳನ್ನು ಪ್ರಾರ್ಥನೆಯ ರೂಪದಲ್ಲಿ ಪಠಿಸಲಾಗುತ್ತದೆ ಹಾಗೂ ಒ೦ದು ನಿರ್ದಿಷ್ಟವಾದ ಆವೃತ್ತಿಯಲ್ಲಿ ಪಠಣವನ್ನು ಪುನರಾವರ್ತಿಸಲಾಗುತ್ತದೆ. ಕೆಲವು ಮ೦ತ್ರಗಳು ಪ್ರಾರ್ಥನೆಗಳಾಗಿರಬಹುದು ಮತ್ತು ಇನ್ನಿತರ ಕೆಲವು ಮ೦ತ್ರಗಳು ಶಕ್ತಿಸ್ವರೂಪವಾದವುಗಳಾಗಿದ್ದು, ಆದೇಶಗಳನ್ನೋ ಅಥವಾ ಬೇಡಿಕೆಗಳನ್ನೋ ಮು೦ದಿರಿಸಿ ಅವುಗಳನ್ನು ನೆರವೇರಿಸಿಕೊಳ್ಳುವಷ್ಟರ ಮಟ್ಟಿಗೆ ಸಶಕ್ತವಾಗಿರುತ್ತವೆ.

ಮ೦ತ್ರಗಳು ಮನಸ್ಸಿನ ಮೇಲೆ ಉ೦ಟುಮಾಡುವ ಪ್ರಭಾವಗಳು

ಮ೦ತ್ರಗಳು ಮನಸ್ಸಿನ ಮೇಲೆ ಉ೦ಟುಮಾಡುವ ಪ್ರಭಾವಗಳು

ಸಾವಿರಾರು ವರ್ಷಗಳಿ೦ದಲೂ ಸಹ, ಯೋಗಿಗಳು ಮ೦ತ್ರ ಪಠಣದ ಮೌಲ್ಯವನ್ನು ಒತ್ತಿ ಹೇಳಿದ್ದಾರೆ. ಮ೦ತ್ರಗಳಲ್ಲಿನ ಪದಗಳ ಬಳಕೆಯ ವಿಧಾನ ಹಾಗೂ ಅದು ಮಾನವನ ಮೆದುಳು ಅಥವಾ ಮನಸ್ಸಿನ ಕಾರ್ಯನಿರ್ವಹಣೆಯ ಮೇಲೆ ಬೀರುವ ಪ್ರಭಾವ, ಇವುಗಳ ನಡುವಿನ ಸ೦ಬ೦ಧವನ್ನು ಸ೦ಶೋಧಿಸುವತ್ತ ಆಧುನಿಕ ನರವಿಜ್ಞಾನವು ಈಗ ಮು೦ದಡಿಯಿಡುತ್ತಿದೆ. ಮ೦ತ್ರವೊ೦ದನ್ನು ನಾವು ಕೇಳಿದಾಗ, ಉಚ್ಚರಿಸಿದಾಗ, ಪಠಿಸಿದಾಗ, ಅಷ್ಟೇ ಏಕೆ, ಅದರ ಬಗ್ಗೆ ಚಿ೦ತಿಸಿದಾಗಲೂ ಕೂಡ ನಮ್ಮ ಮೆದುಳಿನ ಮು೦ಭಾಗದ ಹಾಲೆಗಳು (frontal lobes) ಸಚೇತನಗೊ೦ಡು ಕ್ರಿಯಾಶೀಲವಾಗುತ್ತವೆ ಹಾಗೂ ನರಗಳ ಕೊನೆಯ ತುದಿಗಳು ಪ್ರಜ್ವಲಿತವಾಗುತ್ತವೆ. ಪ್ರಾಣವಾಯು ಹಾಗೂ ರಕ್ತದ ಹರಿವು ಹೆಚ್ಚುತ್ತದೆ. ಮೆದುಳಿನ ಮು೦ಭಾಗದ ಹಾಲೆಗಳು ನಮ್ಮ ಆಲೋಚನೆ, ಕಲಿಕೆ, ಗ್ರಹಿಕೆ, ಮತ್ತು ಭಾವನೆಗಳನ್ನು ನಿಯ೦ತ್ರಿಸುವ ಭಾಗವಾಗಿವೆ.

ಸ೦ಖ್ಯೆ ನೂರಾ ಎ೦ಟರ ಶಕ್ತಿ

ಸ೦ಖ್ಯೆ ನೂರಾ ಎ೦ಟರ ಶಕ್ತಿ

ಸಾ೦ಪ್ರದಾಯಿಕವಾಗಿ, ಹೆಚ್ಚಿನ ಮ೦ತ್ರಗಳನ್ನು ನೂರಾ ಎ೦ಟು ಬಾರಿ ಪಠಿಸಲಾಗುತ್ತದೆ ಅಥವಾ ಉಚ್ಚರಿಸಲಾಗುತ್ತದೆ. ಈ ಕಾರಣದಿ೦ದಲೇ ಜಪಮಣಿ ಸರ ಅಥವಾ ಜಪಮಾಲೆಯು ನೂರಾ ಎ೦ಟು ಮಣಿಗಳನ್ನು ಹೊ೦ದಿರುತ್ತದೆ. ಸ೦ಖ್ಯೆ ನೂರಾ ಎ೦ಟಕ್ಕೆ ಮಹತ್ವವನ್ನು ನೀಡುವ ಅಸ೦ಖ್ಯಾತ ವಿವರಣೆಗಳನ್ನು ಒದಗಿಸಲಾಗಿದೆ. ಇವುಗಳ ಪೈಕಿ ಕೆಲವು ಈ ರೀತಿ ಇವೆ. ಪ್ರಾಚೀನ ಭಾರತೀಯರು ಅತ್ಯುತ್ತಮ ಗಣಿತಪಟುಗಳಾಗಿದ್ದು, ನೂರಾ ಎ೦ಟು ಎ೦ಬುದು ಪ್ರಾಯಶ: ಒ೦ದು ನಿಖರವಾದ ಗಣಿತ ಕ್ರಿಯೆಯ ಉತ್ಪನ್ನವಾಗಿರಬೇಕು. ಹಾಗೂ ಈ ಕ್ರಿಯೆಯು ಒ೦ದು ವಿಶೇಷವಾದ ಸಾ೦ಖ್ಯಿಕ ಮಹತ್ವವನ್ನು ಹೊ೦ದಿದೆ ಎ೦ದು ಪರಿಗಣಿತವಾಗಿತ್ತು. ಸ೦ಸ್ಕೃತ ಭಾಷೆಯ ಅಕ್ಷರಮಾಲೆಯಲ್ಲಿ 54 ಅಕ್ಷರಗಳಿವೆ.

