For Quick Alerts
ALLOW NOTIFICATIONS  
For Daily Alerts

ವಾಸ್ತು ಟಿಪ್ಸ್: ನವಿಲು ಗರಿಯಿಂದ ಜೀವನದಲ್ಲಿ ಶಾಂತಿ-ನೆಮ್ಮದಿ ಪಡೆಯಬಹುದು!

|

ಹಿಂದೂ ಧರ್ಮ ಎನ್ನುವುದು ವಿಶಾಲವಾದದ್ದು. ಅದರಲ್ಲಿ ಇರುವ ಆಚರಣೆ, ನಂಬಿಕೆಗಳು ಮಹತ್ತರವಾದದ್ದು. ಜೀವನದ ಪ್ರತಿಯೊಂದು ಸಂಗತಿಗೂ ವಿಶೇಷವಾದ ಭಾವನೆ ಹಾಗೂ ರೀತಿ-ನೀತಿಯನ್ನು ಸೂಚಿಸುವುದರ ಮೂಲಕ ನೀತಿಯ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಜಗತ್ತಿನ ಜನತೆಗೆ ಒಳಿತನ್ನು ಮಾಡುತ್ತಾ, ಪ್ರಕೃತಿಯಲ್ಲಿ ಸಮತೋಲನವನ್ನು ಕಾಪಾಡುವ ಧರ್ಮ ಎಂದು ಹೇಳಬಹುದು. ಹಾಗಾಗಿಯೇ ಹಿಂದೂ ಧರ್ಮ ಎನ್ನುವುದು ಕೇವಲ ಭಾರತಕ್ಕೆ ಮಾತ್ರ ಮೀಸಲಾಗಿರದೆ ಪ್ರಪಂಚದೆಲ್ಲೆಡೆ ಹರಡಿದೆ. ಪರಸ್ಪರ ಜೀವಿಗಳ ನಡುವೆ ಸತ್ಯ-ಧರ್ಮದಿಂದ ನಡೆಯುವ ಮಾರ್ಗವನ್ನು ತೋರಿಸಿಕೊಡುತ್ತದೆ.

ಹಿಂದೂ ಧರ್ಮದಲ್ಲಿ ಪ್ರಕೃತಿಗೆ ವಿಶೇಷವಾದ ಸ್ಥಾನ ಹಾಗೂ ಮಾನ್ಯತೆಯನ್ನು ನೀಡಲಾಗುವುದು. ಜೀವ ಸಂಕುಲಕ್ಕೆ ಆವಾಸವನ್ನು ಹಾಗೂ ಜೀವನವನ್ನು ನೀಡುವುದು ಪ್ರಕೃತಿ. ಪ್ರಕೃತಿಯಿಲ್ಲದೆ ಯಾವ ಜೀವ ಸಂಕುಲವೂ ಉಳಿಯಲಾರದು. ಅದರಲ್ಲೂ ಮನುಷ್ಯನಿಗೆ ಪ್ರಕೃತಿಯಿಂದ ಸಾಕಷ್ಟು ಉಪಯೋಗಗಳು ಉಂಟಾಗುವುದು ಎನ್ನುವುದನ್ನು ಹೇಳುತ್ತದೆ. ಮಾನವನ ಜೀವನಕ್ಕೆ ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿಗಳು, ಗಿಡ ಮರಗಳು ಹಾಗೂ ಪಂಚ ಭೂತಗಳು ಇರುವುದರಿಂದಲೇ ವಿಕಾಸ ಉಂಟಾಗಿದೆ. ಅವುಗಳ ಸಹಾಯದಿಂದಲೇ ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ ಎಂದು ಹೇಳಬಹುದು.

