For Quick Alerts
ALLOW NOTIFICATIONS  
For Daily Alerts

Pitru Paksha 2022: ಪಿತೃ ಪಕ್ಷ ಯಾವಾಗ ಪ್ರಾರಂಭವಾಗುತ್ತದೆ, ಯಾವ ದಿನದಂದು ಪಿತೃ ಪಕ್ಷ ಪೂಜೆಯನ್ನು ಮಾಡಬೇಕು?

|

ಪಿತೃ ಪಕ್ಷದಲ್ಲಿ ಪೂರ್ವಜರ ಆತ್ಮಗಳ ಶಾಂತಿಗಾಗಿ ಪಿಂಡ ದಾನ ಮತ್ತು ತರ್ಪಣ ಮಾಡುವ ಸಂಪ್ರದಾಯ ಹಿಂದಿನಿಂದಲೂ ಆಚರಿಸಿಕೊಂಡು ಬಂದ ಪದ್ಧತಿ. ಪಿತೃ ಪಕ್ಷದಲ್ಲಿ ಪೂರ್ವಜರನ್ನು ಪೂಜಿಸುವುದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಯಾರು ತಮ್ಮ ಪೂರ್ವಜರನ್ನು ಪೂಜಿಸುವುದಿಲ್ಲವೋ, ಅವರ ಪೂರ್ವಜರಿಗೆ ಮರಣದ ಜಗತ್ತಿನಲ್ಲಿ ಸ್ಥಾನ ಸಿಗುವುದಿಲ್ಲ ಮತ್ತು ಅವರ ಆತ್ಮವು ಅಲೆದಾಡುತ್ತಲೇ ಇರುತ್ತದೆ ಎಂದು ನಂಬಲಾಗಿದೆ.

Pitru Paksha 2022 Dates : Know Shradh Dates, Shubh Muhurat, Tarpan Vidhi, Rituals and Significance in Kannad

ಆದ್ದರಿಂದಲೇ ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಬರುವ ಪಿತೃಪಕ್ಷದಲ್ಲಿ ತಪ್ಪದೇ ಪೂರ್ವಜರಿಗೆ ಪೂಜೆ ಮಾಡಿ, ಅವರ ಇಷ್ಟವಾದ ಖಾದ್ಯಗಳನ್ನು ತಯಾರಿಸಿ ಪೂರ್ವಜರ ರೂಪವೆಂದು ಪರಿಗಣಿಸುವ ಕಾಗೆಗಳಿಗೆ ಆಹಾರ ನೀಡಬೇಕು.

2022ನೇ ಸಾಲಿನಲ್ಲಿ ಎಂದಿನಿಂದ ಪಿತೃಪಕ್ಷ ಅರಂಭ, ಯಾವಾಗ ಅಂತ್ಯವಾಗುತ್ತದೆ, ಪೂಜೆಗೆ ಶುಭಮುಹೂರ್ತ ಯಾವುದು, ಶ್ರಾದ್ಧದ ದಿನಾಂಕ ಯಾವುದು, ಪಿತೃ ಪಕ್ಷದಲ್ಲಿ ಯಾವ ದಿನದಂದು ಪೂರ್ವಜರನ್ನು ಪೂಜಿಸಬೇಕು ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ:2.

1. 2022 ಪಿತೃಪಕ್ಷ ದಿನಾಂಕ

1. 2022 ಪಿತೃಪಕ್ಷ ದಿನಾಂಕ

ಭಾದ್ರಪದ ಪೂರ್ಣಿಮೆಯಿಂದ ಅಶ್ವಿನಿ ಮಾಸದ ಕೃಷ್ಣ ಪಕ್ಷ ಅವಾಮಾಸ್ಯೆವರೆಗಿನ ಹದಿನಾರು ದಿನಗಳನ್ನು ಪಿತೃ ಪಕ್ಷ ಎಂದು ಕರೆಯಲಾಗುತ್ತದೆ.