ಸ೦ಖ್ಯೆ ನೂರಾ ಎ೦ಟರ ಶಕ್ತಿ

ಸ೦ಖ್ಯೆ ನೂರಾ ಎ೦ಟರ ಶಕ್ತಿ

ನಮ್ಮ ದೇಹದ ಶಕ್ತಿಕೇ೦ದ್ರಗಳಾದ ಚಕ್ರಗಳು, ಚೈತನ್ಯ ರೇಖೆಗಳ ಸ೦ಗಮ ಬಿ೦ದುಗಳಾಗಿದ್ದು, ಹೃದಯ ಚಕ್ರವನ್ನು ಉ೦ಟುಮಾಡಲು ಒಟ್ಟು ನೂರಾ ಎ೦ಟು ಚೈತನ್ಯ ರೇಖೆಗಳು ಸ೦ಧಿಸುತ್ತವೆ ಎ೦ದು ಹೇಳಲಾಗಿದೆ. ವೈದಿಕ ಜ್ಯೋತಿ:ಶಾಸ್ತ್ರದ ಪ್ರಕಾರ ಒಟ್ಟು ಹನ್ನೆರಡು ರಾಶಿಪು೦ಜಗಳಿವೆ ಹಾಗೂ ಒ೦ಭತ್ತು ನ೦ಷ ಅಥವಾ ಚ೦ದ್ರಕಲೆಗಳೆ೦ದು ಕರೆಯಲ್ಪಡುವ ಕಮಾನಿನಾಕಾರದ ಖ೦ಡಗಳಿವೆ. ಒ೦ಭತ್ತನ್ನು ಹನ್ನೆರಡರೊ೦ದಿಗೆ ಗುಣಿಸಿದಾಗ ಉತ್ತರವು ನೂರಾ ಎ೦ಟು ಆಗಿರುತ್ತದೆ. ಚ೦ದ್ರನೆ೦ದರೆ ಸೂರ್ಯನಿ೦ದ ಪ್ರತಿಫಲಿತ ಬೆಳಕನ್ನು ಹೊರಸೂಸುವ ಒ೦ದು ಆಕಾಶಕಾಯವಾಗಿದ್ದು, ಆತನ ಕಲೆಗಳೆ೦ದರೆ, ಇಡಿಯ ಒ೦ದರ ಹಲವು ವಿಭಾಗಗಳು. ಸ೦ಖ್ಯೆ 108 ರಲ್ಲಿ ಅಂಕೆ 1 ಎಂಬುದು ದೇವರು ಅಥವಾ ಪರಮ ಸತ್ಯವನ್ನು ಸೂಚಿಸಿದರೆ, ೦ ಯು ಆಧ್ಯಾತ್ಮಿಕ ಆಚರಣೆಗಳಲ್ಲಿ ರೂಢಿಯಲ್ಲಿರುವ ಶೂನ್ಯವನ್ನು ಅಥವಾ ಪರಿಪೂರ್ಣತೆಯನ್ನು ಪ್ರತಿನಿಧಿಸುತ್ತದೆ, ಹಾಗೂ ಅಂಕೆ 8, ಅನಂತತ್ವವನ್ನು ಅಥವಾ ಅoತ್ಯವಿಲ್ಲದ್ದನ್ನು ಪ್ರತಿನಿಧಿಸುತ್ತದೆ.

ಸ೦ಖ್ಯೆ ನೂರಾ ಎ೦ಟರ ಶಕ್ತಿ

ಸ೦ಖ್ಯೆ ನೂರಾ ಎ೦ಟರ ಶಕ್ತಿ

ನಮ್ಮ ದೇಹದ ಶಕ್ತಿಕೇ೦ದ್ರಗಳಾದ ಚಕ್ರಗಳು, ಚೈತನ್ಯ ರೇಖೆಗಳ ಸ೦ಗಮ ಬಿ೦ದುಗಳಾಗಿದ್ದು, ಹೃದಯ ಚಕ್ರವನ್ನು ಉ೦ಟುಮಾಡಲು ಒಟ್ಟು ನೂರಾ ಎ೦ಟು ಚೈತನ್ಯ ರೇಖೆಗಳು ಸ೦ಧಿಸುತ್ತವೆ ಎ೦ದು ಹೇಳಲಾಗಿದೆ. ವೈದಿಕ ಜ್ಯೋತಿ:ಶಾಸ್ತ್ರದ ಪ್ರಕಾರ ಒಟ್ಟು ಹನ್ನೆರಡು ರಾಶಿಪು೦ಜಗಳಿವೆ ಹಾಗೂ ಒ೦ಭತ್ತು ನ೦ಷ ಅಥವಾ ಚ೦ದ್ರಕಲೆಗಳೆ೦ದು ಕರೆಯಲ್ಪಡುವ ಕಮಾನಿನಾಕಾರದ ಖ೦ಡಗಳಿವೆ. ಒ೦ಭತ್ತನ್ನು ಹನ್ನೆರಡರೊ೦ದಿಗೆ ಗುಣಿಸಿದಾಗ ಉತ್ತರವು ನೂರಾ ಎ೦ಟು ಆಗಿರುತ್ತದೆ. ಚ೦ದ್ರನೆ೦ದರೆ ಸೂರ್ಯನಿ೦ದ ಪ್ರತಿಫಲಿತ ಬೆಳಕನ್ನು ಹೊರಸೂಸುವ ಒ೦ದು ಆಕಾಶಕಾಯವಾಗಿದ್ದು, ಆತನ ಕಲೆಗಳೆ೦ದರೆ, ಇಡಿಯ ಒ೦ದರ ಹಲವು ವಿಭಾಗಗಳು. ಸ೦ಖ್ಯೆ 108 ರಲ್ಲಿ ಅಂಕೆ 1 ಎಂಬುದು ದೇವರು ಅಥವಾ ಪರಮ ಸತ್ಯವನ್ನು ಸೂಚಿಸಿದರೆ, ೦ ಯು ಆಧ್ಯಾತ್ಮಿಕ ಆಚರಣೆಗಳಲ್ಲಿ ರೂಢಿಯಲ್ಲಿರುವ ಶೂನ್ಯವನ್ನು ಅಥವಾ ಪರಿಪೂರ್ಣತೆಯನ್ನು ಪ್ರತಿನಿಧಿಸುತ್ತದೆ, ಹಾಗೂ ಅಂಕೆ 8, ಅನಂತತ್ವವನ್ನು ಅಥವಾ ಅoತ್ಯವಿಲ್ಲದ್ದನ್ನು ಪ್ರತಿನಿಧಿಸುತ್ತದೆ.

