For Quick Alerts
ALLOW NOTIFICATIONS  
For Daily Alerts

ಮಾ. 28 ಪಾಪ ವಿಮೋಚನೆ ಏಕಾದಶಿ: ನಿಮ್ಮ ರಾಶಿ ಪ್ರಕಾರ ಈ ಪರಿಹಾರ ಮಾಡಿ, ಒಳ್ಳೆಯದಾಗುತ್ತೆ

|

ಮಾರ್ಚ್‌ 28ರಂದು ಪಾಪ ವಿಮೋಚನಿ ಏಕಾದಶಿಯನ್ನುಆಚರಿಸಲಾಗುತ್ತಿದೆ. ಹೋಲಿಕಾ ದಹನ್‌ ಹಾಗೂ ಚೈತ್ರ ನವರಾತ್ರಿಯ ನಡುವೆ ಬರುವ ಏಕಾದಶಿಯನ್ನು ಪಾಪ ವಿಮೋಚನಿ ಏಕಾದಶಿ ಎಂದು ಆಚರಿಸಲಾಗುವುದು. ಈ ದಿನ ಏಕಾದಶಿ ವ್ರತ ಮಾಡಿದವರು ಪಾಪಗಳಿಂದ ವಿಮೋಚನೆ ಪಡೆಯುತ್ತಾರೆ, ಅವರ ಎಲ್ಲಾ ಕಷ್ಟಗಳು ದೂರಾಗುವಂತೆ ಶ್ರೀ ವಿಷ್ಣು ಅನುಗ್ರಹಿಸುತ್ತಾನೆ.

ಈ ಏಕಾದಶಿ ಮಹತ್ವ, ಪಾರಣ ಸಮಯ ಹಾಗೂ ನಿಮ್ಮ ರಾಶಿ ಪ್ರಕಾರಣ ಈ ದಿನ ಏನು ಮಾಡಿದರೆ ಒಳ್ಳೆಯದು ಎಂದು ನೋಡೋಣ:

ಪಾಪ ವಿಮೋಚನೆ ಶುಭ ಮುಹೂರ್ತ ಮಾರ್ಚ್ 27 ಸಂಜೆ 06:04ಕ್ಕೆ ಪ್ರಾರಂಭವಾಗಿದೆ, ಮಾರ್ಚ್ 28 ಸಂಜೆ 04:15ಕ್ಕೆ ಏಕಾಶಿ ಮುಕ್ತಾಯವಾಗುತ್ತದೆ.

ಪಾರಣ ಸಮಯ

ಪಾರಣ ಸಮಯ

ಮಾರ್ಚ್‌ 29 ಬೆಳಗ್ಗೆ 06:15ರಿಂದ 08:43

ಒಟ್ಟು ಅವಧಿ 2 ಗಂಟೆ 28 ನಿಮಿಷಗಳು

ಪಾರಣ ಸಮಯ ಎಂದರೇನು?

ಏಕಾದಶಿ ಉಪವಾಸವನ್ನು ಪೂರ್ಣಗೊಳಿಸುವ ವಿಧಾನವೇ ಪಾರಣ. ಮರುದಿನ ಸೂರ್ಯೋದಯದ ನಂತರ, ದ್ವಾದಶಿ, ಏಕಾದಶಿ ಉಪವಾಸವನ್ನು ಕೊನೆಗೊಳಿಸಲಾಗುತ್ತದೆ. ನೀವು ಏಕಾದಶಿಯಂದು ಉಪವಾಸ ಮಾಡಿದ್ದರೆ, ನೀವು ಅದನ್ನು ಪಾರಣ ದ್ವಾದಶಿ ಅವಧಿಯ ಅಂತ್ಯದೊಳಗೆ ಪೂರ್ಣಗೊಳಿಸಬೇಕು.