ಅಂದರೆ 10 ಸೆಪ್ಟೆಂಬರ್ 2022ರಿಂದ ಸೆಪ್ಟೆಂಬರ್‌ 25ರವರೆಗೆ ಪಿತೃಪಕ್ಷ ಇರುತ್ತದೆ.

ಪಿತೃ ಪಕ್ಷ ಶ್ರಾದ್ಧ ತಿಥಿ 2022 ಮತ್ತು ದಿನಾಂಕಗಳು

10 ಸೆಪ್ಟೆಂಬರ್ 2022- ಪೂರ್ಣಿಮಾ ಶ್ರಾದ್ಧ / ಪ್ರತಿಪದ ಶ್ರಾದ್ಧ

* ಸೆಪ್ಟೆಂಬರ್‌ 10ರಂದು ಪೂಜೆಗೆ ಮುಹೂರ್ತ

ಕುಟುಪ್ ಮುಹೂರ್ತ - ಮಧ್ಯಾಹ್ನ 12:11 ರಿಂದ 01:00 ರವರೆಗೆ, ಅವಧಿ: 49 ನಿಮಿಷಗಳು

ರೋಹಿಣಿ ಮುಹೂರ್ತ - ಮಧ್ಯಾಹ್ನ 1:00 ರಿಂದ 01:49 ರವರೆಗೆ, ಅವಧಿ: 49 ನಿಮಿಷಗಳು

ಅಪರಾಹ್ನ ಮುಹೂರ್ತ - ಮಧ್ಯಾಹ್ನ 01:49 ರಿಂದ 04:17 ರವರೆಗೆ, ಅವಧಿ: 02 ಗಂಟೆ 28 ನಿಮಿಷಗಳು

ಪ್ರತಿಪಾದ ತಿಥಿ ಆರಂಭ : ಸೆಪ್ಟೆಂಬರ್‌ 10 ಮಧ್ಯಾಹ್ನ 3.28 ರಿಂದ

ಪ್ರತಿಪಾದ ತಿಥಿ ಅಂತ್ಯ: ಸೆಪ್ಟೆಂಬರ್‌ 11 ಮಧ್ಯಾಹ್ನ 1.18ರವರೆಗೆ

* 11 ಸೆಪ್ಟೆಂಬರ್ 2022 - ದ್ವಿತೀಯ ಶ್ರಾದ್ಧ

ದ್ವಿತೀಯ ತಿಥಿ ಆರಂಭ : ಸೆಪ್ಟೆಂಬರ್‌ 11 ಮಧ್ಯಾಹ್ನ 1.14 ರಿಂದ

ದ್ವಿತೀಯ ತಿಥಿ ಅಂತ್ಯ: ಸೆಪ್ಟೆಂಬರ್‌ 12 ಬೆಳಗ್ಗೆ 11.35 ರವರೆಗೆ

* 12 ಸೆಪ್ಟೆಂಬರ್ 2022- ತೃತೀಯಾ ಶ್ರಾದ್ಧ

ತೃತೀಯಾ ತಿಥಿ ಆರಂಭ : ಸೆಪ್ಟೆಂಬರ್‌ 12 ಬೆಳಗ್ಗೆ 11.35 ರಿಂದ

ತೃತೀಯಾ ತಿಥಿ ಅಂತ್ಯ: ಸೆಪ್ಟೆಂಬರ್‌ 13 ಬೆಳಗ್ಗೆ 10.37 ರವರೆಗೆ

* 13 ಸೆಪ್ಟೆಂಬರ್ 2022 - ಚತುರ್ಥಿ ಶ್ರಾದ್ಧ

ಚತುರ್ಥಿ ತಿಥಿ ಆರಂಭ : ಸೆಪ್ಟೆಂಬರ್‌ 13 ಬೆಳಗ್ಗೆ 10.37 ರಿಂದ