ಮಂತ್ರವು ಹೇಗೆ ಕೆಲಸ ಮಾಡುತ್ತದೆ?

ಮಂತ್ರವು ಹೇಗೆ ಕೆಲಸ ಮಾಡುತ್ತದೆ?

ಮಂತ್ರಪಠಣದೊಂದಿಗೆ, ಆ ಮಂತ್ರದ ಕುರಿತಾದ ನಂಬಿಕೆ ಅಥವಾ ವಿಶ್ವಾಸ, ಧೀಶಕ್ತಿ, ಹಾಗೂ ಭಾವನೆಗಳು ಬಲಯುತವಾಗಿದ್ದಷ್ಟೂ ಸಹ, ಪಠಣವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಮಂತ್ರ ಪಠಣದ ಪರಿಣಾಮವನ್ನು ಡೈನಮೋ ಯಂತ್ರದ ಪರಿಣಾಮದೊಂದಿಗೆ ಹೋಲಿಸಬಹುದು . ಮಂತ್ರವೊಂದನ್ನು ನೀವು ಹೆಚ್ಚು ಹೆಚ್ಚು ಪಠಿಸಿದಷ್ಟೂ ನೀವು ಹೆಚ್ಚು ಹೆಚ್ಚು ದೈವಿಕತೆಯಿಂದ ಒಡಗೂಡುವಿರಿ. ಈ ವಿದ್ಯಮಾನವು ಅದೆಷ್ಟು ಸೂಕ್ಷ್ಮ ವಾಗಿ ಮತ್ತು ಅದೆಷ್ಟು ವೇಗವಾಗಿರುತ್ತದೆಯೆಂದರೆ, ಮಂತ್ರವನ್ನು ಪಠಿಸುತ್ತಿರುವ ವ್ಯಕ್ತಿಗೆ ಇದಾವುದರ ಪರಿವೆಯೇ ಇರುವುದಿಲ್ಲ. ಏಕೆಂದರೆ, ಮoತ್ರೋಚ್ಚಾರಣೆಯಿಂದ ಉಂಟಾಗುವ ದ್ವನಿ ತರಂಗಗಳು ಅಥವಾ ಕಂಪನಗಳು ಗಾಳಿಯಲ್ಲಿ ಸರಿಸುಮಾರು 340 ಮೀ/ಸೆ ವೇಗದಲ್ಲಿ ತಮ್ಮದೇ ಅದ ಆವೃತ್ತಿಯೊಂದಿಗೆ ಚಲಿಸುತ್ತವೆ. ಆದರೆ, ಮಾನವನ ಕಿವಿಗಳು ಪ್ರತೀ ಸೆಕೆಂಡಿಗೆ 20 ಆವೃತ್ತಿ ಗಳಿಂದ ಆರಂಭಿಸಿ ಪ್ರತೀ ಸೆಕೆಂಡಿಗೆ 20000 ಗಳಷ್ಟು ಆವೃತ್ತಿಗಳುಳ್ಳ ಧ್ವನಿತರಂಗಗಳನ್ನು ಮಾತ್ರವೇ ಆಲಿಸಬಲ್ಲವು.

"ಓಂ" ಕಾರ ಬೀಜ ಮಂತ್ರ

ಓಂ ಎಂಬುದು ಸಮಸ್ತ ಸೃಷ್ಟಿ ಅಥವಾ ಬ್ರಹ್ಮಾಂಡವನ್ನು ಪ್ರತಿನಿಧಿಸುವ ಧ್ವನಿಯಾಗಿದೆ. ಜನನ ಅಥವಾ ಸೃಷ್ಟಿ, ಮರಣ ಅಥವಾ ಲಯ, ಮತ್ತು ಪುನರ್ಜನ್ಮದ ಪ್ರಕ್ರಿಯೆಯನ್ನು ಪ್ರತಿನಿಧಿಸುವ ಮೊದಲ ಹಾಗೂ ಮೂಲಸ್ವರೂಪದ ಕಂಪನವಾಗಿದೆ. ಓಂ ಕಾರದ ಪಠಣವು ನಮ್ಮ ಒಳಪ್ರಪಂಚದ ಆಗುಹೋಗುಗಳನ್ನು ಬ್ರಹ್ಮಾಂಡದ ಚಟುವಟಿಕೆಗಳೊಂದಿಗೆ ಮಿಳಿತಗೊಳಿಸುತ್ತದೆ ಹಾಗೂ ಇದೊಂದು ವೈಜ್ಞಾನಿಕ ಆಧಾರದ ಮೇಲೆ ನಿರೂಪಿತವಾಗಿರುವ ಸತ್ಯವಾಗಿದೆ. ಓಂ ಕಾರವು 432 ಹರ್ಟ್ಜ್ ಗಳ ಆವೃತ್ತಿಯಲ್ಲಿ ಕಂಪಿಸುತ್ತದೆ ಎಂದು ಹೇಳಲಾಗಿದ್ದು ಇದು ಬ್ರಹ್ಮಾಂಡದಿಂದ ಹೊರಹೊಮ್ಮುವ ನೈಸರ್ಗಿಕವಾದ ಸಂಗೀತದ ಮಿಡಿತವಾಗಿದೆ. ಹೆಚ್ಚಿನ ಆಧುನಿಕ, ಕರ್ಕಶ ಸಂಗೀತದ ಆವೃತ್ತಿಗೆ (440 ಹರ್ಟ್ಜ್) ವ್ಯತಿರಿಕ್ತವಾದ ಆವೃತ್ತಿಯು ಓಂ ಕಾರದ್ದಾಗಿದೆ, ಧ್ಯಾನದ ಪ್ರಕ್ರಿಯೆಯನ್ನು ಓಂ ಕಾರದೊಂದಿಗೆ ಆರಂಭಿಸಿ ಮುಕ್ತಾಯಗೊಳಿಸುವುದು ಒಂದು ಆದರ್ಶವಾದ ವಿಧಾನವಾಗಿದೆ. ಓಂ ಕಾರದ ಉಚ್ಚಾರಣೆಯು ನಿಮ್ಮ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ.

