ಕನಸಿನ ಉದ್ಯೋಗ ಪಡೆಯಬೇಕೇ? ಈ ದೇವರನ್ನು ಪೂಜಿಸಿ

By: Deepu
Subscribe to Boldsky

ಹಿಂದೂ ಪುರಾಣಗಳ ಪ್ರಕಾರ ಒಟ್ಟು ಮೂವತ್ತಮೂರು ಕೋಟಿ ದೇವತೆಯರಿದ್ದಾರೆ. ಪ್ರತಿ ದೇವತೆಗೂ ಒಂದೊಂದು ಶಕ್ತಿಯಿದ್ದು ವಿಶೇಷ ಪಾತ್ರವನ್ನು ವಹಿಸುತ್ತಾರೆ. ಉದಾಹರಣೆಗೆ ಲಕ್ಷ್ಮಿ ಎಂದರೆ ಧನದೇವತೆ. ಸರಸ್ವತಿ ಎಂದರೆ ವಿದ್ಯಾದೇವತೆ.

ಅಂತೆಯೇ ಧನ ಬೇಕಾದರೆ ಲಕ್ಷ್ಮಿಯನ್ನೂ ವಿದ್ಯೆ ತಲೆಗೆ ಹತ್ತಬೇಕಾದರೆ ಸರಸ್ವತಿಯನ್ನೂ ಒಲಿಸಿ ಕೊಳ್ಳುವಂತೆ ಹೇಳಲಾಗುತ್ತದೆ. ಆದರೆ ಇಂದಿನ ದಿನದಲ್ಲಿ ಕೇವಲ ಧನ ಅಥವಾ ವಿದ್ಯೆ ಇದ್ದರೆ ಮಾತ್ರ ಸಾಲದು, ಈ ವಿದ್ಯೆಯನ್ನು ಬಳಸಿಕೊಳ್ಳಬಲ್ಲಂತಹ ಉದ್ಯೋಗವೂ ಬೇಕು. ಹಿಂದೂ ಧರ್ಮದಲ್ಲಿ ಇವರು 'ಕೋಪಿಷ್ಠ ದೇವರು' ಎಂದೇ ಪ್ರಸಿದ್ಧಿ!

ಹಾಗಾದರೆ ಉತ್ತಮ ಉದ್ಯೋಗ ಪಡೆಯಲು ಯಾವ ದೇವರನ್ನು ಒಲಿಸಿಕೊಳ್ಳಬೇಕು? ಅಷ್ಟಕ್ಕೂ ಉದ್ಯೋಗಕ್ಕಾಗಿ ಹಿಂದೂ ಪುರಾಣದಲ್ಲಿ ಯಾವುದಾದರೂ ದೇವತೆ ಇದ್ದಾರೆಯೇ? ಈ ಪ್ರಶ್ನೆಯನ್ನು ಪಂಡಿತರಲ್ಲಿ ಕೇಳಿದರೆ ನಮಗೆ ಸಿಗುವ ಉತ್ತರ 'ಇಲ್ಲ'.

ವಾಸ್ತವವಾಗಿ ಉದ್ಯೋಗಕ್ಕಾಗಿ ಯಾವುದೇ ದೇವತೆ ಹಿಂದೂ ಪರಂಪರೆಯಲ್ಲಿ ನಿಗದಿಪಡಿಸಿಲ್ಲ. ಆದರೆ ಇದಕ್ಕೂ ಒಂದು ಪರ್ಯಾಯವಿದೆ. ಕೆಲವು ಭಿನ್ನ ಶಕ್ತಿಗಳ ಒಂದಕ್ಕಿಂತ ಹೆಚ್ಚು ದೇವರುಗಳನ್ನು ಆರಾಧಿಸುವ ಮೂಲಕ ನಿಮ್ಮ ಕನಸಿನ ಉದ್ಯೋಗ ಪಡೆಯಲು ಖಂಡಿತಾ ಸಾಧ್ಯವಿದೆ. ಈ ನಿಟ್ಟಿನಲ್ಲಿ ಯಾವ ದೇವರನ್ನು ಆರಾಧಿಸಬಹುದು ಎಂಬುದನ್ನು ನೀವೇ ಪರಾಮರ್ಶಿಸಿ ಅತ್ಯಂತ ಸೂಕ್ತ ಎಂದು ಕಂಡುಬಂದ ದೇವರನ್ನು ಆಯ್ದುಕೊಳ್ಳಿ....

ಗಣೇಶ

ಗಣೇಶ

ಗಣೇಶ ಗಣನಾಯಕನೂ ಹೌದು, ವಿಘ್ನನಿವಾರಕನೂ ಹೌದು. ಅಂತೆಯೇ ಯಾವುದಾದರೂ ಹೊಸದನ್ನು ಪ್ರಾರಂಭಿಸುವಾಗ ಯಾವುದೇ ವಿಘ್ನಗಳು ಬಾರದಂತೆ ಗಣೇಶನನ್ನು ಪೂಜಿಸಿಯೇ ಕಾರ್ಯಾರಂಭಗೊಳಿಸಲಾಗುತ್ತದೆ. ಗಣೇಶ ದೇವರನ್ನು ಮೊದಲು ಪೂಜಿಸಲು ಕಾರಣಗಳೇನು?

