Just In
- 48 min ago
ಇತ್ತೀಚೆಗಷ್ಟೇ ಟೈಪ್ 2 ಮಧುಮೇಹ ಕಾಣಿಸಿಕೊಂಡಿದ್ದರೆ ಗುಣಪಡಿಸುವುದು ಹೇಗೆ?
- 4 hrs ago
Today Rashi Bhavishya: ಬುಧವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯವರಿಗೆ ಒತ್ತಡವೇ ಸಮಸ್ಯೆ, ಎಚ್ಚರ
- 11 hrs ago
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- 12 hrs ago
ವಟ ಸಾವಿತ್ರಿ ವ್ರತ ಯಾವಾಗ? ಪತಿಯ ಪತಿಯ ಆಯುರ್-ಐಶ್ವರ್ಯ ವೃದ್ಧಿಗೆ ಈ ದಿನ ಏನು ಮಾಡಬೇಕು?
Don't Miss
- News
ವಾಟ್ಸಾಪ್ ಮೂಲಕವೂ ಬೆಸ್ಕಾಂಗೆ ದೂರು ನೀಡಬಹುದು
- Automobiles
ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್ಎಂಎಲ್
- Movies
ತೆಲುಗು ಸಿನಿಮಾ ಸೆಟ್ನಲ್ಲಿ ಸಲ್ಮಾನ್ ಖಾನ್ ಹಿಂದಿ ಸಿನಿಮಾ ಶೂಟಿಂಗ್!
- Sports
ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯಕ್ಕೆ ಆರ್ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆ ಸಾಧ್ಯತೆ; ನಂಬಿಕಸ್ಥ ಆಟಗಾರ ಔಟ್!
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೆಬ್ರವರಿ 2021: ಈ ತಿಂಗಳಲ್ಲಿ ಹುಟ್ಟಿದವರು ಇಂತಹ ವ್ಯಕ್ತಿತ್ವಯುಳ್ಳವರು!
ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿದ ತಿಂಗಳು ಆತನ ಗುಣಲಕ್ಷಣಗಳು ಮತ್ತು ನಡವಳಿಕೆಯನ್ನು ನಿರ್ಧರಿಸುತ್ತದೆ ಎನ್ನುವ ನಂಬಿಕೆ ಹಲವರಲ್ಲಿದೆ. ಹಾಗೆಯೇ ಅದರಂತೆ ಜನರು ಇರುತ್ತಾರೆಯೂ ಕೂಡ. ನಿರ್ದಿಷ್ಟ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳು, ನಿರ್ದಿಷ್ಟವಾದ ಗುಣಗಳನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರ ಗುಣಗಳು ಒಬ್ಬರಿಗಿಂತ ಒಬ್ಬರದ್ದು ವಿಭಿನ್ನವಾಗಿರುತ್ತವೆ. ಆದರೆ, ಆ ಗುಣಗಳಲ್ಲಿ ಸ್ವಲ್ಪ ಮಟ್ಟದ ಹೋಲಿಕೆ ಇರುತ್ತವೆ. ಇಂದಿನ ಲೇಖನದಲ್ಲಿ, ಫೆಬ್ರವರಿಯಲ್ಲಿ ಜನಿಸಿದ ಜನರ ವ್ಯಕ್ತಿತ್ವ ಹೇಗಿರುತ್ತವೆ ಎಂಬುದನ್ನು ಹೇಳುತ್ತೇವೆ.
ಫೆಬ್ರವರಿಯಲ್ಲಿ ಜನಿಸಿದ ವ್ಯಕ್ತಿಗಳ ವ್ಯಕ್ತಿತ್ವದಲ್ಲಿನ ಲಕ್ಷಣಗಳು:

1. ಅವರು ಸ್ಪಷ್ಟವಾದ ನಿಲುವನ್ನು ಹೊಂದಿರುತ್ತಾರೆ:
ಈ ತಿಂಗಳಲ್ಲಿ ಜನಿಸಿದ ಜನರು ಬೋಲ್ಡ್ ಹಾಗೂ ಅತ್ಯಂತ ಸತ್ಯವಂತರು. ಅವರು ಸುಳ್ಳು ಹೇಳಲು ಸಾಧ್ಯವಿಲ್ಲ, ಅಂದ್ರೆ ಪ್ರಾಮಾಣಿಕವಾಗಿರುವುದು ಅವರಿಗೆ ಬಹಳ ಮುಖ್ಯ. ಇವರು ಅಹಿತಕರ ಸತ್ಯವನ್ನು ಹೇಳುತ್ತಾರೆ. ಅದು ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ಅರಿವಿದ್ದರೂ ಸಹ ಯಾವಾಗಲೂ ಸತ್ಯಗಳಿಗೆ ಅಂಟಿಕೊಳ್ಳುತ್ತಾರೆ.

2. ಅವರು ಪ್ರಾಮಾಣಿಕವಾಗಿರುತ್ತಾರೆ:
ಫೆಬ್ರವರಿಯಲ್ಲಿ ಜನಿಸಿದವರು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿರುತ್ತಾರೆ. ಅವರು ಯಾವಾಗಲೂ ತಮ್ಮದೇ ಆದ ನಿಯಮಗಳು ಮತ್ತು ಮಾರ್ಗಗಳನ್ನು ಅನುಸರಿಸುತ್ತಾರೆ, ಇತರರು ಮಾಡುವುದನ್ನು ಎಂದಿಗೂ ನಕಲಿಸುವುದಿಲ್ಲ. ಇದು ಅವರನ್ನು ಇತರರಿಗಿಂತ ವಿಭಿನ್ನಗೊಳಿಸಿ, ಎಲ್ಲರ ಮಧ್ಯೆ ಎದ್ದುಕಾಣುವಂತೆ ಮಾಡುತ್ತದೆ. ಅವರು ತಮ್ಮದೇ ಆದ ತಪ್ಪುಗಳು ಮತ್ತು ಅನುಭವಗಳಿಂದ ಕಲಿಯುತ್ತಾರೆ. ಅಂದ್ರೆ ತಪ್ಪುಗಳನ್ನು ಉದ್ದೇಶಪೂರ್ವಕವಾಗಿ ಮಾಡುತ್ತಾರೆ ಎಂದಲ್ಲ. ಇವರಿಗೆ ಆತ್ಮವಿಶ್ವಾಸವೇ ಇವರ ಪ್ಲಸ್ ಪಾಯಿಂಟ್.

3. ಅವು ಬಹಳ ನಿಗೂಡವಾಗಿರುತ್ತಾರೆ:
ಈ ತಿಂಗಳಲ್ಲಿ ಜನಿಸಿದ ಜನರು ತಮ್ಮ ಭಾವನೆಗಳ ಬಗ್ಗೆ ಅಷ್ಟು ಬಹಿರಂಗವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಅವರು ತುಂಬಾ ಪ್ರಾಮಾಣಿಕರಾಗಿದ್ದಾರೆ ಆದರೆ ತಮ್ಮ ವಿಷಯಗಳಿಗೆ ಬಂದಾಗ ಅಷ್ಟೊಂದು ಧೈರ್ಯ ತೋರುವುದಿಲ್ಲ. ಅದಕ್ಕಾಗಿಯೇ ಅವುಗಳನ್ನು ಅರ್ಥಮಾಡಿಕೊಳ್ಳುವುದು ಅಥವಾ ಅವರು ಏನು ಯೋಚಿಸುತ್ತಿದ್ದಾರೆಂದು ತಿಳಿಯುವುದು ಕೆಲವೊಮ್ಮೆ ಕಷ್ಟ. ಅವರು ತಮ್ಮ ಬಗ್ಗೆ ಹೆಚ್ಚು ಬಹಿರಂಗಪಡಿಸದ ಕಾರಣ, ಅವರು ನಿಜವಾಗಿಯೂ ಯಾರೆಂದು ಇತರರಲ್ಲಿ ಕುತೂಹಲ ಮೂಡುತ್ತದೆ. ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಬಯಕೆಯನ್ನು ತೋರುತ್ತಾರೆ.