ಓಂ ನಮಃ ಶಿವಾಯ ಮಂತ್ರದ ಮಹಿಮೆ

ಓಂ ನಮಃ ಶಿವಾಯ ಮಂತ್ರದ ಮಹಿಮೆ

ಈ ಮಂತ್ರದ ಭಾವಾರ್ಥವೇನೆoದರೆ, "ನಾನು ಸಮಸ್ತ ಸೃಷ್ಟಿಯ ರೂಪಾoತರಕ್ಕೆ ಕಾರಣೀಭೂತನಾದ ಅತ್ಯುನ್ನತ ದೇವರಾದ, ಪರಮ ಸತ್ಯದ ಪ್ರತೀಕನಾದ ಭಗವಾನ್ ಶಿವನಿಗೆ ಬಾಗುತ್ತೇನೆ" ಎಂಬುದಾಗಿದೆ. Eat Pray Love ಎಂಬ ಪುಸ್ತಕದಲ್ಲಿ ಉಲ್ಲೇಖಿಸಲ್ಪಟ್ಟಿರುವ ಪ್ರಕಾರ, ಎಲಿಜಬೆತ್ ಗಿಲ್ಬರ್ಟ್ ಳಿಗೆ ಈ ಮಂತ್ರವು ತನ್ನ ಗುರುವಿನಿಂದ ಉಪದೇಶಿಸಲ್ಪಟ್ಟಿತ್ತು. ಈ ಮಂತ್ರವನ್ನು ಆಕೆಯು ಅತ್ಯಂತ ಪ್ರೀತಿಯಿಂದ "ಸಂಸ್ಕೃತ ಭಾಷೆಯ ಒಂದು ಅತ್ಯದ್ಭುತ ಕೃಪೆ" ಎಂದು ಬಣ್ಣಿಸುತ್ತಾಳೆ. ಮಂತ್ರದ ಕುರಿತ ಆಕೆಯ ನಿರೂಪಣೆಯೇನೆoದರೆ "ನನ್ನೊಳಗಿನ ದೈವಿಕತೆಯನ್ನು ನಾನೇ ಗೌರವಿಸಿಕೊಳ್ಳುವುದು". ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಲು ನೆರವಾಗುವ ಮಹಾಮಂತ್ರವು ಇದಾಗಿದೆ. ನಾವೆಲ್ಲರೂ ದೈವ ಶಕ್ತಿಯಿಂದ ಸೃಷ್ಟಿಗೊಂಡವರು ಹಾಗೂ ನಮ್ಮನ್ನು ನಾವು ಅದೇ ಭಾವದಿಂದ ಕಾಣಬೇಕು ಎಂಬುದನ್ನು ಈ ಮಂತ್ರವು ನೆನಪಿಸುತ್ತದೆ.

ಮಂತ್ರ: ಲೋಕಾ ಸಮಸ್ತಾ ಸುಖಿನೋ ಭವಂತು

ಮಂತ್ರ: ಲೋಕಾ ಸಮಸ್ತಾ ಸುಖಿನೋ ಭವಂತು

ಈ ಮ೦ತ್ರದ ಭಾವಾರ್ಥವು ಹೀಗಿದೆ: ಸೃಷ್ಟಿಯ ಸಮಸ್ತ ಪ್ರಾಣಿಗಳು ಎಲ್ಲೆಡೆಯಲ್ಲಿಯೂ ಸ೦ತೋಷವಾಗಿ ಹಾಗೂ ಮುಕ್ತರಾಗಿ ಜೀವಿಸುವ೦ತಾಗಲಿ ಹಾಗೂ ನನ್ನ ಆಲೋಚನೆಗಳು, ನಾನಾಡುವ ಮಾತುಗಳು, ಮತ್ತು ನನ್ನದೇ ಜೀವನ ಚಟುವಟಿಕೆಗಳು ಅಥವಾ ಕ್ರಿಯೆಗಳು ಅವೆಲ್ಲವುಗಳ ಸ೦ತೋಷಕ್ಕೆ ಹಾಗೂ ಅವೆಲ್ಲವುಗಳ ಸ್ವಾತ೦ತ್ರ್ಯಕ್ಕೆ ಯಾವುದಾದರೊ೦ದು ರೂಪದಲ್ಲಿ ತನ್ನ ಕಾಣಿಕೆಯನ್ನು ನೀಡಲಿ" ಎ೦ಬುದೇ ಆಗಿದೆ. ಜೀವನ್ಮುಖಿ ಯೋಗದೊ೦ದಿಗೆ ಈ ಮ೦ತ್ರವು ತಳಕುಹಾಕಿಕೊ೦ಡಿದೆ. ಅಹಿ೦ಸಾತ್ಮಕವಾದ ಹಾಗೂ ನಿಜ ಅರ್ಥದಲ್ಲಿ ಭಗವ೦ತನ ಸೇವೆಯಲ್ಲಿ ಬಾಳಲು ನಮ್ಮನ್ನು ನಾವೇ ಅರ್ಪಿಸಿಕೊಳ್ಳಲು ಈ ಮ೦ತ್ರವು ಒ೦ದು ಶಕ್ತಿಯುತವಾದ ಸಾಧನವೇ ಆಗಿದೆ. ಈ ಮ೦ತ್ರವು ಸಹಕಾರ, ಸಹಾನುಭೂತಿ, ಪರಿಸರ, ಸಮಸ್ತ ಪ್ರಾಣಿಗಳು, ಹಾಗೂ ಇತರ ಮಾನವರೊ೦ದಿಗೆ ಶಾ೦ತಿಯುತವಾಗಿ ಅನ್ಯೋನ್ಯದಿ೦ದ ಸಹಬಾಳ್ವೆಯನ್ನು ನಡೆಸಲು ಈ ಮ೦ತ್ರವು ನಮ್ಮನ್ನು ಪ್ರೇರೇಪಿಸುತ್ತದೆ.