ಚತುರ್ಥಿ ತಿಥಿ ಅಂತ್ಯ: ಸೆಪ್ಟೆಂಬರ್‌ 14 ಬೆಳಗ್ಗೆ 10.25 ರವರೆಗೆ

* 14 ಸೆಪ್ಟೆಂಬರ್ 2022 - ಪಂಚಮಿ ಶ್ರಾದ್ಧ

ಪಂಚಮಿ ತಿಥಿ ಆರಂಭ : ಸೆಪ್ಟೆಂಬರ್‌ 14 ಬೆಳಗ್ಗೆ 10.25 ರಿಂದ

ಪಂಚಮಿ ತಿಥಿ ಅಂತ್ಯ: ಸೆಪ್ಟೆಂಬರ್‌ 15 ಬೆಳಗ್ಗೆ 11.00 ರವರೆಗೆ

* 15 ಸೆಪ್ಟೆಂಬರ್ 2022 - ಷಷ್ಟಿ ಶ್ರಾದ್ಧ

ಷಷ್ಟಿ ತಿಥಿ ಆರಂಭ : ಸೆಪ್ಟೆಂಬರ್‌ 15 ಬೆಳಗ್ಗೆ 11.00 ರಿಂದ

ಷಷ್ಟಿ ತಿಥಿ ಅಂತ್ಯ: ಸೆಪ್ಟೆಂಬರ್‌ 16 ಮಧ್ಯಾಹ್ನ 12.19 ರವರೆಗೆ

* 16 ಸೆಪ್ಟೆಂಬರ್ 2022 - ಸಪ್ತಮಿ ಶ್ರಾದ್ಧ

ಸಪ್ತಮಿ ತಿಥಿ ಆರಂಭ : ಸೆಪ್ಟೆಂಬರ್‌ 16 ಮಧ್ಯಾಹ್ನ 12.19 ರಿಂದ

ಸಪ್ತಮಿ ತಿಥಿ ಅಂತ್ಯ: ಸೆಪ್ಟೆಂಬರ್‌ 17 ಮಧ್ಯಾಹ್ನ 2.14 ರವರೆಗೆ

* 18 ಸೆಪ್ಟೆಂಬರ್ 2022 - ಅಷ್ಟಮಿ ಶ್ರಾದ್ಧ

ಅಷ್ಟಮಿ ತಿಥಿ ಆರಂಭ : ಸೆಪ್ಟೆಂಬರ್‌ 17 ಮಧ್ಯಾಹ್ನ 2.14 ರಿಂದ

ಅಷ್ಟಮಿ ತಿಥಿ ಅಂತ್ಯ: ಸೆಪ್ಟೆಂಬರ್‌ 18 ಸಂಜೆ 4.32 ರವರೆಗೆ

* 19 ಸೆಪ್ಟೆಂಬರ್ 2022 - ನವಮಿ ಶ್ರಾದ್ಧ

ನವಮಿ ತಿಥಿ ಆರಂಭ : ಸೆಪ್ಟೆಂಬರ್‌ 18 ಸಂಜೆ 4.32 ರಿಂದ

ನವಮಿ ತಿಥಿ ಅಂತ್ಯ: ಸೆಪ್ಟೆಂಬರ್‌ 19 ಸಂಜೆ 7.01 ರವರೆಗೆ

* 20 ಸೆಪ್ಟೆಂಬರ್ 2022 - ದಶಮಿ ಶ್ರಾದ್ಧ

ದಶಮಿ ತಿಥಿ ಆರಂಭ : ಸೆಪ್ಟೆಂಬರ್‌ 19 ಸಂಜೆ 7.01 ರಿಂದ

ದಶಮಿ ತಿಥಿ ಅಂತ್ಯ: ಸೆಪ್ಟೆಂಬರ್‌ 20 ರಾತ್ರಿ 9.26 ರವರೆಗೆ

* 21 ಸೆಪ್ಟೆಂಬರ್ 2022 - ಏಕಾದಶಿ ಶ್ರಾದ್ಧ