೪. ಅವರ ನವೀನತೆಯ ಗುಣ ಹೊಂದಿರುತ್ತಾರೆ:
ಈ ತಿಂಗಳಲ್ಲಿ ಜನಿಸಿದ ಜನರು ವಿಶಾಲವಾದ ಕಲ್ಪನೆಯನ್ನು ಹೊಂದಿದ್ದಾರೆ. ಅವರು ಬಹಳಷ್ಟು ರೋಮಾಂಚಕಾರಿ ವಿಚಾರಗಳು, ಅಭಿಪ್ರಾಯಗಳನ್ನು ಹೊಂದಿದ್ದು, ನಿರ್ದಿರ್ಷ್ಟ ಚೌಕಟ್ಟಿಗಿಂತ ಹೊರಗೆ ಯೋಚನೆ ಮಾಡುತ್ತಾರೆ. ಆದ್ದರಿಂದ ಈ ತಿಂಗಳಲ್ಲಿ ಜನಿಸಿದ ಬಹಳಷ್ಟು ಜನರು ವಿಜ್ಞಾನಿಗಳು, ಬರಹಗಾರರು, ಸೃಷ್ಟಿಕರ್ತರಾಗುವುದು; ಈ ಕೌಶಲ್ಯ ಅಗತ್ಯವಿರುವ ಯಾವುದೇ ಕ್ಷೇತ್ರದಲ್ಲಿ ಅವರು ಯಶಸ್ವಿಯಾಗುತ್ತಾರೆ. ಹುಟ್ಟಿನಿಂದಲೂ ಈ ಸಾಮರ್ಥ್ಯವನ್ನು ಕಾಣದಿದ್ದರೂ ಸಹ, ಅದನ್ನು ಒಂದು ಹಂತದಲ್ಲಿ ವ್ಯಕ್ತಪಡಿಸುತ್ತಾರೆ. ಏಕೆಂದರೆ ಫೆಬ್ರವರಿಯಲ್ಲಿ ಜನಿಸಿದ ಎಲ್ಲರೂ ಈ ಗುಣವನ್ನು ಹೊಂದಿದ್ದಾರೆ.

5. ಅವರು ವಿಶಿಷ್ಟವಾಗಿರುತ್ತಾರೆ:
ಫೆಬ್ರವರಿ ಜನಿಸಿದವರ ಸ್ವಂತಿಕೆ ಮತ್ತು ಸೃಜನಶೀಲತೆ ಅವರನ್ನು ವಿಶಿಷ್ಟತೆಯಿಂದ ಕೂಡಿರುವಂತೆ ಮಾಡುತ್ತದೆ. ಅವರು ಸ್ವ-ಸಂಯೋಜಿತ ಮತ್ತು ಸ್ವತಂತ್ರವಾಗಿದ್ದು, ಗುಂಪಿನಲ್ಲಿ ಇತರಗಿಂತ ಉತ್ತಮವಾಗಿರುತ್ತಾರೆ. ಇವೆಲ್ಲವೂ ಅವರನ್ನು ಮೋಜು, ಉತ್ತಮ ಮನಸ್ಸಿನವರನ್ನಾಗಿ ಮಾಡುತ್ತದೆ ಮತ್ತು ಜನರು ಎಂದಿಗೂ ಅವರ ಸಂಗದಿಂದ ಬೇಸರಗೊಳ್ಳುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಸುತ್ತಲೂ ಇರಲು ಇಷ್ಟಪಡುತ್ತಾರೆ ಮತ್ತು ಹೇಗಾದರೂ ಅವರಂತೆ ಇರಬೇಕೆಂದು ಬಯಸುತ್ತಾರೆ.