ಕೆಲವು ಪ್ರಾಣಿ, ಪಕ್ಷಿ, ಗಿಡ ಮತ್ತು ಮರಗಳು ದೈವ ಸಂಭೂತಗಳು

ಕೆಲವು ಪ್ರಾಣಿ, ಪಕ್ಷಿ, ಗಿಡ ಮತ್ತು ಮರಗಳು ದೈವ ಸಂಭೂತಗಳು

ಪ್ರಕೃತಿಯಲ್ಲಿ ಇರುವ ಕೆಲವು ಪ್ರಾಣಿ-ಪಕ್ಷಿಗಳು ಮತ್ತು ಮರ-ಗಿಡಗಳು ದೈವ ಸಂಭೂತವಾಗಿವೆ. ಅವುಗಳ ಆಶೀರ್ವಾದ ಹಾಗೂ ಸಹಕಾರ ಇಲ್ಲದೆ ಮಾನವನ ಜೀವನ ಅಪೂರ್ಣ ಹಾಗೂ ಅಸಂತೋಷದಿಂದ ಕೂಡಿರುತ್ತದೆ. ಪ್ರಾಣಿ-ಪಕ್ಷಿಗಳು ಮತ್ತು ಮರ-ಗಿಡಗಳು ಮನುಷ್ಯನಿಗೆ ಪ್ರಾಥಮಿಕ ಅಗತ್ಯತೆಗಳನ್ನು ಪೂರೈಸುತ್ತವೆ. ಆಹಾರ, ಆರೋಗ್ಯ, ಆವಾಸ, ಔಷಧಗಳನ್ನು ಒದಗಿಸುತ್ತವೆ. ಇವುಗಳ ಉಪಯೋಗವಿಲ್ಲದೆ ತನ್ನ ಜೀವನವನ್ನು ಸುಲಭವಾಗಿ ಸಾಗಿಸಲು ಸಾಧ್ಯವಿಲ್ಲ. ಅವುಗಳಲ್ಲಿ ಕೆಲವು ಪ್ರಾಣಿ, ಪಕ್ಷಿ, ಗಿಡ ಮತ್ತು ಮರಗಳು ದೈವ ಸಂಭೂತಗಳು. ಅವುಗಳ ಆರಾಧನೆಯಿಂದ ನಮ್ಮ ಜೀವನದಲ್ಲಿ ಸಾಕಷ್ಟು ನೆಮ್ಮದಿ ಹಾಗೂ ಸಂತೋಷ ದೊರೆಯುವುದು ಎನ್ನುವ ನಂಬಿಕೆ ಇದೆ.

ನವಿಲು ಸಹ ಒಂದು ಪವಿತ್ರವಾದ ಹಾಗೂ ದೈವ ಸಂಭೂತವಾದ ಪಕ್ಷಿ

ನವಿಲು ಸಹ ಒಂದು ಪವಿತ್ರವಾದ ಹಾಗೂ ದೈವ ಸಂಭೂತವಾದ ಪಕ್ಷಿ

ಅಂತಹ ನಂಬಿಕೆಯಲ್ಲಿ ನವಿಲು ಸಹ ಒಂದು ಪವಿತ್ರವಾದ ಹಾಗೂ ದೈವ ಸಂಭೂತವಾದ ಪಕ್ಷಿ. ನವಿಲು ಗರಿಯನ್ನು ಪವಿತ್ರ ಮತ್ತು ಆಧ್ಯಾತ್ಮಿಕ ವಸ್ತು ಎಂದು ಪರಿಗಣಿಸಲಾಗಿದೆ. ಇದರ ಕುರಿತು ಹಿಂದೂ ಗ್ರಂಥಗಳಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದು. ಮನೋಹರ ಬಣ್ಣಗಳು ಹಾಗೂ ಆಕೃತಿಯನ್ನು ಪಡೆದಿರುವ ನವಿಲುಗರಿಯಿಂದ ಮನುಷ್ಯ ತನ್ನ ದೈನಂದಿನ ಜೀವನದಲ್ಲಿ ಅನೇಕ ಸಮಸ್ಯೆಯನ್ನು ಬಗೆಹರಿಸಬಹುದು. ನಿಜ, ಕೆಲವು ನಂಬಿಕೆ ಹಾಗೂ ಆಚರಣೆಯ ಪ್ರಕಾರ ನವಿಲು ಗರಿಯಿಂದ ಕುಟುಂಬದಲ್ಲಿನ ಸದಸ್ಯರ ನಡುವೆ ಸಾಮರಸ್ಯ ಇಲ್ಲವಾದರೆ, ಮಗುವಿಗೆ ಅಷ್ಟು ಉತ್ತಮಾವ ಕೇಂದ್ರೀಕರಿಸುವ ಸ್ವಭಾವ ಇಲ್ಲದಿದ್ದರೆ ಅಥವಾ ನೀವು ಅಂದುಕೊಂಡ ಯಾವುದೋ ಕೆಲಸ ಅಥವಾ ಯೋಜನೆ ಸೂಕ್ತ ಸಮಯದಲ್ಲಿ ನೆರವೇರದೆ ಇದ್ದಾಗ ನವಿಲು ಗರಿ ಸುಲಭವಾಗಿ ಬಗೆಹರಿಸುವುದು.