ಏಕಾದಶಿ ತಿಥಿ ಆರಂಭ : ಸೆಪ್ಟೆಂಬರ್‌ 20 ರಾತ್ರಿ 9.26 ರಿಂದ

ಏಕಾದಶಿ ತಿಥಿ ಅಂತ್ಯ: ಸೆಪ್ಟೆಂಬರ್‌ 21 ತಡರಾತ್ರಿ 11.24 ರವರೆಗೆ

* 22 ಸೆಪ್ಟೆಂಬರ್ 2022 - ದ್ವಾದಶಿ / ಸನ್ಯಾಸಿಗಳ ಶ್ರಾದ್ಧ

ದ್ವಾದಶಿ ತಿಥಿ ಆರಂಭ : ಸೆಪ್ಟೆಂಬರ್‌ 21 ತಡರಾತ್ರಿ 11.34 ರಿಂದ

ದ್ವಾದಶಿ ತಿಥಿ ಅಂತ್ಯ: ಸೆಪ್ಟೆಂಬರ್‌ 23 ಮಧ್ಯರಾತ್ರಿ 1.17 ರವರೆಗೆ

* 23 ಸೆಪ್ಟೆಂಬರ್ 2022 - ತ್ರಯೋದಶಿ ಶ್ರಾದ್ಧ

ತ್ರಯೋದಶಿ ತಿಥಿ ಆರಂಭ : ಸೆಪ್ಟೆಂಬರ್‌ 23 ಮಧ್ಯರಾತ್ರಿ 1.17 ರಿಂದ

ತ್ರಯೋದಶಿ ತಿಥಿ ಅಂತ್ಯ: ಸೆಪ್ಟೆಂಬರ್‌ 24 ಮಧ್ಯರಾತ್ರಿ 2.30 ರವರೆಗೆ

* 24 ಸೆಪ್ಟೆಂಬರ್ 2022 - ಚತುರ್ದಶಿ ಶ್ರಾದ್ಧ

ಚತುರ್ದಶಿ ತಿಥಿ ಆರಂಭ : ಸೆಪ್ಟೆಂಬರ್‌ 24 ಮಧ್ಯರಾತ್ರಿ 2.30 ರಿಂದ

ಚತುರ್ದಶಿ ತಿಥಿ ಅಂತ್ಯ: ಸೆಪ್ಟೆಂಬರ್‌ 25 ಮಧ್ಯರಾತ್ರಿ 3.12 ರವರೆಗೆ

* ಸೆಪ್ಟೆಂಬರ್ 25, 2022 - ಅಮವಾಸ್ಯೆ ಶ್ರಾದ್ಧ, ಸರ್ವ ಪಿತೃ ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆ ಶ್ರಾದ್ಧ

ಅಮಾವಾಸ್ಯೆ ತಿಥಿ ಆರಂಭ : ಸೆಪ್ಟೆಂಬರ್‌ 25 ಮಧ್ಯರಾತ್ರಿ 3.12 ರಿಂದ

ಅಮಾವಾಸ್ಯೆ ತಿಥಿ ಅಂತ್ಯ: ಸೆಪ್ಟೆಂಬರ್‌ 26 ಮಧ್ಯರಾತ್ರಿ 3.23 ರವರೆಗೆ

ಪಿತೃ ಪಕ್ಷದಲ್ಲಿ ಶಾಸ್ತ್ರಗಳ ಪ್ರಕಾರ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಶ್ರದ್ಧೆಯನ್ನು ಗೌರವದಿಂದ ಮಾಡುವವರ ಇಷ್ಟಾರ್ಥಗಳು ಈಡೇರುತ್ತವೆ.