6. ಸ್ವಯಂ ನಿರ್ಧಾರ ತೆಗೆದುಕೊಳ್ಳುವವರಾಗಿರುತ್ತಾರೆ:
ಈ ತಿಂಗಳಲ್ಲಿ ಜನಿಸಿದ ಜನರು ಸ್ವಯಂ ನಿಯಂತ್ರಣದಲ್ಲಿದ್ದು, ಸರಿಯಾದ ನಿರ್ಧಾರ ತೆಗೆದುಕೊಳ್ಳುವವರಾಗಿದ್ದಾರೆ. ಇವರು ತಮ್ಮ ಗುರಿಗಳನ್ನು ಸಾಧಿಸುವಲ್ಲಿ ನಿರಂತರವಾಗಿರುತ್ತಾರೆ ಮತ್ತು ಬರುವ ಸವಾಲನ್ನು ಸರಿಯಾಗಿ ನಿಭಾಯಿಸಬಲ್ಲರು. ಕೆಲವೊಮ್ಮೆ ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದರೆ ಅಂತಿಮವಾಗಿ, ಅವರು ಸವಾಲನ್ನು ಭೇದಿಸುತ್ತಾರೆ. ಮುಖ್ಯವಾದ ವಿಷಯವೆಂದರೆ ಅವರು ಎಂದಿಗೂ ಬಿಟ್ಟುಕೊಡುವುದಿಲ್ಲ. ಯಾವುದೇ ತೊಂದರೆಗಳು ಅಥವಾ ಸಮಸ್ಯೆಗಳು ಅವರನ್ನು ತಡೆಯಲು ಸಾಧ್ಯವಿಲ್ಲ.

7. ಅವರು ನಿಷ್ಠಾವಂತರು:
ಫೆಬ್ರವರಿ ಜನಿಸಿದವರು ಬಹಳ ನಿಷ್ಠಾವಂತರು, ಕಾಳಜಿಯುಳ್ಳವರು ಮತ್ತು ಶ್ರದ್ಧೆಯುಳ್ಳವರು. ಅವರು ಪ್ರತಿಯೊಂದು ರೀತಿಯ ಸಂಬಂಧವನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಅದರಲ್ಲಿ ಅವರು ನಿಷ್ಠಾವಂತ, ಬದ್ಧರಾಗಿರುತ್ತಾರೆ. ಅವರ ಕುಟುಂಬಗಳು, ಕೆಲಸ, ಪಾಲುದಾರರು, ಸಹೋದ್ಯೋಗಿಗಳು ಮತ್ತು ಪ್ರೀತಿಪಾತ್ರರ ಕಡೆಗೆ ಸಕಾರಾತ್ಮಕ ದೃಷ್ಟಿಕೋನವನ್ನುಹೊಂದಿರುತ್ತಾರೆ. ಅದಕ್ಕಾಗಿಯೇ ಅವರನ್ನು ಹೆಚ್ಚಾಗಿ ಸಂಬಂಧ ಅಥವಾ ಕೆಲಸದಲ್ಲಿ ಆದರ್ಶ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಜನರು ಅವುಗಳ ಮೇಲೆ ಅವಲಂಬಿತರಾಗಬಹುದು. ಬೇರೆ ಯಾರೂ ಇಲ್ಲದ ಸಂದರ್ಭಗಳಲ್ಲಿ ಸಹ ಅವರು ಇತರರಿಗೆ ಸಹಾಯ ಮಾಡುತ್ತಾರೆ.