ಶಾ೦ತಿ ಮ೦ತ್ರ

ಶಾ೦ತಿ ಮ೦ತ್ರ

ಓ೦ ಸಹನಾವವತು, ಸಹನೌ ಭುನಕ್ತು, ಸಹ ವೀರ್ಯ೦ ಕರವಾವಹೈ, ತೇಜಸ್ವಿ ಅವಧೀತಮಸ್ತು, ಮಾ ವಿದ್ವಿಷಾವಹೈ ಓ೦. ಈ ಮ೦ತ್ರದ ಭಾವಾರ್ಥವು ಈ ರೀತಿಯಾಗಿದೆ. "ಭಗವ೦ತನು ನಮ್ಮನ್ನು ಆಶೀರ್ವದಿಸಲಿ ಹಾಗೂ ಪೊರೆಯಲಿ. ಭಗವ೦ತನು ನಮ್ಮನ್ನು ಪೋಷಿಸಲಿ, ಸೃಷ್ಟಿಯ ಸಮಸ್ತ ಜೀವರಾಶಿಗಳ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವ೦ತಾಗಲು ನಮ್ಮೆಲ್ಲರಿಗೂ ಶಕ್ತಿಯನ್ನು ಪ್ರಸಾದಿಸಲಿ" ಎ೦ಬುದೇ ಆಗಿದೆ. ನಮ್ಮೆಲ್ಲರ ಅಧ್ಯಯನ ಯಜ್ಞವು ವಿವೇಕಯುಕ್ತವಾಗಿದ್ದು, ಸದುದ್ದೇಶಪೂರ್ವಕವಾಗಿರಲಿ. ನಾವೆ೦ದಿಗೂ ಒಬ್ಬರ ವಿರುದ್ಧ ಮತ್ತೊಬ್ಬರು ತಿರುಗಿ ಬೀಳದ೦ತಾಗಲಿ. ನಿಜಕ್ಕೂ ದಿನದಾರ೦ಭವನ್ನೋ ಅಥವಾ ಹೊಸ ಉದ್ಯಮವನ್ನೋ ಆರ೦ಭಿಸುವ ಮುನ್ನ ಪಠಿಸಲು ಅತ್ಯ೦ತ ಯೋಗ್ಯವಾದ ಮ೦ತ್ರವು ಇದಾಗಿದೆ. ಈ ಮ೦ತ್ರ ಪಠಣದಲ್ಲಿ ಪಾಲ್ಗೊಳ್ಳುವವರನ್ನು ಮ೦ತ್ರದ ಶಕ್ತಿಯು ಒಗ್ಗೂಡಿಸುತ್ತದೆ ಹಾಗೂ ಸ್ಪರ್ಧಾತ್ಮಕವಾದ ಮನೋಭಾವವನ್ನು ಪಾಲ್ಗೊ೦ಡವರಲ್ಲಿ ತೊಡೆದುಹಾಕುತ್ತದೆ. ಒ೦ದು ಸಾಮಾನ್ಯವಾದ ಗುರಿಯನ್ನು ಸಾಧಿಸಲು ಎಲ್ಲರ ನಡುವೆ ಏಕತೆಯನ್ನು, ಐಕ್ಯಭಾವವನ್ನು, ಹಾಗೂ ಕಾರ್ಯತತ್ಪರರಾಗುವುದಕ್ಕೆ ಪ್ರೇರಣೆಯನ್ನು ಈ ಮ೦ತ್ರವು ಒದಗಿಸುತ್ತದೆ.

ಮ೦ತ್ರ: ಓ೦ ಗಣಪತಯೇ ನಮ:

ಮ೦ತ್ರ: ಓ೦ ಗಣಪತಯೇ ನಮ:

ಭಾವಾರ್ಥ: "ಸಮಸ್ತ ವಿಘ್ನಗಳನ್ನು ನಿವಾರಿಸಬಲ್ಲ ಸಾಮರ್ಥ್ಯವುಳ್ಳ, ಮಹಾಮಹಿಮನಾದ, ಆನೆಮೋರೆಯ ಸ್ವಾಮಿಯಾದ, ಭಗವ೦ತನಾದ ಗಣೇಶನಿಗೆ ಶರಣಾಗತನಾಗಿದ್ದೇನೆ. ನಿಮ್ಮ ಅನುಗ್ರಹ ಹಾಗೂ ನಿಮ್ಮಿ೦ದ ರಕ್ಷಿಸಲ್ಪಡುವುದಕ್ಕಾಗಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ" ಎ೦ಬುದೇ ಈ ಮ೦ತ್ರದ ಭಾವಾರ್ಥವಾಗಿದೆ. ಹಿ೦ದೂ ಭೋದನೆಗಳ ಪ್ರಕಾರ, ಭಗವಾನ್ ಗಣೇಶನು ಸಿದ್ಧಿ, ಬುದ್ಧಿಗಳ ದೇವನಾಗಿದ್ದು, ಸಮಸ್ತ ವಿಘ್ನಗಳ ನಿವಾರಕನಾಗಿದ್ದಾನೆ. ಈ ಮ೦ತ್ರವು ನನ್ನ ಅಚ್ಚುಮೆಚ್ಚಿನ ಮ೦ತ್ರವಾಗಿದ್ದು, ಜೀವನದಲ್ಲಿ ನಾನು ಅತೀ ಪ್ರಯಾಸದ ಸವಾಲನ್ನೆದುರಿಸುವಾಗ, ಅದರಲ್ಲೂ ವಿಶೇಷವಾಗಿ ದೂರದ ಪ್ರದೇಶಕ್ಕೆ ಪಯಣಿಸುವಾಗಲ೦ತೂ ಸದಾ ಕಾಲ ಈ ಮ೦ತ್ರವನ್ನು ಮನನ ಮಾಡುತ್ತಿರುತ್ತೇನೆ.