"ಓಂ ಗಂ ಗಣೇಶಾಯಃ ನಮಃ"

ಅಂತೆಯೇ ಗೃಹಪ್ರವೇಶ, ಹೊಸ ವಾಹನ, ಹೊಸ ವ್ಯಾಪಾರ ಮೊದಲಾದವುಗಳ ಪ್ರಾರಂಭದ ಪೂಜೆ ಗಣೇಶನಿಗೆ ಮೀಸಲು. ಆದ್ದರಿಂದ ನಿಮ್ಮ ಉದ್ಯೋಗದ ಸಂದರ್ಶನದ ದಿನದಂದು ಗಣೇಶ ಮಂತ್ರವನ್ನು ಪಠಿಸಿ ಹೊರಡಿ. ಮಂತ್ರವೇನೂ ಕಷ್ಟದ್ದಲ್ಲ. "ಓಂ ಗಂ ಗಣೇಶಾಯಃ ನಮಃ" ಎಂದರೆ ಸಾಕು.

ದೇವಿ ಲಕ್ಷ್ಮಿ

ದೇವಿ ಲಕ್ಷ್ಮಿ

ಈಕೆ ಕೇವಲ ಧನದ ದೇವತೆ ಮಾತ್ರವಲ್ಲ, ಉತ್ತಮ ಭವಿಷ್ಯ ನೀಡುವ ದೇವತೆಯೂ ಆಗಿದ್ದಾಳೆ. ಈಕೆಯನ್ನು ಒಲಿಸಿಕೊಂಡರೆ ಮನೆಗೆ ಧನಾಗಮನವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಸಾಮಾನ್ಯವಾಗಿ ಮನೆತನವನ್ನು ಆಧರಿಸಿ ಗುರುವಾರ ಅಥವಾ ಶುಕ್ರವಾರದಂದು ಲಕ್ಷ್ಮೀಪೂಜೆಯನ್ನು ನೆರವೇರಿಸಲಾಗುತ್ತದೆ. ಈ ಸಂದರ್ಭವನ್ನು ನಿಮ್ಮ ಉದ್ಯೋಗ ಪಡೆಯಲು ಉಪಯೋಗಿಸಿಕೊಂಡು ಸಂದರ್ಶನ ಮುನ್ನದಿನದಲ್ಲಿ ಪ್ರಾರ್ಥಿಸುವ ಮೂಲಕ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ.

ದೇವಿ ಸರಸ್ವತಿ

ದೇವಿ ಸರಸ್ವತಿ

ವಿದ್ಯೆ, ಕಲೆ, ಸಂಗೀತ ಮೊದಲಾದವುಗಳಿಗೆ ಸರಸ್ವತಿ ದೇವಿಯನ್ನು ಆರಾಧಿಸಬೇಕು. ಇಂದು ಉದ್ಯೋಗ ಪಡೆಯಬೇಕೆಂದರೆ ವಿದ್ಯೆ ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ವಿದ್ಯಾವಂತರಾಗಿ ಉದ್ಯೋಗವರಸಲು ಹೊರಡುವ ಮುನ್ನ ಸರಸ್ವತಿಯನ್ನು ಆರಾಧಿಸಿ ಬಿಳಿಯ ಹೂಗಳನ್ನು ಅರ್ಪಿಸಿ ಹೊರಡುವ ಮೂಲಕ ಮುಂದಿನ ಕಾರ್ಯಗಳು ಸುಗಮವಾಗುತ್ತವೆ.

ದೇವಿ ಸರಸ್ವತಿ

ದೇವಿ ಸರಸ್ವತಿ

ಉದ್ಯೋಗಕ್ಕೆ ಎಲ್ಲಾ ದೇವತೆಗಳನ್ನು ಆರಾಧಿಸಲೇಬೇಕು ಎಂದೇನಿಲ್ಲ ನಿಮಗೆ ಸೂಕ್ತ ಎನಿಸಿದ ಎರಡು ದೇವತೆಗಳಿಗೆ ಪೂಜೆ ಸಲ್ಲಿಸಿದರೆ ಸಾಕು. ಇದರಿಂದ ನಿಮಗೆ ಮನಸ್ಸಿನಲ್ಲಿ ದೊರಕುವ ಬೆಂಬಲ ಮತ್ತು ನಿರಾಳತೆ ಉದ್ಯೋಗ ಪಡೆಯಲು ನೆರವಾಗುತ್ತದೆ. ಆದರೆ ದೇವರು ನಿಮ್ಮ ಪ್ರಯತ್ನಗಳಿಗೆ ಬೆಂಬಲ ನೀಡುತ್ತಾರೆಯೇ ಹೊರತು ಬೇರೇನನ್ನೂ ಅಲ್ಲ. ಆದ್ದರಿಂದ ಉದ್ಯೋಗ ಪಡೆಯುವ ಮುನ್ನ ಸೂಕ್ತವಾದ ತಯಾರಿ ಮಾಡಿಕೊಂಡೇ ಹೊರಡಬೇಕು.

 
English summary

Please These Hindu Gods For Getting Jobs

Which Hindu god for jobs will give you that dream break? In fact, is their Hindu god for jobs at all? Looks like the answer is no. There is no Hindu god for jobs specifically. However, by praying to a few different Hindu gods you can manage to get your dream job.
Subscribe Newsletter