8. ಅವರು ಉದಾರ ಮನಸ್ಸುಳ್ಳವರು:
ಈ ತಿಂಗಳಲ್ಲಿ ಜನಿಸಿದ ಜನರಿಗೆ ಅಹಂಕಾರ ಏನು ಎಂದು ತಿಳಿದಿರುವುದಿಲ್ಲ. ಅವರು ನಿಸ್ವಾರ್ಥಿಗಳಾಗಿದ್ದು, ಇತರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಾಗಿದ್ದಾರೆ. ಈ ತಿಂಗಳಲ್ಲಿ ಜನಿಸಿದವರು ತುಂಬಾ ಸಹಾನುಭೂತಿ ಮತ್ತು ಉದಾರರಾಗಿದ್ದಾರೆ. ಇತರರಿಗೆ ಏನೇ ತೊಂದರೆ ಇರಲಿ ತನ್ನಿಂದ ಏನು ಮಾಡಲು ಸಾಧ್ಯ ಎಂದು ಯೋಚಿಸಿ, ಅದರಂತೆ ಮಾಡುತ್ತಾರೆ. ಇದು ಅವರ ಸುತ್ತಲಿನ ಇತರರಿಂದ ಮೆಚ್ಚುಗೆ ಪಡೆಯುತ್ತದೆ.

9. ಅವರು ಬಲಶಾಲಿಗಳು:
ಇಲ್ಲಿ ನಾವು ಅವರ ದೈಹಿಕ ಸಾಮರ್ಥ್ಯಗಳನ್ನು ಉಲ್ಲೇಖಿಸುತ್ತಿಲ್ಲ, ಆದರೆ ಫೆಬ್ರವರಿಯಲ್ಲಿ ಜನಿಸಿದವರು ಭಾವನಾತ್ಮಕವಾಗಿ ಪ್ರಬಲರಾಗಿದ್ದಾರೆ ಎಂಬುದನ್ನು ನಾವಿಲ್ಲಿ ಹೇಳ ಹೊರಟಿದ್ದೇವೆ. ಪರಿಸ್ಥಿತಿ ಏನೇ ಇರಲಿ ಅವರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಮರ್ಥರಾಗಿದ್ದಾರೆ. ಈ ತಿಂಗಳಲ್ಲಿ ಜನಿಸಿದ ಜನರು ಸಹ ನಂಬಲಾಗದಷ್ಟು ರೋಮ್ಯಾಂಟಿಕ್ ಮತ್ತು ಪ್ರೀತಿಯ ಬಗ್ಗೆ ಆಸಕ್ತಿ ಹೊಂದಿದ್ದಾರೆ.

10. ಅವರು ಈ ಕ್ಷಣಕ್ಕಾಗಿ ಬದುಕುತ್ತಾರೆ:
ಫೆಬ್ರವರಿಯಲ್ಲಿ ಜನಿಸಿದವರು ತಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಯೋಚಿಸದೇ ಇರಬಹುದು. ಒಂದು ಸಮಯದಲ್ಲಿ ಒಂದು ಹೆಜ್ಜೆಯನ್ನಷ್ಟೇ ಇಡುತ್ತಾರೆ. ಇದು ಅವರಿಗೆ ಹೆಚ್ಚು ತಾರ್ಕಿಕವಾಗಲು ಅಥವಾ ಹೆಚ್ಚಿನ ಜ್ಞಾನವನ್ನು ಪಡೆಯಲು ಮಾತ್ರವಲ್ಲದೆ ತಮ್ಮ ಸುತ್ತಲಿನ ವಿಷಯಗಳನ್ನು ಪ್ರಶಂಸಿಸಲು ಸಹಾಯ ಮಾಡುತ್ತದೆ. ಅವರು ಯಾವಾಗಲೂ ಕಾರ್ಯನಿರ್ವಹಿಸುವ ಅಥವಾ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲವನ್ನೂ ವಿಶ್ಲೇಷಿಸುತ್ತಾರೆ. ಈ ಗುಣಲಕ್ಷಣವು ಇತರರ ಬಗ್ಗೆ ಯೋಚಿಸಲು ಅಥವಾ ಅವರ ಸುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸಂತೋಷಪಡುವಂತೆ ಮಾಡುತ್ತದೆ.