For Quick Alerts
ALLOW NOTIFICATIONS  
For Daily Alerts

ಪಿತೃಪಕ್ಷ 2021: ಮಗಳು ಪಿಂಡ ಪ್ರದಾನ ಮಾಡಬಹುದೇ?

|

ಈಗ ಪಿತೃಪಕ್ಷ ನಡೆಯುತ್ತಿದೆ. ಅಕ್ಟೋಬರ್‌ 6ಕ್ಕೆ ಪಿತೃ ಪಕ್ಷ ಮುಗಿಯಲಿದೆ. ಪಿತೃಪಕ್ಷದಲ್ಲಿ ಸ್ವರ್ಗಸ್ಥರಾದ ಹಿರಿಯರಿಗೆ ಪಿಂಡ ಪ್ರಧಾನ ಮಾಡಲಾಗುವುದು. ಇದರಿಂದ ಅವರಿಗೆ ಮೋಕ್ಷ ಸಿಗುವುದು ನಮಗೆ ದೋಷಗಳು ನಿವಾರಣೆಯಾಗುವುದು.

ದೇವರನ್ನು ಸಂತೃಪ್ತಿಗೊಳಿಸುವಷ್ಟೇ ಪ್ರಮುಖವಾದದ್ದು ಪಿತೃಗಳನ್ನು ಸಂತೃಪ್ತಿಗೊಳಿಸುವುದು. ಅವರಿಗೆ ಶಾಸ್ತ್ರೋಕ್ತವಾಗಿ ಪಿಂಡ ಪ್ರಧಾನ ಮಾಡಬೇಕು, ಆಗ ಮಾತ್ರ ಅದರ ಫಲ ಸಿಗುವುದು. ಪಿಂಡ ಪ್ರದಾನವನ್ನು ನದಿಯಲ್ಲಿ ಅತವಾ ನದಿಯ ತಟದಲ್ಲಿ ಮಾಡಲಾಗುವುದು.

Pitru Paksha 2021 Shradh,

ತರ್ಪಣ ಬಿಡುವುದರಿಂದ ನಮ್ಮ ಹಿರಿಯರು ಸಂತೃಪ್ತರಾಗಿತ್ತಾರೆ, ಅಲ್ಲದೆ ಅವರು ತಮ್ಮ ಮುಂದಿನ ಪೀಳಿಗೆಯನ್ನು ಆರೋಗ್ಯ, ಐಶ್ವರ್ಯ ನೀಡಿ ಹರಿಸುತ್ತಾರೆ ಎಂಬ ನಂಬಿಕೆ ಇದೆ.

ತರ್ಪಣವನ್ನು ಸಾಮಾನ್ಯವಾಗಿ ಮಗ ಮಾಡುವುದು ನೋಡುತ್ತೇವೆ. ಆದರೆ ಈ ತರ್ಪಣ ಕಾರ್ಯವನ್ನು ಮಗಳು ಮಾಡಬಹುದೇ? ಪಿಂಡ ಪ್ರದಾನ, ತರ್ಪಣ ಬಿಡಲು ಹಿಂದೂ ಶಾಸ್ತ್ರದಲ್ಲಿ ಇರುವ ನಿಯಮಗಳೇನು ಎಂದು ನೋಡೋಣ:

ಪಿತೃ ಪಕ್ಷದಲ್ಲಿ ಶ್ರಾದ್ಧ ಯಾರು ಮಾಡುತ್ತಾರೆ?

ಪಿತೃ ಪಕ್ಷದಲ್ಲಿ ಶ್ರಾದ್ಧ ಯಾರು ಮಾಡುತ್ತಾರೆ?

* ಹಿಂದೂ ಧಾರ್ಮಿಕ ಕಾನೂನು ಪ್ರಕಾರ ಮೊದಲ ಮಗ ತರ್ಪಣ ಬಿಡಬೇಕು.

* ಮಗನಿಗೆ ಮದುವೆಯಾದ ಮೇಲೆ ಸೊಸೆಯೂ ಗಂಡನ ಜೊತೆ ಶ್ರಾದ್ಧ ಕಾರ್ಯದಲ್ಲಿ ಭಾಗಿಯಾಗಬಹುದು.

* ದೊಡ್ಡ ಮಗ ಬದುಕಿಲ್ಲದಿದ್ದರೆ ಕೊನೆಯ ಮಗ ತರ್ಪಣ ಕಾರ್ಯ ಮಾಡಬೇಕು.

* ಮಗನಿಗೆ ಶ್ರಾದ್ಧ ಕಾರ್ಯ ಮಾಡಲು ಸಾಧ್ಯವಾಗದಿದ್ದರೆ ಮೊಮ್ಮಗ ಮಾಡಬಹುದು.

* ಇನ್ನು ಮಗನಿಗೆ ಗಂಡು ಮಕ್ಕಳಿಲ್ಲದಿದ್ದರೆ ತಮ್ಮನಿಗೆ ಗಂಡು ಮಕ್ಕಳಿದ್ದರೆ ಅವರು ಮಾಡಬಹುದು.

* ಇನ್ನು ಹೆಣ್ಮಕ್ಕಳು ಮಾತ್ರ ಇದ್ದರೆ ಮಗಳ ಮಗ ಶ್ರಾದ್ಧ ಕಾರ್ಯ ಮಾಡಬಹುದು.