ನವಿಲು ಗರಿಯಿಂದ ಸಮಸ್ಯೆಗಳಿಗೆ ಪರಿಹಾರ!

ನವಿಲು ಗರಿಯಿಂದ ಸಮಸ್ಯೆಗಳಿಗೆ ಪರಿಹಾರ!

ಇದೊಂದು ಆಶ್ಚರ್ಯಕರವಾದ ಸಂಗತಿ ಎಂದು ನಿಮಗೆ ತೋರಬಹುದು. ಆದರೆ ಇದು ಸತ್ಯ. ಇಂತಹ ಅನೇಕ ಸಮಸ್ಯೆಗಳನ್ನು ನೀವು ನಿತ್ಯವು ಎದುರಿಸುತ್ತಿದ್ದೀರಿ, ಸಮಸ್ಯೆಗಳ ಪರಿಹಾರಕ್ಕೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಸಮಸ್ಯೆಯಲ್ಲಿ ಅಥವಾ ಚಿಂತೆಯಲ್ಲಿದ್ದೀರಿ, ನಿಮಗೂ ನಿಮ್ಮ ಮನಸ್ಸಿನ ಆಸೆಯಂತೆ ಜೀವನ ಸಾಗಬೇಕು, ಸಮಸ್ಯೆಗಳು ಸುಲಭವಾಗಿ ಕರಗಬೇಕು, ಮನೆಯಲ್ಲಿ ಹಾಗೂ ಮನೆ ಮಂದಿಯ ನಡುವೆಯೂ ಪ್ರೀತಿ ವಿಶ್ವಾಸದ ಹೊನಲು ಹರಿಯಬೇಕು ಎನ್ನುವ ಬಯಕೆ ಇದ್ದರೆ ನವಿಲುಗರಿಯನ್ನು ಬಳಸಿ. ನವಿಲುಗರಿಯಿಂದ ಯಾವ ಬಗೆಯ ಉಪಯೋಗ ಉಂಟಾಗುವುದು ಎನ್ನುವುದನ್ನು ತಿಳಿದುಕೊಳ್ಳಲು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ಮಾಹಿತಿಯನ್ನು ಅರಿಯಿರಿ.