ಪಾಪ ವಿಮೋಚನೆ ಏಕಾಶಿ ಮಹತ್ವ

ಪಾಪ ವಿಮೋಚನೆ ಏಕಾಶಿ ಮಹತ್ವ

ಪ್ರತಿ ತಿಂಗಳು ಒಂದು ಏಕಾದಶಿ ಇದ್ದು ಅದು ತನ್ನದೇ ಆದ ಮಹತ್ವವನ್ನು ಹೊಂದಿದೆ. ಈ ಏಕಾದಶಿಯನ್ನು ಆಚರಿಸುವುದರಿಂದ ನಾವು ಗೊತ್ತು-ಗೊತ್ತಿಲ್ಲದೇ ಮಾಡಿದ ಪಾಪಗಳಿಂದ ವಿಮೋಚನೆ ಸಿಗುತ್ತದೆ, ಇದರಿಂದ ಮೋಕ್ಷ ಸಿಗುವುದು.

ಏಕಾದಶಿ ಉಪವಾಸವನ್ನು ಮುಗಿಸುವ ಮುನ್ನ ಬಡ ಬ್ರಾಹ್ಮಣನಿಗೆ ತನ್ನ ಸಾಮಾರ್ಥ್ಯಕ್ಕೆ ತಕ್ಕಂತೆ ದಾನ ಮಾಡಿದರೆ ಉಪವಾಸದ ಫಲ ದ್ವಿಗುಣವಾಗುವುದು.

ಪಾಪಮೋಚನಿ ಏಕಾದಶಿಗಾಗಿ ರಾಶಿಪ್ರಕಾರ ಪರಿಹಾರಗಳು

ಪಾಪಮೋಚನಿ ಏಕಾದಶಿಗಾಗಿ ರಾಶಿಪ್ರಕಾರ ಪರಿಹಾರಗಳು

ಮೇಷ ರಾಶಿ : ಮೇಷ ರಾಶಿಯವರು ಪಾಪಮೋಚನಿ ಏಕಾದಶಿಯ ದಿನವಾದ ಇಂದು ಸಿಂಧೂರವನ್ನು ಶುದ್ಧ ತುಪ್ಪದಲ್ಲಿ ಬೆರೆಸಿ ವಿಷ್ಣುವಿಗೆ ಅರ್ಪಿಸಿ. ಹೀಗೆ ಮಾಡಿದರೆ ಎಲ್ಲಾ ಪಾಪಗಳು ದೂರವಾಗುತ್ತವೆ. ಇದರಿಂದ ಪಿತೃ ದೋಷವನ್ನು ಕೂಡ ತೆಗೆದು ಹಾಕಬಹುದು.

ವೃಷಭ ರಾಶಿ: ಈ ದಿನ ಶ್ರೀಕೃಷ್ಣನಿಗೆ ಸಕ್ಕರೆ ಮಿಠಾಯಿ ಜೊತೆಗೆ ಬೆಣ್ಣೆಯನ್ನು ಅರ್ಪಿಸಿ. ಹೀಗೆ ಮಾಡುವುದರಿಂದ, ಚಂದ್ರದೋಷವಿದ್ದರೆ ಅದು ನಿವಾರಣೆಯಾಗುತ್ತೆ, ಜಾತಕದಲ್ಲಿ ಇರುವ ಚಂದ್ರನು ಬಲಗೊಳ್ಳುತ್ತಾನೆ.

ಮಿಥುನ ರಾಶಿ: ಈ ರಾಶಿಯವರು ಅನಂತ ಪದ್ಮನಾಭನಿಗೆ ದೇವರಿಗೆ ಸಕ್ಕರೆ ಮಿಠಾಯಿಯನ್ನು ಅರ್ಪಿಸಬೇಕು. ಇದರಿಂದ ನೀವು ನಿಮ್ಮ ಕಾರ್ಯದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ಕರ್ಕ ರಾಶಿ : ಪಾಪಮೋಚಿನಿ ಏಕಾದಶಿಯಂದು ನೀವು ಹಾಲಿಗೆ ಅರಿಶಿನವನ್ನು ಹಾಕಿ ಶ್ರೀ ವಿಷ್ಣುವಿಗೆ ಅರ್ಪಿಸಿ, ಇದರಿಂದ ಪಿತ್ರದೋಷ, ಗುರುಚಂಡಾಲದೋಷ ಇತ್ಯಾದಿಗಳಿಂದ ಮುಕ್ತಿ ಸಿಗುತ್ತದೆ.