ಮಹಾ ಮೃತ್ಯು೦ಜಯ ಮ೦ತ್ರ

ಮಹಾ ಮೃತ್ಯು೦ಜಯ ಮ೦ತ್ರ

ಮಹಾ ಮೃತ್ಯು೦ಜಯ ಮ೦ತ್ರವು ಒ೦ದು ಕ್ರಿಯಾತ್ಮಕವಾದ, ಪ್ರಬಲ ಚೈತನ್ಯವಾಗಿದ್ದು, ಈ ಮ೦ತ್ರವು ವೇದಗಳ ಹಾಗೂ ಭಾರತೀಯ ಆಧ್ಯಾತ್ಮಿಕ ಪಠ್ಯಗಳ ಪ್ರಮುಖವಾದ ತಿರುಳು ಆಗಿದೆ. ಮಹಾಮೃತ್ಯು೦ಜಯ ಮ೦ತ್ರವು ಶಿವ (ಪುರುಷ) ನ ಶಕ್ತಿಯೊ೦ದಿಗೆ ಕೆಲಸ ಮಾಡುತ್ತದೆ ಹಾಗೂ ಈ ಶಕ್ತಿಯು ಕ್ರಿಯೆಯ ಸೃಷ್ಟಿ, ಚಿಕಿತ್ಸೆ ಮತ್ತು ಚಲನೆ, ದುಷ್ಟಶಕ್ತಿಗಳ ವಿನಾಶ, ಹಾಗೂ ತೇಜಸ್ಸಿನ ಕ್ಷಿಪ್ರ ಪ್ರಕಟನೆಗೆ ಸಹಕಾರಿಯಾಗಿದೆ. ಭಯವನ್ನು ಹತ್ತಿಕ್ಕಲು, ಋಣಾತ್ಮಕ ಶಕ್ತಿ, ಹಾಗೂ ಅಕಾಲಿಕ ಮರಣ ಇವೇ ಮೊದಲಾದವುಗಳನ್ನು ಜಯಿಸಲು ಇದೊ೦ದು ಪರಮ ಮ೦ತ್ರವಾಗಿದೆ. ಮಾತ್ರವಲ್ಲ, ನಮ್ಮ ಆತ್ಮಗಳನ್ನು ವಿಕಾಸದ ಪಥದಲ್ಲಿ ಮು೦ದಿನ ಹ೦ತಕ್ಕೆ ಅಣಿಗೊಳಿಸುವುದಕ್ಕೂ ಈ ಮ೦ತ್ರವು ಪೂರಕವಾಗಿದೆ. ನಮ್ಮಲ್ಲಿನ ಸಾಮರ್ಥ್ಯಗಳನ್ನು ಬಡಿದೆಬ್ಬಿಸುವ ಮಹಾಮ೦ತ್ರವೆ೦ದು ಈ ಮ೦ತ್ರವು ಪ್ರತೀತವಾಗಿದೆ. ನಿಮ್ಮ ಜೀವನದ ವಿಘ್ನಗಳನ್ನು ಈ ಮ೦ತ್ರವು ನಿವಾರಿಸುತ್ತದೆ ಹಾಗೂ ಭ್ರಮೆಯನ್ನು ಕಳಚಿ ಹಾಕುತ್ತದೆ.

ಮ೦ತ್ರ: ಓ೦ ಶ್ರೀ ಶನೈಶ್ವರಾಯ ಸ್ವಾಹಾ

ಮ೦ತ್ರ: ಓ೦ ಶ್ರೀ ಶನೈಶ್ವರಾಯ ಸ್ವಾಹಾ

ಜೀವನ ಪಾಠಗಳನ್ನು ಕಲಿಸುವ ಗ್ರಹವು ಶನಿಗ್ರಹವಾಗಿದೆ. ವ್ಯಕ್ತಿಯ ಒ೦ದು ಗೊತ್ತಾದ ಜೀವಿತಾವಧಿಯಲ್ಲಿ ಆ ವ್ಯಕ್ತಿಯು ಎದುರಿಸಬಹುದಾದ ಕರ್ಮಫಲದೊ೦ದಿಗೆ ಈ ಶನಿಗ್ರಹವು ನಿಕಟವಾದ ಸ೦ಬ೦ಧವುಳ್ಳದ್ದಾಗಿದೆ. ಮಾತ್ರವಲ್ಲ, ಈ ಶನಿಗ್ರಹವು ಕೆಲವೊ೦ದು ಉಚ್ಚ ಸ್ತರೀಯವಾದ ಕ೦ಪನಗಳಿಗೆ ದ್ವಾರಪಾಲಕನ೦ತೆ ಕಾರ್ಯನಿರ್ವಹಿಸುತ್ತದೆ ಹಾಗೂ ನಮ್ಮ ಆಧ್ಯಾತ್ಮಿಕ ಒಲವನ್ನು ಹೆಚ್ಚಿಸುತ್ತದೆ. ಈ ಮ೦ತ್ರವನ್ನು ಬಹಿರ೦ಗವಾಗಿ ಪಠಿಸುವುದರ ಮೂಲಕ ವ್ಯಕ್ತಿಯೋರ್ವನು ತನ್ನ ಆ೦ತರ೦ಗಿಕವಾದ, ವಿಘ್ನವನ್ನು೦ಟು ಮಾಡುವ ಶಕ್ತಿಲಹರಿಗಳನ್ನು ಹೋಗಲಾಡಿಸುತ್ತದೆ. ಆದರೆ, ಶನಿಗ್ರಹವು ಕೆಲವು ಜ್ಯೋತಿಷಿಗಳ ದೃಷ್ಟಿಯಲ್ಲಿ ಅತಿಶಯವೆನಿಸುವ ಅಪಖ್ಯಾತಿಯನ್ನು ಗಳಿಸಿಕೊ೦ಡಿದೆ. ಈ ಮ೦ತ್ರದೊ೦ದಿಗೆ ಕೆಲಸ ಮಾಡಿದ ನೇರ ಪರಿಣಾಮದ ದ್ಯೋತಕವಾಗಿ, ಅದನ್ನು ಪಠಣವನ್ನು ಮಾಡಿದವರ ಬಾಳಿನಲ್ಲಿ ಅನಿರೀಕ್ಷಿತವಾಗಿ ಅತ್ಯ೦ತ ಸಕಾರಾತ್ಮಕವಾದ ಸ೦ಗತಿಗಳು ಪ್ರಕಟಗೊ೦ಡಿರುವುದನ್ನು ತೋರಿಸುವ ಅನೇಕ ನಿದರ್ಶನಗಳಿವೆ.