ರಾಹು ದೆಸೆಗೆ ನವಿಲುಗರಿಯಿಂದ ಪರಿಹಾರ ಕ್ರಮ

ರಾಹು ದೆಸೆಗೆ ನವಿಲುಗರಿಯಿಂದ ಪರಿಹಾರ ಕ್ರಮ

ಪ್ರತಿಯೊಂದು ದೆಸೆಯು ವ್ಯಕ್ತಿಯ ಕುಂಡಲಿಗೆ ಅನುಗುಣವಾಗಿ ಫಲವನ್ನು ನೀಡುತ್ತಾ ಹೋಗುತ್ತದೆ. ಗ್ರಹಗಳ ಸ್ಥಾನ ಉತ್ತಮವಾಗಿದ್ದರೆ ಉತ್ತಮ ಫಲಗಳನ್ನು ಹಾಗೂ ನೀಚ ಸ್ಥಿತಿಯಲ್ಲಿದ್ದರೆ ಋಣಾತ್ಮಕ ಫಲವನ್ನು ನೀಡುತ್ತವೆ. ಅವುಗಳ ಪ್ರಭಾವಕ್ಕೆ ಒಳಗಾಗುವ ನಾವು ಪ್ರತಿಫಲವನ್ನು ಅನುಭವಿಸಲೇ ಬೇಕಾಗುವುದು. ರಾಹು ದೆಸೆ ಅನುಭವಿಸುತ್ತಿರುವ ಜನರು ನವಿಲುಗರಿಯ ಪರಿಹಾರ ಕ್ರಮವನ್ನು ಅನುಸರಿಸಬಹುದು. ರಾಹು ದೆಸೆ ಎದುರಿಸುತ್ತಿರುವ ವ್ಯಕ್ತಿಗಳು ತಾವು ರಾತ್ರಿ ಮಲಗುವಾಗ ತಮ್ಮ ಹಾಸಿಗೆಯ ಅಡಿಯಲ್ಲಿ ಅಥವಾ ತಲೆದಿಂಬಿನ ಅಡಿಯಲ್ಲಿ ನವಿಲು ಗರಿಯನ್ನು ಇಟ್ಟು ಮಲಗ ಬೇಕು. ಹೀಗೆ ಮಾಡುವುದರಿಂದ ಋಣಾತ್ಮಕ ಶಕ್ತಿಯು ಅವರಿಂದ ದೂರ ಸರಿಯುವುದು. ಜೀವನದಲ್ಲಿ ಸಾಕಷ್ಟು ನೋವುಗಳು ದೂರ ಸರಿಯುತ್ತವೆ ಎನ್ನುವ ನಂಬಿಕೆಯಿದೆ.

Most Read: ಶ್ರೀಕೃಷ್ಣನ ಕಿರೀಟದಲ್ಲಿರುವ 'ನವಿಲಿನ ಗರಿಯ' ಹಿಂದಿರುವ ರಹಸ್ಯ

ತಡವಾದ ಯೋಜನೆಗಳಿಗೆ ನವಿಲು ಗರಿಯ ಪರಿಹಾರ

ತಡವಾದ ಯೋಜನೆಗಳಿಗೆ ನವಿಲು ಗರಿಯ ಪರಿಹಾರ

ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ನಾವು ಅಂದುಕೊಂಡಿರುವುದು ನೆರವೇರಬೇಕು ಎಂದರೆ ನಮ್ಮ ಕೆಲಸ ಕಾರ್ಯಗಳು ಅಥವಾ ಯೋಜನೆಗಳು ಸೂಕ್ತ ರೀತಿಯಲ್ಲಿ ನಡೆಯಬೇಕು. ಅಂದುಕೊಂಡ ಕೆಲಸ ಕಾರ್ಯಗಳು ಸರಿಯಾಗಿ ನಡೆಯದೆ ಹೋದರೆ ಆರ್ಥಿಕ ತೊಂದರೆಯೊಂದಿಗೆ ಸಾಕಷ್ಟು ನೋವು ಉಂಟಾಗಬಹುದು. ನಮ್ಮ ಜಾತಕದ ಅನುಸಾರ ಗ್ರಹಗಳ ಅನುಕೂಲಕರ ಪ್ರಭಾವ ಅಥವಾ ಸ್ಥಿತಿ ಇಲ್ಲದೆ ಇರುವಾಗ ಸಮಸ್ಯೆಗಳು ಅತಿಯಾಗುತ್ತಾ ಹೋಗುತ್ತವೆ ಎಂದು ಹೇಳಲಾಗುವುದು. ನವಿಲು ಗರಿಯು ಇಂತಹ ಗ್ರಹದೋಷಗಳಿದ್ದರೂ ಸುಲಭವಾಗಿ ನಿವಾರಣೆ ಮಾಡುವುದು. ನೀವು ಈ ರೀತಿಯ ಪ್ರತಿಕೊಲವಾದ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದಾದರೆ, ಮಲಗುವ ಕೋಣೆಯಲ್ಲಿ ಪೂರ್ವ ಅಥವಾ ಈಶಾನ್ಯ ದಿಕ್ಕಿಗೆ ನವಿಲು ಗರಿಯನ್ನು ಇಟ್ಟು ಮಲಗಿ. ಹೀಗೆ ಮಾಡುವುದರಿಂದ ಸಮಸ್ಯೆಗಳು ಪರಿಹಾರ ಕಾಣುತ್ತವೆ. ಜೊತೆಗೆ ವಿಳಂಬವಾದ ಯೋಜನೆಯು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು.