ಸಿಂಹ ರಾಶಿ : ಸಿಂಹ ರಾಶಿಯವರು ಪಾಪಮೋಚಿನಿ ಏಕಾದಶಿಯಂದು ಬೆಲ್ಲದಿಂದ ನೈವೇದ್ಯ ಮಾಡಿ ಶ್ರೀಕೃಷ್ಣನಿಗೆ ಅರ್ಪಿಸಿ.

ಕನ್ಯಾ ರಾಶಿ: ಹೆಣ್ಣು ಮಕ್ಕಳು ವಿಷ್ಣುವಿಗೆ ತುಳಸಿಯನ್ನು ಅರ್ಪಿಸಿದರೆ ಜಾತಕದಲ್ಲಿರುವ ದೋಷ ನಿವಾರಣೆಯಾಗುವುದು.

ತುಲಾ ರಾಶಿ: ಈ ದಿನ ನೀವು ಸ್ನಾನ ಮಾಡುವ ನೀರಿಗೆ ಗಂಗಾಜಲ ಮಿಶ್ರ ಮಾಡಿ ಸ್ನಾನ ಮಾಡಿದರೆ ರೋಗ, ನೋವು ಇವೆಲ್ಲಾ ದೂರಾಗುವುದು.

ವೃಶ್ಚಿಕ ರಾಶಿ: ಈ ದಿನ ವಿಷ್ಣುವಿಗೆ ಮೊಸರು ಮತ್ತು ಸಕ್ಕರೆಯನ್ನು ನೈವೇದ್ಯವಾಗಿ ಅರ್ಪಿಸಿ, ಇದರಿಂದ ನಿಮ್ಮ ಅದೃಷ್ಟವು ಬಲಗೊಳ್ಳುತ್ತದೆ.

ಧನು ರಾಶಿ : ಈ ದಿನದಂದು ಧನು ರಾಶಿಯವರು ವಿಷ್ಣುವಿಗೆ ಧಾನ್ಯಗಳನ್ನು ಅರ್ಪಿಸಿ. ಈ ಪರಿಹಾರದಿಂದ, ನೀವು ಖಂಡಿತವಾಗಿಯೂ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ಮಕರ ರಾಶಿ: ಈ ದಿನ ವೀಳ್ಯದೆಲೆಯಲ್ಲಿ ಲವಂಗ ಮತ್ತು ಏಲಕ್ಕಿಯನ್ನು ಹಾಕಿ ದೇವರಿಗೆ ಅರ್ಪಿಸಿ. ಈ ಪರಿಹಾರದಿಂದ, ಸ್ಥಗಿತಗೊಂಡ ಕೆಲಸಗಳು ಪ್ರಾರಂಭವಾಗುತ್ತವೆ ಮತ್ತು ಯಶಸ್ಸು ದೊರೆಯುವುದು.

ಕುಂಭ ರಾಶಿ : ಈ ದಿನ ವಿಷ್ಣುವಿಗೆ ತೆಂಗಿನಕಾಯಿ ಮತ್ತು ಸಕ್ಕರೆ ಮಿಠಾಯಿಯನ್ನು ಅರ್ಪಿಸಿ. ಇದರಿಂದ ಒಳ್ಳೆಯದಾಗುವುದು.

ಮೀನ ರಾಶಿ: ಮೀನ ರಾಶಿಯವರು ಪಾಪಮೋಚಿನಿ ಏಕಾದಶಿಯಯಂದು ಶ್ರೀಹರಿಯವರಿಗೆ ಕುಂಕುಮ ತಿಲಕವನ್ನು ಹಚ್ಚಿದರೆ ಜಾತಕ ದೋಷಗಳು ನಿವಾರಣೆಯಾಗುವುದು.

English summary

Papmochani Ekadashi Vrat 2022 date, shubh muhurat, best time to worship lord vishnu and significance

Papmochani Ekadashi Vrat 2022 date, shubh muhurat, best time to worship lord vishnu and significance, read on...
X
Desktop Bottom Promotion