For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯ ಪ್ರಕಾರ ಈ ಸಮಸ್ಯೆಗಳಿದ್ದರೆ ಅದಕ್ಕೆ ಕಾರಣ ಪಿತೃದೋಷ, ಪರಿಹಾರವೇನು?

|

ವೇದಿಕ್ ಶಾಸ್ತ್ರದ ಪ್ರಕಾರ ವ್ಯಕ್ತಿಗೆ ಜನ್ಮ ಕುಂಡಲಿಯಲ್ಲಿ ಕೆಲವು ಗ್ರಹಗಳ ಸ್ಥಾನದಿಂದ ಪಿತೃದೋಷ ಉಂಟಾಗುವುದು. ಜ್ಯೋತಿಷ್ಯ ಪ್ರಕಾರ ಜನ್ಮ ಕುಂಡಲಿಯಲ್ಲಿ ರವಿ ಮತ್ತು ಶನಿಗ್ರಹಗಳು ಪರಿವರ್ತನೆಯಾದರೆ ಅಂದರೆ ರವಿ ರಾಶಿಯಲ್ಲಿ ಶನಿ, ಶನಿ ರಾಶಿಯಲ್ಲಿ ರವಿಯಿದ್ದರೆ ಪಿತೃದೋಷವಿರುತ್ತದೆ.

ಅಲ್ಲದೆ ರವಿ, ಶನಿಯ ಸಂಬಂಧದಂತೆಯೇ ಜಾತಕದಲ್ಲಿ ಗುರು, ಬುಧ ಗ್ರಹಗಳಿಂದ ಉಂಟಾಗುವ ಸಂಬಂಧದಿಂದ ಕೂಡ ಪಿತೃದೋಷ ಉಂಟಾಗುತ್ತದೆ. ಆದರೆ ಈ ಪಿತೃದೋಷ ಹೆಚ್ಚಿನ ಕೆಟ್ಟ ಪ್ರಭಾವ ಬೀರುವುದಿಲ್ಲ. ಹಿಂದೂ ಪುರಾಣಗಳಲ್ಲಿ ಹಿರಿಯರು ಮಾಡಿದ ಪಾಪ ಮುಂದಿನ ತಲೆಮಾರಿನವರಿಗೆ ಬರುವುದು ಎಂದು ಹೇಳುತ್ತಾರೆ. ಇದು ಕೂಡ ಪಿತೃದೋಷವಾಗಿದೆ.

ಪಿತೃದೋಷವಿದ್ದರೆ ಈ ವ್ಯಕ್ತಿಗೆ ಈ ರೀತಿಯ ಸಮಸ್ಯೆಗಳು ಎದುರಾಗುವುದು:

ಪಿತೃದೋಷವಿದ್ದರೆ ಈ ವ್ಯಕ್ತಿಗೆ ಈ ರೀತಿಯ ಸಮಸ್ಯೆಗಳು ಎದುರಾಗುವುದು:

  • ಪಿತೃದೋಷ ಇರುವ ವ್ಯಕ್ತಿಗೆ ತನ್ನ ಸಂತಾನ ಮುಂದುವೆರೆಸಲು ಪುತ್ರ ಸಂತಾನ ಉಂಟಾಗುವುದಿಲ್ಲ.
  • ಪಿತೃದೋಷ ಇರುವ ವ್ಯಕ್ತಿಗೆ ಸಂತಾನ ಭಾಗ್ಯ ಇರುವುದಿಲ್ಲ
  • ಪಿತೃದೋಷವಿದ್ದರೆ ಮಕ್ಕಳ ಪ್ರಗತಿಗೆ ಅಡಚಣೆ ಉಂಟಾಗುವುದು
  • ಪಿತೃದೋಷ ಇದ್ದರೆ ವೈವಾಹಿಕ ಜೀವನವೂ ಕೂಡಿ ಬರುವುದಿಲ್ಲ
  • ಪಿತೃದೋಷ ಇರುವ ವ್ಯಕ್ತಿ ತನ್ನ ಸಂತಾನವನ್ನು ನೋಡುವ ಮೊದಲೇ ಸಾವನ್ನಪ್ಪುತ್ತಾನೆ
  • ಪಿತೃದೋಷದಿಂದ ಹುಟ್ಟುವ ಮಕ್ಕಳಲ್ಲಿ ಶಾರೀರಿಕ ಹಾಗೂ ಮಾನಸಿಕ ನ್ಯೂನತೆ ಕಂಡು ಬರುವುದು
  • ಪಿತೃದೋಷದಿಂದ ವ್ಯಾಪಾರದಲ್ಲಿ ನಷ್ಟ ಉಂಟಾಗುವುದು, ಸಾಲದಲ್ಲಿ ಮುಳುಗುತ್ತಾನೆ
  • ಪಿತೃದೋಷವಿದ್ದರೆ ಮನೆಯಲ್ಲಿ ನೆಮ್ಮದಿ ಇರಲ್ಲ
  • ಇನ್ನು ಒಂದು ಒಳ್ಳೆಯ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ
  • ಜ್ಯೋತಿಷ್ಯ ಪ್ರಕಾರ ಯಾರಿಗೆ ಪಿತೃದೋಷ ಉಂಟಾಗುವುದು