2. ಪಿತೃ ಪಕ್ಷ ಪಿಂಡ ದಾನದಲ್ಲಿ ಯಾರನ್ನು ಪೂಜಿಸಲಾಗುತ್ತದೆ?

2. ಪಿತೃ ಪಕ್ಷ ಪಿಂಡ ದಾನದಲ್ಲಿ ಯಾರನ್ನು ಪೂಜಿಸಲಾಗುತ್ತದೆ?

ಪಿತೃ ಪಕ್ಷದ ಅವಧಿಯಲ್ಲಿ, ವಿಷ್ಣುವಿನ ವಿಶೇಷ ಪೂಜೆಯನ್ನು ಪಿಂಡದಾನ ಮತ್ತು ಶ್ರಾದ್ಧ ಆಚರಣೆಗಳಿಗಾಗಿ ಮಾಡಲಾಗುತ್ತದೆ. ವಿಷ್ಣುವನ್ನು ಪೂಜಿಸುವುದರಿಂದ ಮಾತ್ರ ಮಾಯಾಲೋಕದಿಂದ ಪಿತೃ ಹೋಗುವ ಬಾಗಿಲು ತೆರೆಯುತ್ತದೆ, ಜೊತೆಗೆ ಮೋಕ್ಷವೂ ಪ್ರಾಪ್ತಿಯಾಗುತ್ತದೆ.

3. ಶ್ರಾದ್ಧದಲ್ಲಿ ಕಾಗೆಗಳಿಗೆ ವಿಶೇಷ ಮಹತ್ವ

3. ಶ್ರಾದ್ಧದಲ್ಲಿ ಕಾಗೆಗಳಿಗೆ ವಿಶೇಷ ಮಹತ್ವ

ಕಾಗೆಯನ್ನು ಪೂರ್ವಜರ ರೂಪವೆಂದು ಪರಿಗಣಿಸಲಾಗುತ್ತದೆ. ನಮ್ಮ ಪೂರ್ವಜರು ಕಾಗೆಯ ರೂಪವನ್ನು ಧರಿಸಿ, ಶ್ರಾದ್ಧವನ್ನು ಮಾಡಲು ನಿಗದಿತ ದಿನಾಂಕದಂದು ಮಧ್ಯಾಹ್ನ ನಮ್ಮ ಮನೆಗೆ ಬರುತ್ತಾರೆ ಎಂದು ನಂಬಲಾಗಿದೆ. ಶ್ರಾದ್ಧ ಸಿಗದಿದ್ದರೆ ಸಿಟ್ಟು ಬರುತ್ತದೆ. ಈ ಕಾರಣಕ್ಕಾಗಿ ಶ್ರಾದ್ಧದ ಮೊದಲ ಭಾಗವನ್ನು ಕಾಗೆಗಳಿಗೆ ನೀಡಲಾಗುತ್ತದೆ.

4. ಪಿತೃ ಪಕ್ಷದಲ್ಲಿ ಪೂರ್ವಜರನ್ನು ನೆನಪಿಸಿಕೊಳ್ಳುವುದು ಹೇಗೆ?

4. ಪಿತೃ ಪಕ್ಷದಲ್ಲಿ ಪೂರ್ವಜರನ್ನು ನೆನಪಿಸಿಕೊಳ್ಳುವುದು ಹೇಗೆ?

ಪಿತೃ ಪಕ್ಷದಂದು ನಮ್ಮ ಪೂರ್ವಜರಿಗೆ ನಿತ್ಯವೂ ನೀರನ್ನು ಅರ್ಪಿಸಬೇಕು. ಈ ನೀರನ್ನು ಮಧ್ಯಾಹ್ನ ದಕ್ಷಿಣ ದಿಕ್ಕಿಗೆ ಅಭಿಮುಖವಾಗಿ ನೀಡಲಾಗುತ್ತದೆ. ಕಪ್ಪು ಎಳ್ಳನ್ನು ನೀರಿನಲ್ಲಿ ಬೆರೆಸಿ ಕುಶವನ್ನು ಕೈಯಲ್ಲಿ ಇಡಲಾಗುತ್ತದೆ. ಪೂರ್ವಜರ ಮರಣದ ದಿನ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡಲಾಗುತ್ತದೆ. ಅದೇ ದಿನ ಬಡವರಿಗೂ ಅನ್ನ ನೀಡಲಾಗುತ್ತದೆ. ಇದಾದ ನಂತರ ಪಿತೃ ಪಕ್ಷದ ಕೆಲಸ ಮುಗಿಯುತ್ತದೆ.