ಏಕಾಗ್ರತೆಯನ್ನು ಹೆಚ್ಚಿಸಲು ನವಿಲು ಗರಿಯ ಪರಿಹಾರ

ಏಕಾಗ್ರತೆಯನ್ನು ಹೆಚ್ಚಿಸಲು ನವಿಲು ಗರಿಯ ಪರಿಹಾರ

ವಿದ್ಯಾರ್ಥಿಗಳು ಬೆಳವಣಿಗೆ ಹೊಂದಿತ್ತಿದ್ದಂತೆ ತಮ್ಮ ಸುತ್ತಲಿನ ಪರಿಸರ ಹಾಗೂ ವ್ಯಕ್ತಿಗಳಿಂದ ಸಾಕಷ್ಟು ಪ್ರಭಾವಕ್ಕೆ ಒಳಗಾಗುತ್ತಾರೆ. ಎಲ್ಲವೂ ಹೊಸತು ಹಾಗೂ ವಿಶೇಷವಾಗಿ ಕಾಣುವುದರಿಂದ ವಿದ್ಯಾಭ್ಯಾಸಗಳ ಕಡೆಗೆ ಅಥವಾ ತಮ್ಮ ವೈಯಕ್ತಿಕ ಕೆಲಸದ ಕಡೆಗೆ ಸಾಕಷ್ಟು ಏಕಾಗ್ರತೆಯನ್ನು ನೀಡಲು ಕಷ್ಟವಾಗಬಹುದು. ಅಂತಹ ಸಮಸ್ಯೆಯನ್ನು ಎದುರಿಸುವ ಮಕ್ಕಳಿಗೆ ನವಿಲುಗರಿ ಉತ್ತಮ ಪರಿಹಾರವನ್ನು ನೀಡುವುದು ಎಂದು ಹೇಳಲಾಗುವುದು. ವಿದ್ಯಾರ್ಥಿಗಳು ತಾಔಉ ಓದುವ ಪಠ್ಯ ಪುಸ್ತಕದಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುವುದರಿಂದ ಏಕಾಗ್ರತೆಯ ಮಟ್ಟ ಸುಧಾರಣೆ ಹೊಂದುವುದು. ಅಲ್ಲದೆ ಶೈಕ್ಷಣಿಕ ವಿಷಯದಲ್ಲಿ ಉತ್ತಮ ಸಾಧನೆ ಹಾಗೂ ತೇರ್ಗಡೆಯನ್ನು ಪಡೆಯುತ್ತಾರೆ. ಓದು ಮತ್ತು ಬರಹಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಲಾಗುವುದು.

ವಾಸ್ತು ದೋಷಕ್ಕೆ ನವಿಲು ಗರಿಯ ಪರಿಹಾರ

ವಾಸ್ತು ದೋಷಕ್ಕೆ ನವಿಲು ಗರಿಯ ಪರಿಹಾರ

ಮನೆ ಹಾಗೂ ಕಚೇರಿಗಳಲ್ಲಿ ವಾಸ್ತು ಅತ್ಯುತ್ತಮವಾದ ಪಾತ್ರವನ್ನು ನಿರ್ವಹಿಸುತ್ತದೆ. ಮನೆಯ ವಾಸ್ತು ಸೂಕ್ತ ರೀತಿಯಲ್ಲಿ ಇಲ್ಲ ಎಂದಾದರೆ ಸಾಕಷ್ಟು ಸಮಸ್ಯೆಗಳು ಉಂಟಾಗುವುದು. ಮನೆಯಲ್ಲಿ ಸದಸ್ಯರ ನಡುವೆ ಪರಸ್ಪರ ಪ್ರೀತಿ-ವಿಶ್ವಾಸದ ಮಟ್ಟವು ಕುಂದುವುದು. ಘರ್ಷಣೆಯು ಸದಾ ತುಂಬಿರುತ್ತದೆ. ಇಂತಹ ಸಮಸ್ಯೆಗಳಿಂದ ದೂರ ಇರಬೇಕು ಮನೆಯಲ್ಲಿ ನೆಮ್ಮದಿ ಹಾಗೂ ಪ್ರೀತಿ ವಿಶ್ವಾಸ ಇರಬೇಕು ಎಂದಾದರೆ ಮನೆಯ ಮುಖ್ಯ ದ್ವಾರದಲ್ಲಿ ಗಣೇಶನ ವಿಗ್ರಹ ಹಾಗೂ ಒಂದು ನವಿಲು ಗರಿಯನ್ನು ಇರಿಸಿ. ಇದು ವಾಸ್ತು ದೋಷಗಳಿದ್ದರೆ ತೆಗೆದುಹಾಕುವುದು. ಜೊತೆಗೆ ಸುತ್ತಲಿನ ಋಣಾತ್ಮಕ ಶಕ್ತಿಯನ್ನು ನಿವಾರಿಸುವುದು.