    ಜ್ಯೋತಿಷ್ಯ ಪ್ರಕಾರ ಯಾರಿಗೆ ಪಿತೃದೋಷ ಉಂಟಾಗುವುದು

    • ಶುಕ್ರ, ಶನಿ, ರಾಹು ಮೂರು ಗ್ರಹಗಳು ಅಲ್ಲದಿದ್ದರೆ ಎರಡು ಗ್ರಹಗಳು ಪಂಚಮ ಭಾವದಲ್ಲಿದ್ದರೆ ರವಿ ಪಾಪಗ್ರಹವಾಗಿ ಬದಲಾಗುವುದರಿಂದ ಅಂಥ ವ್ಯಕ್ತಿಗೆ ಪಿತೃದೋಷ ಉಂಟಾಗುವುದು.
    • ಜನ್ಮಕುಂಡಲಿ ನಾಲ್ಕನೆಯ ಭಾವದಲ್ಲಿ ಕೇತುವಿದ್ದರೆ ಆ ಜಾತಕದವರಿಗೆ ಪಿತೃದೋಷ ಉಂಟಾಗುವುದು.
    • ಬುಧ, ಕೇತು ಒಂದೇ ಲಗ್ನದಲ್ಲಿ ಅಥವಾ ಎಂಟನೇ ಭಾವದಲ್ಲಿ ಇದ್ದರೆ ಪಿತೃದೋಷ ಉಂಟಾಗುವುದು.
    • ಜನ್ಮ ಕುಂಡಲಿಯಲ್ಲಿ ಚಂದ್ರ ಮೂರನೇಯ ಭಾವದಲ್ಲಿದ್ದರೆ ಆ ವ್ಯಕ್ತಿ ಕೂಡ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.
    • ಜನ್ಮ ಕುಂಡಲಿಯಲ್ಲಿ ಚಂದ್ರ ಮೂರನೇಯ ಅಥವಾ ಆರನೇಯ ಭಾವದಲ್ಲಿದ್ದರೆ ಆ ಜಾತಕದವನಿಗೆ ಬುಧನ ಕೆಟ್ಟ ದೃಷ್ಟಿ ಬೀಳುವುದು.
    • ಶುಕ್ರ, ಬುಧ, ರಾಹು ಈ ಮೂರು ಗ್ರಹಗಳಲ್ಲಿ ಯಾವುದಾದರೂ ಎರಡು ಗ್ರಹಗಳು ಎರಡನೆಯ ಭಾವದಲ್ಲಿ, ಐದನೆಯ ಭಾವದಲ್ಲಿ, ಒಂಭತ್ತನೆಯ ಭಾವದಲ್ಲಿ ಅಥವಾ ಹನ್ನೆರಡನೆಯ ಭಾವದಲ್ಲಿದ್ದರೆ ಆ ಜಾತಕದವನು ತುಂಬಾ ತೊಂದರೆಗೆ ಒಳಗಾಗುತ್ತಾನೆ.
    • ಜಾತಕದಲ್ಲಿ ರವಿ, ಚಂದ್ರ, ರಾಹು ಇವುಗಳಲ್ಲಿ ಯಾವುದಾದರೂ ಎರಡು ಗ್ರಹಗಳು ಅಥವಾ ಮೂರು ಗ್ರಹಗಳು ಏಳನೆಯ ಭಾವದಲ್ಲಿ ಇದ್ದರೆ ಅಂಥ ಜಾತಕದವರು ಶುಕ್ರನ ಕೆಟ್ಟ ದೃಷ್ಟಿ ಅನುಭವಿಸುತ್ತಾರೆ.
    • ರವಿ, ಚಂದ್ರ ಹಾಗೂ ಕುಜ ಇವುಗಳಲ್ಲಿ ಎರಡು ಅಥವಾ ಮೂರು ಗ್ರಹಗಳು ಹತ್ತನೇಯ ಅಥವಾ ಹನ್ನೊಂದನೆಯ ಭಾವದಲ್ಲಿದ್ದರೆ ಅವನ ಮೇಲೆ ಶನಿಯ ಕೆಟ್ಟ ದೃಷ್ಟಿ ಬೀಳುವುದು.
    • ಚಂದ್ರ ಅಥವಾ ಕುಜ ಆರನೇಯ ಭಾವದಲ್ಲಿದ್ದರೆ ಆ ಜಾತಕದವರು ಕೇತುವಿನಿಂದ ತೊಂದರೆ ಅನುಭವಿಸುತ್ತಾರೆ.
    • ಪಿತೃದೋಷಕ್ಕೆ ಸನಾತನ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವೇನು?