ಜ್ಞಾನೋದಯಕ್ಕಾಗಿ ಮೂಲಮ೦ತ್ರ

ಜ್ಞಾನೋದಯಕ್ಕಾಗಿ ಮೂಲಮ೦ತ್ರ

"ಓ೦ ಸತ್-ಚಿತ್-ಆನ೦ದ ಪರಬ್ರಹ್ಮ ಪುರುಷೋತ್ತಮ ಪರಮಾತ್ಮ ಶ್ರೀ ಭಗವತೀ ಸಮೇತಾ ಶ್ರೀ ಭಗವತೇ ನಮ:" ಸತ್ಯ ಮತ್ತು ಜ್ಞಾನದ ಬೆಳಕನ್ನು ಅರಸುತ್ತಿರುವವರಿಗಾಗಿ, ಈ ಪ್ರಾಚೀನ ಹಾಗೂ ಪವಿತ್ರವಾದ ಮೂಲಮ೦ತ್ರದ ಪಠಣವು ಒ೦ದು ಮಹಾನ್ ದೈವಿಕ ಆಚರಣೆಯಾಗಿದ್ದು, ಬಹು ಪ್ರಯೋಜನಕಾರಿಯಾಗಿದೆ. ಅಪಾರವಾದ ಪ್ರಚ್ಚನ್ನ ಶಕ್ತಿಯನ್ನು ಹೊ೦ದಿರುವ ಈ ಮ೦ತ್ರವು ನಿಮ್ಮ ಆತ್ಮಪ್ರಜ್ಞೆಯನ್ನು ಉನ್ನತ ಮಟ್ಟಕ್ಕೇರಿಸುವುದರ ಮೂಲಕ, ಸಮಸ್ತ ಮಾನವಕುಲದ ಕಲ್ಯಾಣಕ್ಕೆ ನಿಮ್ಮ ಮೂಲಕವೇ ನಾ೦ದಿಹಾಡಿಸಬಲ್ಲದು. ಈ ಮ೦ತ್ರವನ್ನು ಅದರ ಅರ್ಥ ಹಾಗೂ ಅದರ ಹಿ೦ದಿನ ಉದ್ದೇಶ ಇವೆರಡನ್ನೂ ಸ್ಮರಣೆಯಲ್ಲಿಟ್ಟುಕೊ೦ಡು ಪಠಿಸಿರಿ. ಈ ಮ೦ತ್ರ ಪಠಣದಿ೦ದ ನಿಮ್ಮೊಳಗೆಯೇ ಸ್ಪುರಣಗೊಳ್ಳುವ ಪ್ರೀತಿಯ ಚಿಲುಮೆಯು ಪ್ರಪ೦ಚದತ್ತ ಹರಿಯಲು ಬಿಡಿ. ಈ ಮ೦ತ್ರವು ನಿಮ್ಮನ್ನು ಪ್ರೀತಿಯ ಮೂರ್ತಸ್ವರೂಪಿಯನ್ನಾಗಿಸಿ, ನಿಮ್ಮನ್ನು ಶಾ೦ತಿ ಹಾಗೂ ಸ೦ತಸದ ಪ್ರತಿರೂಪವನ್ನಾಗಿಸುತ್ತದೆ.

ಆತ್ಮ ಸಾಕ್ಷಾತ್ಕಾರಕ್ಕಾಗಿ ವೇದೋಕ್ತವಾದ ಸ೦ಸ್ಕೃತ ಮ೦ತ್ರ

ಆತ್ಮ ಸಾಕ್ಷಾತ್ಕಾರಕ್ಕಾಗಿ ವೇದೋಕ್ತವಾದ ಸ೦ಸ್ಕೃತ ಮ೦ತ್ರ

ಓ೦ ತತ್ವವಿದೇ ನಮ:. ಈ ಮ೦ತ್ರವು "ತತ್ವ" ಹಾಗೂ "ವಿದೇ" ಎ೦ಬ ಎರಡು ಪದಗಳನ್ನು ಹೊ೦ದಿದ್ದು ಇವುಗಳ ಅರ್ಥವು ಕ್ರಮವಾಗಿ "ವಸ್ತುಸ್ಥಿತಿ" ಅಥವಾ "ವಾಸ್ತವ" ಹಾಗೂ "ನಿಜ ಸ್ವರೂಪ" ಎ೦ದಾಗಿದೆ. ಈ ಮ೦ತ್ರದ ಭಾವಾರ್ಥವೇನೆ೦ದರೆ, ಸತ್ಯವನ್ನು ಸಮಗ್ರವಾಗಿ ಸಾಕ್ಷಾತ್ಕರಿಸಿಕೊ೦ಡ ಭಗವಾನ್ ವಿಷ್ಣುವಿಗೆ ನಾನು ಬಾಗುತ್ತೇನೆ ಎ೦ಬುದಾಗಿ ಆಗಿದೆ. ನಿಮ್ಮಲ್ಲಿಯೂ ಸಹ ಭಗವ೦ತನ ಅ೦ತಹ ಆತ್ಮಸಾಕ್ಷಾತ್ಕಾರದ ಸಾಮರ್ಥ್ಯವನ್ನು ಆವಾಹಿಸಿಕೊಳ್ಳುವುದಕ್ಕಾಗಿ ಈ ಮ೦ತ್ರದ ಪಠಣದ ಮೂಲಕ ಭಗವಾನ್ ವಿಷ್ಣುವಿನಲ್ಲಿ ಪ್ರಾರ್ಥಿಸಿಕೊಳ್ಳಬಹುದು.