Most Read: ಹಿ೦ದೂ ಧರ್ಮದಲ್ಲಿ ನವಿಲುಗರಿಗಳಿಗಿರುವ ಮಹತ್ವವೇನೆ೦ಬುದನ್ನು ಬಲ್ಲಿರಾ?

ಗ್ರಹ ದೋಷಕ್ಕೆ ನವಿಲುಗರಿಯ ಪರಿಹಾರ

ಗ್ರಹ ದೋಷಕ್ಕೆ ನವಿಲುಗರಿಯ ಪರಿಹಾರ

ಪ್ರತಿಯೊಬ್ಬ ವ್ಯಕ್ತಿಯು ತನ್ನ ಜನ್ಮ ದಿನಾಂಕ ಹಾಗೂ ಸಮಯಕ್ಕೆ ಅನುಗುಣವಾಗಿ ವಿಶೇಷವಾದ ನಕ್ಷತ್ರಪುಂಜ, ರಾಶಿ ಹಾಗೂ ಕುಂಡಲಿಯನ್ನು ಹೊಂದಿರುತ್ತಾನೆ. ಅವನ ಜನ್ಮದ ಸಮಯದಲ್ಲಿ ಇದ್ದ ಗ್ರಹ ದೋಷವು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಋಣಾತ್ಮಕ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಲಾಗುವುದು. ನೀವು ಸಹ ಕುಂಡಲಿಗೆ ಅನುಗುಣವಾಗಿ ಗ್ರಹ ದೋಷವನ್ನು ಅನುಭವಿಸುತ್ತಿದ್ದೀರಿ ಎಂದಾದರೆ ಮೊದಲು ಜ್ಯೋತಿಷ್ಯಿಗಳ ಸಲಹೆಯಂತೆ ಮಂತ್ರವನ್ನು ತಿಳಿದುಕೊಳ್ಳಿ. ನಂತರ ಒಂದು ನವಿಲು ಗರಿಯನ್ನು ತೆಗೆದುಕೊಂಡು 21 ಬಾರಿ ಆ ಮಂತ್ರವನ್ನು ಪಠಿಸುತ್ತಾ ನೀರನ್ನು ನವಿಲುಗರಿಯ ಮೇಲೆ ಚಿಮುಕಿಸಿ. ನಂತರ ಆ ನವಿಲು ಗರಿಯನ್ನು ದೇವರ ಮನೆಯಲ್ಲಿ ಇರಿಸಿ. ಮರುದಿನ ಬೆಳಿಗ್ಗೆ ಆ ನವಿಲು ಗರಿಯನ್ನು ನೀರಿನಲ್ಲಿ ಮುಳುಗಿಸಿ. ಹೀಗೆ ಮಾಡುವುದರಿಂದ ನಿಮಗಿದ್ದ ಗ್ರಹ ದೋಷವು ನಿವಾರಣೆ ಹೊಂದುವುದು.

English summary

Peacock Feather For Peaceful Happy Life

Peacock feather is considered as a sacred and spiritual object. It has also been mentioned in the holy scriptures of the Hindus. With the beautiful patterns and lovely colours spread on them, these are not just peacock feathers but a solution to various problems of the everyday life. Yes, you can use them as a remedy if the relations between the family members are not so good, if your kid is not able to concentrate well, or even if your projects are getting delayed. Read on to know how.
Story first published: Saturday, February 16, 2019, 16:47 [IST]
X
Desktop Bottom Promotion