      ಪಿತೃದೋಷಕ್ಕೆ ಸನಾತನ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವೇನು?

      • ಕೆಲಸಕ್ಕೆ ಹೋಗುವಾಗ ಅಥವಾ ಹೊಸ ಕಾರ್ಯ ಪ್ರಾರಂಭಿಸುವಾಗ ತಂದೆ-ತಾಯಿಯ ಆಶೀರ್ವಾದ ಪಡೆದು ಪ್ರಾರಂಭಿಸಬೇಕು.
      • ಸಾವನ್ನಪ್ಪಿರುವ ಹಿರಿಯರಿಗೆ ಸರಿಯಾದ ರೀತಿಯಲ್ಲಿ ಶ್ರಾದ್ದ ಮಾಡಬೇಕು. ಇದರಿಂದ ಹಿಂದಿನ ಜನ್ಮದ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿದಂತೆ ಆಗುವುದು.
      • ಅನಾಥರಿಗೆ, ದುರ್ಬಲರಿಗೆ ಸಹಾಯ ಮಾಡಬೇಕು.
      • ಹುಣ್ಣಿಮೆ, ಅಮವಾಸ್ಯೆಗೆ ಉಪವಾಸವಿರಬೇಕು ಹಾಗೂ ಅರಳಿ ಮರಕ್ಕೆ ನೀರು ಹಾಕಬೇಕು.
      • ಬಡ ಹುಡುಗಿಗೆ ಮದುವೆ ಮಾಡಿದರೆ ಪುಣ್ಯ ಉಂಟಾಗುವುದು.
      • ಪಿತೃದೋಷದಿಂದ ಮುಕ್ತಿ ಪಡೆಯಲು ಪಿತೃಪಕ್ಷದಲ್ಲಿ ಶ್ರಾದ್ದ

        ಪಿತೃದೋಷದಿಂದ ಮುಕ್ತಿ ಪಡೆಯಲು ಪಿತೃಪಕ್ಷದಲ್ಲಿ ಶ್ರಾದ್ದ

        ಪಿತೃಪಕ್ಷದಲ್ಲಿ ಗತಿಸಿದ ಹಿರಿಯರು ತರ್ಪಣಕ್ಕಾಗಿ ಕಾಯುತ್ತಿರುತ್ತಾರೆ. ಶ್ರಾದ್ದ ಮಾಡುವುದರಿಂದ ಅವರಿಗೆ ತೃಪ್ತಿ ಉಂಟಾಗುವುದು ಹಾಗೂ ಅವರ ರಕ್ಷೆ ದೊರೆಯುವುದರಿಂದ ಜೀವನದಲ್ಲಿದ್ದ ಕಷ್ಟಗಳು ದೂರವಾಗುವುದು.

English summary

Pitra Dosh Reasons, Effects, and Remedies in Kannada

Here we explaining what is pitru dosh, how it happened, it's effects and remedies Read on...............
X
Desktop Bottom Promotion