5. ಪಿತೃ ಪಕ್ಷದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

5. ಪಿತೃ ಪಕ್ಷದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

* ಹಿಂದೂ ಧರ್ಮಗ್ರಂಥಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು 'ತಾಮಸಿಕ' ಎಂದು ಪರಿಗಣಿಸಲಾಗುತ್ತದೆ, ಇದು ನಮ್ಮ ಇಂದ್ರಿಯಗಳ ಮೇಲೆ ಪರಿಣಾಮ ಬೀರುತ್ತದೆ. ಪಿತೃ ಪಕ್ಷದ ಅವಧಿಯಲ್ಲಿ, ಆಹಾರದಲ್ಲಿ ಈರುಳ್ಳಿ-ಬೆಳ್ಳುಳ್ಳಿಯ ಬಳಕೆಯನ್ನು ತಪ್ಪಿಸಬೇಕು.

* ಪಿತೃ ಪಕ್ಷದ ಸಮಯದಲ್ಲಿ ಯಾವುದೇ ಆಚರಣೆಯನ್ನು ಆಚರಿಸಬಾರದು ಅಥವಾ ಅದರ ಭಾಗವಾಗಿರಬಾರದು. ಈ ಅವಧಿಯಲ್ಲಿ ಯಾವುದೇ ರೀತಿಯ ಆಚರಣೆಯು ನಿಮ್ಮ ಪೂರ್ವಜರಿಗೆ ನಿಮ್ಮ ಗೌರವದ ಮೇಲೆ ಪರಿಣಾಮ ಬೀರುತ್ತದೆ.

* ಪಿತೃ ಪಕ್ಷದ ಅವಧಿಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ಅವಧಿಯಲ್ಲಿ ಹೊಸದನ್ನು ಪ್ರಾರಂಭಿಸದಿರುವುದು ಒಳ್ಳೆಯದು. ಈ ಸಮಯದಲ್ಲಿ ಕುಟುಂಬದ ಸದಸ್ಯರು ಹೊಸದನ್ನು ಖರೀದಿಸಬಾರದು.

* ಪಿತೃ ಪಕ್ಷದ ಸಮಯವು ಪೂರ್ವಜರಿಗೆ ಸಮರ್ಪಿತವಾಗಿದೆ, ಆದ್ದರಿಂದ ಈ ಅವಧಿಯಲ್ಲಿ ಮದ್ಯ ಅಥವಾ ಮಾಂಸಾಹಾರ ಸೇವನೆಯನ್ನು ತ್ಯಜಿಸಬೇಕು.

* ಪಿತೃ ಪಕ್ಷದ ಸಮಯದಲ್ಲಿ ಉಗುರು ಕತ್ತರಿಸುವುದು, ಕ್ಷೌರ ಮತ್ತು ಗಡ್ಡವನ್ನು ತಪ್ಪಿಸಬೇಕು.

English summary

Pitru Paksha 2022 Dates : Know Shradh Dates, Shubh Muhurat, Tarpan Vidhi, Rituals and Significance in Kannad

Here we are discussing about Pitru Paksha 2022 Dates : Know Shradh Dates, Shubh Muhurat, Tarpan Vidhi, Rituals and Significance in Kannada. Read more.
X
Desktop Bottom Promotion