ಪಿಂಡ ಪ್ರದಾನ ಮಾಡಲು ಸೊಸೆಗೆ ಅನುಮತಿ ಇದೆ, ಮಗಳು ಮಾಡಲ್ಲ

ಪಿಂಡ ಪ್ರದಾನ ಮಾಡಲು ಸೊಸೆಗೆ ಅನುಮತಿ ಇದೆ, ಮಗಳು ಮಾಡಲ್ಲ

ಶ್ರಾದ್ಧ ಕಾರ್ಯವನ್ನು ಮಗಳು ಮಾಡದಿದ್ದರೂ ಸೊಸೆಗೆ ಮಾಡಲು ಅವಕಾಶವಿದೆ. ಆದ್ದರಿಂದ ಶ್ರಾದ್ಧ ಕಾರ್ಯದಿಂದ ಹೆಣ್ಮಕ್ಕಳನ್ನು ದೂರ ಇಡಲಾಗಿದೆ ಎಂದು ಹೇಳಲಾಗುವುದಿಲ್ಲ. ಪೌರಾಣಿಕ ಕತೆಯ ಪ್ರಕಾರ ಸೀತಾ ಮಾತೆಯೂ ಪತಿ ರಾಮನ ಜೊತೆ ತನ್ನ ಮಾವ ದಶರಥನ ಆತ್ಮಕ್ಕೆ ಪಿಂಡ ಪ್ರಧಾನ ಮಾಡಿದಳು ಎಂಬ ಉಲ್ಲೇಖವಿದೆ. ಆದರೆ ಮಗಳನ್ನು ಈ ಶ್ರಾದ್ಧ ಕಾರ್ಯದಲ್ಲಿ ಏಕೆ ಸೇರಿಸಲ್ಲ ಎಂಬುವುದಕ್ಕೆ ನಿಖರ ಕಾರಣಗಳು ಯಾರಿಗೂ ಗೊತ್ತಿಲ್ಲ, ಆದರೆ ಅವಳ ಮಗನಿಂದ ಶ್ರಾದ್ಧ ಕಾರ್ಯ ಮಾಡಿಸಬಹುದಾಗಿದೆ.

 ಪಿತೃ ಪಕ್ಷದಲ್ಲಿ ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?

ಪಿತೃ ಪಕ್ಷದಲ್ಲಿ ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?

* ಸಂಜೆ ಹೊತ್ತಿನಲ್ಲಿ ಒಬ್ಬರೇ ತಿರುಗಾಡಬಾರದು. ಅದರಲ್ಲೂ ಸೂರ್ಯ ಮುಳುಗಿದ ನಂತರ ಒಂಟಿ ಪ್ರಯಾಣಿಸಬಾರದು, ಹೊರಗಡೆ ಹೋಗುವಾಗ ಯಾರಾದರೂ ಒಬ್ಬರು ಜೊತೆಗಿರಬೇಕು ಎಂದು ಹೇಳಲಾಗುವುದು.

* ಹಗಲಿನಲ್ಲಿಯೂ ಕತ್ತಲು ಇರುವ ಸ್ಥಳಕ್ಕೆ ಹೋಗಬಾರದು ಅಲ್ಲದೆ ಯಾರೂ ಇಲ್ಲದ ಸ್ಥಳಗಳಲ್ಲಿ ಓಡಾಡಬಾರದು.

* ಮಾಂಸ, ಬೆಳ್ಳುಳ್ಳಿ, ಈರುಳ್ಳಿ ಇವುಗಳನ್ನು ಪಿತೃಪಕ್ಷದಲ್ಲಿ ಸೇವಿಸಬಾರದು

* ಶವ ಸಂಸ್ಕಾರ ಮಾಡುವ ಸ್ಥಳಕ್ಕೆ ಹೋಗಬಾರದು

ಇವೆಲ್ಲಾ ನಂಬಿಕೆ ಆದರೆ ಇವುಗಳ ಹಿಂದಿರುವ ವೈಜ್ಞಾನಿಕ ಕಾರಣಗಳೇನು ಎಂಬುವುದು ಯಾರಿಗೂ ಗೊತ್ತಿಲ್ಲ. ಕೆಲವರು ಇದನ್ನು ಮೂಢನಂಬಿಕೆ ಎನ್ನುತ್ತಾರೆ. ಬಹುಶಃ ಗರ್ಭಿಣಿ ಒಂಟಿಯಾಗಿ ಓಡಾಡುವಾಗ ಎಲ್ಲಾದರೂ ಹೊಟ್ಟೆ ನೋವು, ಇತರ ಆರೋಗ್ಯ ಸಮಸ್ಯೆ ಕಾಣಿಸಿದರೆ ಯಾರೂ ಇರಲ್ಲ ಎಂಬ ಕಾರಣಕ್ಕೆ ಈ ರೀತಿ ಹೇಳಲಾಗಿರಬಹುದು. ಅಲ್ಲದೆ ಹೊಟ್ಟೆಯಲ್ಲಿ ಮಗುವಿರುವಾಗ ಒಳ್ಳೆಯದನ್ನೇ ನೋಡಬೇಕು, ಕೇಳಬೇಕು ಅಂತಾರೆ, ಶವ ಸಂಸ್ಕಾರಕ್ಕೆ ಹೋದಾಗ ಅದು ಅವಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದೇನೋ ಎಂಬ ಉದ್ದೇಶದಿಂದ ಈ ರೀತಿ ಹೇಳಿರಬಹುದು. ಒಟ್ಟಿನಲ್ಲಿ ಇಂಥ ವಿಷಯಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುವುದು ನಿಮ್ಮ ನಂಬಿಕೆ ಹಾಗೂ ವಿವೇಚನೆಗೆ ಬಿಟ್ಟದ್ದು.

--

English summary

Pitru Paksha Shradh: Can daughters do Pind Daan in kannada

Pitru Paksha 2021 Shradh: Can daughters do Pind Daan in kannada, Read on...
X
Desktop Bottom Promotion