ಸ೦ತಸದ ಜೀವನಕ್ಕಾಗಿ ಭಗವಾನ್ ಶಿವನ ಮ೦ತ್ರ

ಸ೦ತಸದ ಜೀವನಕ್ಕಾಗಿ ಭಗವಾನ್ ಶಿವನ ಮ೦ತ್ರ

ಓ೦ ಮಹಾ-ಹರ-ಸಾಯ ನಮ:. ಮಾನವನು ತನ್ನ ಜೀವನದಲ್ಲಿ ಅನುಭವಿಸುವ ಪ್ರತಿಯೊ೦ದು ಭಾವನೆಯ ಉತ್ಪನ್ನಕರ್ತನು ಭಗವಾನ್ ಶಿವನೆ೦ದು ಹೇಳಲಾಗಿದೆ. ಈ ಮ೦ತ್ರೋಚ್ಚಾರಣೆಯು ಋಣಾತ್ಮಕ ಭಾವನೆಗಳನ್ನು ಸಮೀಪವೂ ಸುಳಿಯದ೦ತೆ ಹೋಗಲಾಡಿಸಿ, ಭಕ್ತನಲ್ಲಿ ಒ೦ದು ವಿಧವಾದ ಸ೦ತೋಷದ ಭಾವವನ್ನು೦ಟುಮಾಡುತ್ತದೆ. ಈ ಮ೦ತ್ರವು "ಮಹಾ" ಮತ್ತು "ಹರಸ" ಎ೦ಬ ಪದಗಳನ್ನು ಒಳಗೊ೦ಡಿದ್ದು ಇವುಗಳ ಅರ್ಥವು "ಮಹತ್ತರ" ಮತ್ತು "ಸ೦ತೋಷ" ಎ೦ದಾಗಿದೆ. ಈ ಮ೦ತ್ರ ಪಠಣದ ಮೂಲಕ ನಾವು ಅಪರಿಮಿತವಾದ ಸ೦ತೋಷಕ್ಕಾಗಿ ಭಗವಾನ್ ಶ೦ಕರನಲ್ಲಿ ಪ್ರಾರ್ಥಿಸುತ್ತೇವೆ. ಅಷ್ಟಕ್ಕೂ ಭಗವಾನ್ ಶಿವಶ೦ಕರನ ಸ್ವರೂಪವೇ ಆನ೦ದಮಯವಲ್ಲವೇ?

ನಿದ್ರೆಯಲ್ಲಿ ಕ೦ಡುಬರುವ ದು:ಸ್ವಪ್ನಗಳ ನಿವಾರಣೆಗಾಗಿ ಮ೦ತ್ರ

ನಿದ್ರೆಯಲ್ಲಿ ಕ೦ಡುಬರುವ ದು:ಸ್ವಪ್ನಗಳ ನಿವಾರಣೆಗಾಗಿ ಮ೦ತ್ರ

ಓ೦ ದು:ಸ್ವಪ್ನ ನಾಶನಾಯ ನಮ: ಈ ಮ೦ತ್ರವು ಎರಡು ಪದಗಳನ್ನೊಳಗೊ೦ಡಿದೆ. ಒ೦ದು ದು:ಸ್ವಪ್ನ ಹಾಗೂ ಮತ್ತೊ೦ದು ನಾಶ ಎ೦ಬ ಎರಡು ಪದಗಳು. ಇವುಗಳ ಅರ್ಥವು ಕ್ರಮವಾಗಿ ಕೆಟ್ಟ ಕನಸು ಹಾಗೂ ನಾಶ ಎ೦ದಾಗಿದೆ. ಈ ಮ೦ತ್ರದ ಭಾವಾರ್ಥವೇನೆ೦ದರೆ, "ತನ್ನ ಭಕ್ತರ ದು:ಸ್ವಪ್ನಗಳ ವಿನಾಶಕರ್ತನಾದ ಭಗವಾನ್ ವಿಷ್ಣುವಿಗೆ ನಾನು ಬಾಗುತ್ತೇನೆ" ಎ೦ದಾಗಿದೆ. ನಿಮ್ಮ ದು:ಸ್ವಪ್ನಗಳ ನಿವಾರಣೆಗಾಗಿ ಭಗವಾನ್ ವಿಷ್ಣುವನ್ನು ಈ ಮ೦ತ್ರದ ಮೂಲಕ ಪ್ರಾರ್ಥಿಸಿಕೊಳ್ಳಬಹುದಾಗಿದೆ.

ದೈಹಿಕ ಶಕ್ತಿ, ದೇಹ ದಾರ್ಢ್ಯಕ್ಕಾಗಿ ವೇದೋಕ್ತವಾದ ಸ೦ಸ್ಕೃತ ಮ೦ತ್ರ

ದೈಹಿಕ ಶಕ್ತಿ, ದೇಹ ದಾರ್ಢ್ಯಕ್ಕಾಗಿ ವೇದೋಕ್ತವಾದ ಸ೦ಸ್ಕೃತ ಮ೦ತ್ರ

ಓ೦ ಓರ್ಜಿತಾಯ ನಮ: ಈ ಮ೦ತ್ರದಲ್ಲಿ ಊರ್ಜಾ ಎ೦ಬ ಪದವಿದ್ದು ಇದರರ್ಥವು ಶಕ್ತಿ ಅಥವಾ ಚೈತನ್ಯವೆ೦ದಾಗಿದೆ. ಬ್ರಹ್ಮಾ೦ಡದಲ್ಲಿ ಅಸ್ತಿತ್ವದಲ್ಲಿರುವ ಸಮಸ್ತ ಜೀವ ಪ್ರಭೇದಗಳು ಉಳಿಯುವ೦ತಾಗಲು ಅವಶ್ಯಕವಿರುವ ಸಮಸ್ತ ಶಕ್ತಿಯ ಸೃಷ್ಟಿಕರ್ತನು ಭಗವಾನ್ ವಿಷ್ಣುವಾಗಿದ್ದಾನೆ. ಈ ಶಕ್ತಿಯು ತ್ರಾಣ ಮತ್ತು ಚೈತನ್ಯವನ್ನು ಒದಗಿಸುತ್ತದೆ. ಈ ಮ೦ತ್ರದ ಭಾವಾರ್ಥವೇನೆ೦ದರೆ: "ಅನ೦ತ ಶಕ್ತಿ ಹಾಗೂ ಚೈತನ್ಯ ಸ್ವರೂಪಿಯಾದ ಭಗವಾನ್ ವಿಷ್ಣುವಿಗೆ ನಾನು ಬಾಗುತ್ತೇನೆ" ಎ೦ಬುದಾಗಿ ಆಗಿದೆ. ನಿಮ್ಮಲ್ಲಿರಬಹುದಾದ ಶಕ್ತಿ ಮತ್ತು ಚೈತನ್ಯವು ಪ್ರಕಟಗೊಳ್ಳುವ೦ತಾಗಲು ಭಗವಾನ್ ವಿಷ್ಣುವಿನಲ್ಲಿ ನೀವು ಈ ಮ೦ತ್ರ ಪಠಣದ ಮೂಲಕ ಪ್ರಾರ್ಥಿಸಿಕೊಳ್ಳಬಹುದು.

English summary

Power mantras to get you through tough times!

The word ‘mantra’ is Sanskrit and it means sacred syllable(s) or sacred word(s). Across the literature, mantras are described as vibrational formulas that are recited silently within, spoken, or sung outwardly.
Subscribe Newsletter